For Quick Alerts
ALLOW NOTIFICATIONS  
For Daily Alerts

ಬರೀ ಒಂದೆರಡು ಗಂಟೆಗಳಲ್ಲಿ ಮೂಲವ್ಯಾಧಿ ರೋಗಕ್ಕೆ ಪರಿಹಾರ...

By Arshad
|

ಮೂಲವ್ಯಾಧಿ ಅಥವಾ ಪೈಲ್ಸ್ (haemorrhoids) ಎಂಬ ವ್ಯಾಧಿ ಹೆಸರೇ ತಿಳಿಸುವಂತೆ ಮೂಲ ಅಥವಾ ಆಸನದ್ವಾರದ ಗೋಡೆಗಳಲ್ಲಿರುವ ನರಗಳ ಉರಿಯೂತದಿಂದ ಉಂಟಾಗುತ್ತದೆ. ಇದರಿಂದ ಮಲವಿಸರ್ಜನೆಯ ವೇಳೆ ಅಸಾಧ್ಯ ನೋವು ಹಾಗೂ ಕಷ್ಟಕರವೂ ಆಗುತ್ತದೆ. ಮೂಲವ್ಯಾಧಿ ಎರಡು ಬಗೆಯಲ್ಲಿ ಆಗುತ್ತದೆ. ಒಳಗಣ ಮೂಲವ್ಯಾಧಿ ಹಾಗೂ ಹೊರಗಣ ಮೂಲವ್ಯಾಧಿ. ಹೆಚ್ಚಿನವರಿಗೆ ಇವೆರಡರಲ್ಲಿ ಒಂದು ಬಗೆಯದ್ದು ಆವರಿಸಬಹುದು.

ಮೂಲವ್ಯಾಧಿ ಬಂದರೆ ಆತಂಕ ಬೇಡ! ಇಲ್ಲಿದೆ ನೋಡಿ ಮನೆಮದ್ದುಗಳು

ಕಡಿಮೆ ಜನರಲ್ಲಿ ಎರಡೂ ಬಗೆಯ ಮೂಲವ್ಯಾಧಿಯೂ ಕಂಡುಬರಬಹುದು. ಇದಕ್ಕೆ ಪ್ರಮುಖ ಕಾರಣವೆಂದರೆ ಮಲಬದ್ದತೆ, ಅತಿಸಾರ, ಗುದರತಿ, ಗರ್ಭಾವಸ್ಥೆ ಹಾಗೂ ವಯೋಸಹಜವಾಗಿ ಆವರಿಸುವ ಸಡಿಲತೆಗಳಾಗಿವೆ. ಮೂಲವ್ಯಾಧಿಯಿಂದ ಅಪಾರವಾದ ನೋವು ಮಾತ್ರವಲ್ಲ, ಮುಜುಗರ ತರಿಸುವಂತಹ ತುರಿಕೆ, ಮಲವಿಸರ್ಜನೆಯ ವೇಳೆ ರಕ್ತಸ್ರಾವ, ಇತರ ಹೊತ್ತಿನಲ್ಲಿಯೂ ನಿಧಾನವಾಗಿ ಆಗುವ ರಕ್ತಸ್ರಾವ ಇತ್ಯಾದಿಗಳೂ ಕಾಡಬಹುದು. ಮೂಲವ್ಯಾಧಿಗೆ ಅತ್ಯಂತ ಪ್ರಮುಖ ಕಾರಣವೆಂದರೆ ಆಹಾರದಲ್ಲಿ ಕರಗದ ಮತ್ತು ಕರಗುವ ನಾರಿನ ಕೊರತೆ.

ಮೂಲವ್ಯಾಧಿಯ ನಿಯಂತ್ರಣಕ್ಕೆ-ಆಪಲ್ ಸೈಡರ್ ವಿನೆಗರ್‌!

ಈ ತೊಂದರೆ ಎದುರಾದ ತಕ್ಷಣವೇ ಚಿಕಿತ್ಸೆ ಹಾಗೂ ಆಹಾರದಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳದೇ ಇದ್ದರೆ ಪರಿಸ್ಥಿತಿ ವಿಷಮಗೊಳ್ಳುತ್ತಾ ಮುಂದುವರೆಯುತ್ತದೆ. ಈ ವ್ಯಾಧಿ ಅತ್ಯಧಿಕವಾಗಿ ಮೈದಾವನ್ನು ಪ್ರಮುಖ ಅಹಾರವಾಗಿ ತಿನ್ನುವವರಲ್ಲಿ ಕಂಡುಬಂದಿದೆ. ಇಂದಿನ ಲೇಖನದಲ್ಲಿ ಮೂಲವ್ಯಾಧಿ ಗುಣಪಡಿಸಲು ನೆರವಾಗುವ ಆಹಾರಗಳನ್ನು ಪಟ್ಟಿ ಮಾಡಲಾಗಿದ್ದು ಈ ಆಹಾರಗಳನ್ನು ಸೇವಿಸಲು ವೈದ್ಯರೂ ಸಲಹೆ ಮಾಡುತ್ತಾರೆ....

ಇಡಿಯ ಧಾನ್ಯದ ಆಹಾರಗಳು

ಇಡಿಯ ಧಾನ್ಯದ ಆಹಾರಗಳು

ಇಡಿಯ ಧಾನ್ಯದ ಆಹಾರಗಳು, ಉದಾಹರಣೆಗೆ ಗೋಧಿಯ ಹಿಟ್ಟು (ಆಟಾ)ದಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದ್ದು ಕರುಳುಗಳಲ್ಲಿ ತ್ಯಾಜ್ಯ ಚಲಿಸಲು ಸುಲಭವಾಗಿಸುತ್ತದೆ. ಈ ಆಹಾರಗಳಲ್ಲಿ ಓಟ್ಸ್, ನುಚ್ಚಿನ ಖಾದ್ಯ, ಇಡಿಯ ಗೋಧಿಯ ಪಾಸ್ತಾ, ಆಟಾದಿಂದ ತಯಾರಿಸಿದ ಬ್ರೆಡ್, ಕಂದು ಅಕ್ಕಿ ಅಥವಾ ಪಾಲಿಶ್ ಮಾಡದ ಅಕ್ಕಿ ಮೊದಲಾದವು ಸೇರಿವೆ.

ಹಸಿರು ಎಲೆಗಳು ಮತ್ತು ತರಕಾರಿಗಳು

ಹಸಿರು ಎಲೆಗಳು ಮತ್ತು ತರಕಾರಿಗಳು

ಹಸಿಯಾಗಿ ತಿನ್ನಬಹುದಾದ ಯಾವುದೇ ತರಕಾರಿ ಮತ್ತು ಎಲೆಗಳು ಮೂಲವ್ಯಾಧಿಗೆ ಅತ್ಯುತ್ತಮವಾಗಿವೆ. ಇದರಲ್ಲಿ ಗರಿಷ್ಟ ಪ್ರಮಾಣದ ಕರಗದ ನಾರು (ಸೆಲ್ಯುಲೋಸ್) ಹಾಗೂ ಆಂಟಿ ಆಕ್ಸಿಡೆಂಟುಗಳಿದ್ದು ಜೀರ್ಣಕ್ರಿಯೆಯಲ್ಲಿ ನೆರವಾಗುತ್ತವೆ. ವಿಶೇಷವಾಗಿ ಪಾಲಕ್ ಮತ್ತು ಬಸಲೆ ಎಲೆಗಳಲ್ಲಿ ಹೆಚ್ಚಿನ ನಾರಿನ ಜೊತೆಗೇ ಕಬ್ಬಿಣದ ಅಂಶವೂ ಹೆಚ್ಚಾಗಿದ್ದು ಮೂಲವ್ಯಾಧಿ ಗುಣಪಡಿಸಲು ಉತ್ತಮ ಆಯ್ಕೆಯಾಗಿವೆ. ಇವುಗಳೊಂದಿಗೆ ಕೇಲ್ ಎಲೆಗಳು, ಬ್ರಸೆಲ್ಸ್ ಮೊಳಕೆ, ಶತಾವರಿ ಮೊದಲಾದವುಗಳನ್ನು ಹಸಿಯಾಗಿ ಸೇವಿಸುವ ಮೂಲಕ ಮೂಲವ್ಯಾಧಿಯನ್ನು ನಿಧಾನವಾಗಿ ಹಾಗೂ ಯಾವುದೇ ಅಡ್ಡಪರಿಣಾಮಗಳಿಲ್ಲದೇ ಗುಣಪಡಿಸಬಹುದು.

ತಾಜಾ ಹಣ್ಣುಗಳು

ತಾಜಾ ಹಣ್ಣುಗಳು

ಸಿಪ್ಪೆಗಳ ಸಹಿತ ತಿನ್ನಬಹುದಾದ ಯಾವುದೇ ಹಣ್ಣುಗಳು ಮೂಲವ್ಯಾಧಿಯನ್ನು ಗುಣಪಡಿಸಲು ನೆರವಾಗುತ್ತವೆ. ಏಕೆಂದರೆ ಸಿಪ್ಪೆಯಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಇದ್ದು ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತವೆ. ಸೇಬು, ಒಣದ್ರಾಕ್ಷಿ, ಬ್ಲೂಬೆರಿ ಹಾಗೂ ಹಸಿರುದ್ರಾಕ್ಷಿಗಳು ಮೂಲವ್ಯಾಧಿ ಗುಣಪಡಿಸಲು ಉತ್ತಮ ಆಯ್ಕೆಯಾಗಿವೆ.

ಬೀನ್ಸ್

ಬೀನ್ಸ್

ಹಸಿರು ಮತ್ತು ಎಳೆಯ ಬೀನ್ಸ್ (ಕನ್ನಡದಲ್ಲಿ ತಿಂಗಳಾವರೆ) ಕೋಡುಗಳನ್ನು ಹಸಿಯಾಗಿ ತಿಂದಷ್ಟೂ ಮೂಲವ್ಯಾಧಿಗೆ ಉತ್ತಮ. ಇದರಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಹಾಗೂ ಪೋಷಕಾಂಶಗಳಿವೆ. ಇದನ್ನು ಮೂಲವ್ಯಾಧಿ ಪೂರ್ಣವಾಗಿ ಗುಣವಾಗುವವರೆಗೂ ನಿತ್ಯವೂ ಸೇವಿಸುವುದು ಉತ್ತಮ. ಇದರೊಂದಿಗೆ ಬೀನ್ಸ್ ಬೀಜಗಳು, ಚಪ್ಪರದಾವರೆ ಬೀಜಗಳು, ಅಲಸಂಡೆ ಕಾಳು ಮೊದಲಾದವು ಸಹಾ ಉತ್ತಮವಾದ ಪರಿಹಾರವನ್ನು ಒದಗಿಸುತ್ತವೆ.

ನೀರು

ನೀರು

ಮೂಲವ್ಯಾಧಿಯ ತೊಂದರೆ ಇದ್ದವರು ಇತರರಿಗಿಂತಲೂ ಹೆಚ್ಚು ಹಾಗೂ ಸತತವಾಗಿ ನೀರು ಕುಡಿಯುತ್ತಲೇ ಇರಬೇಕು. ಇದರಿಂದ ಜೀರ್ಣಾಂಗಗಳಲ್ಲಿ ಮಲ ಗಟ್ಟಿಯಾಗದೇ ಇರಲು ಸಾಧ್ಯವಾಗುತ್ತದೆ. ಅತ್ಯುತ್ತಮ ವಿಧಾನವೆಂದರೆ ಪ್ರತಿ ಘಂಟೆಗೊಂದು ದೊಡ್ಡ ಲೋಟ ತಣ್ಣೀರನ್ನು ಎಚ್ಚರಿದ್ದಷ್ಟೂ ಹೊತ್ತು ಕುಡಿಯುತ್ತಾ ಇರುವುದು. ನಡುನಡುವೆ ಹಣ್ಣಿನ ರಸವನ್ನು ಸೇವಿಸುವುದು ಇನ್ನೂ ಉತ್ತಮ. ಆದರೆ ಬಿಸಿ ಪೇಯಗಳಾದ ಕಾಫಿ, ಟೀ ಹಾಗೂ ಆರೋಗ್ಯಕ್ಕೆ ಮಾರಕವಾದ ಮದ್ಯ, ಸೋಡಾ, ಬುರುಗುಬರುವ ಲಘುಪಾನೀಯಗಳು ಮೊದಲಾದವುಗಳು ಮೂಲವ್ಯಾಧಿ ಸಂಪೂರ್ಣವಾಗಿ ತೊಲಗುವವರೆಗೆ ಬೇಡವೇ ಬೇಡ. ಎಳನೀರು, ಬಾರ್ಲಿ ಬೇಯಿಸಿದ ನೀರು, ಕೊತ್ತಬಂರಿ ಕಾಳು ನೆನೆಸಿಟ್ಟ ನೀರು ಸಹಾ ಉತ್ತಮವಾದ ಆಯ್ಕೆಯಾಗಿವೆ.

English summary

Best Doctor-approved Diet For Treating Piles

Piles, also known as haemorrhoids, is a condition in which the veins in the lower rectum or anus get inflamed.This can lead to severe pain while passing stools. Piles can be of two types, namely, internal piles and external piles.Most people suffer from a single type of piles at a given time, while some can suffer from both. The most common causes of piles include chronic constipation, diarrhoea, anal intercourse, pregnancy and ageing process.
X
Desktop Bottom Promotion