ಬರೀ ಏಳು ದಿನಗಳಲ್ಲಿ, ಹೊಟ್ಟೆಯ ಬೊಜ್ಜು ಕರಗಿಸಿಕೊಳ್ಳಿ!

By Manu

ಸ್ಥೂಲಕಾಯ ಆವರಿಸಿತೇ? ಎಲ್ಲರೂ ಸಲಹೆ ಮಾಡುವುದು ಎರಡು ವಿಧಾನಗಳನ್ನು, ಮೊದಲನೆಯದು ಡಯಟಿಂಗ್ ಅಥವಾ ಆಹಾರದಲ್ಲಿ ನಿಯಂತ್ರಣ ಮತ್ತು ಎರಡನೆಯದು ವ್ಯಾಯಾಮ. ಇವೆರಡೂ ಹೆಚ್ಚಿನವರಿಗೆ ಇಷ್ಟವಿಲ್ಲದ ಕೆಲಸಗಳು. ಅದರಲ್ಲೂ ಡಯಟ್ ಮಾಡುತ್ತೇನೆಂದು ಹೊರಟ ವೀರರ ಎದುರಿಗೆ ಅವರ ಇಷ್ಟದ ಜಾಮೂನು ಅಥವಾ ರಸ್ ಮಲಾಯ್ ಇರಿಸಿದರೆ 'ಈ ಡಯಟ್ ನ ಮನೆ ಹಾಳಾಗ' ಎಂದು ಬೈದು ಜಾಮೂನನ್ನು ಬಾಯಿಗಿರಿಸುವ ಆರಂಭಿಕ ಶೂರರೇ ನಮ್ಮ ನಡುವೆ ಹೆಚ್ಚಿದ್ದಾರೆ. ನಾಲ್ಕು ದಿನ ವ್ಯಾಯಮ ಮಾಡಿದರೂ ಐದನೆಯ ದಿನ ನಿಧಾನವಾಗಿ ಇವತ್ತು ಕಾಲು ನೋವು ನಾಳೆಯಿಂದ ಬರುತ್ತೇನೆ ಎಂದವರಿಗೆ ಈ ನಾಳೆ ಎಂದಿಗೂ ಬರುವುದೇ ಇಲ್ಲ. ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್

ಆದರೆ ನಿಮಗೆ ನಿಜವಾಗಿಯೂ ತೂಕ ಮತ್ತು ಸೊಂಟದ ಸುತ್ತಳತೆ ಕಡಿಮೆ ಮಾಡಿಕೊಳ್ಳಲೇಬೇಕೆಂದಿದ್ದರೆ ಮೊತ್ತ ಮೊದಲಾಗಿ ಮನಸ್ಸನ್ನು ಗಟ್ಟಿ ಮಾಡಿಕೊಂಡು ದೃಢಸಂಕಲ್ಪ ತೊಡಬೇಕು. ಇಂದು ಈ ಬಗ್ಗೆ ಹಲವು ಸಂಶೋಧನೆಗಳು ನಡೆದಿದ್ದು ಸೂಕ್ತ ಆಹಾರಗಳ ಸೇವನೆ ಮತ್ತು ವ್ಯಾಯಮದ ಮೂಲಕ ಈ ಸಂಕಲ್ಪವನ್ನು ನೆರವೇರಿಸಬೇಕು. ಆದರೆ ನಾಲ್ಕು ದಿನದ ಬಳಿಕ ದೇಹ ತನ್ನ ಹಿಂದಿನ ಆಹಾರಗಳನ್ನು ಬೇಡಿದಾಗ ಇಲ್ಲ ಎನ್ನುವ ಛಲ ಮೂಡಿಸಿಕೊಳ್ಳಬೇಕು. ಇದು ಆಯಿತು ಎಂದರೆ ನಿಮ್ಮ ದೇಹದಿಂದ ಹೆಚ್ಚಿನ ತೂಕ ಕಳೆದುಕೊಳ್ಳಲು ಖಂಡಿತಾ ಸಾಧ್ಯವಾಗುತ್ತದೆ.

ಈ ನಿಟ್ಟಿನಲ್ಲಿ ತಜ್ಞರು ಒಂದು ವಿಧಾನವನ್ನು ರೂಪಿಸಿದ್ದು ಇದೊಂದು ರೀತಿಯ ಒಂದು ವಾರದ ಚಟುವಟಿಕೆಯಾಗಿದೆ. ಒಂದು ವಾರದ ಮಟ್ಟಿಗೆ ನಿಮ್ಮ ಜೀವನವನ್ನು ಕೊಂಚ ಬದಲಿಸಿ ಈ ವಿಧಾನವನ್ನು ಅನುಸರಿಸುವ ಮೂಲಕ ನಿಮ್ಮ ದೃಢಸಂಕಲ್ಪ ನಿಜವಾಗಿಯೂ ಪರಿಪೂರ್ಣವಾಗುತ್ತದೆ. ಈ ವಿಧಾನವನ್ನು ಕಡಿಮೆ ಕೊಬ್ಬು ಹೆಚ್ಚಿನ ವ್ಯಾಯಮ ಎಂಬ ಸೂತ್ರದಲ್ಲಿಯೇ ರಚಿಸಿರುವ ಕಾರಣ ಮಾನಸಿಕ ದೃಢತೆ ಮತ್ತು ಸ್ಥಿರತೆ ಅತಿ ಅಗತ್ಯ. ಅಂದರೆ ಈ ವಿಧಾನದಲ್ಲಿ ತಿಳಿಸಿರುವ ಆಹಾರ ಮತ್ತು ಇತರ ವ್ಯಾಯಾಮಗಳ ಹೊರತಾಗಿ ಬೇರೇನನ್ನೂ ಅನುಸರಿಸಕೂಡದು. ಆದರೆ ಈ ವಿಧಾನ ನಿಮಗೆ ಸೂಕ್ತವೇ ಎಂದು ಮೊದಲು ನಿಮ್ಮ ಕುಟುಂಬ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯ ಮೇರೆಗೆ ಮಾತ್ರ ಮುಂದುವರೆಯಿರಿ...

ನಿಮ್ಮ ದಿನಚರಿ ಈ ತರಹ ಇರಲಿ

ನಿಮ್ಮ ದಿನಚರಿ ಈ ತರಹ ಇರಲಿ

ಬೆಳಿಗ್ಗೆ ಎದ್ದ ಬಳಿಕ ಕೇವಲ ನೀರು ಮಾತ್ರ ಕುಡಿದು ಸುಮಾರು ಎರಡು ಘಂಟೆಯವರೆಗೆ ನಡೆಯಬೇಕು. ಉದಾಹರಣೆಗೆ ಬೆಳಿಗ್ಗೆ ಏಳು ಘಂಟೆಗೆ ಎದ್ದರೆ ಒಂಭತ್ತರವರೆಗೆ ನಡೆದು ಹತ್ತರವರೆಗೆ ವಿಶ್ರಾಂತಿ ಪಡೆಯಬೇಕು. ಹತ್ತು ಘಂಟೆಗೆ ಒಂದು ಲೋಟ ತರಕಾರಿ ಬೇಯಿಸಿದ ನೀರು ಅಥವಾ ತಿಳಿಸಾರು ಸೇವಿಸಬೇಕು. ಇದೇ ರೀತಿ ಮದ್ಯಾಹ್ನ ಒಂದು ಘಂಟೆಗೂ ಇನ್ನೊಂದು ಲೋಟ ತಿಳಿಸಾರು ಸೇವಿಸಬೇಕು. ಮೂರು ಗಂಟೆಗೆ ಅಲ್ಪ ಆಹಾರ ಸೇವಿಸಬೇಕು. ಉದಾಹರಣೆಗೆ ಒಂದು ಬಾಳೆಹಣ್ಣು, ಒಂದು ಸೇಬು ಮತ್ತು ಕೆಲವೇ ಕೆಲವು ಒಣಫಲಗಳು. ಸಂಜೆ ಆರೂವರೆಗೆ ನಿಮ್ಮ ಇಷ್ಟದ ಊಟವನ್ನು ಮಾಡಬೇಕು. ಈ ಊಟದಲ್ಲಿ ಚಪಾತಿ, ಅನ್ನ, ಸಾರು, ಪಲ್ಯ, ಮೊಸರು ಇಷ್ಟಿದ್ದರೆ ಬೇಕಾದಷ್ಟಾಯಿತು. ಆದರೆ ಪ್ರಮಾಣ ಮಿತಿಯಾಗಿರಲಿ.

ಈ ವಿಧಾನ ಸಮರ್ಪಕವೇ?

ಈ ವಿಧಾನ ಸಮರ್ಪಕವೇ?

ಈ ವಿಧಾನವನ್ನು ಅನುಸರಿಸಿದವರು ಒಂದೇ ವಾರದಲ್ಲಿ 0.2 ರಿಂದ 1 ಇಂಚಿನಷ್ಟು ಸೊಂಟದ ಸುತ್ತಳತೆ ಕಡಿಮೆಯಾಗಿರುವುದನ್ನು ತಿಳಿಸಿದ್ದಾರೆ.

ಬೆಳಗ್ಗಿನ ಉಪಾಹಾರ?

ಬೆಳಗ್ಗಿನ ಉಪಾಹಾರ?

ಈ ವಿಧಾನದಲ್ಲಿ ಬೆಳಗ್ಗಿನ ಉಪಾಹಾರ ಮತ್ತು ಮದ್ಯಾಹ್ನದ ಸಾಂಪ್ರಾದಾಯಿಕ ಊಟ ಇಲ್ಲದೇ ಇರುವ ಕಾರಣ ಹಸಿವು ಕಾಡಬಹುದು. ಆದರೆ ಸಂಜೆಯವರೆಗೆ ಊಟ ಇಲ್ಲ ಎಂದು ಮನಸ್ಸಿಗೆ ನಾಟುವಂತೆ ನಮಗೆ ನಾವೇ ಹೇಳಿಕೊಂಡರೆ ಈ ಹಸಿವನ್ನು ಎದುರಿಸಬಹುದು. ಸಂಜೆಯ ಆರೂವರೆಯ ಊಟ ನಿಮ್ಮ ನಿತ್ಯದ ಅಗತ್ಯವನ್ನು ಪೂರೈಸಬಲ್ಲುದು.

ಈ ವಿಧಾನದಿಂದ ದಿನಕ್ಕೆ ಅಗತ್ಯ ಪೋಷಕಾಂಶಗಳು ಸಿಗುತ್ತವೆಯೇ?

ಈ ವಿಧಾನದಿಂದ ದಿನಕ್ಕೆ ಅಗತ್ಯ ಪೋಷಕಾಂಶಗಳು ಸಿಗುತ್ತವೆಯೇ?

ದಿನಕ್ಕೆ ಎರಡು ಬಾರಿ ಕುಡಿಯುವ ತರಕಾರಿ ಬೇಯಿಸಿದ ನೀರು ಅಥವಾ ತಿಳಿಸಾರಿನ ಮೂಲಕ ಉತ್ತಮ ಪ್ರಮಾಣದ ವಿಟಮಿನ್ನುಗಳು ಮತ್ತು ಖನಿಜಗಳು ದೊರಕುತ್ತವೆ. ರಾತ್ರಿಯ ಊಟದಲ್ಲಿ ದಿನದ ಅಗತ್ಯದ ಕ್ಯಾಲೋರಿಗಳು ಲಭ್ಯವಾಗುತ್ತವೆ. ನಿಮ್ಮ ದೈನಂದಿನ ಚಟುವಟಿಕೆಯ ಅಗತ್ಯದಂತೆ ಹೆಚ್ಚು ಕ್ಯಾಲೋರಿಗಳಿರುವ ಅಥವಾ ಕಡಿಮೆ ಕ್ಯಾಲೋರಿಗಳಿರುವ ಆಹಾರಗಳನ್ನು ನೀವೇ ಆಯ್ದುಕೊಳ್ಳಬಹುದು. ಆದರೆ ಬೆಣ್ಣ, ತುಪ್ಪ, ಮಾಂಸಾಹಾರ ಮಾತ್ರ ಬೇಡ. ಏಕೆಂದರೆ ಇದರಲ್ಲಿ ಅತಿ ಹೆಚ್ಚಿನ ಕ್ಯಾಲೋರಿಗಳಿರುವ ಕಾರಣ ತೂಕ ಕಡಿಮೆಯಾಗುವ ಬದಲು ಇನ್ನಷ್ಟು ಹೆಚ್ಚಬಹುದು!

ಹಾಗಾದರೆ ವ್ಯಾಯಾಮ ಯಾವಾಗ ಮಾಡಬೇಕು?

ಹಾಗಾದರೆ ವ್ಯಾಯಾಮ ಯಾವಾಗ ಮಾಡಬೇಕು?

ಬೆಳಿಗ್ಗೆ ಎರಡು ಘಂಟೆ ತಿರುಗಿದ್ದುದೇ ಯಾವುದೇ ವ್ಯಾಯಾಮಕ್ಕೂ ಕಡಿಮೆಯಿಲ್ಲದ ಶಾರೀರಿಕ ಚಟುವಟಿಕೆ ನೀಡುತ್ತದೆ. ನಿತ್ಯವೂ ಜಿಮ್ ಗೆ ಹೋಗುವುದು, ಏರೋಬಿಕ್ಸ್ ಮೊದಲಾದವುಗಳಿಗೆ ಸಮಯ ನೀಡುವುದು ಉದ್ಯೋಗಸ್ಥರಿಗೆ ಸಾಧ್ಯವಾದ ಮಾತಲ್ಲ. ಬದಲಿಗೆ ನಿತ್ಯದ ಎರಡು ಘಂಟೆಗಳ ನಡೆಗೆ ಬೇಕಾದಷ್ಟಾಯಿತು.

ಈ ಅವಧಿಯಲ್ಲಿ...... (ಕೊಂಚ ಮದ್ಯ ತೆಗೆದುಕೊಳ್ಳಬಹುದೇ...?)

ಈ ಅವಧಿಯಲ್ಲಿ...... (ಕೊಂಚ ಮದ್ಯ ತೆಗೆದುಕೊಳ್ಳಬಹುದೇ...?)

ಬೇಡ, ಮದ್ಯ ನಿಮ್ಮ ಸಂಕಲ್ಪವನ್ನು ಬದಲಿಸುವ ಜೊತೆಗೇ ನಿಮ್ಮ ಆರೋಗ್ಯವನ್ನೆಲ್ಲಾ ಹಾಳು ಮಾಡುತ್ತದೆ. ಆದ್ದರಿಂದ ಮದ್ಯದ ನೆನಪನ್ನೂ ಮಾಡಬೇಡಿ.

ಹಾಗಾದರೆ ಎಷ್ಟು ನೀರು ಕುಡಿಯಬೇಕು?

ಹಾಗಾದರೆ ಎಷ್ಟು ನೀರು ಕುಡಿಯಬೇಕು?

ದಿನಕ್ಕೆ ಎಂಟು ಲೋಟ ನೀರು ಕುಡಿಯಬೇಕು ಎಂಬ ಕಟ್ಟುಪಾಡುಗಳನ್ನೆಲ್ಲಬಿಟ್ಟುಬಿಡಿ. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಇಲ್ಲದ ಕಾರಣ ಹೊಟ್ಟೆಯಿಂದ "ಬೇಕೇ ಬೇಕು ಊಟ ಬೇಕು" ಎಂಬ ಘೋಷಣೆಗಳು ಬರುತ್ತಲೇ ಇರುತ್ತವೆ. ಹೀಗೆ ಬಂದಾಗಲೆಲ್ಲಾ ಒಂದು ಲೋಟ ತಣ್ಣೀರು ಕುಡಿಯಿರಿ, ಇಡಿಯ ದಿನ ಕುಡಿಯುತ್ತಿರಿ. ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ನೀರು ಕುಡಿಯಿರಿ.

ಆಹಾರ ಕ್ರಮದಲ್ಲಿ ಬೀನ್ಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ

ಆಹಾರ ಕ್ರಮದಲ್ಲಿ ಬೀನ್ಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ

ಅಪಾನವಾಯುವಿಗೆ ಆಹ್ವಾನ ಎಂಬ ಒಂದೇ ಅವಗುಣವನ್ನು ಬಿಟ್ಟರೆ ಬೀನ್ಸ್ ತೂಕವಿಳಿಸಲು ಉತ್ತಮವಾದ ಆಹಾರವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗುವ ನಾರನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬಿನ ಅವಶ್ಯಕತೆ ಇರುವುದರಿಂದ ದೇಹ ಅನಿವಾರ್ಯವಾಗಿ ಕೊಬ್ಬನ್ನು ಕಳೆದುಕೊಳ್ಳಲೇಬೇಕಾಗುತ್ತದೆ. ಅಲ್ಲದೇ ಬೀನ್ಸ್ ಕರಗಲು ಹೆಚ್ಚು ಹೊತ್ತು ಬೇಕಾಗುವುದರಿಂದ ಪದೇ ಪದೇ ತಿನ್ನುವುದರಿಂದ ತಪ್ಪಿಸಿಕೊಂಡು ಪರೋಕ್ಷವಾಗಿ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

ಕಾಳುಮೆಣಸಿನ ಪುಡಿ ಬಳಸಿ

ಕಾಳುಮೆಣಸಿನ ಪುಡಿ ಬಳಸಿ

ಕಾಳುಮೆಣಸಿಗೆ ಖಾರದ ರುಚಿ ನೀಡುವ ಪೈಪರಿನ್ (piperine) ಎಂಬ ಪೋಷಕಾಂಶ ಆರೋಗ್ಯಕ್ಕೆ ಹಲವು ವಿಧದಲ್ಲಿ ಉಪಯೋಗಕಾರಿಯಾಗಿದೆ. ಉರಿಯೂತವನ್ನು ನಿವಾರಿಸುವ ಈ ಪೋಷಕಾಂಶವನ್ನು ಕರಗಿಸಲು ಹೆಚ್ಚಿನ ಪ್ರಮಾಣದ ಕೊಬ್ಬು ಬೇಕಾಗುತ್ತದೆ. ಇದು ಕೊಬ್ಬಿನ ಪ್ರಮಾಣವನ್ನು ಕಡಿಮೆಗೊಳಿಸಿ ಸೊಂಟದ ಸುತ್ತಳತೆಯನ್ನು ಕಡಿಮೆಮಾಡುತ್ತದೆ. ಅಲ್ಲದೇ ಕೊಲೆಸ್ಟ್ರಾಲ್ ಮಟ್ಟವನ್ನೂ ತಗ್ಗಿಸುತ್ತದೆ.

ಲಿಂಬೆ ಹಣ್ಣಿನ ರಸ

ಲಿಂಬೆ ಹಣ್ಣಿನ ರಸ

ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಪ್ರಥಮವಾಗಿ ಲಿಂಬೆ ಹಣ್ಣಿನ ರಸ ಸೇರಿಸಿದ ನೀರು ಕುಡಿಯಿರಿ.

*ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಕ್ಕದಾದರೆ ಒಂದು, ದೊಡ್ಡದಾದರೆ ಅರ್ಧ ಲಿಂಬೆಯ ರಸವನ್ನು ಸೇರಿಸಿ. ಉಗುರು ಬೆಚ್ಚನೆಯ ನೀರು ಲಭ್ಯವಿಲ್ಲದಿದ್ದರೆ ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಸಹಾ ಬಳಸಬಹುದು. ಆದರೆ ಐಸ್ ಸೇರಿಸಿದ ಅಥವಾ ಫ್ರಿಜ್ಜಿನ ನೀರು ಬೇಡ.

*ನಂತರ ನಿಮ್ಮ ದೈನಂದಿನ ವ್ಯಾಯಾಮಗಳನ್ನು ಮಾಡಿ. ಕನಿಷ್ಟ ಮುಕ್ಕಾಲು ಗಂಟೆಯವರೆಗೆ ಬೇರೇನನ್ನೂ ಸೇವಿಸಬೇಡಿ.

*ಅತ್ಯಂತ ಆಯಾಸ ಅನ್ನಿಸಿದರೆ ಮಾತ್ರ ಅರ್ಧಗಂಟೆಯ ಬಳಿಕ ಕೊಂಚ ನೀರು ಕುಡಿಯಬಹುದು. ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಬಹುದು.

ಲಿಂಬೆ ಹಾಗೂ ಬೆಳ್ಳುಳ್ಳಿ

ಲಿಂಬೆ ಹಾಗೂ ಬೆಳ್ಳುಳ್ಳಿ

*ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ *ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ. (ಫ್ಯಾಮಿಲಿ ವೈದ್ಯರ ಸಲಹೆ ಪಡೆಯಿರಿ)

*ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.

*ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.

ದಾಲ್ಚಿನ್ನಿ ಅಥವಾ ಚೆಕ್ಕೆಯನ್ನು ಬಳಸಿ

ದಾಲ್ಚಿನ್ನಿ ಅಥವಾ ಚೆಕ್ಕೆಯನ್ನು ಬಳಸಿ

ನಿಮ್ಮ ನಿತ್ಯದ ಪೇಯಗಳಾದ ಟೀ, ಕಾಫಿ ಅಥವಾ ಹಾಲಿನ ಮೇಲೆ ಒಂದು ಚಿಕ್ಕಚಮಚ ದಾಲ್ಚಿನ್ನಿ ಪುಡಿಯನ್ನು ಚಿಮುಕಿಸಿ ಕಲಕಿ ಕುಡಿಯಿರಿ.

* ನಿಮ್ಮ ನಿತ್ಯದ ಉಪಾಹಾರಗಳಾದ ಉಪ್ಪಿಟ್ಟು, ಬ್ರೆಡ್ ಟೋಸ್ಟ್ ಮೊದಲಾದವುಗಳ ಮೇಲೆ ಕೊಂಚವಾಗಿ ದಾಲ್ಚಿನ್ನಿ ಪುಡಿ ಸೇರಿಸಿ ತಿನ್ನಿರಿ

* ನಿತ್ಯದ ಸಾಲಾಡ್ (ಅಥವಾ ಪಲ್ಯ)ಗಳ ಮೇಲೆ ಚಿಮುಕಿಸಿ ಸೇವಿಸಿ. ಕೆಲವೇ ದಿನಗಳಲ್ಲಿ ಕೊಬ್ಬು ಕರಗತೊಡಗಿರುವುದು ಗಮನಕ್ಕೆ ಬರುತ್ತದೆ.

ಸೇಬು ಮತ್ತು ದೊಡ್ಡಜೀರಿಗೆ

ಸೇಬು ಮತ್ತು ದೊಡ್ಡಜೀರಿಗೆ

ಒಂದು ಸೇಬಿಗೆ ಒಂದು ಚಮಚದ ಪ್ರಮಾಣದಲ್ಲಿ ದೊಡ್ಡಜೀರಿಗೆಯನ್ನು ಕೊಂಚಕಾಲ ನೆನೆಸಿಟ್ಟು ಅದೇ ನೀರಿಗೆ ಸೇಬುಹಣ್ಣನ್ನು ಕತ್ತರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ. ಇದು ಒಂದು ವಿಶಿಷ್ಟವಾದ ರುಚಿಯ ಜೊತೆ ಆರೋಗ್ಯವನ್ನೂ ನೀಡುವುದು ಮತ್ತು ಕೊಬ್ಬನ್ನೂ ಕರಗಿಸುವುದು.

English summary

Try The 7 Day Belly Fat Cleanse!

The main problem with dieting is that you tend to program your mind that you are going to do a sacrifice by staying away from your favourite foods. This is why your body will hate the term 'dieting' even before you begin such a program; therefore, it is bound to fail sooner or later.
X
Desktop Bottom Promotion