ಪಂಚ ಬಗೆಯ ಆಯುರ್ವೇದದಿಂದ ಶೀತ-ಕೆಮ್ಮುಗಳಿಗೆ ಪರಿಹಾರ

By: manu
Subscribe to Boldsky

ಬೇಸಿಗೆಯಿಂದ ಮಳೆಗಾಲಕ್ಕೆ ಕಾಲಿಡುತ್ತಿದ್ದಂತೆ ವಾತಾವರಣದಲ್ಲಿ ಗಣನೀಯ ಬದಲಾವಣೆಯಾಗುತ್ತದೆ. ತಾಪದ ವಾತಾವರಣದಿಂದ ತಂಪಾದ ಹವಾಮಾನ ಆವರಿಸುತ್ತದೆ. ಒಮ್ಮಿಂದೊಮ್ಮೆಲೆ ಉಂಟಾಗುವ ಈ ಬಗೆಯ ಬದಲಾವಣೆಯಿಂದ ನಮ್ಮ ಆರೋಗ್ಯದಲ್ಲೂ ಏರುಪೇರು ಉಂಟಾಗುವುದು. ಅದರಲ್ಲೂ ಶೀತ ನೆಗಡಿ, ಕೆಮ್ಮು, ಗಂಟಲು ಕಿರಿಕಿರಿ ಮತ್ತು ಜ್ವರ ಸಾಮಾನ್ಯವಾಗಿ ಕಾಡುವ ಕಾಯಿಲೆಗಳು. ಇವು ಸಾಮಾನ್ಯವಾಗಿ ಬರುವ ಕಾಯಿಲೆ ಎನಿಸಿದರೂ ಇವುಗಳಿಂದ ದೇಹ ಬಹಳಷ್ಟು ದಣಿಯುತ್ತದೆ.

ಪ್ರಾಣ ಹಿಂಡುವ ಕೆಮ್ಮಿಗೆ ರಾಮಬಾಣವಾಗಿರುವ 10 ಸಿದ್ಧೌಷಧಗಳು

ಈ ರೀತಿಯ ಚಿಕ್ಕ ಪುಟ್ಟ ಕಾಯಿಲೆಗಳಿಗೆ ದುಬಾರಿ ಬೆಲೆಯ ಔಷಧವನ್ನು ಸೇವಿಸಬೇಕೆಂದಿಲ್ಲ. ಮನೆಯಲ್ಲಿರುವ ಕೆಲವು ಆಯುರ್ವೇದದ ವಸ್ತುಗಳಿಂದಲೇ ಕಡಿಮೆ ಮಾಡಬಹುದು. ಇವುಗಳ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮಗಳುಂಟಾಗದೇ, ಬಹು ಬೇಗ ಚೇತರಿಕೆಯಾಗುತ್ತದೆ. ಈ ಮಳೆಗಾಲದಲ್ಲಿ ಮನೆಯಲ್ಲೊಬ್ಬರಿಗಾದರೂ ಕೆಮ್ಮು, ಶೀತವಾಗಿರುತ್ತದೆ ಅವರ ಆರೈಕೆಗೆ ಅನುಕೂಲವಾಗುವ ಐದು ಆಯುರ್ವೇದದ ಪರಿಹಾರ ಇಲ್ಲಿದೆ ನೋಡಿ.... 

ಶುಂಠಿ

ಶುಂಠಿ

ಸ್ವಲ್ಪ ಶುಂಠಿಯನ್ನು ಜಜ್ಜಿ ಒಂದು ಗ್ಲಾಸ್ ನೀರಿನಲ್ಲಿ ಕುದಿಸಿ. ನಂತರ ಸೋಸಿ ಚಹಾದಂತೆ ಸವಿದರೆ ಕಫ, ಕೆಮ್ಮು ಗುಣಮುಖವಾಗುವುದು.

ತುಳಸಿ

ತುಳಸಿ

ಇದು ಪವಿತ್ರ ಸಸ್ಯವಷ್ಟೇ ಅಲ್ಲ, ಔಷಧೀಯ ಸಸ್ಯವು ಸಹ ಹೌದು. ಇದರಲಿರುವ ಆಂಟಿ ಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಉರಿಯೂತ ನಿವಾರಕ ಗುಣಗಳು ಇದನ್ನು ಶೀತ ಮತ್ತು ಕೆಮ್ಮಿನ ವಿರುದ್ಧ ಉತ್ತಮ ಮನೆಮದ್ದನ್ನಾಗಿ ಮಾಡಿವೆ. ತುಳಸಿ ಗಂಟಲು ನೋವನ್ನು ಸಹ ನಿವಾರಿಸುತ್ತದೆ. ಅದಕ್ಕಾಗಿ 10-12 ತುಳಸಿ ಎಲೆಗಳನ್ನು ತೆಗೆದುಕೊಂಡು, ತೊಳೆದು ನೀರಿನಲ್ಲಿ ಬೇಯಿಸಿಕೊಂಡು ಸೇವಿಸಿ.

ಶುಂಠಿ ಮತ್ತು ಮೆಣಸಿನಕಾಳು

ಶುಂಠಿ ಮತ್ತು ಮೆಣಸಿನಕಾಳು

ಸ್ವಲ್ಪ ಉಪ್ಪು, ಮೆಣಸಿನ ಕಾಳು, ಮತ್ತು ಶುಂಠಿಯನ್ನು ನೀರಲ್ಲಿ ಸೇರಿಸಿ, ಚೆನ್ನಾಗಿ ಕುದಿಸಿ. ಇದನ್ನು ನಿತ್ಯವೂ ಎರಡು ಬಾರಿ ಕುಡಿದರೆ ಶೀತ, ನೆಗಡಿ, ಅಜೀರ್ಣವೆಲ್ಲಾ ಶಮನವಾಗುವುದು.

ಅರಿಶಿನ

ಅರಿಶಿನ

ಬೆಚ್ಚಗಿನ ನೀರಿನಲ್ಲಿ 2 ಚಮಚ ಅರಿಶಿನ ಪುಡಿಯನ್ನು ಸೇರಿಸಿ ಕುಡಿದರೆ ಎದೆ ಉರಿ, ಕೆಮ್ಮು ಮತ್ತು ಶೀತ ಶಮನಗೊಳ್ಳುವುದು.

ದಿನಕ್ಕೊಂದು ಲೋಟ ಅರಿಶಿನ ಬೆರೆಸಿದ ನೀರು-ಆಯಸ್ಸು ನೂರು!

ಜೇನುತುಪ್ಪ

ಜೇನುತುಪ್ಪ

ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಜೇನುತುಪ್ಪ, ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಗಂಟಲು ಕಟ್ಟುವುದು ಮತ್ತು ಕೆಮ್ಮು ಕಡಿಮೆಯಾಗುವುದು.

ಅರಿಶಿನಪುಡಿ ಬೆರೆಸಿದ ಅರಿಶಿನ ಹಾಲು

ಅರಿಶಿನಪುಡಿ ಬೆರೆಸಿದ ಅರಿಶಿನ ಹಾಲು

ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿನಲ್ಲಿ ಒಂದು ಚಿಕ್ಕಚಮಚ ಅರಿಶಿನಪುಡಿ ಸೇರಿಸಿ ಕುಡಿಯುವ ಮೂಲಕ ಕೆಮ್ಮು ಮತ್ತು ಶೀತಕ್ಕೆ ಉತ್ತಮ ಪರಿಹಾರ ದೊರಕುತ್ತದೆ.

ಬಿಸಿ ನೀರು ಮತ್ತು ಬೆಳ್ಳುಳ್ಳಿ

ಬಿಸಿ ನೀರು ಮತ್ತು ಬೆಳ್ಳುಳ್ಳಿ

ಕೆಲವೊಂದು ಬೆಳ್ಳುಳ್ಳಿ ಎಸಲುಗಳನ್ನು ಚೆನ್ನಾಗಿ ಜಜ್ಜಿ ಒಂದು ಲೋಟ ಬಿಸಿ ನೀರಿಗೆ ಹಾಕಿ, ಚೆನ್ನಾಗಿ ಕಲಸುಕೊಂಡು ದಿನಾ ಸೇವಿಸುತ್ತಾ ಬನ್ನಿ, ಅಥವಾ ಕಚ್ಛಾ ಬೆಳ್ಳುಳ್ಳಿಯ ಒಂದು ತುಣುಕನ್ನು 3-4 ಗಂಟೆಗಳಿಗೊಮ್ಮೆ ಹಾಗೆಯೇ ಸೇವಿಸುವುದರಿಂದ, ಸುಲಭವಾಗಿ ಶೀತವನ್ನು ನಿವಾರಿಸಿಕೊಳ್ಳಬಹುದು. ಬೆಳ್ಳುಳ್ಳಿಯಲ್ಲಿರುವ ವೈರಸ್ ನಿರೋಧಕ ಅಂಶಗಳು, ಶೀತವನ್ನು ದೂರ ಮಾಡುತ್ತವೆ. ನಿಮಗೆ ಹಾಗೆಯೇ ಸೇವಿಸಲು ಕಷ್ಟವಾದಲ್ಲಿ, ಇದನ್ನು ಜಜ್ಜಿ, ಜೇನು ತುಪ್ಪದ ಜೊತೆಗೆ ಸೇವಿಸಬಹುದು.

ಜೇನು ಮತ್ತು ಬೆಳ್ಳುಳ್ಳಿಯ ಟೀ

ಜೇನು ಮತ್ತು ಬೆಳ್ಳುಳ್ಳಿಯ ಟೀ

ಒಂದೆರಡು ಬೆಳ್ಳುಳ್ಳಿಯ ಎಸಳುಗಳನ್ನು ಚಿಕ್ಕದಾಗಿ ಹೆಚ್ಚಿ ಸಾಮಾನ್ಯ ಪ್ರಮಾಣದ ಅರ್ಧದಷ್ಟು ಟೀಪುಡಿಯೊಂದಿಗೆ ನೀರಿನಲ್ಲಿ ಕೊಂಚ ಕಾಲ ಕುದಿಸಿ ಬಳಿಕ ಸಕ್ಕರೆಯ ಬದಲಿಗೆ ಜೇನು ಸೇರಿಸಿ ಟೀ ತಯಾರಿಸಿ. ಹಾಲು ಅಗತ್ಯವಿಲ್ಲ ಎನಿಸಿದರೆ ಮೊದಲು ಕೊಂಚಕಾಲ ಬೆಳ್ಳುಳ್ಳಿಯನ್ನು ಕುದಿಸಿ ನಂತರ ಟೀಪುಡಿಹಾಕಿ ಕೊಂಚವೇ ಕುದಿಸಿ ಸೋಸಿಬಿಡಿ. ಈ ಟೀ ಅನ್ನು ದಿನವಿಡೀ ಬಿಸಿಬಿಸಿಯಾಗಿ ನಿಧಾನವಾಗಿ ಗುಟುಕರಿಸಿ. ಇದರಿಂದ ಗಂಟಲಿನಲ್ಲಿದ್ದ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳು ನಿವಾರಣೆಯಾಗಿ ಉತ್ತಮ ಪರಿಹಾರ ದೊರಕುತ್ತದೆ.

English summary

5 Ayurvedic Remedies For Cold And Cough During Rains

Everybody loves rain, especially the first showers of the season after you have witnessed a spate of hot and humid climate for a few months. You get drenched for a couple of times and then, you tend to catch a bad cough and cold. Generally, during this weather transition phase followed with sudden downpours, the immunity level among human beings tends to lower down. This isn't all. Here are five Ayurvedic remedies for cold and cough during rains and how they work:
Subscribe Newsletter