Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವೈದ್ಯರ ಔಷಧಿಗೇ ಚಾಲೆಂಜ್ ಹಾಕುವ ಪವರ್ ಫುಲ್ ಜ್ಯೂಸ್!
ಸಾಮಾನ್ಯವಾಗಿ ಋತುಗಳು ಬದಲಾಗುವ ಸಮಯದಲ್ಲಿ ಗಾಳಿಯಲ್ಲಿ ಹೊಸ ಹೊಸ ವೈರಸ್ಸುಗಳು ತೇಲಿ ಬರುತ್ತಾ ರೋಗಗಳನ್ನು ಹಬ್ಬುತ್ತವೆ. ಇದನ್ನು ಎದುರಿಸಲು ನಮ್ಮ ರೋಗ ನಿರೋಧಕ ವ್ಯವಸ್ಥೆ ಇನ್ನೂ ಸಜ್ಜುಗೊಂಡಿರದ ಕಾರಣ ಹಲವಾರು ಸೋಂಕುಗಳಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದೇ ಉತ್ತಮ ಮಾರ್ಗವಾದರೂ ಇದಕ್ಕೆ ಕೊಂಚ ಸಮಯ ಹಿಡಿಯುತ್ತದೆ. ಆದ್ದರಿಂದ ತಕ್ಷಣ ಈ ಸೋಂಕು ವಿಸ್ತರಿಸದಿರಲು ವೈದ್ಯರು ಆಂಟಿಬಯಾಟಿಕ್‌ಗಳನ್ನು ನೀಡುತ್ತಾರೆ. ಜ್ವರ-ಶೀತಕ್ಕೆ ಮನೆಯಂಗಳದ ತುಳಸಿ ಎಲೆಗಳೇ ಸಾಕು!
ಆದರೆ ಈ ಮದ್ದುಗಳು ಆ ಕ್ಷಣಕ್ಕೆ ಉತ್ತಮವಾಗಿ ಕಂಡರೂ ಪದೇ ಪದೇ ಸೇವಿಸುವುದು ಮಾತ್ರ ಖಂಡಿತಾ ಆರೋಗ್ಯಕರವಲ್ಲ. ಅಲ್ಲದೇ ಈ ಮಾತ್ರೆಗಳು ಕೆಲವು ಬಗೆಯ ಬ್ಯಾಕ್ಟೀರಿಯಾಗಳಿಗೆ ಮಾತ್ರ ಫಲಪ್ರದವೇ ಹೊರತು ಎಲ್ಲಾ ಬಗೆಯ ಕ್ರಿಮಿಗಳಿಗಲ್ಲ. ಆದ್ದರಿಂದ ಕ್ರಿಮಿಗಳ ಧಾಳಿಯನ್ನೆದುರಿಸಲು ನಮ್ಮ ಜೀವ ನಿರೋಧಕ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುವುದೇ ಜಾಣತನದ ಕ್ರಮ. ನೆಗಡಿ-ತಲೆನೋವಿಗೆಲ್ಲಾ ವೈದ್ಯರ ಹಂಗೇಕೆ?
ಕೆಮ್ಮು ಶೀತ, ನೆಗಡಿ ಮೊದಲಾದ ಸಾಮಾನ್ಯ ತೊಂದರೆಗಳಿಗೆ ಸೂಕ್ತವಾದ ನೈಸರ್ಗಿಕ ಮತ್ತು ಪ್ರಬಲ ಮದ್ದು ನಮ್ಮ ಅಡುಗೆಮನೆಯಲ್ಲಿಯೇ ಇದೆ. ಇದು ಎಷ್ಟು ಪ್ರಬಲ ಎಂದರೆ ಸಾಮಾನ್ಯ ಮದ್ದುಗಳಿಗೆ ಬಗ್ಗದ ಗಂಟಲ ಬೇನೆ, ಅಸ್ತಮಾ, ಬ್ರಾಂಕೈಟಿಸ್, ಉಸಿರಾಟದ ತೊಂದರೆ ಮೊದಲಾದವುಗಳಿಗೂ ಸೂಕ್ತವಾಗಿದೆ. ಬನ್ನಿ ಈ ಅದ್ಭುತವಾದ ಮನೆಮದ್ದನ್ನು ತಯಾರಿಸುವ ವಿಧಾನ ಹೇಗೆ ಎಂಬುದನ್ನು ಮುಂದೆ ಓದಿ... ಮಕ್ಕಳ ಶೀತ ಶಮನಕ್ಕೆ-ಬಿಸಿ ಬಿಸಿ ಅರಿಶಿನ ಬೆರೆಸಿದ ಹಾಲು

ತಯಾರಿಕೆಯ ವಿಧಾನ
ಇದನ್ನು ತಯಾರಿಸಲು ಬೇಕಾಗಿರುವುದು ಎಂದರೆ ಆರು ಎಸಳು ಬೆಳ್ಳುಳ್ಳಿ, ಅರ್ಧ ಕಪ್ ಜೇನು, ಅರ್ಧ ಕಪ್ ನೀರು, ನಾಲ್ಕು ಚಿಕ್ಕ ಚಮಚ ಸೇಬಿನ ಶಿರ್ಕಾ (apple cider vinegar) ಅಷ್ಟೇ. ಮೊದಲು ಬೆಳ್ಳುಳ್ಳಿಯ ಸಿಪ್ಪೆ ಸುಲಿದು ಜಜ್ಜಿ ಉಳಿದೆಲ್ಲಾ ಸಾಮಾಗ್ರಿಗಳೊಂದಿಗೆ ಚೆನ್ನಾಗಿ ಬೆರೆಸಿ ಪಾತ್ರೆಯನ್ನು ಮುಚ್ಚಿ ಇಡೀ ರಾತ್ರೆ ನೆನೆಸಿಡಬೇಕು. ಮರುದಿನ ಬೆಳಿಗ್ಗೆ ಈ ದ್ರವವನ್ನು ಸೋಸಿ ಇನ್ನೊಂದು ಬಾಟಲಿಯಲ್ಲಿ ಸಂಗ್ರಹಿಸಿ.

ದಿನನಿತ್ಯ ಐದು ಹನಿ ದ್ರವ
ನಿತ್ಯವೂ ಐದು ಹನಿ ದ್ರವವನ್ನು ದಿನದಲ್ಲಿ ನಿಮಗೆ ಸೂಕ್ತವಾದ ಹೊತ್ತಿನಲ್ಲಿ ಸೇವಿಸುತ್ತಾ ಬನ್ನಿ. ರಾತ್ರಿ ಮಲಗುವ ಮುನ್ನ ಆದರೆ ಉತ್ತಮ. ಯಾವುದಾದರೂ ಸೋಂಕು ಇದ್ದಾಗ ಮಾತ್ರ ಪ್ರತಿ ಎರಡು ಗಂಟೆಗೊಮ್ಮೆ ಒಂದು ಚಿಕ್ಕ ಚಮಚದಷ್ಟು ಪ್ರಮಾಣವನ್ನು ಸೇವಿಸುತ್ತಾ ಬನ್ನಿ. ಇದರಿಂದಾಗುವ ಪ್ರಯೋಜನವೇನು ಎಂಬುದನ್ನು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪ್ರಯೋಜನ #1
ಬೆಳ್ಳುಳ್ಳಿ ಒಂದು ಅತ್ಯುತ್ತಮವಾದ ವೈರಸ್ ಮತ್ತು ಬ್ಯಾಕ್ಟೀರಿಯಾ ನಿವಾರಕವಾಗಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಅಪಾರವಾದ ಬೆಂಬಲ ನೀಡುತ್ತದೆ. ಇದರಿಂದ ದೇಹ ವಿವಿಧ ಸೋಂಕುಗಳಿಂದ ರಕ್ಷಣೆ ಪಡೆಯುತ್ತದೆ.

ಪ್ರಯೋಜನ #2
ಜೇನಿನಲ್ಲಿ ವಿವಿಧ ಕಿಣ್ವಗಳು, ವಿಟಮಿನ್ನುಗಳು ಮತ್ತು ಖನಿಜಗಳೂ ಇವೆ. ಅಲ್ಲದೇ ದೇಹದಲ್ಲಿ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಧಾಳಿಯಿಂದ ರಕ್ಷಿಸುತ್ತದೆ. ಜೇನು ಒಂದು ಉತ್ತಮ ಬ್ಯಾಕ್ಟೀರಿಯಾ ನಿರೋಧಕ ಹಾಗೂ ಉರಿಯೂತ ನಿರೋಧಕವಾಗಿರುವ ಕಾರಣ ಹಲವಾರು ಸೋಂಕುಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ.

ಪ್ರಯೋಜನ #3
ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಎಂಬ ಪೋಷಕಾಂಶ ವೈರಸ್ಸುಗಳ ಸಂತತಿ ಬೆಳೆಯದಂತೆ ತಡೆಯಲು ಶಕ್ತವಾಗಿದೆ. ವಾಸ್ತವವಾಗಿ ಈ ಪ್ರಬಲ ದ್ರವದ ಬಹುತೇಕ ಪ್ರಬಲತೆ ಬೆಳ್ಳುಳ್ಳಿಯಿಂದಲೇ ಬಂದಿದೆ.

ಪ್ರಯೋಜನ #4
ಸೇಬಿನ ಶಿರ್ಕಾ ಸಹಾ ಉತ್ತಮ ವೈರಸ್ ನಿವಾರಕ ಹಾಗೂ ಬ್ಯಾಕ್ಟೀರಿಯಾ ನಿವಾರಕವಾಗಿದೆ. ಇದು ಹಲವು ವಿಧದ ಬ್ಯಾಕ್ಟೀರಿಯಾಗಳಿಂದ ರಕ್ಷಣೆ ಒದಗಿಸುತ್ತದೆ.

ಪ್ರಯೋಜನ #5
ಸೇಬಿನ ಶಿರ್ಕಾದಲ್ಲಿ ಕೆಲವು ಖನಿಜಗಳು ಮತ್ತು ಕಿಣ್ವಗಳಿವೆ. ಇವು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿವೆ.

ಪ್ರಯೋಜನ #6
ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು ಋತುಮಾನದ ಬದಲಾವಣೆಯಿಂದ ಆಗಮಿಸುವ ಹೊಸ ವೈರಸ್ಸುಗಳನ್ನು ಎದುರಿಸಲು ದೇಹ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ನೆರವಾಗುವ ಕಾರಣ ಒಂದು ವೇಳೆ ಸೋಂಕು ಎದುರಾದರೂ ಶೀಘ್ರವೇ ಇದರಿಂದ ಹೊರಬರಲು ಸಾಧ್ಯವಾಗುತ್ತದೆ.



Click it and Unblock the Notifications
