Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಹೊಟ್ಟೆಯ ಕೊಬ್ಬು ಕರಗಿಸುವ ಕೊಬ್ಬಿನ ಆಹಾರಗಳು!
ಹೊಟ್ಟೆ ಬೆಳೆಸಿಕೊಂಡವರಿಗೆ ಮಾತ್ರ ಗೊತ್ತು ಅದನ್ನು ಕರಗಿಸಲು ಎಷ್ಟು ಕಷ್ಟ ಪಡಬೇಕೆಂದು. ಕೆಲವರ ಹೊಟ್ಟೆಯನ್ನು ನೋಡಿ ಅಪಹಾಸ್ಯ ಮಾಡುವುದು ತುಂಬಾ ಸುಲಭ. ಆದರೆ ಆ ರೀತಿಯ ಹೊಟ್ಟೆಯನ್ನು ಇಟ್ಟುಕೊಂಡು ತಿರುಗಾಡಲು ಕೆಲವರಿಗೆ ತುಂಬಾ ಮುಜುಗರವಾಗುತ್ತದೆ ಮತ್ತು ಇದನ್ನು ಕರಗಿಸಲು ಹರಸಾಹಸ ಪಡುತ್ತಾ ಇರುತ್ತಾರೆ.
ಹೊಟ್ಟೆಯ ಕೊಬ್ಬನ್ನು ಕರಗಿಸಬೇಕಾದರೆ ಕೊಬ್ಬುಯುಕ್ತ ಆಹಾರಗಳನ್ನು ವರ್ಜಿಸಬೇಕು ಎಂದು ಹೇಳುವುದುಂಟು. ಆದರೆ ಇಲ್ಲಿ ಕೊಬ್ಬುಯುಕ್ತ ಆಹಾರವನ್ನೇ ತಿಂದು ಒಂದೇ ತಿಂಗಳಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಹೇಗೆಂದು ತಿಳಿಯಬಹುದು. ಕೆಲವೊಂದು ಆಹಾರಗಳಲ್ಲಿ ಕೊಬ್ಬಿನಾಂಶವು ಅಧಿಕವಾಗಿರುತ್ತದೆ. ನಾಲ್ಕೇ ದಿನದಲ್ಲಿ ಕೊಬ್ಬು ಕರಗಿಸುವ ಪವರ್ ಈ ಜ್ಯೂಸ್‌ನಲ್ಲಿದೆ!
ಇದರಲ್ಲಿ ಆರೋಗ್ಯಕಾರಿ ಕೊಬ್ಬು ಮತ್ತು ಅನಾರೋಗ್ಯಕಾರಿ ಕೊಬ್ಬು ಎನ್ನುವ ಎರಡು ವಿಧವಿದೆ. ಆರೋಗ್ಯಕರವಾದ ಕೊಬ್ಬು ಆರೋಗ್ಯ ಮತ್ತು ದೇಹವನ್ನು ನಿಯಂತ್ರಿಸಲು ಸಹಕಾರಿ. ಅಲ್ಲದೆ ಆರೋಗ್ಯಕರವಾದ ಕೊಬ್ಬು ಇರುವಂತಹ ಆಹಾರವನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸುವ ಮೂಲಕ ಹೊಟ್ಟೆಯ ಕೊಬ್ಬನ್ನು ಕರಗಿಸಬಹುದು. ನೈಸರ್ಗಿಕವಾಗಿ ಸಿಗುವಂತಹ ಆರೋಗ್ಯಕರ ಆಹಾರವನ್ನು ಬಳಸಿಕೊಂಡು ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಹೇಗೆಂದು ತಿಳಿಯಿರಿ. ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್ ಬ್ರೊಕೋಲಿ, ಬೀನ್ಸ್ ಹೀಗೆ ವಿಟಮಿನ್ ಎ, ಸಿ, ಕೆ ಇರುವ ಆಹಾರಗಳನ್ನು ಹೆಚ್ಚಾಗಿ ತಿಂದರೆ ತಿನ್ನಿ. ಈ ಆಹಾರಗಳು ತಿಂದರೆ ಸುಲಭದಲ್ಲಿ ಜೀರ್ಣವಾಗುವುದರಿಂದ ಹೊಟ್ಟೆ ಬೊಜ್ಜು ಬರುವುದಿಲ್ಲ. ಅಲ್ಲದೆ ಸಾಧ್ಯವಾದಷ್ಟು ಆಲೀವ್ ಎಣ್ಣೆಯನ್ನು ಅಡುಗೆಗೆ ಬಳಸಿದರೆ ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಹಕಾರಿಯಾಗಿದೆ. ತೆಂಗಿನ ಎಣ್ಣೆ, ತೆಂಗಿನ ಹಾಲು ಮತ್ತು ಕಚ್ಚಾ ತೆಂಗಿನ ಕಾಯಿ ಒಮೆಗಾ3 ಕೊಬ್ಬಿನಾಮ್ಲದಿಂದ ಸಮೃದ್ಧವಾಗಿದೆ. ಇದು ಚಯಾಪಚಾಯ ಕ್ರಿಯೆಗೆ ನೆರವಾಗಿ ಹೊಟ್ಟೆಯ ಕೊಬ್ಬನ್ನು ಯಾವುದೇ ಅಡ್ಡಪರಿಣಾಮವಿಲ್ಲದೆ ಕರಗಿಸುತ್ತದೆ. ಆಲಿವ್‌ನಲ್ಲೂ ಒಮೆಗಾ3 ಕೊಬ್ಬಿನಾಮ್ಲ ಮತ್ತು ಪ್ರೋಟೀನ್ ಅಧಿಕವಾಗಿದೆ. ಇವೆರಡು ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ. ಆಲಿವ್ ಎರಡನೇ ಹಂತದ ಮಧುಮೇಹವನ್ನು ತಡೆಯುತ್ತದೆ. ಆ್ಯಂಟಿಆಕ್ಸಿಡೆಂಟ್ ಮತ್ತು ಒಮೆಗಾ3 ಕೊಬ್ಬಿನಾಮ್ಲ ಹೊಂದಿರುವ ಇದು ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿವೆ. ಇದರಲ್ಲಿ ಮುಖ್ಯವಾಗಿರುವುದೆಂದರೆ ಹೊಟ್ಟೆಯ ಕೊಬ್ಬು ಕರಗಿಸುವುದು. ಹೊಟ್ಟೆಯ ಕೊಬ್ಬನ್ನು ಪರಿಣಾಮಕಾರಿಯಾಗಿ ಕರಗಿಸುವಲ್ಲಿ ಪ್ರಮುಖಪಾತ್ರ ವಹಿಸುವಂತಹ ಆ್ಯಂಟಿಆಕ್ಸಿಡೆಂಟ್ ಮತ್ತು ಒಲಿಕ್ ಆಮ್ಲವು ಚಾಕಲೇಟಿನಲ್ಲಿದೆ. ಊಟದ ಬಳಿಕ ಬಾಳೆಹಣ್ಣು ತಿನ್ನುವುದರಿಂದ ಅದರಲ್ಲಿರುವ ವಿವಿಧ ಕಿಣ್ವಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತವೆ. ಅಲ್ಲದೇ ಹೆಚ್ಚಿನ ಪೊಟ್ಯಾಶಿಯಂ ಮತ್ತು ಇತರ ಪೋಷಕಾಂಶಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ, ತನ್ಮೂಲಕ ಸೊಂಟದ ಸುತ್ತಳತೆಯನ್ನುಕಿರಿದಾಗಿಸುತ್ತದೆ. ಹತ್ತು ಹನ್ನೆರಡು ದೊಡ್ಡ ಕರಿ ಬೇವಿನ ಎಲೆಗಳನ್ನು ಮುಂಜಾನೆ ಬರಿಹೊಟ್ಟೆಯಲ್ಲಿ ಚೆನ್ನಾಗಿ ಅಗೆದು ಅದರ ರಸವನ್ನು ಕುಡಿಯಬೇಕು. ಹೀಗೆ ಎರಡು ಮೂರು ತಿಂಗಳು ಮಾಡಿದಲ್ಲಿ ಹೊಟ್ಟೆಯ ಕೊಬ್ಬು ಕಡಿಮೆಯಾಗಿರುವುದು ನೀವು ಕಾಣಬಹುದು. ಸಾಲ್ಮನ್ ನಂತಹ ಕೆಲವೊಂದು ಮೀನುಗಳು ಕೊಬ್ಬನ್ನು ಹೊಂದಿವೆ. ಆದರೆ ಇದರಲ್ಲಿ ಆಸ್ತಕ್ಸ್ಯಾಂಥಿನ್ ಮತ್ತು ಒಮೆಗಾ3 ಕೊಬ್ಬಿನಾಮ್ಲವಿದೆ. ಇದು ಹೊಟ್ಟೆಯ ಕೊಬ್ಬನ್ನು ಕರಗಿಸುವುದು. ಸಾಧಾರಣವಾಗಿ ಕೆಂಪು ಅಥವಾ ಬಿಳಿ ಬಣ್ಣದಲ್ಲಿ ಲಭ್ಯವಾಗುವ ಸಿಹಿಗೆಣಸಿನಲ್ಲಿ ಉತ್ತಮ ಪ್ರಮಾಣದಲ್ಲಿ ಪೊಟಾಶಿಯಂ ಹಾಗೂ ಕರಗುವ ನಾರು ಇದೆ.ಗೆಣಸಿಗೆ ನಸುಗೆಂಪು ಬಣ್ಣ ನೀಡುವ carotenoid ಎಂಬ ಪೋಷಕಾಂಶ ದೇಹದಲ್ಲಿ ವಿಟಮಿನ್ ಎ ಪಡೆಯಲು ಸಹಕರಿಸುತ್ತದೆ. ಹೆಚ್ಚಿನ ಪ್ರಮಾಣದಲ್ಲಿರುವ ಕರಗುವ ನಾರನ್ನು ಅರಗಿಸಿಕೊಳ್ಳಲು ಕರುಳುಗಳಿಗೆ ಹೆಚ್ಚಿನ ಕೊಬ್ಬು ಮತ್ತು ಸಕ್ಕರೆಯ ಅವಶ್ಯಕತೆ ಇರುವುದರಿಂದ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಶೀಘ್ರ ಕರಗುತ್ತದೆ.

ಹಸಿರು ತರಕಾರಿಗಳು

ತೆಂಗಿನಕಾಯಿ

ಆಲಿವ್

ಅವಕಾಡೊ ಅಥವಾ ಬೆಣ್ಣೆ ಹಣ್ಣು

ಚಾಕಲೇಟ್

ಬಾಳೆಹಣ್ಣು

ಕರಿಬೇವಿನ ಎಲೆಗಳು

ಮೀನು

ಸಿಹಿಗೆಣಸುಗಳನ್ನು ಸೇವಿಸಿ



Click it and Unblock the Notifications