For Quick Alerts
ALLOW NOTIFICATIONS  
For Daily Alerts

  ಬಟ್ಟೆಯ ಬಂಧನವಿಲ್ಲದೇ ಮಲಗಿದರೆ, ಹತ್ತಾರು ಲಾಭ!

  By Manu
  |

  ಆಹಾರ, ಸೂರು ಹಾಗೂ ಉಡುಪು ಮಾನವರಿಗೆ ಅತ್ಯಗತ್ಯವಾದ ಪ್ರಾಥಮಿಕ ಅವಶ್ಯಕತೆಗಳಾಗಿವೆ. ಸಮಾಜಜೀವಿಯಾದ ಮಾನವರು ಒಬ್ಬರನ್ನೊಬ್ಬರು ಸಂದರ್ಶಿಸುವಾಗ ಸೂಕ್ತವಾದ ಉಡುಪು ತೊಡುವುದು ಸಂಪ್ರದಾಯವಾಗಿದೆ. ಆದರೆ ಪ್ರಕೃತಿ ಮಾನವನನ್ನು ಉಡುಪಿನೊಂದಿಗೆ ಸೃಷ್ಟಿಸಿಲ್ಲ. ದಿನವಿಡೀ ಉಡುಪು ತೊಟ್ಟಿರುವ ಮೂಲಕ ನಾವು ನಿಧಾನವಾಗಿ ಪ್ರಕೃತಿಯ ನಿಯಮಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದೇವೆ.

  ದಿನವಿಡೀ ಅಲ್ಲದಿದ್ದರೂ ನಾವು ಏಕಾಂತದಲ್ಲಿರುವಾಗ ಹುಟ್ಟುಡುಗೆ ಉಡುವುದರ ಮೂಲಕ ಪ್ರಕೃತಿ ನಮಗೆ ನೀಡಿದ ಸ್ವಾಭಾವಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಆದರೆ ಬುದ್ಧಿ ತಿಳಿದಾಗಿನಿಂದಲೂ ದಿನವಿಡೀ ಉಡುಪು ತೊಟ್ಟೇ ಬೆಳೆದಿರುವ ನಮಗೆ ಈ ವಿಷಯ ಸುಲಭವಾಗಿ ಅರ್ಥವಾಗಲಾರದು. ಆದರೆ ಇದು ಅಗತ್ಯ ಎಂದು ಆಧುನಿಕ ವಿಜ್ಞಾನ ಹಲವು ಸಂಶೋಧನೆಗಳ ಮೂಲಕ ಸಾಬೀತುಪಡಿಸಿದೆ. ಈಗಾಗಲೇ ನಾವು ಆಧುನಿಕತೆಯ ಭರದಲ್ಲಿ ಹಲವು ವಿಷಯಗಳಲ್ಲಿ ನಿಸರ್ಗಕ್ಕೆ ವಿರೋಧವಾಗಿ ನಡೆದುಕೊಳ್ಳುತ್ತಿದ್ದೇವೆ. ಬೇಸಿಗೆಯಲ್ಲಿ ಒಳ ಉಡುಪು ಧರಿಸದಿರುವುದೇ ಒಳ್ಳೆಯದಂತೆ!

  ತಡರಾತ್ರಿಯವರೆಗೆ ಎಚ್ಚರವಾಗಿರುವುದು, ಬೆಳಿಗ್ಗೆ ಬೇಗನೇ ಏಳದೇ ಇರುವುದು, ಅತಿಹೆಚ್ಚು ಆಹಾರ ಸೇವನೆ, ಇಲ್ಲವಾಗಿರುವ ವ್ಯಾಯಾಮ, ಆರೋಗ್ಯಕರ ಫಲಾಹಾರಗಳ ಬದಲಿಗೆ ಅನಾರೋಗ್ಯಕರ ಫಾಸ್ಟ್ ಫುಡ್ ಸೇವನೆ, ಸಮಯಕ್ಕೆ ಸರಿಯಾದ ಆಹಾರ ತೆಗೆದುಕೊಳ್ಳದೇ ಇರುವುದು, ದೇಹಕ್ಕೆ ಅನುಕೂಲಕರವಲ್ಲದ ಉಡುಪು ತೊಡುವುದು, ಪಾದಗಳಿಗೆ ಸೂಕ್ತವಲ್ಲದ ಹೈ ಹೀಲ್ಡ್ ಪಾದರಕ್ಷೆ ಧರಿಸುವುದು ಇತ್ಯಾದಿ, ಹತ್ತು ಹಲವು ವಿಷಯಗಳಲ್ಲಿ ನಾಗರಿಕತೆ ನಮ್ಮ ದೇಹದ ನೈಸರ್ಗವನ್ನೇ ಬದಲಿಸಿಬಿಟ್ಟಿದೆ. ತತ್ಪರಿಣಾಮವಾಗಿ ಹಲವು ತೊಂದರೆಗಳು ಶರೀರವನ್ನು ಬಾಧಿಸುತ್ತಿವೆ.

  ಇವುಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ನಿಸರ್ಗದ ಬಳಿ ಬರುವುದೇ ಅತ್ಯುತ್ತಮ ಪರಿಹಾರವಾಗಿದೆ. ಸಾಕಷ್ಟು ನಿದ್ದೆ, ಉತ್ತಮ ಆಹಾರ, ಸಮರ್ಪಕ ಉಡುಗೆ, ಸರಳತೆಯಲ್ಲಿ ತೃಪ್ತಿ, ಅಗತ್ಯವಿದ್ದಷ್ಟು ವ್ಯಾಯಾಮ ಮೊದಲಾದವು ಆರೋಗ್ಯದಲ್ಲಿ ಧನಾತ್ಮಕ ಪರಿಣಾಮ ಬೀರಿ ಜೀವನದಲ್ಲಿ ಶಾಂತಿ, ನೆಮ್ಮದಿ ಮರಳುತ್ತವೆ, ಉತ್ತಮ ಆರೋಗ್ಯ ನಮ್ಮದಾಗುತ್ತದೆ. ಇದೇ ನಿಟ್ಟಿನಲ್ಲಿ ರಾತ್ರಿ ಮಲಗುವಾಗ ಹುಟ್ಟುಡುಗೆಯಲ್ಲಿ ಪವಡಿಸುವುದರಿಂದ ಹಲವು ಪ್ರಯೋಜನಗಳಿವೆ. ಅವುಗಳಲ್ಲಿ ಪ್ರಮುಖವಾದ ಹತ್ತು ಪ್ರಯೋಜನಗಳನ್ನು ಕೆಳಗೆ ವಿವರಿಸಲಾಗಿದೆ....

  ಗಾಢವಾದ ನಿದ್ದೆ

  ಗಾಢವಾದ ನಿದ್ದೆ

  ಮಲಗಿದ ಕೂಡಲೇ ನಿದ್ದೆಗೆ ಜಾರುವ ಅದೃಷ್ಟಶಾಲಿಗಳು ಕೆಲವರು ಮಾತ್ರ. ಇನ್ನುಳಿದಂತೆ ನಮಗೆಲ್ಲಾ ನಿದ್ದೆ ಬರಲು ಕೊಂಚ ಕಾಲ ಬೇಕು. ಶಯನಕಾಲಕ್ಕೆಂದೇ ಹಲವು ಉಡುಪುಗಳು ಲಭ್ಯವಿದ್ದರೂ ಎಲ್ಲೋ ಒಂದೆಡೆ, ಯಾವುದೋ ಒಂದು ಭಂಗಿಯಲ್ಲಿ ಬಟ್ಟೆ ದೇಹಕ್ಕೆ ಕೊಂಚವಾದರೂ ಅಡಚಣೆ ಮಾಡಿಯೇ ಇರುತ್ತದೆ. ಆದರೆ ಹುಟ್ಟುಡುಗೆಯಲ್ಲಿ ಯಾವುದೇ ಬಂಧನವಿರದ ಕಾರಣ ಇಡಿಯ ದೇಹ ಅತ್ಯಂತ ಸಡಿಲ ಸ್ಥಿತಿಯಲ್ಲಿ ಪೂರ್ಣವಾದ ವಿಶ್ರಾಂತಿ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಮಂಪರು ಆಕ್ರಮಿಸಿ ಗಾಢವಾದ ನಿದ್ದೆಗೆ ಜಾರಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ.

  ಹೆಚ್ಚುವ ಆತ್ಮವಿಶ್ವಾಸ

  ಹೆಚ್ಚುವ ಆತ್ಮವಿಶ್ವಾಸ

  ಹುಟ್ಟುಡುಗೆಯಲ್ಲಿ ಬಟ್ಟೆಯ ಬಂಧನವಿಲ್ಲದೇ ಇರುವುದರಿಂದ ಸ್ವತಂತ್ರರಾಗಿರುವ ಭಾವನೆ ಹೆಚ್ಚುತ್ತದೆ. ಬಿಗುಮಾನ, ಬಂಧನವಿಲ್ಲದ ಮನ ಹೆಚ್ಚು ಸದೃಢಗೊಳ್ಳುತ್ತದೆ. ಬಿಗಿಯಾದ ಬಟ್ಟೆ ಧರಿಸಿದವರಿಗೆ ಮಲಗಿದ ಬಳಿಕವೂ ಏನಾದರೂ ತಿನ್ನಬೇಕೆನಿಸುತ್ತದೆ. ಮಲಗಿದಲ್ಲಿಯೇ ಟೀವಿ ನೋಡುತ್ತಾ ಕುರುಕಲು ತಿಂಡಿ ತಿನ್ನುವುದರಿಂದ ಆರೋಗ್ಯ ಕೆಡುವುದಲ್ಲದೇ ಹಾಗೂ ದೇಹದ ತೂಕವೂ ಹೆಚ್ಚುತ್ತದೆ. ಹುಟ್ಟುಡುಗೆ ತೊಟ್ಟು ಮಲಗಿದ ಬಳಿಕ ಮನ ಪ್ರಫುಲ್ಲವಾಗಿ ಶೀಘ್ರವಾಗಿ ನಿದ್ದೆ ಬರುವುದರಿಂದ ಅನಗತ್ಯವಾಗಿ ತಿನ್ನುವುದು ಕಡಿತವಾಗುತ್ತದೆ. ಅಂದರೆ ಆ ಮಟ್ಟಿಗೆ ಮನವನ್ನು ನಿಯಂತ್ರಿಸಿದಂತಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ. ಇದು ಸಾಧ್ಯವಾದರೆ ಧೂಮಪಾನ ಮೊದಲಾದ ದುಃಶ್ಚಟಗಳನ್ನೂತ್ಯಜಿಸಬಹುದೆಂಬ ಆತ್ಮವಿಶ್ವಾಸ ಮೂಡುತ್ತದೆ. ಹೆಚ್ಚಿದ ಆತ್ಮವಿಶ್ವಾಸದಿಂದ ಜೀವನದಲ್ಲಿ ಇನ್ನೂ ಹೆಚ್ಚಿನದನ್ನು ಸಾಧಿಸಲು ಸಾಧ್ಯವಾಗುತ್ತದೆ.

  ಉತ್ತಮಗೊಳ್ಳುವ ಪಚನಕ್ರಿಯೆ

  ಉತ್ತಮಗೊಳ್ಳುವ ಪಚನಕ್ರಿಯೆ

  ಹುಟ್ಟುಡುಗೆಯಲ್ಲಿರುವ ದೇಹಕ್ಕೆ ಯಾವುದೇ ಬಂಧನವಿರದ ಕಾರಣ ಸಂಪೂರ್ಣವಾಗಿ ಸಡಿಲವಾಗಿರುತ್ತದೆ. ಶರೀರ ನಿದ್ರಾವಸ್ಥೆಯಲ್ಲಿರುವಾಗ ಜರುಗುವ ಹಲವು ಅನೈಚ್ಛಿಕ ಕ್ರಿಯೆಗಳು ಹೆಚ್ಚು ಸರಾಗವಾಗಿ ಆಗಲು ಸಹಕಾರಿಯಾಗುತ್ತದೆ. ಪಚನಕ್ರಿಯೆಯೂ ಉತ್ತಮಗೊಳ್ಳುತ್ತದೆ. ಈ ಎಲ್ಲಾ ಕ್ರಿಯೆಗಳಿಗೆ ಶರೀರಕ್ಕೆ ಹೆಚ್ಚಿನ ಕೊಬ್ಬು ಅವಶ್ಯವಿರುವುದರಿಂದ ಸಂಗ್ರಹವಾದ ಕೊಬ್ಬು ಕರಗಿಸಲೂ ಸಹಕಾರಿಯಾಗಿದೆ.

  ದಂಪತಿಗಳಲ್ಲಿ ಹೆಚ್ಚುವ ಆಕ್ಸಿಟೋಸಿನ್

  ದಂಪತಿಗಳಲ್ಲಿ ಹೆಚ್ಚುವ ಆಕ್ಸಿಟೋಸಿನ್

  ದಂಪತಿಗಳು ಕೂಡುವ ವೇಳೆಯಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನು ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಉತ್ತಮ ಬಾಂಧವ್ಯಕ್ಕೆ ಹಾಗೂ ಕೂಡುವಿಕೆಯ ಸಂತೋಷವನ್ನು ಹೆಚ್ಚಿಸುವಲ್ಲಿ ಆಕ್ಸಿಟೋಸಿನ್ ನ ಕೊಡುಗೆ ಮಹತ್ತರವಾಗಿದೆ. ಹುಟ್ಟುಡುಗೆಯಲ್ಲಿರುವ ದಂಪತಿಗಳು ಹೆಚ್ಚು ಹತ್ತಿರಾಗುವುದರಿಂದ ಹೆಚ್ಚಿನ ಆಕ್ಸಿಟೋಸಿನ್ ಉತ್ಪತ್ತಿಯಾಗಿ ಉತ್ತಮ ದಾಂಪತ್ಯಸುಖವನ್ನು ಪಡೆಯಬಹುದಾಗಿದೆ.

  ದಂಪತಿಗಳಲ್ಲಿ ಹೆಚ್ಚುವ ಸಾಮೀಪ್ಯ-ಮೆರಗುವ ರತಿ

  ದಂಪತಿಗಳಲ್ಲಿ ಹೆಚ್ಚುವ ಸಾಮೀಪ್ಯ-ಮೆರಗುವ ರತಿ

  ಉಡುಗೆಗಳ ಬಂಧನವಿಲ್ಲದಿರುವ ಕಾರಣ ದಂಪತಿಗಳ ದೇಹ ಹಾಗೂ ಮನಸ್ಸು ಇನ್ನಷ್ಟು ಹತ್ತಿರವಾಗುತ್ತದೆ. ಸಂಗಾತಿಯ ಮೈಬಿಸುಪನ್ನು ಪೂರ್ಣವಾಗಿ ಅನುಭವಿಸುವ ಕಾರಣ ರತಿಕ್ರೀಡೆಯಲ್ಲಿ ಮೆರುಗು ಮೂಡುತ್ತದೆ. ಸ್ವತಂತ್ರ ದೇಹಗಳನ್ನು ಇನ್ನಷ್ಟು ರಮಿಸುವ ಮುದ ಹೆಚ್ಚಿನ ಕ್ರೀಡೆಗೆ ಆಮಂತ್ರಣ ನೀಡುತ್ತದೆ. ಪರಿಣಾಮವಾಗಿ ದಂಪತಿಗಳಲ್ಲಿ ಅನ್ಯೋನ್ಯತೆ, ದಾಂಪತ್ಯ ಆರೋಗ್ಯ, ಶಾರೀರಿಕ ಆರೋಗ್ಯ, ಮಾನಸಿಕ ಆರೋಗ್ಯ ವೃದ್ಧಿಸುತ್ತದೆ.

  ಒತ್ತಡ,ಜಂಜಾಟಗಳಿಂದ ಮುಕ್ತಿ

  ಒತ್ತಡ,ಜಂಜಾಟಗಳಿಂದ ಮುಕ್ತಿ

  ದಿನದ ಚಟುವಟಿಕೆಗಳಿಂದ ಹಲವು ರೀತಿಯ ಒತ್ತಡಗಳಲ್ಲಿ ಸಿಲುಕಿದ ಮನಕ್ಕೆ ವಿಶ್ರಾಂತಿ ಬೇಕೇ ಬೇಕು. ಸಂಗಾತಿಯೊಡನಿದ್ದರೂ ಅಥವಾ ಒಬ್ಬಂಟಿಯಾಗಿದ್ದರೂ ಹುಟ್ಟುಡುಗೆಯಲ್ಲಿ ಮನಸ್ಸು ನಿರಾಳತೆಯನ್ನು ಅನುಭವಿಸುವುದರಿಂದ ದಿನದ ಒತ್ತಡ, ಜಂಜಡಗಳಿಂದ ಮುಕ್ತಿ ಪಡೆಯಬಹುದು.

  ಮುಂದೂಡುವ ವೃದ್ಧಾಪ್ಯ

  ಮುಂದೂಡುವ ವೃದ್ಧಾಪ್ಯ

  ಹುಟ್ಟುಗೆಯಲ್ಲಿರುವ ದೇಹದ ಹೆಚ್ಚಿನ ಭಾಗ ಗಾಳಿಗೆ ತೆರೆದಿರುವ ಕಾರಣ ದೇಹ ಶೀಘ್ರವಾಗಿ ತಾಪಮಾನವನ್ನು ಕಳೆದುಕೊಳ್ಳುತ್ತಾ ಬರುತ್ತದೆ. ಈ ತಾಪಮಾನವನ್ನು ಉತ್ಪಾದಿಸಬೇಕಾದುದರಿಂದ ದೇಹದ ಕೊಬ್ಬು ಕರಗುತ್ತದೆ. ಜೊತೆಗೇ ಬೆಳವಣಿಗೆಯ ಹಾರ್ಮೋನುಗಳೂ (Growth Hormone) ಬಿಡುಗಡೆಯಾಗುತ್ತವೆ. ವಯಸ್ಸಾದಂತೆ ಬಿಗಿಯುಡುಗೆ ಉಟ್ಟು ಮಲಗುವವರ ಚರ್ಮದಲ್ಲಿ ಬೇಗನೇ ಸುಕ್ಕುಗಳು ಮೂಡುತ್ತವೆ. ಹುಟ್ಟುಡುಗೆಯ ನಿದ್ದೆ ಈ ಸುಕ್ಕುಗಳು ಮೂಡುವುದನ್ನು ಮುಂದೆ ದೂಡುತ್ತದೆ. ಹೆಚ್ಚಿನ ಹಾರ್ಮೋನು ದೇಹಕ್ಕೆ ದೊರಕುವುದರಿಂದ ಚರ್ಮದಲ್ಲಿ ಕಡಿಮೆ ಸುಕ್ಕುಗಳು ಮೂಡುತ್ತವೆ.

  ಉತ್ತಮಗೊಳ್ಳುವ ಜನನಾಂಗಗಳ ಆರೋಗ್ಯ

  ಉತ್ತಮಗೊಳ್ಳುವ ಜನನಾಂಗಗಳ ಆರೋಗ್ಯ

  ಮಾನವರ ದೇಹದಲ್ಲಿ ಅತಿ ಹೆಚ್ಚು ಕಾಲ ಬಟ್ಟೆಗಳ ಮರೆಯಲ್ಲಿರುವ ಅಂಗಗಳೆಂದರೆ ಜನನಾಂಗಗಳಾಗಿವೆ. ಇಡಿಯ ದಿನ ಒಳ ಉಡುಪುಗಳ ಮರೆಯಲ್ಲಿ ಹಾಗೂ ಮೇಲುಡುಪುಗಳ ಒತ್ತಡದ ಬಿಗುವಿನಲ್ಲಿರುವ ಕಾರಣ ನಿಸರ್ಗಕ್ಕೆ ಅನುಸಾರವಾಗಿ ಸಡಿಲವಾಗಿರಲು ಸಾಧ್ಯವಿಲ್ಲ. ಹುಟ್ಟುಡುಗೆಯಲ್ಲಿರುವಷ್ಟೂ ಹೊತ್ತು ಜನನಾಂಗಗಳಿಗೆ ಅಗತ್ಯವಾದ ಸಡಿಲತೆ ಹಾಗೂ ತಂಪಾದ ಹವೆ ಲಭ್ಯವಾಗುತ್ತದೆ. ವಿಶೇಷವಾಗಿ ಸ್ತ್ರೀಯರಲ್ಲಿ ತೇವ ಬೇಗನೇ ಒಣಗಿ ಸೋಂಕು (fungal infection) ಉಂಟಾಗುವುದು ತಡೆದಂತಾಗುತ್ತದೆ.

  ಉತ್ತಮಗೊಳ್ಳುವ ರಕ್ತಪರಿಚಲನೆ

  ಉತ್ತಮಗೊಳ್ಳುವ ರಕ್ತಪರಿಚಲನೆ

  ಶಯನಕಾಲದಲ್ಲಿ ಎಷ್ಟೇ ಸಡಿಲವಾದ ಉಡುಪು ತೊಟ್ಟರೂ ಅದರಲ್ಲಿರುವ ಒಂದು ಹೊಲಿಗೆ ಅಥವಾ ಪಟ್ಟಿ ಶರೀರದ ಆ ಭಾಗದಲ್ಲಿ ಕೊಂಚವಾದರೂ ರಕ್ತಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತದೆ. ಒಳ ಉಡುಪುಗಳ ಎಲಾಸ್ಟಿಕ್, ಲಾಡಿ ಮೊದಲಾದವೂ ಸುಗಮವಾದ ರಕ್ತಪರಿಚಲನೆಗೆ ಅಡ್ಡಿ ಉಂಟುಮಾಡುತ್ತವೆ. ಹುಟ್ಟುಡುಗೆಯಲ್ಲಿ ಯಾವುದೇ ಅಡ್ಡಿ ಇಲ್ಲದಿರುವ ಕಾರಣ ಉತ್ತಮ ರಕ್ತಸಂಚಾರ ಸಾಧ್ಯವಾಗುತ್ತದೆ. ಅಲ್ಲದೇ ಅಡ್ಡಲಾಗಿ ಮಲಗಿರುವ ದೇಹಕ್ಕೆ ಕಡಿಮೆ ಗುರುತ್ವಾಕರ್ಷಣೆ ಇರುವುದರಿಂದ ಹೃದಯ ಕಡಿಮೆ ಒತ್ತಡದಲ್ಲಿ ರಕ್ತವನ್ನು ನೂಕಿದರೆ ಸಾಕಾಗುತ್ತದೆ. ಒಟ್ಟಾರೆ ಆರೋಗ್ಯ ವೃದ್ಧಿಸುತ್ತದೆ.

  ಆರೋಗ್ಯಕರ ಶರೀರ

  ಆರೋಗ್ಯಕರ ಶರೀರ

  ಒತ್ತಡದಲ್ಲಿದ್ದಾಗ ದೇಹದೊಳಕ್ಕೆ ಕಾರ್ಟಿಸೋಲ್ ಎಂಬ ಹಾರ್ಮೋನು ಉತ್ಪತ್ತಿಯಾಗುತ್ತದೆ. ಕಾರ್ಟಿಸೋಲ್ ಇರುವಷ್ಟೂ ಹೊತ್ತು ದೇಹದ ಜೀರ್ಣಕ್ರಿಯೆ ಕುಂಠಿತಗೊಳ್ಳುತ್ತದೆ ಹಾಗೂ ಸಂಗ್ರಹವಾದ ಕೊಬ್ಬು ಕರಗುವುದಿಲ್ಲ. ನಿಧಾನಕ್ಕೆ ಕೊಬ್ಬು ಸಂಗ್ರಹ ಹೆಚ್ಚುತ್ತಾ ಹೋಗಿ ಸ್ಥೂಲಕಾಯ ಆವರಿಸಿಕೊಳ್ಳುತ್ತದೆ. ವಿವಸ್ತ್ರವಾದ ದೇಹ ಮತ್ತು ನಿರಾಳವಾದ ಮನಸ್ಸು ಶೀಘ್ರವೇ ಒತ್ತಡರಹಿತವಾಗುವುದರಿಂದ ಕಾರ್ಟಿಸೋಲ್ ಉತ್ಪತ್ತಿಯಾಗುವುದಿಲ್ಲ. ಪರಿಣಾಮವಾಗಿ ಹೆಚ್ಚಿನ ಕೊಬ್ಬು ಕರಗಿ ಆರೋಗ್ಯಕರ, ಕೃಶಕಾಯವನ್ನು ಹೊಂದಬಹುದು.

   

  English summary

  10 Healthy Reasons For Sleeping Naked

  How long can you stay naked without feeling uncomfortable? Most of us are not comfortable with our own bodies and thus, do not like sleeping naked. But it is a scientifically proven fact that sleeping naked has its benefits. If you are sleeping without clothes, you are bound to have better sleep and lower levels of stress. Find out how, sleeping sans clothes can help you live a healthy life.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more