Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಜ್ವರ ಶೀತದ ಹುಟ್ಟಡಗಿಸುವ ಪವರ್ ಫುಲ್ ಸೂಪ್...
ಬೇಸಿಗೆಯ ಸಮಯ ಮುಗಿದೆ, ಇನ್ನೇನು ಮಳೆಗಾಲವು ಬಂದು ಮುಂಬಾಗಿಲ ಮುಂದೆ ನಿಂತಿರುವ ಕಾಲ. ಸ್ನೇಹಿತರ ಜೊತೆಗೆ ಅಲ್ಲಿ-ಇಲ್ಲಿ ಸುತ್ತಾಡಬೇಕು ಎಂದು ಮನಸು ಹಾತೊರೆಯುವ ಕಾಲ. ಎಲ್ಲರನ್ನು ಗುಂಪುಕಟ್ಟಿಕೊಂಡು ಒಂದು ಲಾಂಗ್ ಡ್ರೈವ್ ಹೋಗಿ ಬರೋಣ ಎಂದು ಎಷ್ಟು ಬಾರಿ ನೀವು ಹೋಗಿಲ್ಲ. ಹಾಗೆ ಹೋಗಿ ಮನೆಗೆ ಹಿಂತಿರುಗಿದಾಗ ನಿಮಗೆ ಜ್ವರ ಬಂದಿರುವ ದಿನಗಳು ಎಷ್ಟಿಲ್ಲ!
ಅರೆ ಆ ಹಾಳಾದ ಜ್ವರವು ನಿಮ್ಮ ಪ್ರವಾಸದ ಮೋಜು ಮತ್ತು ನೆನಪುಗಳನ್ನೆಲ್ಲಾ ಹಾಳು ಮಾಡಿಬಿಡುತ್ತದೆ. ಇಂತಹ ಅನುಭವ ನಮಗೆ ಎಷ್ಟು ಬಾರಿ ಹಾಗಿಲ್ಲ. ಇಂತಹ ಅನುಭವಕ್ಕೆ ಹೆದರಿಯೇ ಹಲವಾರು ಜನ ಪ್ರವಾಸ ಹೋಗುವುದನ್ನೆ ತಪ್ಪಿಸಿಕೊಳ್ಳುತ್ತಾರೆ. ಕಾಯಿಲೆ ಬಿದ್ದರೆ ಒಂದು ರೀತಿಯ ಬೇಜಾರು, ಕಾಯಿಲೆ ಬರುತ್ತದೆ ಎಂದು ಸ್ನೇಹಿತರ ಜೊತೆಗೆ ಹೋಗಲಿಲ್ಲವಾದರೆ ಅದಕ್ಕೆ ಮತ್ತೊಂದು ರೀತಿಯ ಬೇಸರವನ್ನು ಈ ಸನ್ನಿವೇಶ ನೀಡುತ್ತದೆ. ಕಣ್ಣೀರು ಬರುತ್ತದೆ ಎಂದು ಈರುಳ್ಳಿಯನ್ನು ತಿನ್ನುವುದನ್ನು ಜನ ಬಿಟ್ಟಿದ್ದಾರೆಯೇ? ಹಾಗೆ ಇದೆಲ್ಲ. ವೈರಲ್ ಜ್ವರದಿಂದ ಶೀಘ್ರ ಗುಣಮುಖರಾಗಲು ಒಂದಿಷ್ಟು ಟಿಪ್ಸ್
ಜ್ವರ, ಶೀತ, ವೈರಲ್ ಫ್ಲೂ, ಕೆಮ್ಮು, ಇತ್ಯಾದಿಗಳು ಬಂದಾಗ ಅದನ್ನು ಗುಣಪಡಿಸಲು ನಾವು ಆಂಟಿಬಯೋಟಿಕ್‌ಗಳ ಮೊರೆ ಹೋಗುವುದು ಸಹಜ. ಏಕೆಂದರೆ ಈ ಸನ್ನಿವೇಶದಲ್ಲಿ ನಿಮಗೆ ಬಂದಿರುವ ರೋಗ ಲಕ್ಷಣಗಳನ್ನು ದೂರ ಮಾಡಲು ಅದರಿಂದ ಮಾತ್ರ ಸಾಧ್ಯ.

ಒಂದು ವೇಳೆ ನಿಮ್ಮ ರೋಗ ನಿರೋಧಕ ಶಕ್ತಿಯು ರೋಗಕಾರಕ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಫಲವಾಗದಿದ್ದಲ್ಲಿ, ನೀವು ಆಗಾಗ ಕಾಯಿಲೆ ಬೀಳುತ್ತಲೆ ಇರುತ್ತೀರಿ. ಹಾಗೆ ಕಾಯಿಲೆ ಬಿದ್ದಾಗಲೆಲ್ಲಾ ಪ್ರತಿ ಬಾರಿ ವೈದ್ಯರ ಬಳಿಗೆ ಓಡುವುದು ಎಷ್ಟು ಚೆನ್ನ ಹೇಳಿ.
ಅದರ ಬದಲಿಗೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಿಮ್ಮ ಮನೆಯ ಅಡುಗೆ ಮನೆಗೆ ಹೋಗುವುದು ಉತ್ತಮವಲ್ಲವೇ. ಏಕೆಂದರೆ ಅಲ್ಲಿ ನಿಮ್ಮ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುವ ಹಲವಾರು ಅಂಶಗಳು ಇರುತ್ತವೆ.
ಒಂದು ವೇಳೆ ನೀವು ಜ್ವರ, ಶೀತ, ಕೆಮ್ಮು, ವೈರಲ್ ಫ್ಲೂ ಮುಂತಾದವನ್ನು ಮನೆಯಲ್ಲಿಯೇ ನಿವಾರಿಸಿಕೊಳ್ಳಲು ಬಯಸಿದಲ್ಲಿ, ಶುಂಠಿ, ಬೆಳ್ಳುಳ್ಳಿ ಸೂಪನ್ನು ನೀವು ತಪ್ಪಿಸಿಕೊಳ್ಳುವುದಿಲ್ಲ. ಬನ್ನಿ ಇದನ್ನು ತಯಾರಿಸಲು ಏನು ಬೇಕು ಎಂಬುದನ್ನು ನೋಡೋಣ.
ಇದಕ್ಕೆ ಅಗತ್ಯವಾದ ಪದಾರ್ಥಗಳು:
*ಬೆಳ್ಳುಳ್ಳಿ - 30-40 ತುಂಡುಗಳೂ
*ಶುಂಠಿ - 2 ಕಪ್
*ನಿಂಬೆ ರಸ - 3 ಟೇಬಲ್ ಸ್ಪೂನ್‍ಗಳು ಜ್ವರ ಬಂದಾಗ ತಿನ್ನಬೇಕಾದ ಆಹಾರಗಳಿವು
ಇತ್ತೀಚಿನ ಅಧ್ಯಯನದ ಪ್ರಕಾರ 30-40 ಬೆಳ್ಳುಳ್ಳಿಯ ತುಂಡುಗಳನ್ನು ಹಾಕಿ ಮಾಡಿದ ಸೂಪ್ ಶೀತ, ಫ್ಲೂ ಮತ್ತು ಜ್ವರಕ್ಕೆ ಶೀಘ್ರ ಉಪಶಮನವನ್ನು ನೀಡುತ್ತದೆ ಎಂದು ತಿಳಿದುಬಂದಿದೆ.
ಬೆಳ್ಳುಳಿಯಲ್ಲಿ ಅಲ್ಲಿಸಿನ್ ಎಂಬ ಅಂಶವು ಇರುತ್ತದೆ. ಇದು ಫ್ಲೂ ಮೇಲೆ ಆಂಟಿಬಯೋಟಿಕ್‌ಗಿಂತ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ತಿಳಿದು ಬಂದಿದೆ. 40 ತುಂಡು ಬೆಳ್ಳುಳ್ಳಿಯನ್ನು ಜಜ್ಜಿದಾಗ ಅದರಿಂದ ದೊರೆಯುವ ಅಲ್ಲಿಸಿನ್ ನಿಮ್ಮ ದೇಹದಲ್ಲಿ ಫ್ಲೂಕಾರಕ ಬ್ಯಾಕ್ಟೀರಿಯಾಗಳನ್ನು ಕೊಂದು ಹಾಕುತ್ತದೆ.
ಇದರ ಜೊತೆಗೆ ಶುಂಠಿಯು ಸಹ ಆಂಟಿ ಬ್ಯಾಕ್ಟೀರಿಯಾ ಅಂಶಗಳನ್ನು ಹೊಂದಿದ್ದು, ಕಾಯಿಲೆಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಕೊಂದು ಹಾಕುತ್ತದೆ. ಇದರ ಜೊತೆಗೆ ನಿಂಬೆರಸದಲ್ಲಿ ವಿಟಮಿನ್ ಸಿ ಅಧಿಕವಾಗಿದ್ದು, ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆ ಮೂಲಕ ಇದು ನಿಮಗೆ ಕಾಯಿಲೆಗಳು ಬರದಂತೆ ಕಾಪಾಡುತ್ತವೆ.
ಇದನ್ನು ಹೇಗೆ ತಯಾರಿಸುವುದು?
*ಮೇಲೆ ತಿಳಿಸಿರುವ ಪ್ರಮಾಣದಲ್ಲಿ ಬೇಕಾದ ಪದಾರ್ಥಗಳನ್ನು ತೆಗೆದುಕೊಳ್ಳಿ. ಅದನ್ನು ಒಂದು ಬ್ಲೆಂಡರ್‌ನಲ್ಲಿ ಹಾಕಿ ರುಬ್ಬಿಕೊಳ್ಳಿ. ನಂತರ ಅದನ್ನು ಹೀಟಿಂಗ್ ಪ್ಯಾನ್ ಮೇಲೆ ಸುರಿದುಕೊಳ್ಳಿ. ಇದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಬೇಯಿಸಿ.
*ಆಮೇಲೆ ಕಾಯಿಸುವುದನ್ನು ನಿಲ್ಲಿಸಿ, ಮಿಶ್ರಣವನ್ನು ತಣ್ಣಗಾಗಲು ಐದು ನಿಮಿಷ ಬಿಡಿ.
*ಈಗ ಇದನ್ನು ಚೆನ್ನಾಗಿ ಕಲೆಸಿ, ನಂತರ ಮಿಶ್ರಣವನ್ನು ಬಟ್ಟಲಿಗೆ ಸುರಿಯಿರಿ.
*ಈಗ ಸೂಪ್ ಸೇವಿಸಲು ಸಿದ್ಧವಾಗಿದೆ. ರೋಗ ಲಕ್ಷಣಗಳು ಕಡಿಮೆಯಾಗುವವರೆಗೆ, ಇದನ್ನು ಬೆಳಗ್ಗೆ ಒಂದು ಕಪ್ ಮತ್ತು ಸಂಜೆ ಒಂದು ಕಪ್ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


