ಸೈಲೆಂಟಾಗಿ ಕಾಡುವ ಚರ್ಮದ ಸಮಸ್ಯೆ! ನಿರ್ಲಕ್ಷಿಸದಿರಿ....

By Hemanth

ಚರ್ಮವನ್ನು ನೋಡಿದರೆ ದೇಹದ ಆರೋಗ್ಯವನ್ನು ಹೇಳಬಹುದು. ಚರ್ಮವು ಕಾಂತಿಯುತವಾಗಿ ಆರೋಗ್ಯವಾಗಿದ್ದರೆ ಆಗ ದೇಹವು ಆರೋಗ್ಯವಾಗಿದೆ ಎಂದು ಹೇಳಬಹುದು. ದೇಹವನ್ನು ಹೊರಗಿನಿಂದ ರಕ್ಷಿಸುವಂತಹ ಚರ್ಮವು ಹಲವಾರು ಪದರಗಳನ್ನು ಹೊಂದಿದೆ. ಚರ್ಮವು ಕೂಡ ಕೆಲವೊಂದು ಸಂದರ್ಭಗಳಲ್ಲಿ ನಿರ್ಜೀವವಾದಂತೆ ಕಾಣುವುದು, ನೆರಿಗೆ ಬೀಳುವುದು ಹಾಗೂ ಇತರ ಹಲವಾರು ಸಮಸ್ಯೆಗಳು ಚರ್ಮವನ್ನು ಕಾಡುತ್ತದೆ.

Blood test

ಆದರೆ ಇದು ಕೆಲವೊಂದು ರೋಗಗಳ ಲಕ್ಷಣಗಳಾಗಿರಬಹುದು ಎಂದು ನಾವು ತಿಳಿದುಕೊಳ್ಳಬೇಕು. ಚರ್ಮದಲ್ಲಿ ಇಂತಹ ಸಮಸ್ಯೆಗಳಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆಗಳನ್ನು ಪಡೆಯಬೇಕು. ಚರ್ಮದ ಸಮಸ್ಯೆಯನ್ನು ಅರಿತುಕೊಂಡು ಅದರ ಬಗ್ಗೆ ಎಚ್ಚರಿಕೆ ವಹಿಸಿದರೆ ತುಂಬಾ ಒಳ್ಳೆಯದು. ಈ ಲೇಖನದಲ್ಲಿ ಚರ್ಮವು ಯಾವ ಗಂಭೀರ ಸಮಸ್ಯೆಯನ್ನು ಸೂಚಿಸುತ್ತದೆ ಎಂದು ತಿಳಿದುಕೊಳ್ಳಬಹುದು. ತ್ವಚೆಯ ಸಮಸ್ಯೆ ನಿವಾರಣೆಗೆ ಆಯುರ್ವೇದ ಚಿಕಿತ್ಸೆ

ಚರ್ಮವು ಒಣಗಿದಂತೆ ಆಗಿ ನಿಶ್ಯಕ್ತಿ, ಆಯಾಸ, ಉಗುರುಗಳು ದುರ್ಬಲವಾಗುವುದು, ಮನಸ್ಥಿತಿ ಬದಲಾಗುವುದು, ಖಿನ್ನತೆ, ಮಲಬದ್ಧತೆ ಮತ್ತು ಹಠಾತ್ ಆಗಿ ತೂಕ ಕಳೆದುಕೊಳ್ಳುವುದು ಅಥವಾ ತೂಕ ಹೆಚ್ಚಾಗುವುದು ಇದೆಲ್ಲವೂ ಹೈಪರ್ಥೈರಾಯ್ಡ್ ಅಥವಾ ಥೈರಾಯ್ಡ್‌ನ ಸಮಸ್ಯೆಯಾಗಿರಬಹುದು. ತಕ್ಷಣ ನೀವು ವೈದ್ಯರನ್ನು ಭೇಟಿಯಾಗಿ ಸರಿಯಾಗಿ ಚಿಕಿತ್ಸೆ ಪಡೆಯಿರಿ.

ಚರ್ಮದಲ್ಲಿ ಕೆಂಪು ಕಲೆಗಳು ಕಂಡು ಬಂದರೆ ನಿಮಗೆ ಸೋರಿಯಾಸಿಸ್ ಆಗಿದೆಯೆಂದು ಹೇಳಬಹುದು. ತಕ್ಷಣ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಯಾಕೆಂದರೆ ಇದರಿಂದ ರಕ್ತದೊತ್ತಡ, ಮಧುಮೇಹ ಮತ್ತು ಹೃದಯದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. 'ಥೈರಾಯಿಡ್ ಗ್ರಂಥಿ ಸಮಸ್ಯೆ'-ಅಪಾಯ ಬೆನ್ನ ಹಿಂದೆಯೇ ಇದೆ!

ಚರ್ಮವು ಪೇಲವವಾಗುತ್ತಾ ದೇಹದಲ್ಲಿ ಬಳಲಿಕೆ ಮತ್ತು ನಿಶ್ಯಕ್ತಿಯಿದ್ದರೆ ಆಗ ನೀವು ರಕ್ತಹೀನತೆಯಿಂದ ಬಳಲುತ್ತಾ ಇದ್ದೀರಿ ಎಂದು ಹೇಳಬಹುದು. ಇದು ತುಂಬಾ ಗಂಭೀರ ಸಮಸ್ಯೆಯಾಗಿದೆ. ಇದರ ಬಗ್ಗೆ ನೀವು ವೈದ್ಯರನ್ನು ಭೇಟಿಯಾಗಿ.

ಚರ್ಮದಲ್ಲಿ ಕಪ್ಪು ಕಲೆಗಳು ಇದ್ದು ಆ ಜಾಗವು ತುಂಬಾ ನಯವಾಗಿದ್ದರೆ ನೀವು ಮಧುಮೇಹದಿಂದ ಬಳಲುತ್ತಾ ಇದ್ದೀರಿ ಎಂದು ಹೇಳಬಹುದು. ಇದು ಮಧುಮೇಹಕ್ಕೆ ಮೊದಲಿನ ಲಕ್ಷಣವಾಗಿದೆ. ಇದು ದೇಹದಲ್ಲಿ ಇನ್ಸುಲಿನ್‌ನ ಪ್ರತಿರೋಧದ ಲಕ್ಷಣವಾಗಿದೆ. ಇದಕ್ಕೆ ನೀವು ತಕ್ಷಣ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಒಳ್ಳೆಯದು.....

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

These Skin Conditions Signal Serious Health Issues

Today in this article we shall discuss certain skin conditions that could signal certain serious health issues. Having the ability to identify a skin condition is the first step towards finding out the best way to take care of the situation....
Story first published: Wednesday, December 21, 2016, 23:44 [IST]
X
Desktop Bottom Promotion