For Quick Alerts
ALLOW NOTIFICATIONS  
For Daily Alerts

  ಅಯ್ಯೋ, 'ಈ ನೋವುಗಳ ಮುಂದೆ ಹೆರಿಗೆ ನೋವು ಏನೂ ಅಲ್ಲ!!

  By Manu
  |

  ಈ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ನೋವು ಯಾವುದೆಂದರೆ ಓರ್ವ ತಾಯಿ ಮಗುವಿಗೆ ಜನ್ಮ ನೀಡುವಾಗ ಅನುಭವಿಸುವ ನೋವು. ಆದರೆ ತನ್ನ ಗರ್ಭದಿಂದ ತಳೆಯುವ ಪುಟ್ಟ ಕಂದನ ಆಗಮನದ ನಿರೀಕ್ಷೆ ಈ ನೋವನ್ನು ಮರೆಸಲು ಪ್ರೇರಣೆಯಾಗುತ್ತದೆ. ಆದರೆ ಕೆಲವು ಮಹಿಳೆಯರು ಅನುಭವಿಸುವ ಕೆಲವು ನೋವುಗಳು ಕೇವಲ ನೋವು ಮಾತ್ರವಾಗಿದ್ದು ಯಾವುದೇ ಕಂದನ ನಿರೀಕ್ಷೆ ಇಲ್ಲದೇ ಇರುವ ಕಾರಣ ಇದು ಅತ್ಯಂತ ಅಸಹನೀಯವೂ, ಈ ನೋವಿನಿಂದ ಬಿಡುಗಡೆಯೇ ಸಾಧ್ಯವಿಲ್ಲವೇ ಎಂಬ ನಿಟ್ಟಿನಲ್ಲಿ ಯೋಚಿಸುವಂತೆ ಮಾಡುವ, ಕೆಲವೊಮ್ಮೆ ಆತ್ಮಹತ್ಯೆಗೂ ಪ್ರೇರಣೆಯಾಗುವ ನೋವುಗಳಾಗಿವೆ.   ನೋವು ನಿವಾರಕ ಮಾತ್ರೆ ಪಕ್ಕಕ್ಕಿಡಿ, ಮನೆಮದ್ದು ಪ್ರಯತ್ನಿಸಿ

  ಈ ಮಹಿಳೆಯರು ತಮ್ಮ ನೋವನ್ನು ತೋಡಿಕೊಳ್ಳುವಾಗ 'ಹೆರಿಗೆಯ ನೋವನ್ನಾದರೂ ಸಹಿಸಿಕೊಳ್ಳಬಹುದು, ಈ ನೋವನ್ನು ಮಾತ್ರ ಸಹಿಸಲಿಕ್ಕೇ ಸಾಧ್ಯವಿಲ್ಲ' ಎಂಬ ಉದ್ಗಾರ ತೆಗೆದಾಗ ಈ ನೋವುಗಳು ವಾಸ್ತವವಾಗಿ ಹೆರಿಗೆ ನೋವಿಗಿಂತಲೂ ಹೆಚ್ಚೇ ಎಂಬ ಅನುಮಾನ ಮೂಡುತ್ತದೆ. ಈ ನೋವುಗಳು ದೇಹವನ್ನು ಹಿಂಡಿ ಹಿಪ್ಪೆ ಮಾಡಿ ಜರ್ಝರಿತವಾಗಿಸುವುದು ಮಾತ್ರವಲ್ಲ, ಹಾಸಿಗೆ ಬಿಟ್ಟೇಳದಂತೆ ಮಾಡುತ್ತದೆ. ಬನ್ನಿ, ಇಂತಹ ಕೆಲವು ನೋವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...  

  ಮೈಗ್ರೇನ್ ತಲೆನೋವು

  ಮೈಗ್ರೇನ್ ತಲೆನೋವು

  ತಲೆನೋವೇ ಸಹಿಸಲು ಅಸಾಧ್ಯವಾದ ನೋವಾಗಿದೆ. ಆದರೆ ಇದರ ಅತ್ಯುಗ್ರ ರೂಪವಾದ ಮೈಗ್ರೇನ್ ತಲೆನೋವು ಅನುಭವಿಸುವ ಮಹಿಳೆಯರು ಇದು ಹೆರಿಗೆ ನೋವಿಗಿಂತಲೂ ಮಿಗಿಲಾದದ್ದು ಎಂಬುದಾಗಿ ವರ್ಣಿಸುತ್ತಾರೆ. ಯೋಚನಾ ಶಕ್ತಿಯನ್ನೇ ಉಡುಗಿಸಿಬಿಡುವ ಈ ನೋವು ಕೆಲವು ಗಂಟೆಗಳಿಂದ ಹಿಡಿದು ಕೆಲವು ದಿನಗಳವರೆಗೂ ಕಾಡುತ್ತದೆ. ಜೀವ ಹಿಂಡುವ ಮೈಗ್ರೇನ್ ತಲೆ ನೋವಿಗೆ ತ್ವರಿತ ಮನೆಮದ್ದು

  ಮೈಗ್ರೇನ್ ತಲೆನೋವು

  ಮೈಗ್ರೇನ್ ತಲೆನೋವು

  ಅದರಲ್ಲೂ ತಲೆನೋವು ಉಗ್ರರೂಪದಲ್ಲಿದ್ದಾಗ ಕಣ್ಣಿನ ದೃಷ್ಟಿನ ಕೇಂದ್ರಭಾಗವನ್ನು ಮೆದುಳು ಗ್ರಹಿಸದ ಕಾರಣ ಇದು ಖಾಲಿಜಾಗವಾಗಿರುತ್ತದೆ. ಅಂದರೆ ಈ ಸಮಯದಲ್ಲಿ ಎದುರಿಗಿರುವ ವ್ಯಕ್ತಿಯ ರುಂಡವೇ ಇರುವುದಿಲ್ಲ (blind spot). ವಾಂತಿ ಬಂದಂತಾಗುವುದು, ಆದರೆ ಬರದೇ ಇರುವುದು, ವಿಪರೀತ ವಾಕರಿಕೆ, ಬೆಳಕು ಮತ್ತು ತಾಪಮಾನಕ್ಕೆ ವಿಪರೀತವಾಗಿ ಸಂವೇದಿಸುವುದು, ವಿವೇಚನಾ ಶಕ್ತಿಯನ್ನೇ ಕಳೆದುಕೊಳ್ಳುವುದು ಮೊದಲಾದವು ಇದರ ಲಕ್ಷಣಗಳು.

  ಮೂತ್ರಪಿಂಡದಲ್ಲಿ ಕಲ್ಲುಗಳು

  ಮೂತ್ರಪಿಂಡದಲ್ಲಿ ಕಲ್ಲುಗಳು

  ಮೂತ್ರಪಿಂಡದ ಕಲ್ಲುಗಳು ಒಂದು ನಿರ್ದಿಷ್ಟ ಗಾತ್ರದವರೆಗೆ ಬೆಳೆಯುವವರೆಗೂ ತಮ್ಮ ಇರವನ್ನು ಸೂಚಿಸದೇ ಆ ಗಾತ್ರ ದಾಟಿದ ಬಳಿಕ ಇದು ಮೂತ್ರಪಿಂಡಗಳ ಒಳಗೋಡೆಗಳ ಮೇಲೆ ಒತ್ತಡ ಹೇರಲು ತೊಡಗುತ್ತದೆ. ಒಂದು ವೇಳೆ ಈ ಕಲ್ಲುಗಳು ಕ್ಯಾಲ್ಸಿಯಂ ಸಿಲಿಕೇಟ್ ಅಥವಾ ಆಕ್ಸಲೇಟ್ ಆದರೆ ಪರವಾಗಿಲ್ಲ, ಹೆಚ್ಚಿನ ನೋವು ನೀಡದೇ ವೈದ್ಯರ ಚಿಕಿತ್ಸೆಗೆ ಮಣಿದು ಕರಗಿ ಹೋಗುತ್ತವೆ. ಕಿಡ್ನಿ ಕಲ್ಲುಗಳನ್ನು ದೇಹದಿಂದ ಹೊರಹಾಕುವ ಸೂಪರ್ ಮನೆಮದ್ದುಗಳು

  ಮೂತ್ರಪಿಂಡದಲ್ಲಿ ಕಲ್ಲುಗಳು

  ಮೂತ್ರಪಿಂಡದಲ್ಲಿ ಕಲ್ಲುಗಳು

  ಮೂತ್ರವಿಸರ್ಜನೆಯನ್ನು ಯಾವುದೋ ಕಾರಣದಿಂದ ಹೆಚ್ಚು ಹೊತ್ತು ಮುಂದೂಡುವ ಮಹಿಳೆಯರಿಗೆ ಯೂರಿಕ್ ಆಮ್ಲ ಕಲ್ಲುಗಳು ಕಾಡುತ್ತವೆ. (Uric acid stones). ಈ ಕಲ್ಲುಗಳೂ ಕೊಂಚ ಹೆಚ್ಚಿನ ನೋವು ನೀಡುತ್ತವೆ. ಆದರೆ Struvite stones ಎಂಬ ಕಲ್ಲುಗಳು ವಿಶೇಷವಾಗಿ ಮೂತ್ರನಾಳದ ಸೋಂಕಿಗೆ ಒಳಗಾದ ಮಹಿಳೆಯರಲ್ಲಿ ಕಂಡುಬರುತ್ತದೆ. ಈ ಕಲ್ಲುಗಳು ರಸ್ತೆಯ ಜಲ್ಲಿಕಲ್ಲುಗಳಂತೆ ಹರಿತವಾದ ಅಂಚುಗಳನ್ನು ಹೊಂದಿದ್ದು ಮೂತ್ರಪಿಂಡಗಳ ಮೇಲೆ ಅತೀವವಾದ ನೋವು ನೀಡುತ್ತವೆ. ಈ ನೋವನ್ನು ಅನುಭವಿಸಿದವರು ಹೆರಿಗೆ ನೋವಿಗಿಂತಲೂ ಮಿಗಿಲಾದದ್ದು ಎಂದು ಉದ್ಗರಿಸುತ್ತಾರೆ. ಕಿಡ್ನಿ ಕಲ್ಲು ಕರಗಿಸುವ, ಹಿತ್ತಲ ಗಿಡದ ಮದ್ದು

  ಪಿತ್ತಗಲ್ಲು (Gallstone)

  ಪಿತ್ತಗಲ್ಲು (Gallstone)

  ಪಿತ್ತಕೋಶದಿಂದ ಯಕೃತ್ ಗೆ ಸಂಪರ್ಕ ಒದಗಿಸುವ ನಾಳದಲ್ಲಿ ಚಿಕ್ಕ ಕಲ್ಲೊಂದು ಅಡ್ಡಲಾಗಿದ್ದರೆ ಇದಕ್ಕೆ ಪಿತ್ತಗಲ್ಲು ಎನ್ನುತ್ತಾರೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಈ ಕಲ್ಲು ಚಿಕ್ಕದಾಗಿದ್ದರೂ ಇದು ನೋಡುವ ನೋವು ಮಾತ್ರ ಅಪಾರವಾಗಿದೆ. ಒಂದು ವೇಳೆ ಈ ಕಲ್ಲು ಪಿತ್ತರಸದ ಸ್ರವಿಕೆಗೆ ಅಡ್ಡಿಯಾದರೆ ಇದು ನೀಡುವ ನೋವು ಹೆರಿಗೆ ನೋವನ್ನೂ ಮೀರಿಸುತ್ತದೆ. ಈ ನೋವನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೇ ವೈದ್ಯರಿಗೆ ತಿಳಿಸಿದರೆ ವೈದ್ಯರು ಸೂಚಿಸುವ ಔಷಧಿಯಿಂದ ಈ ಕಲ್ಲು ಕರಗಲು ಸಾಧ್ಯವಾಗುತ್ತದೆ.

  ಮೂತ್ರನಾಳದ ಸೋಂಕು

  ಮೂತ್ರನಾಳದ ಸೋಂಕು

  ಮೂತ್ರನಾಳದ ಮತ್ತು ಪಿತ್ತನಾಳದಲ್ಲಿ ಆಗುವ ಸೋಂಕು ಸಹಾ ಅತಿಯಾದ ನೋವು ನೀಡುತ್ತದೆ. ಈ ನೋವು ಹೆರಿಗೆ ನೋವಿಗಿಂತಲೂ ಹತ್ತು ಪಟ್ಟು ಮಿಗಿಲಾದುದು ಎಂದು ಈ ನೋವು ಅನುಭವಿಸಿದ ಮಹಿಳೆಯರು ತಿಳಿಸುತ್ತಾರೆ. ಈ ಸೋಂಕು ಒಮ್ಮೆ ಪ್ರಾರಂಭವಾದರೆ ಕಡಿಮೆಯಾಗುವ ಮಾತೇ ಇಲ್ಲ, ಏನಿದ್ದರೂ ಏರುತ್ತಾ ಹೋಗುವುದು ಅಷ್ಟೇ. ತಕ್ಷಣವೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ತೆಗೆದುಕೊಳ್ಳುವ ಮೂಲಕ ಮಾತ್ರವೇ ನೋವು ಕಡಿಮೆಯಾಗಲು ಸಾಧ್ಯ.ಮೂತ್ರನಾಳದ ಸೋಂಕಿಗೆ, ಒಂದು ಗ್ಲಾಸ್ ಕ್ರ್ಯಾನ್ಬೆರಿ ಜ್ಯೂಸ್ ಕುಡಿಯಿರಿ

  ಹಲ್ಲುಗಳ ಬೇರಿನ ಶಸ್ತ್ರಚಿಕಿತ್ಸೆ

  ಹಲ್ಲುಗಳ ಬೇರಿನ ಶಸ್ತ್ರಚಿಕಿತ್ಸೆ

  ಹಲ್ಲುಗಳು ಮತ್ತು ಒಸಡುಗಳ ಸೋಂಕು ಒಂದು ವೇಳೆ ಒಸಡಿನ ಆಳಕ್ಕೆ ಇಳಿದಿದ್ದರೆ ದಂತವೈದ್ಯರು ಹಲ್ಲುಗಳ ಬೇರಿನ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ. (root canal surgery) ಈ ಚಿಕಿತ್ಸೆ ಅತಿ ಸೂಕ್ಷ್ಮಸಂವೇದಿಯೂ, ವೈದ್ಯರು ಅತಿ ನಾಜೂಕಿನಿಂದ ನಡೆಸಬೇಕಾದ ಚಿಕಿತ್ಸೆಯಾಗಿದೆ. ಈ ಭಾಗದಲ್ಲಿ ನರಗಳ ತುದಿಗಳು ಅತಿ ಹೆಚ್ಚಿನ ಸಂವೇದಿಯಾಗಿರುವ ಕಾರಣ ನೋವು ಸಹಾ ಹೆಚ್ಚಾಗಿರುತ್ತದೆ. ಎಷ್ಟು ಎಂದರೆ ಹೆರಿಗೆ ನೋವಿನ ಎರಡರಷ್ಟು ಎಂದು ಮಹಿಳೆಯರು ತಿಳಿಸುತ್ತಾರೆ. ಹುಷಾರ್, ಹಲ್ಲುಗಳ ಜೊತೆ ಎಂದೂ ಆಟವಾಡಬೇಡಿ..!

  ಸಂಧಿವಾತ (gout)

  ಸಂಧಿವಾತ (gout)

  ಮೂಳೆಗಳ ಸಂಧುಗಳಲ್ಲಿ ಸೋಂಕು ಉಂಟಾಗುವ ಕಾರಣ ಎದುರಾಗುವ ನೋವು ಅತೀವವಾಗಿದ್ದು ಹೆರಿಗೆ ನೋವಿಗಿಂತಲೂ ಭೀಕರ ಎಂದು ಅನುಭವಿಸುವ ಮಹಿಳೆಯರು ತಿಳಿಸುತ್ತಾರೆ. ಒಂದು ಹೆಜ್ಜೆಯನ್ನೂ ಇಡಲು ಸಾಧ್ಯವಾಗದ, ಚಮಚವನ್ನೂ ಹಿಡಿಯಲು ಸಾಧ್ಯವಾಗದ ಅಸಹಾಯಕತೆ ನೋವಿಗಿಂತಲೂ ಜೀವನವನ್ನೇ ನಿರಾಶಾವಾದದತ್ತ ದೂಡುತ್ತದೆ. ಸಂಧಿವಾತಕ್ಕೆ ಮನೆಮದ್ದು ಇರುವಾಗ, ವೈದ್ಯರ ಹಂಗೇಕೆ?

  ಚಂದ್ರನಾಡಿಯ ಸೋಂಕು

  ಚಂದ್ರನಾಡಿಯ ಸೋಂಕು

  Clitoral hood cyst ಎಂದು ಕರೆಯಲ್ಪಡುವ ಈ ಸೋಂಕು ಒಂದು ಚಿಕ್ಕ ಕೀವುಭರಿತ ಗುಳ್ಳೆಯಿಂದ ಪ್ರಾರಂಭವಾದರೂ ಇದು ನೀಡುವ ನೋವು ಅತ್ಯಂತ ಭೀಕರವಾಗಿದ್ದು ಹೆರಿಗೆ ನೋವಿಗಿಂತಲೂ ಹೆಚ್ಚಾಗಿರುತ್ತದೆ. ಈ ನೋವು ಅನುಭವಿಸುವ ಮಹಿಳೆಯರು ನಡೆಯಲೂ ಆಗದೆ, ಕುಳಿತುಕೊಳ್ಳಲೂ ಆಗದೇ, ನಿಲ್ಲಲೂ ಆಗದೇ, ನಿತ್ಯಕರ್ಮಗಳನ್ನೂ ಪೂರೈಸಲಾಗದೇ ಅನುಭವಿಸುವ ಪಾಡು ಯಾವ ವೈರಿಗೂ ಬೇಡ, ಇದಕ್ಕಿಂತ ಸಾವೇ ಮೇಲು ಎಂಬ ಭಾವನೆ ಅವರಲ್ಲಿ ಮೂಡುತ್ತದೆ.

   

  English summary

  Things More Painful Than Childbirth

  Women who go through childbirth say that it is the most painful experience that they have been through. Being in labour and the whole delivery process can be very painful. However, there are certain women who have been through harrowing painful experiences and they say that it is worse than childbirth. Let us discuss these.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more