For Quick Alerts
ALLOW NOTIFICATIONS  
For Daily Alerts

ನೋವು ನಿವಾರಕ ಮಾತ್ರೆ ಪಕ್ಕಕ್ಕಿಡಿ, ಮನೆಮದ್ದು ಪ್ರಯತ್ನಿಸಿ

By Deepu
|

ನಿತ್ಯವೂ ನಮಗೆಲ್ಲಾ ಒಂದಲ್ಲಾ ಒಂದು ರೀತಿಯ ನೋವುಗಳು ಕಾಡುತ್ತಲೇ ಇರುತ್ತವೆ. ತಲೆನೋವು, ಮೈ ಕೈ ನೋವು, ಹಲ್ಲುನೋವು, ಮಂಡಿ ನೋವು, ತಲೆನೋವು, ಹೀಗೆ ತಮ್ಮ ದಿನನಿತ್ಯ ಜೀವನದಲ್ಲಿ ಕೆಲವರು ಸತತ ನೋವು ಅನುಭವಿಸುತ್ತಲೇ ಇರುತ್ತಾರೆ. ಇವೆಲ್ಲಾ ದೈಹಿಕ ನೋವುಗಳಾದರೆ ಮಾನಸಿಕವಾದ ನೋವು ಇನ್ನೊಂದು ತರಹದ್ದು. ದುಃಖ, ವಿರಹ, ಸೋಲು, ಹತಾಶೆ, ನಷ್ಟ, ನಂಬಿಕೆದ್ರೋಹ, ವಿಶ್ವಾಸದ್ರೋಹ

ಮೊದಲಾದವು ಮಾನಸಿಕ ನೋವುಗಳನ್ನು ನೀಡುತ್ತವೆ. ಈ ನೋವುಗಳನ್ನು ಶಮನಗೊಳಿಸಲು ಯಾವುದೇ ಸಿದ್ಧೌಷಧವಿಲ್ಲ. ಅದು ಏನೇ ಇರಲಿ, ಆದರೆ ದೈಹಿಕ ನೋವುಗಳಿಗೆ ಔಷಧಿಗಳು ಲಭ್ಯವಿವೆ. ಸಾಮಾನ್ಯವಾಗಿ ಕೆಲವೊಂದು ನೋವು ತುಂಬಾ ದಿನಗಳ ಕಾಲ ಇರುತ್ತದೆ. ಉದಾಹರಣೆಗೆ, ಮಂಡಿ ನೋವು, ಮೈಗ್ರೇನ್ ತಲೆನೋವು, ಮೂಳೆ ಮುರಿತ, ಹೊಟ್ಟೆ ನೋವು, ಹುಳುಕು, ಬೆನ್ನು ನೋವು ಪದೇ ಪದೇ ಕಾಡುತ್ತದೆ. ತೀವ್ರತರನಾದ ನೋವು ಎಂತಹವರನ್ನು ಸಹ ಕಂಗೆಡಿಸಿಬಿಡುತ್ತದೆ. ಆಗ ವಿಧಿಯಿಲ್ಲದೆ ಇವರು ನೋವು ನಿವಾರಕಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸ್ತುತಾರೆ.

ಆದರೆ ಇವುಗಳನ್ನು ಪ್ರತಿದಿನ ಸೇವಿಸುವುದರಿಂದಾಗಿ ಅದು ಮುಂದೆ ಅಭ್ಯಾಸವಾಗಿ, ಚಟವಾಗಿ ಅಂಟಿಕೊಳ್ಳುವ ಅಪಾಯವಿರುತ್ತದೆ. ಇದು ನಿಮ್ಮ ಮೂತ್ರಪಿಂಡ ಮತ್ತು ಲಿವರ್‍‌ಗೆ ಹಾನಿ ಮಾಡುತ್ತದೆ. ಇಂತಹ ಮಾತ್ರೆಗಳನ್ನು ಸೇವಿಸುವ ಬದಲಿಗೆ ಸ್ವಾಭಾವಿಕವಾಗಿ ಈ ನೋವನ್ನು ನಿವಾರಣೆ ಮಾಡಿಕೊಳ್ಳಲು ನಾವು ಇಂದು ಕೆಲವೊಂದು ಮಾರ್ಗೋಪಾಯಗಳನ್ನು ತಿಳಿಸುತ್ತೇವೆ. ಬನ್ನಿ ಅವು ಯಾವುವು ಎಂದು ನೋಡೋಣ....

ಹೀಟ್ ಥೆರಪಿ

ಹೀಟ್ ಥೆರಪಿ

ಶಾಖವು ನೋವನ್ನು ನಿವಾರಣೆ ಮಾಡುತ್ತದೆ ಎಂಬುದು ಅಜ್ಜಿಯರ ಕಾಲದಿಂದ ತಿಳಿದಿರುವ ವಿಚಾರವೇ. ಅದನ್ನೇ ವ್ಯವಸ್ಥಿತವಾಗಿ ಮಾಡಿ. ಈ ಶಾಖವು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ರಕ್ತವು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ನೋವಿರುವ ಭಾಗಕ್ಕೆ ಸಾಗಿಸುತ್ತದೆ. ಹೀಗೆ ಇದು ನೋವನ್ನು ನಿವಾರಣೆ ಮಾಡುತ್ತದೆ. ಬಿಸಿ ನೀರಿನ ಬಾಟಲ್ ಅಥವಾ ಎಲೆಕ್ಟ್ರಿಕ್ ಹೀಟಿಂಗ್ ಪ್ಯಾಡ್ ಮೂಲಕ ನೋವಿರುವ ಭಾಗಕ್ಕೆ ನೀವು ಶಾಖವನ್ನು ನೀಡಬಹುದು.

ಅರಿಶಿನಪುಡಿ ಸೇರಿಸಿದ ಹಾಲು ಸೇವಿಸಿ

ಅರಿಶಿನಪುಡಿ ಸೇರಿಸಿದ ಹಾಲು ಸೇವಿಸಿ

ರಾತ್ರಿ ಮಲಗುವ ಮುನ್ನ ಅರಿಶಿನಪುಡಿ ಸೇರಿಸಿದ ಹಾಲನ್ನು ಬಿಸಿಯಾಗಿ ಕುಡಿದು ಮಲಗುವುದರಿಂದ ಇಡಿಯ ದೇಹದ ಸ್ನಾಯುಗಳ ನೋವು ಅಥವಾ ಮೈ ಕೈ ನೋವು ಕಡಿಮೆಯಾಗುತ್ತದೆ. ಅರಿಶಿನದ ಉರಿಯೂತ ನಿವಾರಕ ಗುಣ ಜಖಂಗೊಂಡಿದ್ದ ಅಂಗಾಂಶಗಳನ್ನು ಪುನಾರಚಿಸಲು ಮತ್ತು ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ.

ಮೈ ಕೈ ನೋವು ಕಾಡುತ್ತಿದ್ದರೆ...

ಮೈ ಕೈ ನೋವು ಕಾಡುತ್ತಿದ್ದರೆ...

ಹೆಚ್ಚಿನ ದೈಹಿಕ ಕೆಲಸಗಳನ್ನು ಮಾಡದೇ ಇದ್ದರೂ ಮೈ ಕೈ ನೋವು ಕಾಡುತ್ತಿದ್ದರೆ ಇದಕ್ಕೆ ಮಗ್ನೀಶಿಯಂ ಕೊರತೆ ಕಾರಣವಾಗಿರಬಹುದು. ಈ ಸ್ಥಿತಿಯಲ್ಲಿ ಮೆಗ್ನೀಶಿಯಂ ಹೆಚ್ಚಿರುವ ಆಹಾರಗಳನ್ನು ಸೇವಿಸುವುದೇ ಉತ್ತಮ ಪರಿಹಾರವಾಗಿದೆ. ಬೆಣ್ಣೆಹಣ್ಣು, ಹಸಿರು ಸೊಪ್ಪು, ಮೀನು, ಒಣಫಲಗಳು ಮತ್ತು ಕಪ್ಪು ಚಾಕಲೇಟಿನಲ್ಲಿ ಮೆಗ್ನೀಶಿಯಂ ಹೇರಳವಾಗಿದ್ದು ಇವುಗಳ ಸೇವನೆಯಿಂದ ಮೈ ಕೈ ನೋವು ಕಡಿಮೆಯಾಗುತ್ತದೆ.

ಹಲ್ಲುನೋವು ಕಾಡುತ್ತಿದ್ದರೆ

ಹಲ್ಲುನೋವು ಕಾಡುತ್ತಿದ್ದರೆ

ಒಸಡುಗಳಲ್ಲಿ ಸಂಗ್ರಹವಾದ ಆಹಾರ ಕೊಳೆತು ಬ್ಯಾಕ್ಟೀರಿಯಾಗಳು ಮನೆಮಾಡಿಕೊಂಡಿದ್ದರೆ ಆ ಭಾಗದಲ್ಲಿ ಆಗಾಧವಾದ ನೋವು ಉಂಟುಮಾಡುತ್ತದೆ. ಲವಂಗದ ಎಣ್ಣೆಯನ್ನು ಅದ್ದಿದ ಹತ್ತಿಯನ್ನು ನೋವಿರುವ ಜಾಗಕ್ಕೆ ಒರೆಸಿ ಆ ಹತ್ತಿಯನ್ನು ಅಲ್ಲಿಯೇ ಇರುವಂತೆ ಕಚ್ಚಿ ಹಿಡಿಯುವುದರಿಂದ ನೋವು ಶಮನವಾಗುತ್ತದೆ. ಲವಂಗದಲ್ಲಿರುವ eugenol ಎಂಬ ಪೋಷಕಾಂಶವು ಸಂವೇದನ ಹಾರಿ ಗುಣ ಹೊಂದಿದ್ದು ಬ್ಯಾಕ್ಟೀರಿಯಾಗಳಿಂದಾದ ಸೋಂಕು ಮತ್ತು ನೋವನ್ನು ಶಮನಗೊಳಿಸುವ ಶಕ್ತಿ ಹೊಂದಿದೆ. ಇದು ಒಸಡಿನಲ್ಲಿರುವ ನರಾಗ್ರಗಳನ್ನು ತಾತ್ಕಾಲಿಕವಾಗಿ ಸ್ತಬ್ಧಗೊಳಿಸಿ ನೋವಿನ ಸೂಚನೆಯನ್ನು ಮೆದುಳಿಗೆ ತಲುಪಿಸದಂತೆ ತಡೆಯುತ್ತದೆ.

ಸಂಧಿವಾತ (Arthritis)

ಸಂಧಿವಾತ (Arthritis)

ಮೂಳೆಗಳ ಸಂಧಿಯಲ್ಲಿ, ವಿಶೇಷವಾಗಿ ಬೆರಳುಗಳ ಸಂಧಿಗಳಲ್ಲಿ ಸೋಂಕು ಉಂಟಾಗಿದ್ದು ನೋವು ಕಾಣಿಸಿಕೊಂಡಿದ್ದರೆ ಹಸಿಶುಂಠಿ ಸೇರಿಸಿ ಮಾಡಿದ ಹಸಿರು ಟೀ ಉತ್ತಮ ಪರಿಹಾರ ನೀಡುತ್ತದೆ. ಜೊತೆಗೇ ಇದು ಪೆಡಸಾಗಿದ್ದ ಸ್ನಾಯುಗಳನ್ನು ಸಡಿಲಿಸಿ ನೋವು ನಿವಾರಣೆಯಾಗಲು ಮತ್ತು ನಿತ್ಯದ ಕೆಲಸಗಳನ್ನು ಸುಲಭವಾಗಿ ನಿರ್ವಹಿಸಲು ನೆರವಾಗುತ್ತದೆ.

ಪುದಿನಾ ಅಗಿಯಿರಿ

ಪುದಿನಾ ಅಗಿಯಿರಿ

ಪುದಿನಾವನ್ನು ಅಗಿಯುವುದರಿಂದ ಉಸಿರಿನ ದುರ್ವಾಸನೆಯನ್ನು ತಡೆಯಬಹುದು. ಇದರ ಜೊತೆಗೆ ಸ್ನಾಯುಗಳಲ್ಲಿನ ಸಮಸ್ಯೆಗಳಿಗೆ ಮತ್ತು ರೋಗಗಳಿಗು ಸಹ ಇದು ರಾಮಬಾಣ. ಪುದಿನಾ ಎಣ್ಣೆಯು ತಲೆನೋವಿಗೆ ಅತ್ಯುತ್ತಮ ಔಷಧಿ, ಹಾಗಾಗಿ ಇದನ್ನು ಗಿಡಮೂಲಿಕೆಯ ಅಸ್ಪಿರಿನ್ ಎಂದು ಕರೆಯುತ್ತಾರೆ

ಬೆನ್ನು ನೋವು

ಬೆನ್ನು ನೋವು

ಬೆನ್ನು ನೋವು ಕಾಡುತ್ತಿದ್ದರೆ, ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಹೇರಳವಾಗಿರುವಂತೆ ನೋಡಿಕೊಳ್ಳಿ. ಇದರಿಂದ ನಿಮ್ಮ ಬೆನ್ನುನೋವು ಶೀಘ್ರವಾಗಿ ಕಡಿಮೆಯಾಗುವುದು. ಹಸಿರು ಸೊಪ್ಪು, ಮೊಟ್ಟೆ, ಹಾಲು, ಬಾಳೆಹಣ್ಣು, ಒಣಫಲಗಳು, ಸೇಬು, ಅಂಜೂರ ಮೊದಲಾದವುಗಳಲ್ಲಿ ಕ್ಯಾಲ್ಸಿಯಂ ಹೇರಳವಾಗಿರುತ್ತದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ನಮಗೆ ನೇರವಾಗಿ ಲಭ್ಯವಾಗದೇ ಇರುವುದರಿಂದ ಬಿಸಿಹಾಲಿಗೆ ಕೊಂಚ ಜೇನನ್ನು ಸೇರಿಸಿ ಕುಡಿಯುವುದರಿಂದ ಉತ್ತಮ ಪರಿಣಾಮವನ್ನು ಪಡೆಯಬಹುದು.

English summary

Pain Relief Without Painkillers

There are some effective natural ways to manage your pain without using pain killers. Have a look at some of the ways to relieve pain naturally.
Story first published: Wednesday, March 16, 2016, 20:35 [IST]
X
Desktop Bottom Promotion