For Quick Alerts
ALLOW NOTIFICATIONS  
For Daily Alerts

  ಮಾತ್ರೆಯನ್ನು ತುಂಡು ಮಾಡಿ ಅರ್ಧ ನುಂಗುವುದು ಸರಿಯೇ?

  By Manu
  |

  ಎಷ್ಟೋ ಮನೆಗಳಲ್ಲಿ ತಾಯಂದಿರು ಮಕ್ಕಳಿಗೆ ಮಾತ್ರೆಯನ್ನು ನೀಡುವಾಗ ನಡುವಿನಲ್ಲಿ ತುಂಡು ಮಾಡಿ ಅರ್ಧ ಮಾತ್ರೆಯನ್ನು ಮಾತ್ರ ತಿನ್ನಿಸುವುದುದನ್ನು ಕಾಣಬಹುದು. ಉಳಿದ ಅರ್ಧ ಮಾತ್ರೆಯನ್ನು ಮುಂದಿನ ಹೊತ್ತಿಗೆ ಸೇವಿಸಲೆಂದು ಮಾತ್ರೆಯನ್ನು ಹೊರತೆಗೆದಿದ್ದ ಅಲ್ಯೂಮಿನಿಯಂ ಪೊಟ್ಟಣದಲ್ಲಿಯೇ ಹಾಕಿಡುತ್ತಾರೆ. ಈ ಔಷಧಿಗಳನ್ನು ಸೇವಿಸುವವರ ಮೈ ತೂಕ ಹೆಚ್ಚುವುದು!

  ಮಕ್ಕಳಿಗೆ ಮಾತ್ರವಲ್ಲ, ಹಿರಿಯರೂ ಈ ವಿಧಾನವನ್ನು ಅನುಸರಿಸುವುದುಂಟು. ಆದರೆ ಹೀಗೆ ಮಾಡುವುದು ಸರಿಯೇ? ಈ ಪ್ರಶ್ನೆಯನ್ನು ಇವರಲ್ಲಿ ಕೇಳಿದರೆ ಈ ಮಾತ್ರೆಗಳು ಅಗತ್ಯಕ್ಕೂ ಹೆಚ್ಚಿನ ಔಷಧೀಯ ಪ್ರಮಾಣವನ್ನು ಹೊಂದಿರುವ ಕಾರಣದಿಂದ ಅರ್ಧ ಮಾತ್ರೆ ತಿಂದರೆ ಸಾಕಾಗುತ್ತದೆ ಎಂಬ ಉತ್ತರ ಸಿಗುತ್ತದೆ. ವೈದ್ಯರ ಸಲಹೆವಿಲ್ಲದೇ ಇಂತಹ ಔಷಧಿಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ!

  ಎಷ್ಟೋ ಸಲ ವೈದ್ಯರೇ ಈ ವಿಧಾನವನ್ನು ಅನುಸರಿಸುವಂತೆ ಸಲಹೆ ನೀಡುತ್ತಾರೆ. ಇದಕ್ಕೆ ಸ್ಪಷ್ಟ ಕಾರಣವೂ ಇದೆ. ಒಂದು ವೇಳೆ ನಿಗದಿತ ಪ್ರಮಾಣದ ಔಷಧಿ ಇರುವ ಮಾತ್ರೆ ಲಭ್ಯವಿಲ್ಲದೇ ಇದ್ದರೆ ಆಗ ಹೆಚ್ಚು ಪ್ರಮಾಣದ ಮಾತ್ರೆಯನ್ನು ತೆಗೆದುಕೊಂಡು ಅರ್ಧ ಮಾಡಲು ಹೇಳುತ್ತಾರೆ.

  ಉದಾಹರಣೆಗೆ 50mg ಮಾತ್ರೆಯ ಅವಶ್ಯಕತೆ ಇದ್ದು ಔಷಧಿ ಅಂಗಡಿಯಲ್ಲಿ 100mg ಮಾತ್ರೆ ಮಾತ್ರವೇ ಇದ್ದರೆ ಆಗ ಇದನ್ನು ಎರಡು ತುಂಡು ಮಾಡಿ ಒಂದು ತುಂಡು ತಿಂದರೆ 50mg ಸಿಕ್ಕಂತಾಯಿತಲ್ಲ! ಲೆಕ್ಕವೇನೋ ಸರಿಯಾಯಿತು ಆದರೆ ಈ ವಿಧಾನ ಸುರಕ್ಷಿತವೇ? ಬನ್ನಿ, ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ನೋಡೋಣ.... 

  ವಾಸ್ತವಾಂಶ #1

  ವಾಸ್ತವಾಂಶ #1

  ಮೊದಲಿಗೆ ಈ ಸಂದರ್ಭ ಎದುರಾದರೆ ನಿಮಗೆ ಈ ಮಾತ್ರೆಯನ್ನು ಸಲಹೆ ಮಾಡಿದ ವೈದ್ಯರನ್ನೇ ಕೇಳಿ ತಿಳಿದುಕೊಳ್ಳುವುದು ಅಗತ್ಯ. ಏಕೆಂದರೆ ಎಲ್ಲಾ ಮಾತ್ರೆಗಳನ್ನು ಅರ್ಧ ಮಾಡಲಿಕ್ಕೆ ಸಾಧ್ಯವಿಲ್ಲ. ವಿಶೇಷವಾಗಿ ಕ್ಯಾಪ್ಸೂಲುಗಳನ್ನು ತುಂಡುಮಾಡಲು ಸಾಧ್ಯವೇ ಇಲ್ಲ. ಆದ್ದರಿಂದ ವೈದ್ಯರು ಒಪ್ಪಿಗೆ ನೀಡಿದ ಬಳಿಕವೇ ತುಂಡು ಮಾಡಬೇಕು.

  ವಾಸ್ತವಾಂಶ #2

  ವಾಸ್ತವಾಂಶ #2

  ಕೆಲವು ಮಾತ್ರೆಗಳನ್ನು ಸುಲಭವಾಗಿ ತುಂಡು ಮಾಡಲು ಸಾಧ್ಯವಾಗುವಂತೆ ಔಷಧಿಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿಯೇ ಒಂದು ಗೆರೆಯನ್ನು ಮೂಡಿಸಲಾಗಿರುತ್ತದೆ. ಈ ಬಗ್ಗೆ ಹೆಚ್ಚಿನ ವಿವರವನ್ನು ಆ ಪ್ಯಾಕೆಟ್ಟಿನ ಮೇಲೇ ಅಥವಾ ಔಷಧಿಯ ಜೊತೆಗೆ ನೀಡಿರುವ ಕಿರು ವಿವರದ ಕಾಗದದಲ್ಲಿಯೂ ಬರೆದಿರಲಾಗಿರುತ್ತದೆ. ಈ ವಿವರಗಳನ್ನು ಓದಿ ಸ್ಪಷ್ಟಪಡಿಸಿಕೊಂಡು ಮಾತ್ರೆಗಳನ್ನು ತುಂಡು ಮಾಡಬಹುದು. ಒಂದು ವೇಳೆ ಈ ಗುರುತು ಇಲ್ಲದಿದ್ದಲ್ಲಿ ಅಥವಾ ಈ ಬಗ್ಗೆ ಮಾಹಿತಿ ಇಲ್ಲದಿದ್ದರೆ ಈ ಮಾತ್ರೆಯನ್ನು ತುಂಡು ಮಾಡಬಾರದೆಂದೇ ಹಾಗೆ ನಿರ್ಮಿಸಲಾಗಿದೆ ಎಂದು ಅರ್ಥೈಸಿಕೊಳ್ಳಬೇಕು.

  ವಾಸ್ತವಾಂಶ #3

  ವಾಸ್ತವಾಂಶ #3

  ಪಿಲ್ಸ್ ಎಂದು ಕರೆಯುವ ಮಾತ್ರೆಗಳು ಹೆಚ್ಚಾಗಿ ಕ್ಯಾಪ್ಸೂಲು ಅಥವಾ ಪುಟ್ಟ ಪೀಪಾಯಿಯಲ್ಲಿದ್ದು ಇವುಗಳ ಒಳಗೆ ಔಷಧಿ ಪುಡಿಯ ರೂಪದಲ್ಲಿರುತ್ತದೆ. ಇವುಗಳನ್ನು ಎಂದಿಗೂ ತುಂಡು ಮಾಡಬಾರದು. ಏಕೆಂದರೆ ಈ ಪ್ರಯತ್ನದಲ್ಲಿ ಔಷಧಿ ಚೆಲ್ಲಿ ನಷ್ಟವಾಗಬಹುದು.

  ವಾಸ್ತವಾಂಶ #4

  ವಾಸ್ತವಾಂಶ #4

  ಕೆಲವು ಔಷಧಿಗಳನ್ನು ನಮ್ಮ ಜೀರ್ಣಾಂಗಗಳು ನಿಧಾನವಾಗಿ ಹೀರಿಕೊಳ್ಳಲಿ ಎಂದೇ ಕೆಲವು ನಿಧಾನವಾಗಿ ಕರಗುವ ಪದರಗಳನ್ನು ಆವರಿಸಿರುವಂತೆ ನಿರ್ಮಿಸಲಾಗಿರುತ್ತದೆ. ಈ ಔಷಧಿಗಳನ್ನು ಎಂದಿಗೂ ತುಂಡು ಮಾಡಬಾರದು. ಏಕೆಂದರೆ ತುಂಡು ಮಾಡಿದ ಬಳಿಕ ಈ ಔಷಧಿಗಳು ತಕ್ಷಣವೇ ಜೀರ್ಣವಾಗಿ ಅನಗತ್ಯವಾದ ಇತರ ತೊಂದರೆಗೆ ಕಾರಣವಾಗಬಹುದು.

  ವಾಸ್ತವಾಂಶ #5

  ವಾಸ್ತವಾಂಶ #5

  ಕೆಲವು ಔಷಧಿಗಳು ಗಾಳಿಗೆ ತೆರೆದಾಕ್ಷಣವೇ ರಾಸಾಯನಿಕ ಕ್ರಿಯೆಗೆ ಒಳಗಾಗಿ ಬಿಡುತ್ತವೆ. ಇಂತಹ ಔಷಧಿಗಳನ್ನೂ ಗಾಳಿಯ ಸಂಪರ್ಕಕ್ಕೆ ಬರದಂತೆ ಕೆಲವು ಪದರಗಳನ್ನು ಆವರಿಸಿಯೇ ನಿರ್ಮಿಸಲಾಗಿರುತ್ತದೆ. ಆದ್ದರಿಂದ ಈ ಮಾತ್ರೆಗಳನ್ನು ತುಂಡು ಮಾಡಿದ ತಕ್ಷಣ ಒಳಗಿನ ಔಷಧಿ ಗಾಳಿಯ ಸಂಪರ್ಕಕ್ಕೆ ಬಂದು ಪ್ರತಿಕ್ರಿಯೆಗೊಳಗಾಗಿ ತನ್ನ ಗುಣವನ್ನೇ ಕಳೆದುಕೊಂಡುಬಿಡುತ್ತದೆ ಅಥವಾ ಬದಲಾಯಿಸಿಕೊಂಡು ಬಿಡುತ್ತದೆ. ಈ ಮಾತ್ರೆಯನ್ನು ತಿನ್ನುವುದರಿಂದ ಅಪೇಕ್ಷಿತ ಫಲಿತಾಂಶ ಬರದೇ ಅನಪೇಕ್ಷಿತ ತೊಂದರೆಗಳೂ ಎದುರಾಗಬಹುದು.

  ವಾಸ್ತವಾಂಶ #6

  ವಾಸ್ತವಾಂಶ #6

  ಒಂದು ವೇಳೆ ಮಾತ್ರೆಯನ್ನು ತುಂಡು ಮಾಡಿದರೂ ಉಳಿದ ಅರ್ಧ ಮಾತ್ರೆಯನ್ನು ತಕ್ಷಣವೇ ಖಾಲಿಯಾಗಿರುವ ಅಲ್ಯೂಮಿನಿಯಂ ಪೊಟ್ಟಣದಲ್ಲಿ ಹಾಕಿ ಮಡಚಿಡಬೇಕು. ಈ ವಿಧಾನದ ಬಗ್ಗೆ ಅರಿವಿರದವರು ಮಾತ್ರೆಯನ್ನು ಹಾಗೇ ಸಂಗ್ರಹಿಸಿದರೆ ಇದರ ಮೇಲೆ ಧೂಳು, ಸೂಕ್ಷ್ಮಜೀವಿಗಳು, ವೈರಸ್ಸುಗಳು ಕುಳಿತು ಮುಂದಿನ ಬಾರಿ ಈ ಮಾತ್ರೆಯನ್ನು ನುಂಗುವಾಗ ನಮ್ಮ ಕೈಯಾರೆ ವೈರಸ್ಸುಗಳನ್ನು ದೇಹಕ್ಕೆ ಕಳಿಸಿದಂತಾಗುತ್ತದೆ.

  ವಾಸ್ತವಾಂಶ #7

  ವಾಸ್ತವಾಂಶ #7

  ಯಾವುದೇ ಮಾತ್ರೆಯನ್ನು ಸರಿಯಾಗಿ ಅರ್ಧ ಭಾಗ ಮಾಡುವುದು ಸಾಧ್ಯವೇ ಇಲ್ಲ. ಕೊಂಚವಾದರೂ ಅತ್ತಿತ್ತ ಆಗೇ ಆಗುತ್ತದೆ. ಹಾಗಿದ್ದಾಗ ನಿಗದಿತ ಪ್ರಮಾಣದ ಔಷಧಿಯೂ ಲಭ್ಯವಾಗುವುದು ಸಾಧ್ಯವಿಲ್ಲ. ಒಂದು ವೇಳೆ ಈ ಪ್ರಮಾಣ ಕೊಂಚ ಹೆಚ್ಚೇ ಆಗಿದ್ದರೂ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವುಂಟುಮಾಡಬಹುದು.

   

  English summary

  Can You Cut A Tablet Into 2 Pieces?

  You must have seen some people cutting a tablet into two halves and consuming one half and storing the other for later use. Is it okay to do that? Well, this practice is normally followed when a medical store near your home has tablets of a higher dosage than your requirement.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more