Latest Updates
-
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು!
ಖತರ್ನಾಕ್ ಪ್ಲಾಸ್ಟಿಕ್ ಅಕ್ಕಿ ಬಂದೇ ಬಿಟ್ಟಿದೆ!-ಆದರೆ ಗುರುತಿಸುವುದು ಹೇಗೆ?
ಇತ್ತೀಚಿನ ದಿನಗಳಲ್ಲಿ ನಕಲಿ ಪ್ಲಾಸ್ಟಿಕ್ ಅಕ್ಕಿ ಮಾರುಕಟ್ಟೆಗೆ ಬಂದಿರುವುದನ್ನು ಮಾಧ್ಯಮಗಳಲ್ಲಿ ಗಮನಿಸಿಯೇ ಇರುತ್ತೀರಿ. ಪ್ಲಾಸ್ಟಿಕ್ ಎಷ್ಟೇ ಉಪಯೋಗಿ ವಸ್ತುವಾದರೂ ಇದು ನಮಗೆ ಆಹಾರವಾಗಿ ಸರ್ವಥಾ ಸಲ್ಲದು. ಆದರೆ ಧನದಾಸೆಯ ದುರುಳರು ನಮ್ಮ ಅನ್ನದ ರೂಪದಲ್ಲಿ ಈ ವಿಷವನ್ನುಣಿಸಲು ಪ್ರಯತ್ನಿಸುತ್ತಿರುವುದು ನಿಜವಾಗಿಯೂ ಆತಂಕಕಾರಿ ಬೆಳವಣಿಗೆಯಾಗಿದೆ.
ಈ ಅಕ್ಕಿ ನಿಜವಾದ ಅಕ್ಕಿಯನ್ನು ಎಷ್ಟು ಮಟ್ಟಿಗೆ ಚೆನ್ನಾಗಿ ಹೋಲುತ್ತದೆ ಎಂದರೆ ಕಣ್ಣಿನಲ್ಲಿಯೇ ಗುಣಮಟ್ಟ ಅಳೆಯುವ ಅಕ್ಕಿ ವ್ಯಾಪಾರಿಗಳೂ ಬೇಸ್ತು ಬೀಳುತ್ತಿದ್ದಾರೆ. ಅಷ್ಟೇ ಅಲ್ಲ, ಇದು ಮಾಮೂಲಿ ಅನ್ನದಂತೆಯೇ ಬೆಂದು ಅರಳುತ್ತದೆ ಸಹಾ. ಕೆಲವರು ಇದೆಲ್ಲಾ ಸುಳ್ಳು ಎಂದು ಹೇಳಿ ತಮ್ಮ ವ್ಯಾಪಾರವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದರೂ ನಾವು ಈ ವರ್ತಮಾನವನ್ನು ವದಂತಿ ಎಂದು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಕುಚ್ಚಲಕ್ಕಿಯ ಆರೋಗ್ಯಕಾರಿ ಪ್ರಯೋಜನಗಳೇನು ?
ಅಷ್ಟೇ ಅಲ್ಲದೇ ಇದರ ಸೇವನೆಯಿಂದ ಹಿರಿಯರ ಸಹಿತ ಮಕ್ಕಳ ಆರೋಗ್ಯಕ್ಕೂ ಮಾರಕವಾಗಬಹುದಾಗಿದ್ದು ಇದನ್ನು ಸೇವಿಸುವ ಮುನ್ನ ಇದು ನಿಜವಾದದ್ದೇ ಅಲ್ಲವೇ ಎಂದು ಪ್ರಮಾಣಿಸಿಕೊಳ್ಳುವುದೇ ಜಾಣತನದ ಕ್ರಮ. ನಿಜವಾದ ಅಕ್ಕಿಯಲ್ಲಿ ಪ್ರಮುಖವಾಗಿ ಪಿಷ್ಟವಿದ್ದರೆ ಪ್ಲಾಸ್ಕಿಕ್ ಅಕ್ಕಿಯಲ್ಲಿ ಥಾಲೇಟ್ (phthalate) ಎಂಬ ಅಂಶವಿರುತ್ತದೆ. ಇವು ಪಿಷ್ಟಕ್ಕೆ ಹೆಚ್ಚು ಕಡಿಮೆ ಸರಿಸಮನಾಗಿದ್ದು ಅಕ್ಕಿಯಂತೆಯೇ ಬೆಂದು ಅರಳುತ್ತದೆ.
ಆದರೆ ಹೊಟ್ಟೆಗೆ ಹೋದ ಬಳಿಕ ಇವು ಜೀರ್ಣಕ್ರಿಯೆಯನ್ನು ಅಡ್ಡಿಪಡಿಸುವುದು ಮಾತ್ರವಲ್ಲ, ಹಾರ್ಮೋನುಗಳನ್ನು ಏರುಪೇರುಗೊಳಿಸುವ ಮೂಲಕ ಸಂತಾನಶಕ್ತಿಯನ್ನೂ ಹೀರಿಬಿಡುತ್ತದೆ. ಆದ್ದರಿಂದ ಈ ಅಕ್ಕಿಯನ್ನು ಗುರುತಿಸಿ ತಿನ್ನದೇ ಇರುವುದು ಹಾಗೂ ಸಂಬಂಧಪಟ್ಟವರಿಗೆ ಹಾಗೂ ಸುತ್ತಮುತ್ತಲಿನವರಿಗೆ ಸೂಚನೆ ನೀಡುವ ಮೂಲಕ ಎದುರಾಗಬಹುದಾದ ಅಪಾಯದಿಂದ ತಪ್ಪಿಸಬಹುದು. ಇಲ್ಲಿವೆ ಕೆಲವು ಟಿಪ್ಸ್....

ಸಲಹೆ #1
ಒಂದು ದೊಡ್ಡ ಚಮಚದಷ್ಟು ಅನುಮಾನವಿರುವ ಅಕ್ಕಿಯನ್ನು ತೆಗೆದುಕೊಂಡು ಒಂದು ಬೆಂಕಿಕಡ್ಡಿ ಗೀರಿ ಬೆಂಕಿಯ ಜ್ವಾಲೆ ನೇರವಾಗಿ ಅಕ್ಕಿಯನ್ನು ತಾಕುವಂತೆ ಮಾಡಿ.

ಸಲಹೆ #1
ಒಂದು ವೇಳೆ ಪ್ಲಾಸ್ಟಿಕ್ ಸುಟ್ಟ ವಾಸನೆ ಬಂದರೆ ಇದರಲ್ಲಿ ಪ್ಲಾಸ್ಟಿಕ್ ಇದೆ ಎಂದು ಅರ್ಥ. ನಿಜವಾದ ಅಕ್ಕಿಯಾದರೆ ಜ್ವಾಲೆ ತಾಕಿದ ಭಾಗ ಸುಟ್ಟು ಬೇರೆಯೇ ವಾಸನೆ ಬರುತ್ತದೆ.

ಸಲಹೆ #2
ಒಂದು ದೊಡ್ಡಚಮಚದಷ್ಟು ಅಕ್ಕಿಯನ್ನು ಒಂದು ಕಾವಲಿಯ ಮೇಲೆ ಇರಿಸಿ ಒಣಗಿರುವಂತೆಯೇ ಹುರಿಯಿರಿ. ನಿಜವಾದ ಅಕ್ಕಿಯಾದರೆ ಬಾಣಲಿ ತಾಕಿದ ಭಾಗ ಕಂದು ಬಣ್ಣ ತಳೆಯುತ್ತದೆ.
ಬಾಸ್ಮತಿ ಅಕ್ಕಿ: ನೋಡಲಿಕ್ಕೇನೋ ಮಲ್ಲಿಗೆ ಹೂವು, ಆದರೆ ಆರೋಗ್ಯಕ್ಕೆ?

ಸಲಹೆ #2
ಆದರೆ ಪ್ಲಾಸ್ಟಿಕ್ ಅಕ್ಕಿಯಾದರೆ ಅಕ್ಕಿ ಕಾವಲಿಗೆ ಅಂಟಿದ ಭಾಗ ಕರಗಿ ಚಿಕ್ಕ ವೃತ್ತಾಕಾರದ ಪದರ ರೂಪುಗೊಳ್ಳುತ್ತದೆ. ಈ ಅಕ್ಕಿಯನ್ನು ಸರ್ವಥಾ ಸೇವಿಸಕೂಡದು.

ಸಲಹೆ #3
ಒಂದು ದೊಡ್ಡಚಮಚದಷ್ಟು ಅಕ್ಕಿಯನ್ನು ಒಂದು ಲೋಟ ನೀರಿನಲ್ಲಿ ಹಾಕಿ ಕಲಕಿ. ನಿಜವಾದ ಅಕ್ಕಿ ನೀರಿನಲ್ಲಿ ಮುಳುಗುತ್ತದೆ ಹಾಗೂ ಅಡ್ಡಲಾಗಿರುತ್ತದೆ. ಪ್ಲಾಸ್ಟಿಕ್ ಅಕ್ಕಿಯಾದರೆ ನೀರಿನಲ್ಲಿ ತೇಲುತ್ತದೆ.

ಸಲಹೆ #3
ಒಂದು ವೇಳೆ ತೇಲದೇ ಇದ್ದರೂ ಅಕ್ಕಿಯಂತೆ ತಕ್ಷಣವೇ ಮುಳುಗದೇ ತಿರುಗುತ್ತಿರುವ ನೀರಿನಲ್ಲಿ ಕೊಂಚ ಹೊತ್ತು ತಿರುಗುತ್ತಲೇ ಇರುತ್ತದೆ ಹಾಗೂ ಇನ್ನೂ ಒಂದು ವೇಳೆ ಆಳಕ್ಕಿಳಿದರೂ ಅಕ್ಕಿಯಂತೆ ಅಡ್ಡಲಾಗಿರದೇ ನೇರವಾಗಿ ನಿಲ್ಲುತ್ತದೆ.
ಬಹು ವಿಧ ಅಕ್ಕಿಯ ಆರೋಗ್ಯಕಾರಿ ಪ್ರಯೋಜನಗಳೇನು?

ಸಲಹೆ #4
ಒಂದು ಮುಷ್ಟಿಯಷ್ಟು ಅಕ್ಕಿಯನ್ನು ಕುದಿನೀರಿನಲ್ಲಿ ಹಾಕಿ ಅನ್ನ ಮಾಡಿ. ಕೊಂಚ ಹೊತ್ತಿನ ಬಳಿಕ ಪಾತ್ರೆಯಲ್ಲಿರುವ ನೀರಿನ ಮೇಲ್ಪದರವನ್ನು ಗಮನಿಸಿ.

ಸಲಹೆ #4
ಇಲ್ಲಿ ದಪ್ಪನೆಯ ಬಿಳಿಯಾದ ಪದರವೊಂದು ರೂಪುಗೊಳ್ಳುತ್ತಿರುತ್ತದೆ. ಇದು ಪ್ಲಾಸ್ಟಿಕ್ ಕರಗಿ ಗಾಳಿಗೆ ಗಟ್ಟಿಯಾದ ಪದರವಾಗಿದೆ.

ಸಲಹೆ #5
ಕೆಲವು ಪ್ಲಾಸ್ಟಿಕ್ ಅಕ್ಕಿ ಮೇಲಿನ ಯಾವುದೇ ವಿಧಾನಕ್ಕೆ ತನ್ನ ಗುಟ್ಟು ಬಿಟ್ಟುಕೊಡುವುದಿಲ್ಲ. ಇದನ್ನು ಕಂಡುಕೊಳ್ಳಲು ಕೊಂಚ ಹೆಚ್ಚಿನ ಕಾಲಾವಕಾಶ ಬೇಕು. ಅನ್ನವನ್ನು ಬೇಯಿಸಿ ಎರಡು ದಿನಗಳ ಕಾಲ ಗಾಳಿಗೆ ತೆರೆದಿಡಿ.

ಸಲಹೆ #5
ನಿಜವಾದ ಅಕ್ಕಿಯಾದರೆ ಒಂದೇ ದಿನಕ್ಕೆ ಬೂಸು ಬರುತ್ತದೆ. ಎರಡನೆಯ ದಿನಕ್ಕೆ ಬೂಸು, ಶಿಲೀಂಧ್ರ ಎಲ್ಲವೂ ಬರಲೇಬೇಕು. ಆದರೆ ಪ್ಲಾಸ್ಟಿಕ್ ಅಕ್ಕಿಗೆ ಯಾವುದೇ ವಾಸನೆ ಬರುವುದಿಲ್ಲ.

ಸಲಹೆ #6
ತಮಿಳುನಾಡು ಸರಕಾರದ ಆಹಾರ ವಿಭಾಗದ ಅಧಿಕಾರಿಗಳು ನೀಡಿರುವ ಸಲಹೆಯ ಪ್ರಕಾರ ಒಂದು ಮುಷ್ಟಿಯಷ್ಟು ಬಿಸಿ ಅನ್ನವನ್ನು ಕೈಬೆರಳುಗಳಿಂದಲೇ ಉಂಡೆಕಟ್ಟಿ ಸತತವಾಗಿ ಒಂದು ಅಥವಾ ಎರಡು ನಿಮಿಷಗಳ ಕಾಲ ಚೆಂಡಿನ ಆಕೃತಿ ಬರಿಸಿ. ತಣ್ಣಗಾದ ಬಳಿಕ ಈ ಚೆಂಡನ್ನು ಮೇಜಿನ ಮೇಲೆ ಬಡಿಯಿರಿ.

ಸಲಹೆ #6
ಒಂದು ವೇಳೆ ಇದು ಪ್ಲಾಸ್ಟಿಕ್ ಅಕ್ಕಿಯಾಗಿದ್ದರೆ ಚೆಂಡಿನಂತೆಯೇ ಪುಟಿಯುತ್ತದೆ, ಒಡೆಯುವುದಿಲ್ಲ. ನಿಜವಾದ ಅಕ್ಕಿಯನ್ನು ಎಷ್ಟೇ ಉಂಡೆಗಟ್ಟಿದರೂ ಕೆಳಗೆ ಬಿದ್ದ ತಕ್ಷಣ ಒಡೆದು ಚೂರುಚೂರಾಗುತ್ತದೆ.



Click it and Unblock the Notifications