Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಡವರ ಬಾದಾಮಿ 'ಬೇಯಿಸಿದ ಕಡಲೆಕಾಯಿ'ಯ ಪ್ರಯೋಜನಗಳು
ಕಡಲೆ ಕಾಯಿಗಳನ್ನು ಹುರಿದು ತಿನ್ನುವುದಕ್ಕಿಂತಲೂ ಉಪ್ಪುನೀರಿನಲ್ಲಿ ಕುದಿಸಿ ಸೇವಿಸುವುದೇ ಹೆಚ್ಚು ಆರೋಗ್ಯಕರ. ಇದರಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳು ಕಡಿಮೆ ಇದ್ದು ಪೋಷಕಾಂಶಗಳು ಹೆಚ್ಚಿರುತ್ತವೆ.
ಬಡವರ ಬಾದಾಮಿ ಎಂಬ ಪ್ರಖ್ಯಾತಿ ಪಡೆದಿರುವ ಸಾಮಾನ್ಯ ಕಡಲೆ ಕಾಯಿ ಅಥವಾ ಶೇಂಗಾಬೀಜವನ್ನು ನಾವೆಲ್ಲಾ ಸಾಮಾನ್ಯವಾಗಿ ಸಮಯ ಕಳೆಯುವ ಒಂದು ಆಹಾರವನ್ನಾಗಿಯೇ ಸೇವಿಸುತ್ತೇವೆ. ಹಸಿಯಾಗಿ ಸೇವಿಸುವ ಬದಲು ಬೇಯಿಸಿ ಅಥವಾ ಮರಳಿನಲ್ಲಿ ಹುರಿದು ತಿನ್ನುವ ಈ ಕಡಲೆಕಾಯಿ ಎಲ್ಲರ ಪ್ರಿಯ ತಿನಿಸಾಗಿದ್ದು ಅಗ್ಗವೂ ಆಗಿರುವ ಕಾರಣ ಇದು ಬಿಕರಿಯಾಗುವ ವೇಗಕ್ಕೆ 'ಬಿಸಿ ಬಿಸಿ ಕಡ್ಲೆಕಾಯಿಯಂತೆ ಮಾರಾಟವಾಗುವ' ವಿಶೇಷಣವನ್ನೇ ನೀಡುತ್ತೇವೆ. ಹೊಸ ಟ್ರಿಕ್ಸ್- ಮನೆಯ ಸ್ವಚ್ಛತೆಗೆ ಕಡಲೆಕಾಯಿ ಬೆಣ್ಣೆ!
ಕಡಲೆ ಕಾಯಿಗಳನ್ನು ಹುರಿದು ತಿನ್ನುವುದಕ್ಕಿಂತಲೂ ಉಪ್ಪುನೀರಿನಲ್ಲಿ ಕುದಿಸಿ ಸೇವಿಸುವುದೇ ಹೆಚ್ಚು ಆರೋಗ್ಯಕರ. ಇದರಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳು ಕಡಿಮೆ ಇದ್ದು ಪೋಷಕಾಂಶಗಳು ಹೆಚ್ಚಿರುತ್ತವೆ. ವಿಶೇಷವಾಗಿ ಆಮ್ಲಜನಕದ ಕೊರತೆಯಿಂದ ಜೀವಕೋಶಗಳು ಬಳಲುವ ತೊಂದರೆಯಿಂದ ರಕ್ಷಿಸುತ್ತದೆ. ಬನ್ನಿ, ಬೇಯಿಸಿದ ಕಡ್ಲೆಕಾಯಿಯಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ...

ಬಂಜೆತನ ಕಡಿಮೆಗೊಳಿಸುತ್ತದೆ
ಕಡ್ಲೆಕಾಯಿಯಲ್ಲಿರುವ ಫೋಲಿಕ್ ಆಮ್ಲ ಗರ್ಭಧರಿಸುವ ಮುನ್ನ ಮತ್ತು ಬಳಿಕ ತಾಯಿಯ ದೇಹವನ್ನು ಇನ್ನಷ್ಟು ಆರೋಗ್ಯವಂತಗೊಳಿಸುತ್ತದೆ. ಈ ಮೂಲಕ ಹುಟ್ಟುವ ಮಗುವಿನಲ್ಲಿ ನರಸಂಬಂಧಿತ ದೋಷಗಳಿರುವ ಸಾಧ್ಯತೆ 70% ಕ್ಕೂ ಹೆಚ್ಚು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಮಹಿಳೆಯರ ಬಂಜೆತನ ಸಮಸ್ಯೆಗೆ ಕೆಲವೊಂದು ಮನೆ ಔಷಧಿ!

ತ್ವಚೆಯನ್ನು ರಕ್ಷಿಸುತ್ತದೆ
ಕಡ್ಲೆಕಾಯಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಇ ಇದ್ದು ವಿಶೇಷವಾಗಿ ಚರ್ಮದ ಸೂಕ್ಷ್ಮರಂಧ್ರಗಳಿರುವ ಪದರದ ಜೀವಕೋಶಗಳನ್ನು ಪೋಷಿಸುತ್ತದೆ. ಈ ಮೂಲಕ ದೇಹದಲ್ಲಿ ಪ್ರವೇಶಿಸಿರುವ ಫ್ರೀ ರ್‍ಯಾಡಿಕಲ್ ಎಂಬ ಕ್ಯಾನ್ಸರ್ ಕಾರಕ ಕಣಗಳ ಧಾಳಿಯಿಂದ ತ್ವಚೆ ಹಾಳಾಗುವುದನ್ನು ರಕ್ಷಿಸುತ್ತದೆ.

ಹೊಟ್ಟೆಯ ಕ್ಯಾನ್ಸರ್ ನಿಂದ ಕಾಪಾಡುತ್ತದೆ
ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪಾಲಿ ಫಿನೋಲಿಕ್ ಆಂಟಿ ಆಕ್ಸಿಡೆಂಟುಗಳು ಆರೋಗ್ಯವನ್ನು ವೃದ್ದಿಸುತ್ತವೆ.

ಹೊಟ್ಟೆಯ ಕ್ಯಾನ್ಸರ್ ನಿಂದ ಕಾಪಾಡುತ್ತದೆ
ವಿಶೇಷವಾಗಿ P-Coumaric ಎಂಬ ಆಮ್ಲ ನೈಟ್ರಸ್ ಅಮೈನುಗಳನ್ನು ಉತ್ಪಾದಿಸಿ ಹೊಟ್ಟೆಯ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಅಪಾರವಾಗಿ ಕಡಿಮೆಗೊಳಿಸುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ
ಕಡ್ಲೆಕಾಯಿಯ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸಿ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವ ಮೂಲಕ ಒಟ್ಟಾರೆ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ
ಇದರಲ್ಲಿರುವ ಅಸಂತುಲಿತ ಕೊಬ್ಬಿನ ಆಮ್ಲಗಳು, ಅದರಲ್ಲಿಯೂ ವಿಶೇಷವಾಗಿ ಓಲಿಕ್ ಆಮ್ಲ ಹೃದಯ ನಾಳಗಳ ತೊಂದರೆಗಳಿಂದ ರಕ್ಷಿಸುತ್ತದೆ.

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ
ಕಡ್ಲೆಕಾಯಿಯಲ್ಲಿರುವ ಮ್ಯಾಂಗನೀಸ್ ಆಹಾರದಲ್ಲಿ ಲಭ್ಯವಿರುವ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ನೆರವಾಗುತ್ತದೆ. ಅಲ್ಲದೇ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳಿಸಿ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸಂತುಲಿತ ಮಟ್ಟದಲ್ಲಿರಿಸಲು ನೆರವಾಗುತ್ತದೆ.

ಖನಿಜಗಳ ಆಗರ
ಕಡ್ಲೆಕಾಯಿಯನ್ನು ಬಡವರ ಬಾದಾಮಿ ಎನ್ನಲಿಕ್ಕೆ ಇದರಲ್ಲಿರುವ ಮ್ಯಾಂಗನೀಸ್, ತಾಮ್ರ, ಕ್ಯಾಲ್ಸಿಯಂ, ಮೆಗ್ನೀಶಿಯಂ, ಕಬ್ಬಿಣ, ಸೆಲೆನಿಯಂ ಮತು ಸತುವಿನ ಪ್ರಮಾಣ ಉತ್ತಮ ಪ್ರಮಾಣದಲ್ಲಿರುದೇ ಕಾರಣ.

ಖನಿಜಗಳ ಆಗರ
ಇವೆಲ್ಲವೂ ನಮ್ಮ ಆರೋಗ್ಯವನ್ನು ಒಂದಲ್ಲ ಒಂದು ರೀತಿಯಲ್ಲಿ ಉತ್ತಮಗೊಳಿಸುತ್ತವೆ.



Click it and Unblock the Notifications











