ಕಣ್ತುಂಬಾ ನಿದ್ರೆ ಮಾಡುವ ಸಮಯದಲ್ಲಿ ಇದೆಲ್ಲಾ ಬೇಕಾ?

By Hemanth
Subscribe to Boldsky

ಯಶಸ್ಸು ಹಾಗೂ ಸಂಪತ್ತಿನ ಹಿಂದೆ ಓಡುತ್ತಾ ನಾವು ದೇಹವನ್ನು ಸರಿಯಾಗಿ ದಂಡಿಸಿಕೊಳ್ಳುತ್ತೇವೆ. ಜೀವನದ ಗುರಿಯನ್ನು ಮುಟ್ಟಲು ಹಗಲು-ರಾತ್ರಿಯೆನ್ನದೆ ಕೆಲಸ ಮಾಡುತ್ತಾ ಇರುತ್ತೇವೆ. ದೇಹಕ್ಕೆ ಬೇಕಾಗುವಂತಹ ವಿಶ್ರಾಂತಿಯನ್ನು ನಾವು ಕಡೆಗಣಿಸುತ್ತೇವೆ. ನಿದ್ರೆ ಬರ್ತಾ ಇಲ್ವಾ? ಮನೆ ಮದ್ದು ಇಲ್ಲಿದೆ

ದೇಹವನ್ನು ದಿನವಿಡೀ ದುಡಿಸುವಾಗ ಅದಕ್ಕೆ ತಕ್ಕ ಮಟ್ಟಿನ ವಿಶ್ರಾಂತಿ ಕೂಡ ಬೇಕಾಗುತ್ತದೆ. ದೇಹಕ್ಕೆ ನಾವು ನೀಡುವ ವಿಶ್ರಾಂತಿಯೆಂದರೆ ರಾತ್ರಿ ಮಾಡುವಂತಹ ನಿದ್ರೆ. ರಾತ್ರಿಯ ನಿದ್ರೆ ಸರಿಯಾಗಿ ಇರದೆ ಇದ್ದರೆ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಖಚಿತ. ಸರಿಯಾದ ಸಮಯಕ್ಕೆ ನಿದ್ದೆ ಮಾಡಿ ಬೆಳಗ್ಗೆ ಸರಿಯಾದ ಸಮಯಕ್ಕೆ ಏಳಬೇಕು.

working on laptop
 

ಆದರೆ ಇದನ್ನು ಪಾಲಿಸಿಕೊಂಡು ಹೋಗುವವರು ತುಂಬಾ ಕಡಿಮೆ. ಕೆಲವರಿಗೆ ರಾತ್ರಿ ನಿದ್ರೆಯೇ ಬರುವುದಿಲ್ಲ. ಇದಕ್ಕಾಗಿ ಅವರು ನಿದ್ರೆಯ ಮಾತ್ರೆ ತೆಗೆದುಕೊಳ್ಳಲು ಆರಂಭಿಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ಮಾರಕ. ರಾತ್ರಿ ಸರಿಯಾಗಿ ನಿದ್ರೆ ಮಾಡಬೇಕಾದರೆ ಅದಕ್ಕೆ ಬೇಕಾದಂತಹ ಹಾಸಿಗೆ ಕೂಡ ತುಂಬಾ ಮುಖ್ಯವಾಗಿರುತ್ತದೆ. ಹಾಸಿಗೆ ತುಂಬಾ ಗಟ್ಟಿಯಾಗಿದ್ದು, ನಿಮಗೆ ಬೆನ್ನು ನೋವು ನೀಡುವಂತಿರಬಾರದು. ಹಾಸಿಗೆ ಮೆತ್ತಗೆ ಇದ್ದರೆ ಸುಖ ನಿದ್ರೆಯನ್ನು ಪಡೆಯಬಹುದಾಗಿದೆ.   ಬಟ್ಟೆಯ ಬಂಧನವಿಲ್ಲದೇ ಮಲಗಿದರೆ, ಹತ್ತಾರು ಲಾಭ!

sleeping
 

ಒಳ್ಳೆಯ ನಿದ್ರೆ ಪಡೆಯಬೇಕಾದರೆ ಹಾಸಿಗೆಯಲ್ಲಿ ನೀವು ಮಾಡಬಾರದ ಕೆಲವೊಂದು ವಿಷಯಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ. ಮಲಗುವ ಕೋಣೆಯಲ್ಲಿ ಟಿವಿಯನ್ನು ಇಡಬೇಡಿ ಮತ್ತು ಟಿವಿ ನೋಡುತ್ತಾ ಇರುವಾಗಲೇ ನಿದ್ರೆ ಮಾಡಬೇಡಿ. ಟಿವಿಯ ಪ್ರಕಾಶವು ನಿಮ್ಮ ಮೆದುಳನ್ನುಉತ್ತೇಜಿಸುತ್ತದೆ ಮತ್ತು ಸುಖ ನಿದ್ರೆಗೆ ಬೇಕಾಗಿರುವಂತಹ ಮೆಲಟೊನಿನ್ ಎನ್ನುವಂತಹ ಹಾರ್ಮೋನು ಸ್ರವಿಸುವುದನ್ನು ಮೆದುಳು ನಿಲ್ಲಿಸುತ್ತದೆ. ಇದರಿಂದ ನಿಮ್ಮ ನಿದ್ರೆಗೆ ಅಡಚಣೆ ಉಂಟಾಗುತ್ತದೆ.

mobile using
 

ಮೊಬೈಲ್ ಹಿಡಿದುಕೊಂಡು ನಿದ್ರೆ ಮಾಡಬೇಡಿ. ಸ್ಮಾರ್ಟ್ ಫೋನ್ ಎನ್ನುವುದು ಈಗೀಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ನಿದ್ರೆಗೆ ಜಾರುವ ಮುನ್ನವು ನಾವು ಅದರಲ್ಲಿ ಮುಳುಗಿಹೋಗಿರುತ್ತೇವೆ. ಇದರಿಂದ ಸರಿಯಾಗಿ ನಿದ್ರೆ ಬರಲು ಸಾಧ್ಯವಿಲ್ಲ. ಇದು ಮರುಕಳಿಸುವ ಲಯಕ್ಕೆ ಪರಿಣಾಮವನ್ನು ಉಂಟು ಮಾಡುತ್ತದೆ. ಇದು ನಿದ್ರೆಯ ಹಾರ್ಮೋನು ಮೇಲೆ ಪರಿಣಾಮ ಬೀರುವುದು. ಎಡ ಮಗ್ಗುಲಿಗೆ ಹೊರಳಿ ಮಲಗಿದರೆ ಹತ್ತಾರು ಅನುಕೂಲಗಳು..!

ಹಾಸಿಗೆಯಲ್ಲಿ ನಿದ್ರಿಸುವ ಮೊದಲು ಸಿಹಿ ತಿಂಡಿಗಳನ್ನು ತಿನ್ನಲು ಹೋಗಬೇಡಿ. ಇದರಿಂದ ಕೀಟಗಳು, ಇರುವೆ ಮತ್ತು ಜಿರಳೆ ಬರುತ್ತದೆ. ಈ ಕೀಟಗಳಿಂದಾಗಿ ಖಂಡಿತವಾಗಿಯೂ ಒಳ್ಳೆಯ ನಿದ್ರೆ ಬರಲು ಸಾಧ್ಯವಿಲ್ಲ.

sweets

ಕಚೇರಿ ಕೆಲಸವನ್ನು ಹಾಸಿಗೆಗೆ ತರಬೇಡಿ. ಕೆಲಸ ಮತ್ತು ಹಾಸಿಗೆಯನ್ನು ಜತೆಯಾಗಿರಿಸಿದಾಗ ನಿದ್ರಾಹೀನತೆ ಕಾಡಲಿದೆ ಎಂದು ರಾಷ್ಟ್ರೀಯ ನಿದ್ರಾ ಪತಿಷ್ಠಾನವು ಹೇಳಿದೆ. ಇಂತಹ ತಪ್ಪುಗಳನ್ನು ಹಾಸಿಗೆಯಲ್ಲಿ ಮಾಡದೇ ಇದ್ದರೆ ಸುಖ ನಿದ್ರೆ ನಿಮ್ಮದಾಗುವುದು.....

For Quick Alerts
ALLOW NOTIFICATIONS
For Daily Alerts

    English summary

    The Worst Things you Should Never Do In Bed

    A good night's sleep is an important key to general wellbeing. Routine improper habits at bedtime can hinder your otherwise restorative powers of sleep. When we do not get enough sleep, we tend to suffer from a number of diseases. We also resort to sleeping pills in order to get a good night's sleep but these can prove to be harmful in the long run.
    Story first published: Thursday, November 17, 2016, 23:44 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more