ಸೈಲೆಂಟ್ ಕಿಲ್ಲರ್ ಮೆದುಳು ಕ್ಯಾನ್ಸರ್‌‌ನ ರೋಗಲಕ್ಷಣಗಳು...

Posted By: Jaya
Subscribe to Boldsky

ಇಂದಿನ ದಿನಗಳಲ್ಲಿ ರೋಗವೆಂಬುದು ಮನುಷ್ಯರನ್ನು ಕಾಡುತ್ತಿರುವ ಸಾಧಾರಣ ಸಮಸ್ಯೆ ಎಂದೆನಿಸಿಬಿಟ್ಟಿದೆ. ವಾತಾವರಣ, ಜೀವನ ಶೈಲಿಯಿಂದಾಗಿ ಇಂದು ನಾವುಗಳು ಹೆಚ್ಚು ಹೆಚ್ಚು ರೋಗಗಳಿಗೆ ಬಲಿಯಾಗುತ್ತಿದ್ದೇವೆ. ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ನಮ್ಮಲ್ಲಿ ಶಕ್ತಿ, ಆರೋಗ್ಯ ಇಲ್ಲದಂತಾಗಿದೆ. ದೊಡ್ಡ ದೊಡ್ಡ ರೋಗಗಳ ಜೊತೆಗೆ ಸಣ್ಣ ಸಣ್ಣ ರೋಗಗಳು ಇಂದು ನಮ್ಮನ್ನು ಕಾಡುತ್ತಿರುವ ಮುಖ್ಯ ಸಮಸ್ಯೆಯಾಗಿದೆ. 

ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್

ಇಂದಿನ ಲೇಖನದಲ್ಲಿ ನಾವು ಚರ್ಚಿಸುತ್ತಿರುವ ವಿಷಯವಾಗಿದೆ ಮೆದುಳಿನ ಕ್ಯಾನ್ಸರ್‌ನಂತಹ ಅಪಾಯಕಾರಿ ರೋಗದ ಕುರಿತಾಗಿದೆ. ಮೆದುಳಿನ ಕೋಶದಲ್ಲಿ ಕಾಣಿಸಿಕೊಳ್ಳುವ ಈ ರೋಗ ನಿಧಾನವಾಗಿ ದೇಹದ ಇತರ ಭಾಗಗಳನ್ನು ವ್ಯಾಪಿಸಿಕೊಳ್ಳುತ್ತದೆ. ಮೆದುಳಿನ ಕ್ಯಾನ್ಸರ್ ರೋಗಲಕ್ಷಣಗಳನ್ನು ನಾವು ಇಂದಿಲ್ಲಿ ನೀಡುತ್ತಿದ್ದು ಇದನ್ನು ಅರಿತುಕೊಂಡು ಕೂಡಲೇ ಚಿಕಿತ್ಸೆಯನ್ನು ಮಾಡಿಕೊಂಡರೆ ಅದು ಉಲ್ಬಣಿಸುವುದನ್ನು ತಡೆಗಟ್ಟಬಹುದಾಗಿದೆ. ಇದನ್ನು ಪರಿಣಾಮಕಾರಿಯಾಗಿ ತಡೆಯುವ ಮಾರ್ಗಗಳಿದ್ದು ಅವು ಖಂಡಿತ ನಮಗೆ ನೆರವನ್ನು ನೀಡಲಿವೆ....

ವಾಕರಿಕೆ ಮತ್ತು ವಾಂತಿ

ವಾಕರಿಕೆ ಮತ್ತು ವಾಂತಿ

ನಿಮ್ಮ ಹೊಟ್ಟೆಯು ನಿತ್ರಾಣಗೊಳ್ಳುತ್ತಿದೆ ಮತ್ತು ಎಲ್ಲಾ ವಸ್ತುಗಳನ್ನು ವಿಸರ್ಜಿಸುತ್ತಿದೆ ಎಂದಾದಲ್ಲಿ ನೀವು ಮೆದುಳಿನಲ್ಲಿ ಗೆಡ್ಡೆಯನ್ನು ಹೊಂದಿದ್ದೀರಿ ಎಂದೇ ಅರ್ಥವಾಗಿದೆ. ಈ ಸಮಯದಲ್ಲಿ ವಾಂತಿಯು ನಿಮ್ಮಲ್ಲಿ ಕಂಡುಬರಬಹುದು, ಇಲ್ಲವೇ ವಾಕರಿಕೆಯನ್ನು ನೀವು ಅನುಭವಿಸುವ ಸಾಧ್ಯತೆ ಇದೆ.

ಮಂದ ದೃಷ್ಟಿ

ಮಂದ ದೃಷ್ಟಿ

ನೀವು ಮಂದ ದೃಷ್ಟಿಗೆ ಒಳಗಾಗುವ ಸಾಧ್ಯತೆ ಕೂಡ ಇದೆ. ಆರಂಭದಲ್ಲಿ ಮಸುಕು ಮಸುಕಾಗಿ ನಿಮಗೆ ವಸ್ತುಗಳು ಕಂಡುಬರುತ್ತವೆ. ಈ ಸಮಯದಲ್ಲಿ ಕನ್ನಡಕಗಳು ನಿಮಗೆ ಸಹಾಯ ಮಾಡುವುದಿಲ್ಲ. ಅದಕ್ಕಾಗಿ ವೈದ್ಯರನ್ನು ಕೂಡಲೇ ಸಂಪರ್ಕಿಸಿ ಪರೀಕ್ಷೆಯನ್ನು ಮಾಡಿಸಿಕೊಳ್ಳಿ. ಕಣ್ಣಿನ ಭಾಗದಲ್ಲಿ ಕೂಡ ಗೆಡ್ಡೆ ಬೆಳೆದಿದೆ ಎಂದಾದಲ್ಲಿ ನೀವು ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಕೂಡ ಇದೆ.

ಸ್ಮರಣೆ ಸಮಸ್ಯೆ

ಸ್ಮರಣೆ ಸಮಸ್ಯೆ

ಮೆದುಳಿನ ಕ್ಯಾನ್ಸರ್‌ನಿಂದ ನಿಮ್ಮ ನೆನಪು ಸ್ಮರಣೆಯ ಮೇಲೆ ಪರಿಣಾಮಗಳನ್ನು ನೀವು ಅನುಭವಿಸಬಹುದಾಗಿದೆ. ಆಲೋಚಿಸುವ ಶಕ್ತಿ ಮರೆತು ಹೋಗುವುದು, ನೆನಪಿನಲ್ಲಿ ಉಳಿಯದೇ ಇರುವುದು ಮೊದಲಾದ ಸಮಸ್ಯೆಗಳು ಮೆದುಳು ಕ್ಯಾನ್ಸರ್ ರೋಗಿಯನ್ನು ಕಾಡಬಹುದು.

ತಲೆನೋವು

ತಲೆನೋವು

ಈ ಸಮಯದಲ್ಲಿ ತಲೆನೋವು ಸರ್ವೇ ಸಾಮಾನ್ಯವಾಗಿದ್ದು ನೀವು ತೀರಾ ಹೆಚ್ಚು ಆಲೋಚಿಸಬೇಡಿ. ನೀವು ಮುಂಜಾನೆ ಎದ್ದಾಗಲೆಲ್ಲಾ ನಿಮಗೆ ತಲೆನೋವು ಕಂಡುಬರುತ್ತಿದೆ ಇಲ್ಲವೇ ತಲೆನೋವು ಹೆಚ್ಚಾಗುತ್ತಿದೆ ಎಂದಾದಲ್ಲಿ ನೀವು ವೈದ್ಯರನ್ನು ಸಂಪರ್ಕಿಸಬೇಕು.

ಸ್ನಾಯು ದೌರ್ಬಲ್ಯ

ಸ್ನಾಯು ದೌರ್ಬಲ್ಯ

ನಿಮಗೆ ಸ್ನಾಯು ನರ ದೌರ್ಬಲ್ಯ ಮೆದುಳಿನ ಕ್ಯಾನ್ಸರ್ ಸಮಯದಲ್ಲಿ ಕಂಡುಬರುತ್ತದೆ. ಮುಖದ ಸ್ನಾಯುಗಳು ಕೃಶವಾಗುತ್ತವೆ

ನಡೆಯುವಾಗ ಕಷ್ಟವಾಗುವುದು

ನಡೆಯುವಾಗ ಕಷ್ಟವಾಗುವುದು

ಟ್ಯೂಮರ್ ಯಾವ ಭಾಗದಲ್ಲಿ ಬೆಳೆದಿದೆ ಎಂಬುದನ್ನು ಆಧರಿಸಿ ಕ್ಯಾನ್ಸರ್ ಪರಿಣಾಮ ಬೀರುತ್ತದೆ. ಮೆದುಳಿನಲ್ಲಿ ಉಂಟಾದಲ್ಲಿ ಇದು ಸಂಪೂರ್ಣ ದೇಹದ ಅಂಗಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ದೇಹವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಇದರಿಂದ ನಡೆಯಲು ಕಷ್ಟ ಉಂಟಾಗಬಹುದು.

ಆಯಾಸ

ಆಯಾಸ

ಹೆಚ್ಚಿನ ವಿಶ್ರಾಂತಿ ನಿಮಗೆ ದೊರೆತಿಲ್ಲ ಎಂದಾದಲ್ಲಿ ಆಯಾಸ ಕಂಡುಬರಬಹುದು. ತೀರಾ ಹೆಚ್ಚಿನ ಆಯಾಸ ನಿಮಗೆ ಉಂಟಾಗುತ್ತಿದೆ ಎಂದಾದಲ್ಲಿ ವೈದ್ಯರನ್ನು ಕಾಣಿ.

ಮೂರ್ಛೆರೋಗ ಉಂಟಾಗುವುದು....

ಮೂರ್ಛೆರೋಗ ಉಂಟಾಗುವುದು....

ನಿಮಗೆ ಆಗಾಗ್ಗೆ ಮೂರ್ಛೆ ರೋಗ ಕಾಣಿಸಿಕೊಳ್ಳುತ್ತಿದೆ ಎಂದಾದಲ್ಲಿ ಇದಕ್ಕಿರುವ ಕಾರಣ ಮೆದುಳಿನ ಕ್ಯಾನ್ಸರ್ ಆಗಿದೆ. ಕಾಲು ಅಥವಾ ಕೈಗಳಲ್ಲಿ ಜೋಮಿನಿಂದ ಇದು ಉಂಟಾಗಬಹುದು. ಇದು ಸಂಪೂರ್ಣ ದೇಹವನ್ನು ಆವರಿಸುವ ಸಾಧ್ಯತೆ ಕೂಡ ಇದೆ.

ಹೊಟ್ಟೆಯ ಕ್ಯಾನ್ಸರ್: ನೀವು ತಿಳಿಯಲೇಬೇಕಾದ ಸತ್ಯಾಸತ್ಯತೆ

English summary

Brain Cancer Signs You Need To Know

Let us first shed light on what is brain cancer. The cancer cells in the form of tumour formed in the brain tissue are the cause of the brain cancer which is a serious illness that causes hindrance to the functioning of the brain. They may either form directly on the brain tissue or they may spread from other body parts to the brain.