For Quick Alerts
ALLOW NOTIFICATIONS  
For Daily Alerts

ನೀರು ಕುಡಿಯುವ ಸರಿಯಾದ ವಿಧಾನ- ತಪ್ಪದೇ ಅನುಸರಿಸಿ

By Arshad
|

ಒಂದು ಹಳೆಯ ನಾಣ್ಣುಡಿಯಲ್ಲಿ "ಜಲ ಈ ವಿಶ್ವದ ಆತ್ಮ"ಎಂದು ಹೇಳಲಾಗಿದೆ. ಇದು ಅಪ್ಪಟ ಸತ್ಯ. ನೀರಿಲ್ಲದೇ ಜೀವಜಾಲವೇ ಇಲ್ಲ. ನೀರಿನ ಇರುವಿಕೆಯೇ ಈ ಭೂಮಿಯನ್ನು ನಭೋಮಂಡಲದ ಏಕಮಾತ್ರ ಜೀವಗೋಳವಾಗಿಸಿದೆ. ಯಾವುದೇ ಜೀವಿಯ ಉಳಿವಿಗೂ ನೀರು ಅತ್ಯಗತ್ಯ. ಏಕಾಣು ಜೀವಿಯಿಂದ ತೊಡಗಿ ಮನುಷ್ಯರು, ವಿಶ್ವದ ದೊಡ್ಡ ನೀಲಿ ತಿಮಿಂಗಿಲದವರೆಗೂ ಪ್ರತಿ ಜೀವಿಗೂ ನೀರು ಅಗತ್ಯವಾಗಿದೆ. ಆಹಾರವಿಲ್ಲದೇ ಯಾವುದೇ ಜೀವಿ ಹೆಚ್ಚು ಹೊತ್ತು ಬದುಕಿರಬಹುದು, ಆದರೆ ನೀರಿಲ್ಲದೇ ಅಷ್ಟು ಹೊತ್ತು ಬದುಕಿರಲು ಸಾಧ್ಯವೇ ಇಲ್ಲ.

ತಣ್ಣೀರು-ಉಗುರು ಬೆಚ್ಚನೆಯ ನೀರು, ಆರೋಗ್ಯಕ್ಕೆ ಯಾವುದು ಒಳ್ಳೆಯದು?

ನೀರನ್ನೇ ಕುಡಿಯದೇ ಬರೆಯ ಘನ ಆಹಾರವನ್ನೇ ತಿಂದರೇನಾಗುತ್ತದೆ? ಕೆಲವು ದಿನಗಳ ಬಳಿಕ ಸಾವು ಖಚಿತ. ಏಕೆಂದರೆ ನಮ್ಮ ಪ್ರಮುಖ ಅಂಗಗಳಿಗೆ ನೀರು ಅಗತ್ಯವಾಗಿದ್ದು ಕೆಲವೇ ಗಂಟೆಗಳಲ್ಲಿ ನಮ್ಮ ಸೂಕ್ಷ್ಮ ಅಂಗಗಳು ಒಂದೊಂದಾಗಿ ವಿಫಲಗೊಳ್ಳುತ್ತಾ ಹೋಗುತ್ತವೆ. ಯಾವುದೋ ಘಳಿಗೆಯಲ್ಲಿ ಪ್ರಮುಖ ಅಂಗವೊಂದು ಕುಸಿದು ಸಾವು ಆಗಮಿಸುತ್ತದೆ. ನಾವೆಲ್ಲಾ ತಿಳಿದಿರುವಂತೆ ನಮ್ಮ ದೇಹದ 78% ಭಾಗ ನೀರಿನಿಂದ ಕೂಡಿದೆ. ಈ ಅಂಶವೊಂದೇ ಸಾಕು ನೀರು ನಮ್ಮ ದೇಹಕ್ಕೆ ಎಷ್ಟು ಅಗತ್ಯವೆಂದು ತಿಳಿದುಕೊಳ್ಳಲು.

ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ಬುದ್ಧಿ ತಿಳಿದಾಗಿನಿಂದಲೂ ನಾವೆಲ್ಲಾ ನಮ್ಮ ಗುರುಹಿರಿಯರಿಂದ ದಿನವಿಡೀ ಸಾಕಷ್ಟು ನೀರು ಕುಡಿಯುತ್ತಿರುವಂತೆ ಸಲಹೆ ಪಡೆಯುತ್ತಾ ಬಂದಿದ್ದೇವೆ. ಸಾಮಾನ್ಯ ಮೈಕಟ್ಟಿನ ವ್ಯಕ್ತಿಗಳಿಗೆ ಪ್ರತಿದಿನ ಸುಮಾರು ಎರಡು ಲೀಟರ್ ನೀರು ಅಗತ್ಯವಿರುತ್ತದೆ. ಶೀತ, ನೆಗಡಿ ಮೊದಲಾದ ಕಾಯಿಲೆ ಆವರಿಸಿದ್ದರೆ ಅಥವಾ ವ್ಯಾಯಾಮದಿಂದ ದೇಹ ಬಳಲಿದ್ದರೆ ಈ ಪ್ರಮಾಣ ಮೂರು ಲೀಟರಿನಷ್ಟಾಗುತ್ತದೆ.

ಒಂದು ವೇಳೆ ಅಗತ್ಯವಿದ್ದಷ್ಟು ನೀರು ಕುಡಿಯದೇ ಇದ್ದರೆ ದೇಹ ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ದೇಹದ ಹಲವು ಕಾಯಿಲೆಗಳಿಗೆ ನಿರ್ಜಲೀಕರಣ ಪ್ರಮುಖ ಕಾರಣವಾಗಿದೆ. ಈ ಕಾಯಿಲೆಗಳಲ್ಲಿ ಪ್ರಮುಖವಾದವು ಎಂದರೆ ತಲೆನೋವು, ಹೃದಯದ ತೊಂದರೆಗಳು, ಮೂತ್ರಪಿಂಡದಲ್ಲಿ ಕಲ್ಲು, ಚರ್ಮ ಒಣಗುವುದು ಇತ್ಯಾದಿ. ಆದ್ದರಿಂದ ಪ್ರತಿದಿನವೂ ಸಾಕಷ್ಟು ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಅಗತ್ಯವಾಗಿದೆ. ಈ ಅಗತ್ಯತೆಯನ್ನು ಆಯುರ್ವೇದ ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದು ನೀರನ್ನು ಹೇಗೆ ಕುಡಿಯಬೇಕು ಎಂಬುದನ್ನು ವಿವರಿಸಿದೆ. ಬನ್ನಿ, ಈ ಸಲಹೆಗಳು ಯಾವುವು ಎಂಬುದನ್ನು ನೋಡೋಣ....

ಕುಳಿತುಕೊಂಡು ಕುಡಿಯಿರಿ

ಕುಳಿತುಕೊಂಡು ಕುಡಿಯಿರಿ

ನೀರು ಕುಡಿಯುವಾಗ ಕುಳಿತೇ ಕುಡಿಯುವುದನ್ನು ಆಯುರ್ವೇದ ಬಲವಾಗಿ ಪ್ರತಿಪಾದಿಸಿದೆ. ಏಕೆಂದರೆ ಕುಳಿತಿರುವ ಭಂಗಿಯಲ್ಲಿ ಮೂತ್ರಪಿಂಡಗಳು ನೀರನ್ನು ಶುದ್ಧೀಕರಿಸಲು ಅತ್ಯುತ್ತಮ ಸ್ಥಾನದಲ್ಲಿರುತ್ತವೆ.

ಚಿಕ್ಕ ಚಿಕ್ಕ ಗುಟುಕುಗಳಲ್ಲಿ ಕುಡಿಯಿರಿ

ಚಿಕ್ಕ ಚಿಕ್ಕ ಗುಟುಕುಗಳಲ್ಲಿ ಕುಡಿಯಿರಿ

ನೀರನ್ನು ಗಟಗಟನೇ ಕುಡಿಯದೇ ಚಿಕ್ಕ ಚಿಕ್ಕ ಗುಟುಕುಗಳಲ್ಲಿ ಸಾವಕಾಶವಾಗಿ ಕುಡಿಯಬೇಕು. ಏಕೆಂದರೆ ಈ ಅಭ್ಯಾಸದಿಂದ ಸಣ್ಣ ಕರುಳುಗಳಲ್ಲಿ ಸೂಕ್ತ ಪ್ರಮಾಣದ ಜೀರ್ಣರಸ ಸ್ರವಿಸಲು ನೆರವಾಗುತ್ತದೆ.

ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ

ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ

ದಿನಕ್ಕೆಷ್ಟು ಸಾಧ್ಯವೋ ಅಷ್ಟೂ ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ. ಏಕೆಂದರೆ ತಣ್ಣನೆಯ ನೀರು ಕೆಲವು ಭಾಗಗಳಲ್ಲಿ ರಕ್ತಪರಿಚಲನೆಯನ್ನು ತಗ್ಗಿಸುತ್ತದೆ. ಇದು ಕೆಲವು ಆರೋಗ್ಯದ ತೊಂದರೆಗಳಿಗೆ ಮೂಲವಾಗಬಹುದು.

ನಿರ್ಜಲೀಕರಣದ ಸೂಚನೆಗಳು

ನಿರ್ಜಲೀಕರಣದ ಸೂಚನೆಗಳು

ಒಂದು ವೇಳೆ ನೀರಿನ ಕೊರತೆಯಿಂದ ನಿರ್ಜಲೀಕರಣಕ್ಕೆ ಒಳಗಾದರೆ ದೇಹ ಕೆಲವು ಸೂಚನೆಗಳನ್ನು ನೀಡುತ್ತದೆ. ಉದಾಹರಣೆಗೆ ಒಣಗಿದ ತುಟಿಗಳು, ತುಟಿಯ ಹೊರಚರ್ಮ ಒಣಗಿ ಪ್ರತ್ಯೇಕವಾಗುವುದು, ಸುಸ್ತು, ಬಿಸಿಲಿಗೆ ಒಡ್ಡಿರುವ ಚರ್ಮ ಬಿಳಿಪುಡಿಯಂತೆ ಒಣಗುವುದು ಇತ್ಯಾದಿಗಳು ನಿರ್ಜಲೀಕರಣದ ಸೂಚನೆಗಳಾಗಿವೆ. ಇವು ತಕ್ಷಣವೇ ನೀರು ಕುಡಿಯಬೇಕೆಂದು ಸೂಚಿಸುತ್ತವೆ.

ನೀರನ್ನು ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ

ನೀರನ್ನು ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ

ಸಾಧ್ಯವಾದರೆ ನೀರನ್ನು ಬೆಳ್ಳಿಯ ಅಥವಾ ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸಿ. ತಾಮ್ರ ಮತ್ತು ಬೆಳ್ಳಿ ಅತ್ಯಲ್ಪ ಪ್ರಮಾಣದಲ್ಲಿ ನೀರಿನಲ್ಲಿ ಕರಗುವ ಗುಣ ಹೊಂದಿದ್ದು ಹೀಗೆ ಕರಗಿರುವ ನೀರು ಬ್ಯಾಕ್ಟೀರಿಯಾ ನಿವಾರಕ ಹಾಗೂ ಆಂಟಿ ಆಕ್ಸಿಡೆಂಟು ಗುಣ ಪಡೆದಿರುತ್ತದೆ. ಉತ್ತಮ ಪರಿಣಾಮಕ್ಕಾಗಿ ಕನಿಷ್ಠ ಹನ್ನೆರಡು ಗಂಟೆಗಳಾದರೂ ನೀರು ಈ ಪಾತ್ರೆಯಲ್ಲಿರಬೇಕು. ಈ ನೀರಿನ ನಿಯಮಿತ ಸೇವನೆಯಿಂದ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳಿವೆ.

ಪ್ರತಿದಿನ ಬೆಳಿಗ್ಗೆ ಉಗುರುಬೆಚ್ಚನೆಯ ನೀರು ಕುಡಿಯಿರಿ

ಪ್ರತಿದಿನ ಬೆಳಿಗ್ಗೆ ಉಗುರುಬೆಚ್ಚನೆಯ ನೀರು ಕುಡಿಯಿರಿ

ಬೆಳಿಗ್ಗೆದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ದೊಡ್ಡ ಲೋಟದಷ್ಟು ಉಗುರುಬೆಚ್ಚನೆಯ ನೀರನ್ನು ಕುಡಿಯಬೇಕು ಎಂದು ಆಯುರ್ವೇದ ಸಲಹೆ ಮಾಡುತ್ತದೆ. ಇದರಿಂದ ದೇಹದ ವಿಷಕಾರಿ ವಸ್ತುಗಳು ಹೊರಹೋಗಲು ನೆರವಾಗುತ್ತದೆ ಹಾಗೂ ಆರೋಗ್ಯವೂ ಉತ್ತಮಗೊಳ್ಳುತ್ತದೆ.

English summary

According To Ayurveda You Must Follow These Tips While Drinking Water!

If a person does not consume enough water, then it could lead to dehydration and dehydration is known to be the root cause of a number of disorders, both major and minor. Right from a small headache to heart ailments, dehydration could play a key role! So, it is very important to drink enough water and keep yourself hydrated. According to Ayurveda, the ancient system of medicine, there are a few tips to drink water the right way; have a look at them, here.
Story first published: Friday, September 15, 2017, 19:22 [IST]
X
Desktop Bottom Promotion