For Quick Alerts
ALLOW NOTIFICATIONS  
For Daily Alerts

ಬೇಸಿಗೆಗೆ ದೇಹವನ್ನು ತಂಪಾಗಿಸುವ ಆಹಾರಗಳು-ತಪ್ಪದೇ ಸೇವಿಸಿ

By Hemanth
|

ದಿನದಿಂದ ದಿನಕ್ಕೆ ಬಿಸಿಲಿನ ತಾಪವು ಹೆಚ್ಚಾಗುತ್ತಾ ಇದ್ದು, ಪ್ರತೀ ದಿನ ಬಿಸಿಲಿನ ಝಳಕ್ಕೆ ಸಿಲುಕುತ್ತಿರುವವರ ಸಂಖ್ಯೆ ಗಣನೀಯವಾಗಿ ಏರುತ್ತಾ ಇದೆ. ಕೆಲವೊಂದು ಕಡೆ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಜಲವೇ ಜೀವನ ಎನ್ನುವ ಮಾತಿದೆ. ಆದರೆ ನೀರು ಮಾತ್ರ ಸಿಗುತ್ತಿಲ್ಲ. ನೀರು ಸಿಗುವಂತಹ ಕಡೆಗಳಲ್ಲಿ ಅದರಲ್ಲಿ ಹಲವಾರು ರೀತಿಯ ಕಲ್ಮಶಗಳು ಒಳಗೊಂಡಿದೆ. ದೇಹದ ಮುಕ್ಕಾಲು ಭಾಗ ನೀರಿನಿಂದ ಆವೃತವಾಗಿದೆ ಎನ್ನಲಾಗುತ್ತಿದೆ. ಇಂತಹ ದೇಹವನ್ನು ಕಾಪಾಡಲು ಹೆಚ್ಚು ಹೆಚ್ಚು ನೀರು ಕುಡಿಯಬೇಕಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ನೀರು ಕುಡಿಯದೆ ಇದ್ದರೆ ನಿರ್ಜಲೀಕರಣದಂತಹ ಸಮಸ್ಯೆ ಕಾಡುವುದು. ಬೇಸಿಗೆಯ ಈ ಹೊತ್ತಲ್ಲಿ ನಮ್ಮ ದೇಹವನ್ನು ತೇವಾಂಶದಿಂದ ಇಡುವುದು ಅನಿವಾರ್ಯವಾಗಿದೆ. ಕೇವಲ ನೀರು ಮಾತ್ರವಲ್ಲದೆ ಕೆಲವೊಂದು ಹಣ್ಣುಗಳು ಹಾಗೂ ತರಕಾರಿಗಳು ಕೂಡ ದೇಹವನ್ನು ತಂಪಾಗಿಡಬಲ್ಲದು. ಇದಕ್ಕಾಗಿ ಬೋಲ್ಡ್ ಸ್ಕೈ ದೇಹವನ್ನು ತಂಪಾಗಿಸುವಂತಹ ಕೆಲವೊಂದು ಆಹಾರಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದೆ. ಇದನ್ನು ಸೇವಿಸಿ ನಿಮ್ಮ ದೇಹವನ್ನು ಬಿಸಿಲಿನಿಂದ ಕಾಪಾಡಿಕೊಳ್ಳಿ.....

ಮೊಸರು

ಮೊಸರು

ಮೊಸರು ದೇಹವನ್ನು ತಂಪಾಗಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮೊಸರಿನಿಂದ ಮಜ್ಜಿಗೆ, ಲಸ್ಸಿ ಅಥವಾ ತರಕಾರಿ ಹಾಗೂ ಹಣ್ಣುಗಳನ್ನು ಹಾಕಿಕೊಂಡು ಸಲಾಡ್ ಮಾಡಿಕೊಳ್ಳಬಹುದು. ಹಣ್ಣುಗಳಿಂದ ಮಾಡಿರುವಂತಹ ಸಲಾಡ್ ಬೇಸಿಗೆಯಲ್ಲಿ ಸವಿಯಲು ತುಂಬಾ ಒಳ್ಳೆಯದು.ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ

ಎಳನೀರು

ಎಳನೀರು

ಈಗೀಗ ತುಂಬಾ ದುಬಾರಿಯಾಗುತ್ತಿರುವಂತಹ ಎಳನೀರು ನಮ್ಮ ದೇಹಕ್ಕೆ ತುಂಬಾ ಲಾಭಕಾರಿ. ಇದರಲ್ಲಿ ದೇಹವನ್ನು ತಂಪಾಗಿಸುವ ಹಲವಾರು ಗುಣಗಳು ಇವೆ. ಇದರಲ್ಲಿ ಸಕ್ಕರೆ, ವಿದ್ಯುದ್ವಿಚ್ಛೇದ್ಯಗಳು ಮತ್ತು ಪ್ರಮುಖ ಖನಿಜಾಂಶಗಳು ಇರುವ ಕಾರಣದಿಂದ ಇದು ದೇಹವನ್ನು ತೇವಾಂಶದಿಂದ ಇಡುತ್ತದೆ. ಬೆಳ್ಳಂ ಬೆಳಿಗ್ಗೆ ಎದ್ದು ಎಳೆ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

ಕಲ್ಲಂಗಡಿ

ಕಲ್ಲಂಗಡಿ

ರಸ್ತೆ ಬದಿಯಲ್ಲಿ ತುಂಡು ಮಾಡಿ ಇಟ್ಟಿರುವಂತಹ ಕಲ್ಲಂಗಡಿ ಹಣ್ಣನ್ನು ತಿನ್ನಲು ಹೆದರುತ್ತಿರಬಹುದು. ಇದಕ್ಕೆ ಹಲವಾರು ಕಾರಣಗಳು ಕೂಡ ಇದೆ. ಆದರೆ ಇಡೀ ಕಲ್ಲಂಗಡಿ ಹಣ್ಣನ್ನು ಮನೆಗೆ ತೆಗೆದುಕೊಂಡು ಹೋಗಿ ಅದನ್ನು ತುಂಡು ಮಾಡಿಕೊಂಡು ತಿನ್ನಿ ಅಥವಾ ಸಕ್ಕರೆ ಹಾಕದೆ ಜ್ಯೂಸ್ ಮಾಡಿಕೊಳ್ಳಿ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗಳು ದೇಹಕ್ಕೆ ತುಂಬಾ ಪರಿಣಾಮಕಾರಿ. ಕಲ್ಲಂಗಡಿ ಜ್ಯೂಸ್: ಬೇಸಿಗೆಗೆ ದೇವರು ಕೊಟ್ಟಿರುವ ವರ!!

ಮುಳ್ಳುಸೌತೆ

ಮುಳ್ಳುಸೌತೆ

ಮುಳ್ಳುಸೌತೆಯಲ್ಲಿ ಇರುವಂತಹ ನಾರಿನಾಂಶವು ಮಲಬದ್ಧತೆಯನ್ನು ದೂರವಿಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅದರಂತೆ ಇದರ ಪ್ರತಿಯೊಂದು ತುಂಡು ಕೂಡ ತುಂಬಾ ರುಚಿಯಾಗಿರುತ್ತದೆ ಮತ್ತು ಮುಳ್ಳುಸೌತೆ ತಿಂದು ನೀವು ಬೇಸಿಗೆಯಲ್ಲಿ ತಂಪಾಗಿರಬಹುದು.

ಹಸಿರು ತರಕಾರಿಗಳು

ಹಸಿರು ತರಕಾರಿಗಳು

ಹಸಿರು ತರಕಾರಿಗಳು ದೇಹಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಬೇಸಿಗೆಯಲ್ಲಿ ಇದನ್ನು ಹೆಚ್ಚು ಸೇವಿಸಿ. ಯಾಕೆಂದರೆ ಇದರಲ್ಲಿ ನೀರಿನಾಂಶ ಹೆಚ್ಚಾಗಿದೆ. ಹಸಿರು ತರಕಾರಿಗಳನ್ನು ಅರೆಬೇಯಿಸಿ ತಿನ್ನಬೇಕು. ಹಸಿರು ಎಲೆ ತರಕಾರಿಗಳ ವೈಶಿಷ್ಟ್ಯವೇನು ಗೊತ್ತೇ?

ಈರುಳ್ಳಿ

ಈರುಳ್ಳಿ

ಈರುಳ್ಳಿಯಲ್ಲಿ ತಂಪಾಗಿಸುವ ಒಳ್ಳೆಯ ಗುಣಗಳು ಇವೆ. ಇದನ್ನು ಯಾವುದೇ ಸಾರು, ರೈತಾ, ಸಲಾಡ್ ಮತ್ತು ಚಟ್ನಿಗೆ ಹಾಕಿ ಸೇವಿಸಬಹುದು. ಇದು ದೇಹವನ್ನು ತಂಪಾಗಿಡುತ್ತದೆ. ಕ್ವೆರ್ಸೆಟಿನ್ ಹೊಂದಿರುವಂತಹ ಕೆಂಪು ಈರುಳ್ಳಿಯು ಅಲರ್ಜಿಯನ್ನು ಕಡಿಮೆ ಮಾಡುತ್ತದೆ. ಈರುಳ್ಳಿಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಬಿಸಿಲಿನಾಘಾತದಿಂದ ಮುಕ್ತಿ ಸಿಗುವುದು.

ದೇಹವನ್ನು ಹೈಡ್ರೇಟ್ ಮಾಡಿಕೊಳ್ಳಿ

ದೇಹವನ್ನು ಹೈಡ್ರೇಟ್ ಮಾಡಿಕೊಳ್ಳಿ

ಬೇಸಿಗೆ ಸಮಯದಲ್ಲಿ, ಬೆವರು ಮತ್ತು ಶಾಕ ನಿಮ್ಮ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ನೀರಿನ ಕೊರತೆ ನಿಮ್ಮ ದೇಹಕ್ಕೆ ಹಾನಿಕಾರಕ. ನಿಮ್ಮನ್ನು ಇನ್ನಷ್ಟು ಹಸಿವೆಗೆ ಇದು ದೂಡಬಹುದು. ತೂಕ ಇಳಿಸುವ ಮನಸ್ಸತ್ವವನ್ನು ಹೊಂದಿರುವವರು ಅತೀ ಹೆಚ್ಚು ನೀರನ್ನು ಕುಡಿಯಲೇಬೇಕು.

ಸೋಡಾಗಳನ್ನು ಸೇವಿಸದಿರಿ

ಸೋಡಾಗಳನ್ನು ಸೇವಿಸದಿರಿ

ತಂಪಾದ ಪಾನೀಯಗಳನ್ನು ಬೇಸಿಗೆಯಲ್ಲಿ ಸೇವಿಸುವುದು ದೇಹಕ್ಕೆ ಹಿತಕಾರಿಯೇ. ಆದರೆ ಸೋಡಾದಿಂದ ಆದಷ್ಟು ದೂರವಿರುವುದು ಉತ್ತಮ. ನಿಮ್ಮ ದೇಹಕ್ಕೆ ಹಾನಿಕರವಾದ ತಂಪು ಪಾನೀಯ ಇದಾಗಿದೆ.


English summary

Best cooling foods for the Indian summer

Most of us feel dehydrated and low on energy in such a climate and we look for ways to cool ourselves. Our body needs cooling foods that will balance our diet and keep our energy levels stable. Here are best cooling foods for the Indian summer .
X
Desktop Bottom Promotion