For Quick Alerts
ALLOW NOTIFICATIONS  
For Daily Alerts

ಬೀಟ್‌ರೂಟ್ ಜ್ಯೂಸ್‌: ನೋಡಲು ಕೆಂಪಾದರೂ, ಸಿಕ್ಕಾಪಟ್ಟೆ ಆರೋಗ್ಯಕಾರಿ!

ಬಣ್ಣ ಕೆಂಪಗಿದೆ ಎಂಬ ಒಂದೇ ಕಾರಣಕ್ಕೆ ಹೆಚ್ಚಿನವರು ಬೀಟ್‌ರೂಟ್ ಗಡ್ಡೆಯನ್ನು ಸೇವಿಸುವುದಿಲ್ಲ. ಆದರೆ ವಾಸ್ತವವಾಗಿ ಇದು ಅತ್ಯುತ್ತಮವಾದ ಆಹಾರವಾಗಿದ್ದು, ಪ್ರತಿದಿನ ಇದರ ಜ್ಯೂಸ್ ಸೇವನೆಯಿಂದ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ದೂರವಿರಬಹುದು

By Arshad
|

ಒಂದು ಲೋಟ ಬೀಟ್ರೂಟ್ ರಸ- ಇದರಲ್ಲಿರುವ ಹೆಚ್ಚುವರಿ ನೈಟ್ರೇಟ್ ಪೋಷಕಾಂಶಗಳು ಅಧಿಕ ರಕ್ತದೊತ್ತಡವನ್ನು ಪವಾಡವೆಂಬಂತೆ ಕಡಿಮೆಗೊಳಿಸುವುದು ಮಾತ್ರವಲ್ಲ, ಹೃದಯಾಘಾತದ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ಪ್ರಕಟಿಸಿದೆ.

ಇದರ ಗುಟ್ಟು ಏನೆಂದರೆ ನೈಟ್ರೇಟು ಪೋಷಕಾಂಶಗಳಿಗೆ ರಕ್ತನಾಳಗಳನ್ನು ಮೃದುಗೊಳಿಸಿ ಹಿಗ್ಗಲು ಅವಕಾಶ ಮಾಡಿಕೊಡುವ ಶಕ್ತಿಯಿದೆ. ಇದರಿಂದ ಹೃದಯದ ಮೇಲೆ ಬೀಳುವ ಒತ್ತಡ ಕಡಿಮೆಯಾಗಿ ಹೃದಯಾಘಾತದ ಸಾಧ್ಯತೆ ಕಡಿಮೆಯಾಗುತ್ತದೆ.

Beetroot Juice

ಈ ವಿಷಯವನ್ನು Heart and Circulatory Physiology ಎಂಬ ಹೆಸರಿನ, ಹೃದಯ ಮತ್ತು ಶರೀರ ವಿಜ್ಞಾನಕ್ಕೆ ಸಂಬಂಧಿಸಿದ ಮಾಧ್ಯಮವೊಂದರಲ್ಲಿ ಪ್ರಕಟಿಸಲಾಗಿದ್ದು ಇದರ ವರದಿಯ ಸಾರಾಂಶದ ಪ್ರಕಾರ ಬೀಟ್ರೂಟ್ ರಸದ ಸೇವನೆಯಿಂದ ಸಹಾನುಭೂತಿಯ ನರವ್ಯವಸ್ಥೆ (sympathetic nervous system (SNS))ಗೆ ದೊರಕುವ ಪ್ರಚೋದನೆಯನ್ನು ಕಡಿಮೆಗೊಳಿಸುವ ಮೂಲಕ ಹೃದಯಾಘಾತ ಹಾಗೂ ಅಧಿಕ ರಕ್ತದೊತ್ತಡದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

"ಈ ಸಂಶೋಧನೆಯಲ್ಲಿ ಕಂಡುಕೊಂಡಂತೆ ಬೀಟ್ರೂಟ್ ರಸದ ಮೂಲಕ ಸೇವಿಸಲ್ಪಡುವ ಅಲ್ಪಪ್ರಮಾಣದ ಹೆಚ್ಚುವರಿ ನೈಟ್ರೇಟ್ ಪೋಷಕಾಂಶಗಳು ಶರೀರ ಸಾಮಾನ್ಯಸ್ಥಿತಿಯಲ್ಲಿದ್ದಾಗ ಹಾಗೂ ವ್ಯಾಯಾಮದ ಸಮಯದಲ್ಲಿ ಸ್ನಾಯುಗಳಿಗೆ ಎದುರಾಗುವ muscle sympathetic outflow ಎಂಬ ಸ್ಥಿತಿಯನ್ನು ಕಡಿಮೆಗೊಳಿಸುತ್ತದೆ" ಎಂದು ಕೆನಡಾದ ಗ್ವೆಲ್ಫ್ ವಿಶ್ವವಿದ್ಯಾಲಯದ ಸಂಶೋಧಕರು express.co.uk ತಾಣದ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ- ಜೇನು ಬೆರೆಸಿದ ಬೀಟ್‌ರೂಟ್ ಜ್ಯೂಸ್ ಕುಡಿದರೆ ಹತ್ತಾರು ಲಾಭ!

ಈ ಸಂಶೋಧನೆಯಲ್ಲಿ ಇಪ್ಪತ್ತೇಳು ವಯಸ್ಸಿನ ಇಪ್ಪತ್ತು ಯುವ ಸ್ವಯಂಪ್ರೇರಿತ ವ್ಯಕ್ತಿಗಳನ್ನು ಎರಡು ಪರೀಕ್ಷೆಗೆ ಒಳಪಡಿಸಲಾಗಿದ್ದು ಅರ್ಧದಷ್ಟು ವ್ಯಕ್ತಿಗಳಿಗೆ ಹೆಚ್ಚುವರಿ ನೈಟ್ರೇಟು ಹಾಗೂ ಉಳಿದವರಿಗೆ ಪ್ಲಾಸೆಬೋ (ಔಷಧೀಯ ಗುಣವೇ ಇಲ್ಲದ ಪಾನೀಯವನ್ನು ಔಷಧವೆಂದು ರೋಗಿ ನಂಬುವ) ವನ್ನು ನೀಡಲಾಗಿತ್ತು.

ಸಂಶೋಧನೆಯಲ್ಲಿ ಈ ಎಲ್ಲಾ ವ್ಯಕ್ತಿಗಳ ಹೃದಯದ ಒತ್ತಡ, ಬಡಿತದ ಗತಿ, ಸ್ನಾಯುಗಳ ಸಂವೇದನಾ ಕ್ರಿಯೆ (muscle sympathetic nerve activity (MSNA)) ಹಾಗೂ ಸಾಮಾನ್ಯಸ್ಥಿತಿಯಲ್ಲಿ ಮತ್ತು ಪ್ರಮುಖವಲ್ಲದ ಹಸ್ತದ ಬೆರಳುಗಳಿಗೆ ವ್ಯಾಯಾಮ ನೀಡುವ ಹ್ಯಾಂಡ್ ಗ್ರಿಪ್ ಸಲಕರಣೆಯ ಸುಲಭ

ವ್ಯಾಯಾಮದ ಅವಧಿಯಲ್ಲಿ ಸ್ನಾಯುಗಳ ಚಟುವಟಿಕೆಗಳನ್ನು ಅಭ್ಯಸಿಸಲಾಗಿತ್ತು. ಈ ಸಂಶೋಧನೆಯ ಫಲಿತಾಂಶದಲ್ಲಿ muscle sympathetic nerve activity (MSNA)ಯನ್ನು ಕೂಲಂಕಶವಾಗಿ ಅಭ್ಯಸಿಸಿ ಬೀಟ್ರೂಟ್ ರಸವನ್ನು ಸೇವಿಸಿದರವಲ್ಲಿ ಇದು ಇತರರಿಗಿಂತ ಕಡಿಮೆ ಇದ್ದುದು ಕಂಡುಬಂದಿದೆ.
ಇದನ್ನೂ ಓದಿ- ಬೀಟ್‌ರೂಟ್ ಜ್ಯೂಸ್, ಎಂದಾಕ್ಷಣ ಮುಖಸಿಂಡರಿಸಬೇಡಿ...

"ಅಚ್ಚರಿ ಎಂಬಂತೆ, ವ್ಯಾಯಾಮದ ಅವಧಿಯಲ್ಲಿಯೂ, ವ್ಯಾಯಾಮರಹಿತ ವೇಳೆಯಲ್ಲಿಯೂ ರಕ್ತದೊತ್ತಡದಲ್ಲಿ ವ್ಯತ್ಯಾಸ ಕಂಡು ಬರಲೇ ಇಲ್ಲ" ಎಂದು ಸಂಶೋಧಕರು ತಿಳಿಸಿದ್ದಾರೆ. "ಈ ಸಂಶೋಧನೆಯಲ್ಲಿ ಕಂಡುಕೊಂಡಂತೆ ಹೆಚ್ಚುವರಿ ನೈಟ್ರೇಟ್ ಪೋಷಕಾಂಶಗಳು ಕೇಂದ್ರ ಸಹಾನುಭೂತಿಯ ನರವ್ಯವಸ್ಥೆಯ ಹೊರಹರಿವನ್ನು ಕಡಿಮೆಗೊಳಿಸಿ ತನ್ಮೂಲಕ ಹೃದಯಸಂಬಂಧಿ ಹೊರೆಗಳನ್ನು ಕಡಿಮೆಗೊಳಿಸುತ್ತದೆ.

ಈ ಮೂಲಕ ನರವ್ಯವಸ್ಥೆಯನ್ನು ಸುಗಮಗೊಳಿಸಲು ನೆರವಾಗುತ್ತದೆ" ಎಂದು ಸಂಶೋಧಕರು ತಿಳಿಸುತ್ತಾರೆ. ಇದಕ್ಕೂ ಮೊದಲು ಎಕ್ಸೆಟರ್ವಿ ಶ್ವವಿದ್ಯಲಯದ ಸಂಶೋಧಕರು ನಡೆಸಿದ ಸಂಶೋಧನೆಯಲ್ಲಿ ಹಸಿ ಬೀಟ್ರೂಟ್ ರಸವನ್ನು ನಿತ್ಯವೂ ಸೇವಿಸಿದ ವ್ಯಕ್ತಿಗಳು ಉಳಿದವರಿಗಿಂತ ಹದಿನಾರು ಶೇಖಡಾ ಹೆಚ್ಚು ಕಾಲ ವ್ಯಾಯಾಮ ನಡೆಸಲು ಶಕ್ತರಾಗುತ್ತಾರೆ ಎಂದು ಪ್ರಕಟಿಸಿತ್ತು.

English summary

A Glass Of Beetroot Juice Could Lower BP, Heart Attack Risk

A glass of beetroot juice -- a source of dietary nitrate -- could dramatically lower as well as reduce heart attack risk, a study has revealed.Dietary nitrate is a compound that dilates blood vessels to decrease blood pressure, a leading factor for developing heart attack.
X
Desktop Bottom Promotion