Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹವಾಮಾನದ ಬದಲಾವಣೆ, ಆರೋಗ್ಯದ ಆರೈಕೆ ಹೀಗಿರಲಿ
ಋತುಗಳು ಬದಲಾಗುತ್ತಿದ್ದಂತೆಯೇ ಹವಾಮಾನದಲ್ಲಿಯೂ ಕೆಲವಾರು ಬದಲಾವಣೆಗಳಾಗುತ್ತವೆ. ಮುಖ್ಯವಾಗಿ ಚಳಿಗಾಲದಿಂದ ಬೇಸಿಗೆ ಬರುವ ವೇಳೆಯಲ್ಲಿ ಸೆಖೆ ಇದ್ದರೂ ಹಲವರು ಶೀತ ಕೆಮ್ಮು ಗಂಟಲಕೆರೆತ ಮೊದಲಾದವುಗಳಿಂದ ಬಳಲುತ್ತಾರೆ. ಇದಕ್ಕೆ ಮುಖ್ಯ ಕಾರಣ ನಮ್ಮ ಸುತ್ತಮುತ್ತ ಇರುವ ಮರಗಳಲ್ಲಿ ಹೂವುಗಳಲ್ಲಿರುವ ಪರಾಗ ಗಾಳಿಗೆ ಬಿಡುಗಡೆಯಾಗುವುದು. ಇವು ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾಗಿರುವ ಕಾರಣ ಶ್ವಾಸದ ಮೂಲಕ ದೇಹ ಸೇರುತ್ತವೆ. ದೇಹ ಈ ಕಣಗಳನ್ನು ಹೊರಹಾಕಲೆಂದೇ ಜೀವರಕ್ಷಣಾ ವ್ಯವಸ್ಥೆಗಳಾದ ಶೀತ ಜ್ವರ ಗಂಟಲಕೆರೆತ ಮೊದಲಾದ ಕ್ರಮಗಳನ್ನು ಕೈಗೊಳ್ಳುತ್ತದೆ.
ನಿಜವಾಗಿ ನೋಡಬೇಕೆಂದರೆ ಈ ಶೀತ ಜ್ವರಗಳು ಕಾಯಿಲೆಯೇ ಅಲ್ಲ. ಬದಲಿಗೆ ಈ ಕಣಗಳ ಅಥವಾ ಇತರ ವೈರಸ್ಸು ರೋಗಾಣುಗಳ ಧಾಳಿಗೆ ಶರೀರದ ರೋಗ ನಿರೋಧಕ ವ್ಯವಸ್ಥೆ ಕಂಡುಕೊಂಡ ಕ್ರಮ. ಇದಕ್ಕೆ ಅಲೋಪಥಿಯ ಮಾತ್ರೆಗಳನ್ನು ನುಂಗಿ ಆ ಕ್ಷಣಕ್ಕೆ ಇದರ ತೊಂದರೆ ಕಡಿಮೆ ಮಾಡಿಕೊಂಡರೂ ಇದರ ಹಲವು ಅಡ್ಡ ಪರಿಣಾಮಗಳು ಮುಂದಿನ ದಿನಗಳಲ್ಲಿ ಬಾಧಿಸಬಹುದು. ಆದ್ದರಿಂದ ಇಂತಹ ತೊಂದರೆಗೆ ಮನೆಮದ್ದೇ ಹೆಚ್ಚು ಸೂಕ್ತ. ಇದು ಕೊಂಚ ನಿಧಾನವಾದರೂ ಯಾವುದೇ ಅಡ್ಡಪರಿಣಾಮಗಳಿಲ್ಲದ ಕಾರಣ ಸುರಕ್ಷಿತವೂ ಆಗಿದೆ, ಬನ್ನಿ ಅವು ಯಾವುದು ಎಂಬುದನ್ನು ಮುಂದೆ ಓದಿ....
1) ಒಂದು ಲೋಟ ಬಿಸಿನೀರಿಗೆ ಸ್ವಲ್ಪ ಉಪ್ಪು ಹಾಕಿ ಗಂಟಲಲ್ಲಿ ಗಳಗಳ ಮಾಡಬೇಕು. ಇದು ಗಂಟಲ ಕೆರೆತದಿಂದ ಮುಕ್ತಿ ನೀಡುತ್ತದೆ.
2) ಸತತವಾಗಿ ಸ್ವಲ್ಪ ಸ್ವಲ್ಪವಾಗಿ ಬಿಸಿನೀರು ಕುಡಿಯುತ್ತಿರುವುದು. ಬದಲಿಗೆ ಆಗಾಗ ಬಿಸಿ ಕಾಫಿ, ಟೀ ಸಹಾ ಕುಡಿಯಬಹುದು, ಒಟ್ಟಾರೆ ಬಿಸಿಯಾದ ದ್ರವ ಘಂಟೆಗೆ ಮೂರು ನಾಲ್ಕು ಬಾರಿಯಾದರೂ ಹೋಗುತ್ತಲೇ ಇರಬೇಕು. ಇದರಿಂದ ಬ್ಯಾಕ್ಟೀರಿಯಾಗಳಿಗೆ ಉಸಿರಾಡಲೂ ಅವಕಾಶ ನೀಡದಂತೆ ಸದೆಬಡಿಯಬಹುದು.

3) ಕೊಂಚ ಬಿಸಿನೀರಿಗೆ ಚಿಟಿಕೆ ಅರಿಶಿನ ಪುಡಿ, ಶುಂಠಿಯ ಒಣ ಪುಡಿ ಮತ್ತು ಚಿಕ್ಕಚಮಚದಷ್ಟು ಜೇನು ಸೇರಿಸಿ ಕುಡಿಯುತ್ತಿರುವ ಮೂಲಕ ಕೆಮ್ಮು, ಮೈ ಕೈ ನೋವು, ಶೀತ ಮತ್ತು ತಲೆನೋವು ಕಡಿಮೆಯಾಗುತ್ತದೆ.
4) ಸತತವಾಗಿ ಮೂಗು ಸೋರುತ್ತಿದ್ದರೆ ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಹಬೆಯನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಉಸಿರಾಟದ ಮೂಲಕ ಸೇವಿಸಬೇಕು. ಈ ನೀರಿಗೆ ಒಂದೆರಡು ತೊಟ್ಟು ನೀಲಗಿರಿ ಎಣ್ಣೆಯನ್ನು ಹಾಕಿದರೆ ಇನ್ನೂ ಉತ್ತಮ. ಇದರಿಂದ ಕಟ್ಟಿಕೊಂಡಿದ್ದ ಮೂಗು ತಕ್ಷಣ ತೆರೆಯಬಹುದು.
5) ಟೀ ಕುದಿಸುವಾಗ ಇದರಲ್ಲಿ ಕೆಲವು ತುಳಸಿ ಎಲೆಗಳನ್ನು ಮತ್ತು ಚಿಕ್ಕ ಶುಂಠಿಯ ತುಂಡನ್ನು ಜಜ್ಜಿ ಮತ್ತು ಕೆಲವು ಕಾಳುಮೆಣಸಿನ ಕಾಳುಗಳನ್ನು ಹಾಕಿ ಬೇಯಿಸಬೇಕು. ಈ ಟೀ ಸೇವನೆಯಿಂದ ಶೀತ ಮತ್ತು ಕೆಮ್ಮು ಶೀಘ್ರವಾಗಿ ಗುಣವಾಗುತ್ತದೆ.
6) ಶೀತ ಮತ್ತು ಕೆಮ್ಮು ಸತತವಾಗಿ ಬಾಧಿಸುತ್ತಿದ್ದರೆ ನಿಯಮಿತವಾಗಿ ಚ್ಯವನಪ್ರಾಶ ಅಥವಾ ನೆಲ್ಲಿಕಾಯಿಯಿಂದ ತಯಾರಿಸಲಾದ ಆಮ್ಲಾ ಮುರಬ್ಬಾ ಎಂಬ ಆಯುರ್ವೇದೀಯ ಔಷಧಗಳನ್ನು ಸೇವಿಸಬೇಕು. ಇವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ.
7) ಒಂದು ವೇಳೆ ಉಪ್ಪುನೀರಿನ ಗಳಗಳದಿಂದ ಗಂಟಲ ಕೆರೆತ ಕಡಿಮೆಯಾಗದಿದ್ದಲ್ಲಿ ಒಂದು ಲೋಟ ಬಿಸಿನೀರಿಗೆ ಅರ್ಧ ಚಮಚದಷ್ಟು ತುಪ್ಪ, ಮತ್ತು ಕೊಂಚ ಉಪ್ಪು ಸೇರಿಸಿ ಬಿಸಿಬಿಸಿಯಾಗಿಯೇ ಕುಡಿಯಬೇಕು. ಇದರಿಂದ ಗಂಟಲ ಕೆರೆತ ಮತ್ತು ಕೆಮ್ಮು ಕಡಿಮೆಯಾಗುತ್ತದೆ.
8) ಮೈಕೈ ನೋವು ಹೆಚ್ಚಾಗಿದ್ದರೆ ನೀವು ಸ್ನಾನ ಮಾಡುವ ಬಿಸಿನೀರಿನ ಬಕೆಟ್ಟಿನಲ್ಲಿ ಕೆಲವು ತೊಟ್ಟು ನೀಲಗಿರಿ ಎಣ್ಣೆಯನ್ನು ಹಾಕಿ ಸ್ನಾನ ಮಾಡಬೇಕು ಇದರಿಂದ ಮೈಕೈನೋವು ಬೇಗನೇ ಕಡಿಮೆಯಾಗುತ್ತದೆ. ಉತ್ತಮ ಪರಿಣಾಮಕ್ಕಾಗಿ ರಾತ್ರಿಯೂಟದ ಮುನ್ನ ಸ್ನಾನ ಮಾಡಿ ಊಟದ ಬಳಿಕ ಕಷಾಯ ಕುಡಿದು ಮಲಗಿದರೆ ಬೆಳೆಗ್ಗೆದ್ದಾಗ ಮೈಕೈ ನೋವು ಕಡಿಮೆಯಾಗಿರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
