For Quick Alerts
ALLOW NOTIFICATIONS  
For Daily Alerts

  ಹಸ್ತಗಳು ಜೋಮು ಹಿಡಿಯುತ್ತಿದೆಯೇ? ನಿರ್ಲಕ್ಷ್ಯ ಮಾಡದಿರಿ!

  By Arshad
  |

  ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಯಾರೇ ಆದರೂ ತಮ್ಮ ಆರೋಗ್ಯದಲ್ಲಿ ಆಗುವ ಚಿಕ್ಕಪುಟ್ಟ ಏರುಪೇರುಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಇರುತ್ತಾರೆ. ಅಂತೆಯೇ ದೇಹ ಸೂಚಿಸುವ ಕೆಲವು ಸೂಚನೆಗಳನ್ನು ಗಮನಿಸಿ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಾರೆ. ನಮ್ಮ ದೇಹ ಹಲವಾರು ತೊಂದರೆಗಳಿಗೆ ಒಳಗಾಗಬಹುದಿದ್ದು ಇವುಗಳಲ್ಲಿ ಹೆಚ್ಚಿನವು ಯಾವುದೇ ಸೂಚನೆಯನ್ನೇ ನೀಡುವುದಿಲ್ಲ ಅಥವಾ ನೀಡುವ ಸೂಚನೆಗಳು ತುಂಬಾ ಸೂಕ್ಷ್ಮವಾಗಿರುತ್ತವೆ.

  ಆದ್ದರಿಂದ ನಮ್ಮ ದೇಹ ಸೂಕ್ಷ್ಮವಾಗಿ ನೀಡುವ ಸೂಚನೆಗಳನ್ನು ಗಮನಿಸುತ್ತಾ ಇರಬೇಕು ಹಾಗೂ ಯಾವುದೇ ವ್ಯತ್ಯಾಸ ಕಂಡುಬಂದರೆ ತಕ್ಷಣವೇ ಸೂಕ್ತ ಪರೀಕ್ಷೆಗಳ ಮೂಲಕ ಮತ್ತು ವೈದ್ಯರ ಸಲಹೆಯ ಮೇರೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು,ಮುನ್ನೆಚ್ಚರಿಕೆ ಚಿಕಿತ್ಸೆಗಿಂತಲೂ ಉತ್ತಮ ಎಂದು ವೈದ್ಯರೇ ಹೇಳುವ ಹಾಗೆ ಈ ಮುನ್ನೆಚ್ಚರಿಕೆ ಭಾರೀ ಅನಾಹುತದಿಂದ ತಪ್ಪಿಸಬಹುದು.

  ನಮಗೆ ತಿಳಿದಂತೆ ಜೋಮು ಹಿಡಿಯುವುದು ಒಂದು ಅಂಗದಲ್ಲಿ ಸಂವೇದನೆ ಇಲ್ಲದಿರುವ ಮೂಲಕ ಆಗುತ್ತದೆ. ಸಾಮಾನ್ಯವಾಗಿ ಕೈಕಾಲುಗಳನ್ನು ಬಹುಕಾಲ ಮಡಚಿಯೇ ಇದ್ದು ರಕ್ತಸಂಚಾರಕ್ಕೆ ಅಡ್ಡಿಯಾದರೆ ಮುಂದಿನ ಭಾಗ ಜೋಮು ಹಿಡಿಯುತ್ತದೆ. ಆದರೆ ಕೈಕಾಲುಗಳನ್ನು ನೀಳವಾಗಿಸಿದ ಕೆಲವೇ ನಿಮಿಷಗಳಲ್ಲಿ ಇದು ಸರಿಹೋಗುತ್ತದೆ.  ಹಸ್ತಗಳ ನಲ್ಮೆಯ ಆರೈಕೆಗೆ ಈ ಮನೆಮದ್ದೇ ಸಾಕು

  ಆದರೆ ಒಂದು ವೇಳೆ ಯಾವುದೇ ಬಗೆಯ ಒತ್ತಡ ಇಲ್ಲದೆಯೇ ಯಾವುದಾದರೊಂದು ಭಾಗಕ್ಕೆ ಜೋಮು ಹಿಡಿದರೆ ಇದಕ್ಕೆ ಬೇರೆಯೇ ಕಾರಣವಿರಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಈ ಜೋಮಿನೊಡನೆ ಒಳಭಾಗದಲ್ಲಿ ಚಿಕ್ಕ ಚಿಕ್ಕ ಸೂಜಿಗಳು ಚುಚ್ಚಿದ ಅನುಭವವಾಗುತ್ತದೆ. ವಿಶೇಷವಾಗಿ ದೇಹದ ತುದಿಭಾಗಗಳಾದ ಹಸ್ತ ಮತ್ತು ಪಾದಗಳೇ ಹೆಚ್ಚಾಗಿ ಜೋಮು ಹಿಡಿಯುತ್ತವೆ. ಬನ್ನಿ, ಈ ಪರಿಸ್ಥಿತಿಗೆ ಯಾವ ಅಂಶಗಳು ಕಾರಣವಾಗಿರಬಹುದು ಎಂಬುದನ್ನು ನೋಡೋಣ....   

  ಟೆನ್ನಿಸ್ ಎಲ್ಬೋ

  ಟೆನ್ನಿಸ್ ಎಲ್ಬೋ

  ಕ್ರಿಕೆಟ್ ಮಾಂತ್ರಿಕ ಸಚಿನ್ ಟೆಂಡುಲ್ಕರ್ ರವರನ್ನು ಅಪಾರವಾಗಿ ಕಾಡಿದ್ದ ಈ ತೊಂದರೆಯಲ್ಲಿ ಮೊಣಕೈಯ ಮಾಂಸಖಂಡಗಳನ್ನು ಮೂಳೆಗೆ ಬಂಧಿಸುವ ಗಟ್ಟಿಯಾದ ತಂತು (tendon) ಘಾಸಿಗೊಂಡಿದ್ದರೆ ಈ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ತೊಂದರೆಯ ಕಾರಣ ಹಸ್ತಗಳು ಜೋಮು ಹಿಡಿಯುತ್ತವೆ.

  ಥೈರಾಯ್ಡ್ ಗ್ರಂಥಿಯ ತೊಂದರೆ

  ಥೈರಾಯ್ಡ್ ಗ್ರಂಥಿಯ ತೊಂದರೆ

  ಒಂದು ವೇಳೆ ಥೈರಾಯ್ಡ್ ಗ್ರಂಥಿಯ ಕ್ಷಮತೆ ಕಡಿಮೆಯಾದರೆ ಇದು ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಹಾರ್ಮೋನುಗಳನ್ನು ಸ್ರವಿಸುವುದಿಲ್ಲ (Hypothyroidism). ಇದರ ಕೆಲವಾರು ಲಕ್ಷಣಗಳಿದ್ದು ಹಸ್ತಗಳು ಜೋಮುಹಿಡಿಯುವುದು ಒಂದಾಗಿದೆ.ಥೈರಾಯ್ಡ್ ನಿಯಂತ್ರಣಕ್ಕೆ 12 ಸೂಪರ್ ಫುಡ್

  ಮದ್ಯವ್ಯಸನ

  ಮದ್ಯವ್ಯಸನ

  ದೇಹ ತಾಳಿಕೊಳ್ಳುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಮದ್ಯಸೇವನೆ ನಿಯಮಿತವಾಗಿದ್ದರೆ ಇದು ನಿಧಾನವಾಗಿ ನರವ್ಯವಸ್ಥೆಯನ್ನುಶಿಥಿಲಗೊಳಿಸುತ್ತಾ ಬರುತ್ತದೆ ಹಾಗೂ ಮುಖ್ಯವಾಗಿ ಕೈಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದರೊಂದಿಗೆ ಹಸ್ತಗಳೂ ಜೋಮುಹಿಡಿಯುತ್ತದೆ.

  ಗ್ವಿಲ್ಲೈನ್-ಬಾರ್ ಸಿಂಡ್ರೋಮ್

  ಗ್ವಿಲ್ಲೈನ್-ಬಾರ್ ಸಿಂಡ್ರೋಮ್

  ಇದೊಂದು ರೋಗನಿರೋಧಕ ವ್ಯವಸ್ಥೆಗೆ ಸಂಬಂಧಿಸಿದ ತೊಂದರೆಯಾಗಿದ್ದು ಇದು ದೇಹದಲ್ಲಿ ಹಲವು ಭಾಗಗಳಲ್ಲಿ ನರಗಳನ್ನು ಘಾಸಿಗೊಳಿಸುತ್ತದೆ. ಇದರಲ್ಲಿ ಕೈಗಳು ಅತಿ ಹೆಚ್ಚು ಪ್ರಭಾವಿತವಾಗಿದ್ದು ಹಸ್ತಗಳು ಜೋಮುಹಿಡಿಯುತ್ತವೆ ಹಾಗೂ ಕೈಗಳಲ್ಲಿ ಶಕ್ತಿಯೇ ಇಲ್ಲವಾಗಿ ಒಳಗೆ ಸೂಜಿ ಚುಚ್ಚಿದಂತಹ ಅನುಭವವಾಗುತ್ತದೆ.

  ಲೈಮ್ ರೋಗ

  ಲೈಮ್ ರೋಗ

  ತಿಗಣೆಯಿಂದ ಹರಡುವ ಈ ಸಾಂಕ್ರಾಮಿಕ ರೋಗ ನರವ್ಯವಸ್ಥೆಯ ಮೇಲೆ ಧಾಳಿ ಮಾಡುತ್ತದೆ. ಇದರಿಂದ ಫ್ಲೂ ಜ್ವರ, ಹಸ್ತಗಳಲ್ಲಿ ಜೋಮು ಹಿಡಿಯುವುದು ಮತ್ತು ಅತೀವ ಸುಸ್ತು ಎದುರಾಗುತ್ತದೆ. ತಿಗಣೆಗಳ ಕಾಟದಿಂದ ಮುಕ್ತಿ ಹೊಂದಲು ಫಲಪ್ರದ ಮನೆಮದ್ದುಗಳು

  ಹೃದಯಾಘಾತ

  ಹೃದಯಾಘಾತ

  ಮೆದುಳಿನಿಂದ ಹಸ್ತಗಳಿಗೆ ಹರಿಯುವ ರಕ್ತಪರಿಚಲನೆಯಲ್ಲಿ ಯಾವುದೇ ತಡೆಯುಂಟಾದರೆ ಕೈಗಳು ಜೋಮು ಹಿಡಿಯುತ್ತವೆ ಹಾಗೂ ಇದು ಹೃದಯಾಘಾತ ಸಂಭವಿಸುವ ಸೂಚನೆಯಾಗಿದೆ. ಥಟ್ಟನೇ ಕಾಡುವ 'ಹೃದಯಾಘಾತ'! ತಿಳಿಯಲೇಬೇಕಾದ ಸತ್ಯ ಸಂಗತಿ

  ಗ್ಯಾಂಗ್ಲಿಯಾನ್

  ಗ್ಯಾಂಗ್ಲಿಯಾನ್

  ಚರ್ಮದ ಅಡಿಯಲ್ಲಿ ಪುಟ್ಟ ಗಡ್ಡೆಗಳು ಮೂಡುತ್ತವೆ. ಇವು ಕ್ಯಾನ್ಸರ್ ಕಾರಕವಲ್ಲದಿದ್ದರೂ ಅಕ್ಕಪಕ್ಕದ ನರಗಳಿಗೆ ಒತ್ತುತ್ತಾ ಇವುಗಳ ಮೂಲಕ ಹಾದುಹೋಗುವ ರಕ್ತಸಂಚಾರಕ್ಕೆ ತಡೆಯೊಡ್ಡುತ್ತವೆ. ಪರಿಣಾಮವಾಗಿ ಕೈಗಳಲ್ಲಿ ನೋವು ಮತ್ತು ಹಸ್ತದಲ್ಲಿ ಜೋಮು ಹಿಡಿಯುವುದು ಕಂಡುಬರುತ್ತದೆ.

   

  English summary

  Dangerous Reasons Why Your Hands Are Feeling Numb

  As we know, numbness is a symptom in which a person cannot feel any sensation in certain body parts, due to various reasons. Numbness can also be accompanied by a tingling sensation. So, have a look at some of the dangerous reasons why your hands could be feeling numb.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more