For Quick Alerts
ALLOW NOTIFICATIONS  
For Daily Alerts

ಈ ಮ್ಯಾಜಿಕ್ 'ಜಾಯಿಕಾಯಿ', ಕಣ್ತುಂಬ ನಿದ್ರೆಗೆ ಸಹಕಾರಿ!

By Hemanth
|

ದಣಿದ ದೇಹಕ್ಕೆ ಸುಮಾರು 7ರಿಂದ 8 ಗಂಟೆಗಳ ನಿದ್ರೆ ಬೇಕಾಗುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ದೇಹದ ಆರೋಗ್ಯದಲ್ಲಿ ನಿದ್ರೆಯು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ನಿದ್ರೆಯ ಕೊರತೆಯಿದ್ದರೆ ಅದರಿಂದ ನಾನಾ ರೀತಿಯ ಕಾಯಿಲೆಗಳು ದೇಹವನ್ನು ಭಾದಿಸಬಹುದು. ಹಾಗಾಗಿ ನಿದ್ರೆ ಅತೀ ಅಗತ್ಯವಾಗಿರುವಂತದ್ದಾಗಿದೆ.

Sleep

ನಿದ್ರಾಹೀನತೆಯನ್ನು ನಿವಾರಿಸಲು ನೀವು ಹಲವಾರು ರೀತಿಯ ಮದ್ದನ್ನು ಪ್ರಯೋಗಿಸಿರಬಹುದು. ಇದರಿಂದ ಯಾವುದೇ ಪ್ರಯೋಜವಾಗಿರಲಿಕ್ಕಿಲ್ಲ. ಆದರೆ ಕೆಲವೊಂದು ಅಡುಗೆಗಳಲ್ಲಿ ಮಸಾಲೆಯಾಗಿ ಬಳಸುವಂತಹ ಜಾಯಿಕಾಯಿಯಿಂದ ತಯಾರಿಸುವ ಮನೆಮದ್ದಿನಿಂದ ನಿದ್ರಾಹೀನತೆಯನ್ನು ನಿವಾರಿಸಬಹುದು. ನಿದ್ರೆಗೆ ಜಾಯಿಕಾಯಿ ತುಂಬಾ ಪ್ರಯೋಜನಕಾರಿ ಎಂದು ಹಲವಾರು ಅಧ್ಯಯನಗಳು ಕೂಡ ಹೇಳಿವೆ. ನಿದ್ರೆ ಬರ್ತಾ ಇಲ್ವಾ? ಮನೆ ಮದ್ದು ಇಲ್ಲಿದೆ

nutmug

ಜಾಯಿಕಾಯಿಯಲ್ಲಿ ನಿದ್ರಾಹೀನತೆಯನ್ನು ನಿವಾರಿಸಬಲ್ಲ ಗುಣಗಳು ಇವೆ ಎಂದು ಇದಾಗಲೇ ಸಾಬೀತಾಗಿದೆ. ಜಾಯಿಕಾಯಿಯನ್ನು ಬಳಸಿಕೊಂಡು ತಯಾರಿಸುವ ಮನೆಮದ್ದಿನಿಂದ ನಿದ್ರಾಹೀನತೆಯಿಂದ ಹೇಗೆ ಪಾರಾಗಬಹುದು ಎನ್ನುವುದನ್ನು ಬೋಲ್ಡ್ ಸ್ಕೈ ನಿಮಗಿಲ್ಲಿ ತಿಳಿಸಲಿದೆ.... ಮುಂದೆ ಓದಿ...

nutmug

1.ಒಂದು ಅಥವಾ ಎರಡು ಒಣಗಿದ ಜಾಯಿಕಾಯಿ ತೆಗೆದುಕೊಳ್ಳಿ.

2.ಇದನ್ನು ಹುಡಿ ಮಾಡಿ ಅಥವಾ ಮಾರುಕಟ್ಟೆಯಲ್ಲಿ ಸಿಗುವಂತಹ ಜಾಯಿಕಾಯಿಯ ಹುಡಿ ತೆಗೆದುಕೊಳ್ಳಿ.

3.ಒಂದು ಹಿಡಿ ಜಾಯಿಕಾಯಿ ಹುಡಿಯನ್ನು ತೆಗೆದುಕೊಂಡು ಅದನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ.

4.ಐದು ನಿಮಿಷ ಕಾಲ ಬಾಯಿ ಮುಚ್ಚಿ ಹಾಗೆ ಬಿಡಿ.

hot water

5.ಮಿಶ್ರಣವನ್ನು ಗಾಳಿಸಿಕೊಂಡು ಕುಡಿಯಿರಿ.

6.ಮಲಗುವ 5-6 ಗಂಟೆ ಮೊದಲು ಈ ನೀರನ್ನು ಕುಡಿಯಿರಿ. ಕಣ್ತುಂಬಾ ನಿದ್ರೆ ಮಾಡುವ ಸಮಯದಲ್ಲಿ ಇದೆಲ್ಲಾ ಬೇಕಾ?

ಜಾಯಿಕಾಯಿಯ ಇತರ ಆರೋಗ್ಯ ಲಾಭಗಳು

*ಜಾಯಿಕಾಯಿಯು ಕೇವಲ ನಿದ್ರಾಹೀನತೆಗೆ ಮಾತ್ರ ದಿವ್ಯೌಷಧಿಯಲ್ಲ, ಇದು ಜೀರ್ಣಕ್ರಿಯೆ, ರಕ್ತ ಪರಿಚಲನೆ ಮತ್ತು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

nutmug

ಸೂಚನೆ: ನಿದ್ರಾಹೀನತೆಯನ್ನು ನಿವಾರಿಸಲು ಜಾಯಿಕಾಯಿಯನ್ನು ಬಳಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು. ಇದು ಸಣ್ಣ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಅಥವಾ ವೈದ್ಯರು ಸೂಚಿಸಿದಂತೆ ಸೇವಿಸಿ. ಅತಿಯಾಗಿ ಸೇವನೆ ಮಾಡಿದರೆ ಇದು ವಿಷಕಾರಿಯಾಗುವ ಸಾಧ್ಯತೆಯಿದೆ... ದಯವಿಟ್ಟು ಈ ಮನೆಮದ್ದನ್ನು ಪ್ರಯತ್ನಿಸುವ ಮುನ್ನ ಫ್ಯಾಮಿಲಿ ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ.....

ನಿದ್ದೆಗೆಟ್ಟರೆ ಆರೋಗ್ಯಕ್ಕೆ ಕೇಡು ನೆನಪಿರಲಿ!

English summary

This One Spice Will Cure Insomnia In Just 2 Days!

Nutmeg is one of the best natural home remedies that will help in such condition. Today, at Boldsky, we will explain to you how you can consume nutmeg and get a proper sleep at night. Have a look.
Story first published: Monday, December 5, 2016, 23:10 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more