ಹಾಲಿನಲ್ಲಿಯೂ ನಡೆಯುತ್ತಿದೆ ಕಲಬೆರಕೆ, ಮೈಮರೆತರೆ ಮೋಸ ಹೋಗ್ತೀರ!!

By: manu
Subscribe to Boldsky

ನಮಗೆ ಲಭ್ಯವಿರುವ ಆಹಾರಗಳಲ್ಲಿ ಅತ್ಯಂತ ಪೌಷ್ಟಿಕ ಆಹಾರವೆಂದರೆ ಹಾಲು. ಇದೇ ಕಾರಣಕ್ಕೆ ಹಾಲನ್ನು ನಿತ್ಯದ ಆಹಾರಗಳಲ್ಲೊಂದು ಭಾಗವಾಗಿ ಸೇವಿಸಲಾಗುತ್ತದೆ. ಹಾಲು ಎಂದರೆ ಈಗ ಆಹಾರಕ್ಕಿಂತಲೂ ಹೆಚ್ಚಾಗಿ ಹಣ ಮಾಡುವ ಸರಕೇ ಆಗಿದೆ. ಯಾವಾಗ ಹಣಕ್ಕೆ ಪ್ರಾಮುಖ್ಯತೆ ದೊರಕುತ್ತದೆಯೋ ಆಗಲೇ ಕಲಬೆರಕೆ ಪ್ರಾರಂಭವಾಗುತ್ತದೆ.  ತಣ್ಣಗಿರುವ ಹಾಲಿಗಿಂತ ಬಿಸಿಬಿಸಿ ಹಾಲೇ ಆರೋಗ್ಯಕಾರಿ ಕಣ್ರೀ

ಹಾಲಿಗೆ ನೀರು ಬೆರೆಸುವುದು, ತುಪ್ಪಕ್ಕೆ ಡಾಲ್ಡಾ, ಜೇನಿಗೆ ಬೆಲ್ಲದ ನೀರು ಹೀಗೆಲ್ಲಾ ಕಲಬೆರಕೆ ಮಾಡಿ ಗುಣಮಟ್ಟವನ್ನು ಕಡಿಮೆ ಮಾಡಿ ಹಣ ಮಾಡುವ ದುರುಳರು ನಮ್ಮ ಸಮಾಜದಲ್ಲಿ ತುಂಬಿಕೊಂಡಿದ್ದಾರೆ. ಆದರೆ ಈಗ ಈ ದುರುಳರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಹಾಲೇ ಅಲ್ಲದ ಬೆಳ್ಳಗಿರುವ ಯಾವುದೋ ದ್ರವವನ್ನು ಹಾಲು ಎಂಬಂತೆ ನಂಬಿಸಿ ಮಾರುತ್ತಿದ್ದಾರೆ.  ಹಾಲು-ಜೇನಿನ ಜೋಡಿ ಮಾಡಲಿದೆ ಕಮಾಲಿನ ಮೋಡಿ

ಈ ಹಾಲು ನಿಜವಾದ ಹಾಲನ್ನು ಎಷ್ಟು ಹೋಲುತ್ತದೆ ಎಂದರೆ ಇದು ಕೃತಕ ಎಂದು ಹೇಳಲು ಸಾಧ್ಯವೇ ಇಲ್ಲ. ಆದ್ದರಿಂದ ಹಾಲು ಕೊಳ್ಳುವಾಗ ಅಧಿಕೃತ ಮಾರಾಟಗಾರರಿಂದಲೇ ಕೊಳ್ಳುವುದು ಗುಣಮಟ್ಟದ ಭರವಸೆಯಾಗಿರುತ್ತದೆ. ಆದರೆ ಇಂದು ನಗರದಲ್ಲಿ ಲಭ್ಯವಾಗುತ್ತಿರುವ ಹಾಲು ಕೃತಕವಾಗಿದ್ದು ಜನರ ಆರೋಗ್ಯವನ್ನೇ ಪಣಕ್ಕಿಡುತ್ತಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಎಚ್ಚರಿಕೆ ವಹಿಸಲು ಕೆಳಗಿನ ಮಾಹಿತಿಗಳು ನೆರವಾಗಲಿವೆ...  

ವಾಸ್ತವಾಂಶ #1

ವಾಸ್ತವಾಂಶ #1

ಕೆಲವು ವರದಿಗಳ ಪ್ರಕಾರ ಕೆಲವು ನಗರಗಳ ಕೆಲವು ಪ್ರದೇಶದಲ್ಲಿ ಮಾರಾಟವಾಗುವ ಹಾಲು ಕಲಬೆರಕೆಗೊಂಡಿದೆ. ಸುಮಾರು 60% ಕ್ಕೂ ಹೆಚ್ಚು ನಗರಪ್ರದೇಶದ ಜನರು ಕುಡಿಯುತ್ತಿರುವ ಹಾಲು ಕಲಬೆರಕೆಗೊಂಡಿದೆ ಅಥವಾ ಸಂಪೂರ್ಣವಾಗಿ ಕೃತಕವಾಗಿದೆ.

ವಾಸ್ತವಾಂಶ #2

ವಾಸ್ತವಾಂಶ #2

ಇಡಿಯ ದೇಶದ ಒಟ್ಟೂ ಹಾಲಿನ ಪೂರೈಕೆಯ 65% ರಷ್ಟು ಪೂರೈಕೆ ಕಲಬೆರಕೆ ಎಂದು ತಿಳಿದುಬಂದಿದೆ. ಈ ಮಾಹಿತಿ ದಂಗುಬಡಿಸುವಂತಿದೆ

ವಾಸ್ತವಾಂಶ #3

ವಾಸ್ತವಾಂಶ #3

ಈ ಹಾಲಿಗೆ ಏನನ್ನು ಬೆರೆಸುತ್ತಾರೆ? ಹಾಲಿನ ಬಣ್ಣದ ಪೇಂಟ್ ಅಥವಾ ಸೋಪಿನ ನೀರನ್ನು ಬೆರೆಸುತ್ತಾರೆ. ಕೆಲವೆಡೆ ಇನ್ನೂ ಯಾವುದೆಂದು ದೃಢೀಕರಿಸಲಾಗದ ರಾಸಾಯನಿಕ ದ್ರವವನ್ನು ಬೆರೆಸುತ್ತಾರೆ. ಈ ರಾಸಾಯನಿಕವನ್ನು ನೀರಿಗೆ ಬೆರೆಸಿದಾಗ ಇದನ್ನು ಹಾಲು ಅಲ್ಲವೇ ಅಲ್ಲ ಎಂದು ಖಚಿತವಾಗಿ ಹೇಳಲು ಸಾಧ್ಯವೇ ಇಲ್ಲದಷ್ಟು ಸಾಮರಸ್ಯ ಹೊಂದಿರುತ್ತದೆ.

ವಾಸ್ತವಾಂಶ #4

ವಾಸ್ತವಾಂಶ #4

ಹಾಲಿಗೆ ನೀರನ್ನು ಬೆರೆಸಿದರೆ ಇದು ತೆಳ್ಳಗಾಗುತ್ತದೆಯೇ ಹೊರತು ಅಪಾಯಕಾರಿಯಲ್ಲ. ಆದರೆ ಬೆರೆಸುವ ನೀರೇ ಕಲುಷಿತಗೊಂಡಿದ್ದರೆ? ಲಾಭವೇ ಮುಖ್ಯವಾಗಿರುವ ಜನರು ಶುದ್ಧ ಕುಡಿಯುವ ನೀರನ್ನೇ ಬೆರೆಸುತ್ತಾರೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ.

ವಾಸ್ತವಾಂಶ #5

ವಾಸ್ತವಾಂಶ #5

ಕೆಲವು ಹಾಲು ಪೂರೈಕೆದಾದರು ಹಾಲಿಗೆ ಸೋಪಿನ ಪುಡಿ, ಕಾಸ್ಟಿಕ್ ಸೋಡಾ, ಡಯಾಕ್ಸಿನ್, ಹೈಡ್ರೋಜನ್ ಪೆರಾಕ್ಸೈಡ್, ರಸಗೊಬ್ಬರ ಅಥವಾ ಸಕ್ಕರೆಯ ಅಂಶವನ್ನು ಹೆಚ್ಚಿಸುವ ದ್ರಾವಣಗಳನ್ನು ಬೆರೆಸಿ ಹಾಲಿನಷ್ಟೇ ದಪ್ಪ, ಬಣ್ಣ ಮತ್ತು ರುಚಿಯನ್ನು ಪಡೆಯಲು ಸಾಧ್ಯವಾಗುವಂತೆ ಮಾಡುತ್ತಾರೆ.

ವಾಸ್ತವಾಂಶ #6

ವಾಸ್ತವಾಂಶ #6

ಕೆಲವು ಪ್ರಕರಣಗಳಲ್ಲಿ ಈ ತಪ್ಪಿಗೆ ಹಾಲು ಪೂರೈಕೆದಾರರ ತಪ್ಪೇ ಇರುವುದಿಲ್ಲ. ಹಾಲು ನೀಡುವ ಹಸು ಕಲುಷಿತಗೊಂಡ ತ್ಯಾಜ್ಯವನ್ನು ಸೇವಿಸಿದರೆ ಅಥವಾ ಮೇದ ಹುಲ್ಲಿನಲ್ಲಿ ಹೆಚ್ಚಿನ ಪ್ರಮಾಣದ ಕೀಟನಾಶಕವಿದ್ದರೆ ಈ ಪ್ರಬಲ ರಾಸಾಯನಿಕಗಳು ಹಾಲಿನಲ್ಲಿಯೂ ಕಂಡುಬರುವ ಸಾಧ್ಯತೆ ಇದೆ.

ವಾಸ್ತವಾಂಶ #7

ವಾಸ್ತವಾಂಶ #7

ಕಲುಷಿತ ಹಾಲನ್ನು ಕುಡಿದರೆ ಇದು ಆರೋಗ್ಯಕ್ಕೆ ಮಾರಕವಾಗಬಲ್ಲುದು. ಆದ್ದರಿಂದ ಹಾಲನ್ನು ಕೊಳ್ಳುವಾಗ ನಂಬಿಕಾರ್ಹ ಹಾಲು ಪೂರೈಕೆದಾರರಿಂದ ಮಾತ್ರವೇ ಹಾಲನ್ನು ಕೊಳ್ಳಿ. ಒಂದು ವೇಳೆ ಹಾಲು ಕೃತಕ ಎಂಬ ಯಾವುದೇ ಅನುಮಾನ ಬಂದರೂ ನಾಲ್ಕಾರು ಜನರನ್ನು ಸಂಪರ್ಕಿಸಿ ಈ ವಿಷಯವನ್ನು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲು ಯತ್ನಿಸಿ. ಈ ಕ್ರಮದಿಂದ ಉಳಿದವರಿಗೂ ಉಪಕಾರವಾಗಬಹುದು.

 
English summary

After Reading This, You Won't Buy Milk From Unreliable Places!!

Milk is among the most nutritious foods. That is why you add it to your daily diet. But what if the milk you are consuming regularly isn't milk at all? What if it is contaminated? Well, unless you can get organic milk in your area, you cannot totally rely on the milk..
Please Wait while comments are loading...
Subscribe Newsletter