ನೆನಪಿಡಿ: ಊಟ-ತಿಂಡಿಗೆ ಮೊದಲು ತಿಳಿಯಬೇಕಾದ 15 ಕ್ರಮಗಳು

By: Divya
Subscribe to Boldsky

ಆರೋಗ್ಯ ಮಟ್ಟವು ನಾವು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ. ಪೋಷಕಾಂಶಯುಕ್ತ ಆಹಾರವನ್ನು ಕ್ರಮಬದ್ಧವಾಗಿ ಸೇವಿಸಿದರೆ ಜೀರ್ಣಕ್ರಿಯೆಯೂ ಸರಾಗವಾಗಿ ಆಗುತ್ತದೆ. ಜೊತೆಗೆ ಅಗತ್ಯ ಪೋಷಕಾಂಶವು ದೇಹಕ್ಕೆ ಸಿಗುವುದು. ನಮ್ಮ ಆಹಾರವು ಸಾತ್ವಿಕ ಆಹಾರವಾಗಿದ್ದರೆ ಆರೋಗ್ಯವೂ ಶ್ರೀಮಂತವಾಗಿರುತ್ತದೆ. ಮನಸ್ಸಿಗೆ ಕಂಡ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸುತ್ತಿದ್ದರೆ ಆರೋಗ್ಯದಲ್ಲಿ ತೊಡಕುಂಟಾಗುವುದು. 

ಅಜೀರ್ಣ ಸಮಸ್ಯೆ: ಕ್ಷಣಾರ್ಧದಲ್ಲಿ ನಿವಾರಿಸುವ ಆಯುರ್ವೇದ ಚಿಕಿತ್ಸೆ!

ಕ್ರಮಬದ್ಧವಾದ ಆಹಾರ ಪದ್ಧತಿ ಇಲ್ಲದಿದ್ದರೆ ಹೊಟ್ಟೆ ಉಬ್ಬರ, ಮಲಬದ್ಧತೆ, ಎದೆಯುರಿ ಉಂಟಾಗುವುದು. ಆಯುರ್ವೇದದ ಪ್ರಕಾರ ಕೆಲವು ಪ್ರಮುಖ ಆಹಾರಗಳನ್ನು ಸೇವಿಸಿದರೆ ಆರೋಗ್ಯವು ಉತ್ತಮ ಸ್ಥಿತಿಯಲ್ಲಿರುತ್ತದೆ. ಹಾಗಾದರೆ ಆ ಆಹಾರ ವಸ್ತು ಮತ್ತು ಕ್ರಮಗಳು ಯಾವುದು ಎನ್ನುವುದನ್ನು ತಿಳಿದುಕೊಳ್ಳಲು ಬಯಸುತ್ತಿದ್ದರೆ ಮುಂದೆ ಓದಿ....   

ನಿಯಮ-1

ನಿಯಮ-1

ಆಹಾರ ಸೇವಿಸುವಾಗ ಒಂದೇ ಸಮನೆ ನುಂಗಬಾರದು. ಆಹಾರವನ್ನು ಸ್ವಲ್ಪ ಸಮಯ ಜಗೆದು ನಂತರ ನುಂಗಬೇಕು. ಇದರಿಂದ ನಾರಿನಂಶ ಹೆಚ್ಚಾಗುವುದಲ್ಲದೆ ಜೀರ್ಣಕ್ರಿಯೆಗೂ ಸಹಾಯವಾಗುತ್ತದೆ.

ನಿಯಮ-2

ನಿಯಮ-2

ಟಿವಿ, ಕಂಪ್ಯೂಟರ್ ಅಥವಾ ಮೊಬೈಲ್‍ಗಳ ಮುಂದೆ ಕುಳಿತು ಊಟ-ತಿಂಡಿ ಮಾಡಬಾರದು. ಊಟ ಮಾಡುವಷ್ಟು ಹೊತ್ತು ಯಾವುದೇ ಚಿಂತೆಯಿಲ್ಲದೆ ಸವಿಯಬೇಕು.

ನಿಯಮ-3

ನಿಯಮ-3

ಊಟ ಮಾಡುವ ಮೊದಲು ತಂಪಾದ ನೀರನ್ನು ಕುಡಿಯಬಾರದು. ಇದು ಜೀರ್ಣಕ್ರಿಯೆಗೆ ಅಡ್ಡಿಯುಂಟುಮಾಡುತ್ತದೆ.

ನಿಯಮ-4

ನಿಯಮ-4

ಊಟ-ತಿಂಡಿಯ ಮುಂಚೆ ತಂಪು ನೀರನ್ನು ಕುಡಿಯಬಾರದು ಇದು ಜೀರ್ಣಕ್ರಿಯೆಗೆ ತೊಂದರೆಯನ್ನುಂಟುಮಾಡುತ್ತದೆ. ಒಣ ಆಹಾರ ಪದಾರ್ಥ ಸೇವಿಸುವಾಗ ಸಾಮಾನ್ಯವಾದ ನೀರನ್ನು ಅರ್ಧ ಕಪ್ ಸೇವಿಸಬಹುದು.

ನಿಯಮ-5

ನಿಯಮ-5

ಪ್ರೀತಿ ಮತ್ತು ಕಾಳಜಿಯಿಂದ ತಯಾರಿಸಿದ ಆಹಾರವು ನಮಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಅದೇ ಅಸಮಧಾನದಿಂದ ತಯಾರಿಸಿದ ಆಹಾರವು ಅಷ್ಟು ಪೋಷಣೆಯನ್ನು ನೀಡದು ಎಂದು ಆಯುರ್ವೇದ ತಿಳಿಸುತ್ತದೆ.

ನಿಯಮ-6

ನಿಯಮ-6

ಆಹಾರ ಸೇವಿಸುವಾಗ ಶಾಂತ ಮತ್ತು ವಿಶ್ರಾಂತಿಯುತವಾದ ಭಾವನೆ ಇರಬೇಕು. ಇಲ್ಲವಾದರೆ ಆಹಾರ ಸೇವನೆ ಒಂದು ಬಗೆಯ ಕಿರಿಕಿರಿ ಉಂಟುಮಾಡುವುದು.

ನಿಯಮ-7

ನಿಯಮ-7

ಊಟದ ನಂತರ ಸ್ವಲ್ಪ ವಿಶ್ರಾಂತಿಯನ್ನು ಪಡೆಯಬೇಕು. ಒಂದೇ ಸಮನೆ ಕೆಲಸ ಮಾಡಬಾರದು.

ನಿಯಮ-8

ನಿಯಮ-8

ಆಸೆಯಿಂದ ಅತಿಹೆಚ್ಚು ತಿನ್ನಬಾರದು. ಹೊಟ್ಟೆಯ ಮುಕ್ಕಾಲು ಭಾಗ ತುಂಬುವವರೆಗೆ ಮಧ್ಯಮ ವೇಗದಲ್ಲಿ ತಿನ್ನಬೇಕು.

ನಿಯಮ-9

ನಿಯಮ-9

ಒಮ್ಮೆ ಊಟ-ತಿಂಡಿ ಸೇವಿಸಿದ ನಂತರ ಕಡಿಮೆ ಎಂದರೂ 3 ತಾಸುಗಳ ಅಂತರ ಇರಬೇಕು. ಇದು ಜೀರ್ಣಕ್ರಿಯೆಗೆ ಅನುಕೂಲವಾಗುತ್ತದೆ.

ನಿಯಮ-10

ನಿಯಮ-10

ಸೂರ್ಯನ ಪ್ರಕಾಶ ನೆತ್ತಿಯ ಮೇಲೆ ಏರುವ ಸಮಯದಲ್ಲಿ ಜೀರ್ಣಕ್ರಿಯೆಯು ಪ್ರಬಲವಾಗಿರುತ್ತದೆ. ಹಾಗಾಗಿ ಮಧ್ಯಾಹ್ನ ಹೆಚ್ಚು ಊಟ ಮಾಡಬಹುದು. ಅದೇ ರಾತ್ರಿ ಮತ್ತು ಬೆಳಗ್ಗೆ ಲಘು ಆಹಾರವನ್ನು ಸೇವಿಸಬೇಕು.

ನಿಯಮ-11

ನಿಯಮ-11

ಸಾಮಾನ್ಯ ತಾಪಮಾನ(ಕೊಠಡಿಯ ತಾಪಮಾನ)ದಲ್ಲಿ ಎಲ್ಲಾ ಬಗೆಯ ಪಾನೀಯಗಳನ್ನು ಕುಡಿಯಬಹುದು. ಹವಾಮಾನ ಹೆಚ್ಚು ತಂಪಾಗಿರುವಾಗ ತಂಪಾದ ಮಾನೀಯಗಳನ್ನು ಕುಡಿಯಬಾರದು. ಅದು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡುತ್ತದೆ.

ನಿಯಮ-12

ನಿಯಮ-12

ಕೆಲವರಿಗೆ ದಿನಕ್ಕೆ ನಾಲ್ಕೈದು ಬಾರಿ ಊಟ-ತಿಂಡಿಯನ್ನು ಮಾಡುವ ಹವ್ಯಾಸ ಇರುತ್ತದೆ. ಅಂತಹವರು ಪ್ರತಿಬಾರಿಯೂ ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಬೇಕು.

 ನಿಯಮ-13

ನಿಯಮ-13

ಊಟಕ್ಕೂ ಮೊದಲು ತಾಜಾತನದಿಂದ ಕೂಡಿರುವ ಶುಂಟಿ, ನಿಂಬೆ ಅಥವಾ ದಾಳಿಂಬೆ ಹಣ್ಣುಗಳನ್ನು ಸೇವಿಸಬೇಕು. ಇದು ದೇಹದ ಪಿತ್ತ ಪ್ರಮಾಣವನ್ನು ಸಮತೋಲನದಲ್ಲಿ ಇಡುತ್ತದೆ.

ನಿಯಮ-14

ನಿಯಮ-14

ಊಟದ ಸಮಯದಲ್ಲಿ ಅಥವಾ ಊಟದ ನಂತರ ಮಜ್ಜಿಗೆಯನ್ನು ಕುಡಿಯಬೇಕು. ಇದು ಜೀರ್ಣಕ್ರಿಯೆಗೆ ಅನುಕೂಲವನ್ನುಂಟು ಮಾಡುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ...

ಆರೋಗ್ಯವೃದ್ಧಿಗೆ ದಿನನಿತ್ಯ ಕುಡಿಯಿರಿ, ಒಂದು ಗ್ಲಾಸ್ ಮಜ್ಜಿಗೆ

ನಿಯಮ-15

ನಿಯಮ-15

ಆಯುರ್ವೇದದ ಪ್ರಕಾರ ರಾತ್ರಿ ಊಟವು 8ಗಂಟೆಯ ಒಳಗೆ ಮುಗಿದಿರಬೇಕು. ಮತ್ತು ಸ್ವಲ್ಪ ಪ್ರಮಾಣದಲ್ಲಿರಬೇಕು.

English summary

Ayurveda Recommends 15 General Guidelines For Healthy Eating

The process of eating is life giving. It is important for our physical well-being. Ayurveda recommends a number of practices for better digestion. In this article, we have mentioned some of the healthy eating guidelines as recommended in Ayurveda. Read further to know all about them.
Subscribe Newsletter