ಹಳ್ಳಿ ಮದ್ದು- ಹೊಟ್ಟೆಯ ಕಲ್ಮಶ ಹೊರಹಾಕಲು ನೈಸರ್ಗಿಕ ಟಿಪ್ಸ್

By: Arshad
Subscribe to Boldsky

ಅನಿವಾರ್ಯ ಕಾರಣಗಳಿಂದ ಸಿದ್ಧ ಆಹಾರಗಳನ್ನೇ ಸೇವಿಸಿ, ಅನಾರೋಗ್ಯಕರ ಜೀವನ ಶೈಲಿಯನ್ನು ಅನುಸರಿಸುತ್ತಾ, ಮಾಲಿನ್ಯಭರಿತ ವಾಯುಸೇವಿಸುತ್ತಾ ಬಂದಿದ್ದರೆ ನಿಮ್ಮ ಹೊಟ್ಟೆಯಲ್ಲಿ ಅನಿವಾರ್ಯವಾಗಿ ಸಾಕಷ್ಟು ವಿಷಕಾರಿ ವಸ್ತುಗಳ ಸಂಗ್ರಹವೇ ಇರಬಹುದು. ನಮ್ಮ ಮನಸ್ಸಿಗೆ ಸುಂದರ ಮತ್ತು ರುಚಿಕರವಾಗಿ ಯಾವುದು ಕಂಡಿತೋ ಅವೆಲ್ಲವೂ ನೇರವಾಗಿ ಹೊಟ್ಟೆ ಸೇರುತ್ತವೆ. ಅನಾರೋಗ್ಯಕರ ಆಹಾರದ ಪರಿಣಾಮವಾಗಿ ಹೊಟ್ಟೆಯಲ್ಲಿ ಮತ್ತು ಕರುಳುಗಳಲ್ಲಿ ಸಾಕಷ್ಟು ವಿಷಕಾರಿ ವಸ್ತುಗಳು ಸಂಗ್ರಹವಾಗುತ್ತವೆ.

Stomach Detox

ಇಂದು ನಾವು ಸೇವಿಸುವ ಆಹಾರ, ಪಾನೀಯಗಳು ಮತ್ತು ವಾಯು ಸಹಾ ಸಾಕಷ್ಟು ಪ್ರದೂಷಣೆಗೊಳಗಾಗಿದೆ. ಅಲ್ಲದೇ ಆಹಾರದಲ್ಲಿರುವ ಸೂಕ್ಷ್ಮಜೀವಾಣುಗಳು ಹೊಟ್ಟೆ ಮತ್ತು ಕರುಳುಗಳಲ್ಲಿ ಉಳಿದು ಮನೆಮಾಡಿಕೊಂಡು ಆಹಾರವನ್ನು ಸೇವಿಸುತ್ತಾ ಉಂಡ ಮನೆಗೆ ದ್ರೋಹ ಬಗೆಯುತ್ತವೆ. ಆದ್ದರಿಂದ ಹೊಟ್ಟೆಯನ್ನು ಆಗಾಗ ಪೂರ್ಣವಾಗಿ ಕಲ್ಮಶರಹಿತವಾಗಿಸುತ್ತಾ ಇರಬೇಕಾಗುತ್ತದೆ. ಹಿರಿಯರು ಇದನ್ನು ಹೊಟ್ಟೆ ತೊಳೆಸುವುದು ಎಂದು ಕರೆಯುತ್ತಿದ್ದರು. ಹೊಟ್ಟೆಯೊಳಗಿನ ಕಲ್ಮಶ ಹೋಗಲಾಡಿಸಲು-ಉಪ್ಪು ನೀರಿನ ರೆಸಿಪಿ!

ಹಿಂದಿನವರು ಅನುಸರಿಸುತ್ತಿದ್ದ ವಿಧಾನವೆಂದರೆ ಹರಳೆಣ್ಣೆಯ ಸೇವನೆ. ಆದರೆ ಇದಕ್ಕೂ ಉತ್ತಮವಾದ ಮತ್ತು ಸುರಕ್ಷಿತವಾದ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲದ ಇನ್ನೊಂದು ವಿಧಾನವಿದೆ. ಇದು ಅಪ್ಪಟ ನೈಸರ್ಗಿಕವಾಗಿದ್ದು ಹೊಟ್ಟೆಯಲ್ಲಿರುವ ಎಲ್ಲ ಕಲ್ಮಶಗಳು ಹಾಗೂ ಮನೆಮಾಡಿಕೊಂಡಿದ್ದ ಹುಳ ಮತ್ತು ಕ್ರಿಮಿಗಳನ್ನು ಹೊರಹಾಕಲು ನೆರವಾಗುತ್ತದೆ. ದೇಹದೊಳಗಿನ ಕಲ್ಮಶ ಹೊರಹಾಕುವ ಮನೆಮದ್ದುಗಳು

ಇದಕ್ಕೆ ಬಳಸಾದ ಸಾಮಾಗ್ರಿಗಳು ನಿಮ್ಮ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಸದಾ ಇರುವುದೇ ಆಗಿವೆ. ಹೊರಗಿನಿಂದ ತರಬೇಕಾದ ಒಂದೇ ಸಾಮಾಗ್ರಿ ಎಂದರೆ ಪಪ್ಪಾಯಿ ಎಲೆಗಳು. ಬನ್ನಿ, ಈ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ:

papaya leaves

ಅಗತ್ಯವಿರುವ ಸಾಮಾಗ್ರಿಗಳು

*ಪಪ್ಪಾಯಿ ಎಲೆಯ ರಸ: ಮೂರು ದೊಡ್ಡ ಚಮಚ

*ಜೇನು : ಒಂದು ದೊಡ್ಡ ಚಮಚ

ಈ ಮನೆಮದ್ದಿನ ಮೂಲಕ ಹೊಟ್ಟೆಯಲ್ಲಿದ್ದ ಮತ್ತು ಕರುಳುಗಳ ಒಳಗೋಡೆಯಲ್ಲಿ ಅವಿತಿದ್ದ ಅಷ್ಟೂ ಕಲ್ಮಶಗಳು ಮತ್ತು ಕ್ರಿಮಿಗಳು ತೊಳೆಸಲ್ಪಟ್ಟು ಹೊರದಬ್ಬಲ್ಪಡುತ್ತವೆ. ಇದರ ಜೊತೆಗೇ ಈ ಮನೆಮದ್ದಿನ ಸೇವನೆಯಿಂದ ಹೊಟ್ಟೆ ಮತ್ತು ಕರುಳುಗಳಲ್ಲಿದ್ದ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳೂ ಹೊರಹೋಗಿ ಹೊಟ್ಟೆ ಮತ್ತು ಕರುಳುಗಳು ಶುದ್ಧಗೊಳ್ಳುತ್ತವೆ. ಹಿತ್ತಲ ಗಿಡ 'ಪಪ್ಪಾಯಿ ಗಿಡದ ಎಲೆಗಳ' ಜಬರ್ದಸ್ತ್ ಪವರ್ 

ಈ ಮದ್ದಿನಲ್ಲಿ ಬಳಸಲಾದ ಜೇನು ಮತ್ತು ಪಪ್ಪಾಯಿ ಎಲೆಯ ರಸದ ಸಂಯೋಜನೆಯಲ್ಲಿರುವ ವಿವಿಧ ವಿಟಮಿನ್ನುಗಳು ಮತ್ತು ಖನಿಜಗಳು ಹೊಟ್ಟೆಯ ಒಳಗೋಡೆಯ ಜೀವಕೋಶಗಳು ಹೊಸದಾಗಿ ಹುಟ್ಟಲು ನೆರವಾಗುತ್ತವೆ ಹಾಗೂ ತನ್ಮೂಲಕ ಆರೋಗ್ಯಕರ ಜೀರ್ಣರಸ ಒಸರಲು ನೆರವಾಗುತ್ತದೆ.

Honey

ತಯಾರಿಕಾ ವಿಧಾನ

*ಇವೆರಡನ್ನೂ ಒಂದು ಲೋಟದಲ್ಲಿ ಹಾಕಿ ಚೆನ್ನಾಗಿ ಕಲಕಿ

*ಸತತವಾಗಿ ಹದಿನೈದು ದಿನಗಳವರೆಗೆ ಬೆಳಿಗ್ಗಿದ್ದ ತಕ್ಷಣ ಉಪಹಾರಕ್ಕೂ ಮುನ್ನ ನೇರವಾಗಿ ಕುಡಿಯಿರಿ.

English summary

Best Natural Stomach Detox Drink, no side Effect

Everything we eat ultimately reach our stomach and so, the stomach can be a storehouse of toxins, especially if you are not eating healthy! The food we eat, the drinks we consume and even the air that we taken in are contaminated to a large extent and contain microbes that cause serious ailments if they get accumulated in your stomach.
Subscribe Newsletter