ಕಣ್ಣಿನ ಮೇಕಪ್ ಅತಿಯಾದರೆ ದೃಷ್ಟಿಗೆ ಉಂಟಾಗಲಿದೆ ಆಪತ್ತು

Posted By: Jaya subramanya
Subscribe to Boldsky

ಇಂದಿನ ಕಾಲದಲ್ಲಿ ಮೇಕಪ್ ಮಾಡಿಕೊಳ್ಳದೇ ಇರುವ ಮಹಿಳೆಯರು ಯಾರೂ ಇಲ್ಲವೆಂದೇ ಹೇಳಬಹುದು, ಕಣ್ಣಿನ ಕಾಡಿಗೆ, ಐ ಶ್ಯಾಡೋ, ಮಸ್ಕರಾ, ತುಟಿಗೆ ಲಿಪ್‌ಸ್ಟಿಕ್, ತೆಳುವಾಗಿ ಹಚ್ಚಿಕೊಂಡ ಕ್ರೀಂ, ಫೌಂಡೇಶನ್ ಮೆರುಗು ಹೀಗೆ ಸರಿ ಸುಮಾರಾಗಿ ಮೇಕಪ್ ಮಾಡಿಕೊಳ್ಳುವವರೇ ಇಂದು ಹೆಚ್ಚು. ಅದರಲ್ಲೂ ಮೇಕಪ್ ಮಾಡಿಕೊಂಡಿಲ್ಲ ಎಂದಾದಲ್ಲಿ ಸಿದ್ಧರಾಗಿದ್ದೇವೆ ಎಂದು ಅನ್ನಿಸುವುದೇ ಇಲ್ಲ. ಅಷ್ಟೊಂದು ಗಾಢ ಪರಿಣಾಮವನ್ನು ಇಂದು ಮೇಕಪ್ ಮಹಿಳೆಯರ ಮೇಲೆ ಉಂಟುಮಾಡಿದೆ.

ಆದರೆ ಅತಿಯಾದ ಮೇಕಪ್‌ನಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ನಮಗೆ ತಿಳಿದಿದ್ದರೂ ಮೇಕಪ್ ಮೋಹದಿಂದ ನಾವು ಹೊರಗಿಲ್ಲ. ಈಗ ಇದಕ್ಕೆ ಪುಷ್ಟಿ ನೀಡುವಂತೆ ಅಧ್ಯಯನವೊಂದು ಹೆಚ್ಚಿನ ಕಣ್ಣಿನ ಮೇಕಪ್‌ನಿಂದ ಅನುಭವಿಸಬೇಕಾದ ದುಷ್ಪರಿಣಾಮಗಳ ಬಗ್ಗೆ ವಿವರವನ್ನು ನೀಡಿದೆ. ಕಣ್ಣಿನ ಮೇಕಪ್‌ಗಾಗಿ ಬಳಸುವ ಸೌಂದರ್ಯ ಸಾಧನಗಳಲ್ಲಿರುವ ರಾಸಾಯನಿಕಗಳು ದೃಷ್ಟಿಗೆ ತೀವ್ರ ಕೆಟ್ಟ ಪರಿಣಾಮವನ್ನು ಉಂಟುಮಾಡಲಿದೆ. ಇದರಿಂದ ದೃಷ್ಟಿ ಮಬ್ಬುಗೊಂಡು, ಕುರುಡುತನ ಬರುವ ಸಾಧ್ಯತೆ ಕೂಡ ಇದೆ ಎಂಬುದು ಅಧ್ಯಯನಗಳು ತಿಳಿಸಿರುವ ಮಾಹಿತಿಯಾಗಿದೆ.

Eye drop

ಮುಂಚೆ ವಯಸ್ಸಾದರವನ್ನು ಕಾಡುತ್ತಿದ್ದು ಈ ಕಣ್ಣಿನ ದೃಷ್ಟಿ ಮಬ್ಬುತನ ಇಂದು ಹದಿಹರೆಯದವರ ಪಾಲಿಗೂ ಕಂಟಕವಾಗಿದೆ. ಎಮ್‌ಜಿಡಿ ಎಂಬ ರಾಸಾಯನಿಕವನ್ನು ಈ ಕಣ್ಣಿನ ಮೇಕಪ್ ಒಳಗೊಂಡಿದ್ದು ಐಲೈನರ್ ಮತ್ತು ಇನ್ನಿತರ ಮೇಕಪ್ ಸಾಧನಗಳು ಕಣ್ಣಿಗೆ ನೋವನ್ನುಂಟು ಮಾಡಿ ದೃಷ್ಟಿಗೆ ಪ್ರತೀಕೂಲ ಪರಿಣಾಮವನ್ನು ಬೀರಲಿದೆ.

ಈ ಪರಿಸ್ಥಿತಿಯನ್ನು ಇನ್ನಷ್ಟು ಹೆಚ್ಚು ವಿವರಿಸಿರುವ ಸಚ್‌ದೇವ್, ಎಮ್‌ಜಿಡಿ ಇರುವ ಯುವತಿಯರನ್ನು ಪರೀಕ್ಷಿಸುವ ವೈದ್ಯರಾಗಿದ್ದು, ಇದು ಕಣ್ಣೀರನ್ನು ಬೇಗನೇ ಆವಿಯಾಗಿಸುವ ಮೆಬಿಬೊಮನ್ ತೈಲವನ್ನು ಉಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.  ಗ್ರಂಥಿಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಾಗ ಗ್ರಂಥಿಯಲ್ಲಿರುವ ಅಡ್ಡಿಯು ತೈಲವನ್ನು ಉತ್ಪಾದಿಸದಂತೆ ನಿರ್ಬಂಧಿಸುತ್ತದೆ.

Eye

ಈ ತೈಲವು ಕೆಲವೊಮ್ಮೆ ಗಟ್ಟಿಯಾಗಿದ್ದು ಕಣ್ಣಿನ ರೆಪ್ಪೆಗಳಿಗೆ ಹಾನಿಕರವಾಗಿರುವ ಉಂಡೆಗಳನ್ನು ಉತ್ಪಾದಿಸುತ್ತದೆ. ಎಂಜಿಡಿಯು ಹೆಚ್ಚು ಪರಿಚಿತವಾಗಿರುವ, ಡ್ರೈ ಐ ಲಕ್ಷಣವನ್ನು ಉಂಟುಮಾಡುವ ಅಪಾಯವಾಗಿದೆ. ಇದರ ಪರಿಣಾಮ ಎಷ್ಟಿದೆಯೆಂದರೆ ದೃಷ್ಟಿಯನ್ನು ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು.

ಕಣ್ಣುಗಳಲ್ಲಿ ತೇವಕ್ಕೆ ಕಾರಣವಾಗಿರುವ 40 ತೈಲ ಗ್ರಂಥಿಗಳಿದ್ದು ಇವುಗಳು ಎಣ್ಣೆಯನ್ನು ಕಣ್ಣೀರ ರೂಪದಲ್ಲಿ ಹೊರಹೋಗುವಂತೆ ಮಾಡುತ್ತವೆ. ಈ ತೈಲವನ್ನು ಗಟ್ಟಿಗೊಳಿಸುವುದು ಕಣ್ಣಿನಲ್ಲಿ ಅಡೆತಡೆಯನ್ನು ಉಂಟುಮಾಡಿ ಕಣ್ಣ ಗುಡ್ಡೆಯಲ್ಲಿ ಉಂಡೆಯನ್ನು ರಚಿಸುತ್ತದೆ. ಇದರಿಂದ ಕಣ್ಣಿನ ಒಳಭಾಗ ಕೆಂಪಗಾಗಿಬಿಡುತ್ತದೆ. ಇಂತಹ ಅಪಾಯ ಉಂಟಾಗುವುದು ಹೆಚ್ಚಿನ ಮಹಿಳೆಯರು ಬಳಸುತ್ತಿರುವ ಕಣ್ಣಿನ ಮೇಕಪ್‌ನಿಂದಾಗಿದೆ. ಮಸ್ಕಾರ ಮತ್ತು ಐಲೈನರ್‌ಗಳಲ್ಲಿ ಬಳಸುವ ಪಾರ್ಬನ್ಸ್ ಮತ್ತು ಹಳದಿ ವ್ಯಾಕ್ಸ್ ವಾಟರ್‌ಪ್ರೂಫ್‌ಗೊಳಿಸಿ ಕಣ್ಣಿನ ತೇವವನ್ನು ಹೊರಬರದಂತೆ ತಡೆದು, ಡ್ರೈ ಐಗೆ ಕಾರಣವಾಗಿವೆ ಎಂಬುದಾಗಿ ಹಿರಿಯ ವೈದ್ಯರಾದ ಪಾರುಲ್ ಸೋನಿ ತಿಳಿಸುತ್ತಾರೆ.

ಇನ್ನು ವಯಸ್ಸಾಗುವಿಕೆಯನ್ನು ತಡೆಯುವ ಕ್ರೀಮ್‌ಗಳು ರೆಟಿನಾಯ್ಡ್‌ಗಳನ್ನು ಒಳಗೊಂಡಿದೆ. ಇಂತಹ ಮೇಕಪ್‌ಗಳು ಮೆಬಿಬೋಮೈನ್ ಗ್ರಂಥಿ ನಾಳಗಳಲ್ಲಿ ರಕ್ತಕಣಗಳನ್ನು ಕೊಲ್ಲುತ್ತವೆ ಎಂದು ಇವರು ಹೇಳಿದ್ದಾರೆ. ಕೆನಡಾ ವಿಶ್ವವಿದ್ಯಾನಿಲಯದ ಒಂದು ಅಧ್ಯಯನದ ಪ್ರಕಾರ ಕಣ್ರೆಪ್ಪೆಯ ಮೇಲೆ ಐಲೈನರ್ ಅನ್ನು ಹಚ್ಚುವವರು ಕಣ್ಣನ್ನು ಕಲುಷಿತಗೊಳಿಸುತ್ತಿದ್ದು ಇದರಿಂದ ಕಣ್ಣಿನ ದೃಷ್ಟಿಗೆ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ.

English summary

Be Careful Of Your Eye Make-up, It Can Lead To Vision Damage 2

Meibomian gland dysfunction also known as dry eye syndrome is on the rise among women due to excess make-up of the eyes.Though not taken seriously, the condition leads to blepharitis, extreme blurred vision, said doctors.Latest medical cases revealed that though MGD until now was seen due to ageing, now the trend has changed and it is occurring among young women as well.
Story first published: Tuesday, July 18, 2017, 8:32 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more