Latest Updates
-
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್
ಶಿವರಾತ್ರಿ ವ್ರತಾಚರಣೆಯಲ್ಲಿ ಆಹಾರ ಕ್ರಮ ಹೇಗಿರಬೇಕು?
ಶಿವ ಮತ್ತು ಶಕ್ತಿಯ ಸಮ್ಮಿಲನದ ಸಂಕೇತವಾಗಿ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಭಕ್ತರ ಮನೋಭಿಲಾಷೆಯನ್ನು ಶಿವನು ಬೇಗನೇ ಈಡೆರಿಸುತ್ತಾನೆ ಎಂಬ ಪ್ರತೀತಿ ಇದ್ದು ಲೋಕದ ಸಮಸ್ತ ಸುಖಕ್ಕಾಗಿ ವಿಷವನ್ನೇ ಸೇವಿಸಿ ವಿಷಕಂಠನಾದ ಪರಶಿವ ಭಕ್ತ ಪರಿಪಾಲಕನಾಗಿದ್ದಾನೆ. ಶಿವರಾತ್ರಿ ಹೆಸರೇ ಸೂಚಿಸುವಂತೆ ಶಿವನಿಗೆ ಅರ್ಪಿತವಾದ ರಾತ್ರಿ. ಈ ದಿನದಂದು ಭಕ್ತರು ಉಪವಾಸ ಮಾಡುತ್ತಾ ರಾತ್ರಿ ಪೂರ್ತಿ ಜಾಗರಣೆಯಲ್ಲಿದ್ದು ಶಿವನನ್ನು ಮನದಲ್ಲಿ ಸಂಕಲ್ಪಿಸಿ ತನ್ನ ಮನೋಭಿಲಾಷೆಯನ್ನು ಆತನಿಗೆ ಅರ್ಪಿಸುವ ಸುದಿನವಾಗಿದೆ.
ಬಿಲ್ವಪತ್ರೆಯ ಅರ್ಚನೆ, ಪಂಚಾಮೃತಭಿಷೇಕ, ಮಹಾ ಮೃತ್ಯುಂಜಯ ಮಂತ್ರ ಹೀಗೆ ಪರಶಿವನ ಗುಣಗಾನ ಮಾಡಲು ಆತನನ್ನು ಸ್ತುತಿಸಲು ಈ ದಿನ ಹೆಚ್ಚು ಮಹತ್ವವಾದುದು ಎಂಬ ನಂಬಿಕೆ ಇದೆ. ಮುಂಜಾನೆ ಪ್ರಾತಃ ಕಾಲದಲ್ಲೇ ಎದ್ದು ಸ್ನಾನಾದಿಗಳನ್ನು ಮುಗಿಸಿಕೊಂಡು ಶಿವನ ದೇವಸ್ಥಾನಕ್ಕೆ ಹೋಗಿ ಆತನಿಗೆ ಹಾಲು, ಜೇನು, ನೀರು ಮತ್ತು ಬಿಲ್ಪಪತ್ರೆಯ ಅರ್ಚನೆಗಳನ್ನು ಮಾಡಿಸುತ್ತಾರೆ. ಈ ದಿನದಂದು ನಿಮ್ಮ ಆಂತರ್ಯದಲ್ಲಿರುವ ಭಕ್ತಿಯ ಶಕ್ತಿ ಇನ್ನಷ್ಟು ದ್ವಿಗುಣಗೊಳ್ಳುತ್ತದೆ ಎಂಬ ನಂಬಿಕೆಯಿದೆ.
ಶಿವರಾತ್ರಿಯಂದು ಮಾಡುವ ಉಪವಾಸ ಒಮ್ಮೊಮ್ಮೆ ಹಾಲು ಹಣ್ಣುಗಳಿಂದ ಕೂಡಿದ್ದರೆ ಇನ್ನು ಕೆಲವರು ಸ್ವಲ್ಪ ನೀರನ್ನೂ ಕೂಡ ಕುಡಿಯದೇ ಉಪವಾಸ ಕೈಗೊಳ್ಳುತ್ತಾರೆ. ಇದು ಆ ದೇವರಲ್ಲಿ ಭಕ್ತರು ಇಟ್ಟಿರುವಂತಹನಂಬಿಕೆಯಾಗಿದೆ. ನಮ್ಮ ಮನದಲ್ಲಿನ ಸಂಕಲ್ಪ ಕೈಗೂಡಲು ನಮ್ಮ ಅಳಲನ್ನು ತೋಡಿಕೊಳ್ಳಲು ದೇವರ ಹೆಸರಿನಲ್ಲಿ ಆಹಾರ ಸೇವಿಸದೇ ಸಾತ್ವಿಕ ಆಹಾರಗಳನ್ನು ಭುಂಜಿಸಿ ದೇವರ ಸ್ತ್ರೋತ್ರ ಪಠನೆ ಮಾಡುವುದೂ ಒಂದು ವಿಧವಾದ ಭಕ್ತಿಯಾಗಿದೆ. ಹಾಗಿದ್ದರೆ ಈ ಭಕ್ತಿಗೆ ಬೇಕಾದ ಶಕ್ತಿಯನ್ನು ಹೇಗೆ ಪಡೆದುಕೊಳ್ಳುವುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಹಿಂದಿನ ರಾತ್ರಿ ಅಧಿಕ ಆಹಾರ ಸೇವನೆ ಬೇಡ
ರಾತ್ರಿ ಹೆಚ್ಚು ಆಹಾರ ಸೇವನೆ ಮಾಡುವುದನ್ನು ತ್ಯಜಿಸಿ. ನೀವು ಮರುದಿನ ಉಪವಾಸವಿರುತ್ತೀರಿ ಎಂದು ಹಿಂದಿನ ರಾತ್ರಿ ಆಹಾರ ಸೇವಿಸುವುದು ನಿಮಗೆ ಮರುದಿನಕ್ಕೆ ಹೆಚ್ಚು ಶಕ್ತಿಯನ್ನು ನೀಡುತ್ತದೆ ಎಂಬುದು ನಿಮ್ಮ ತಪ್ಪು ಕಲ್ಪನೆಯಾಗಿದೆ. ಇದರಿಂದ ಮರುದಿನ ನಿಮಗೆ ಸುಸ್ತು ಹಸಿವಾಗುವಿಕೆ ಇನ್ನಷ್ಟು ಜಾಸ್ತಿಯಾಗುತ್ತದೆ. ಅಂತೆಯೇ ಸರಿಯಾಗಿ ಜೀರ್ಣವಾಗದ ಆಹಾರದಿಂದ ಆ ದಿನಪೂರ್ತಿ ಕಿರಿಕಿರಿ ನಿಮ್ಮನ್ನು ಕಾಡುತ್ತಿರುತ್ತದೆ.

ಹಿಂದಿನ ದಿನದ ಅಹಾರ ಹಿತಮಿತವಾಗಿರಲಿ
ಹೆಚ್ಚು ಪ್ರಮಾಣದಲ್ಲಿ ಆಹಾರ ಸೇವಿಸದಿರಿ. ನಿಮ್ಮ ಆಹಾರದಲ್ಲಿ ಹೆಚ್ಚು ತರಕಾರಿಗಳು, ಹಣ್ಣುಗಳು ಮತ್ತು ನೈಸರ್ಗಿಕ ಸಕ್ಕರೆ ಅಂಶಗಳು ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಇಂತಹ ಸಮತೋಲಿತ ಆಹಾರ ನಿಮ್ಮ ದೇಹಕ್ಕೆ ನ್ಯೂಟ್ರೀನ್ ಅನ್ನು ಒದಗಿಸುವುದರಿಂದ ಮರುದಿನ ನಿಮ್ಮ ವೃತಾಚರಣೆಗೆ ಇದು ಬೇಕಾದ ಶಕ್ತಿಯನ್ನು ನೀಡುತ್ತದೆ.

ಆದಷ್ಟು ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯಿರಿ
ನೀವು ಬರಿಯ ನೀರೇ ಕುಡಿಯಿರಿ ಇಲ್ಲವೇ ಲಿಂಬೆ ಪಾನಕವಾದರೂ ಸರಿ ಆದಷ್ಟು ಅಧಿಕ ಪ್ರಮಾಣದಲ್ಲಿ ಸೇವನೆ ಮಾಡಿ. ಆಗಾಗ್ಗೆ ಅರ್ಧಗಂಟೆಗಳಿಗೊಮ್ಮೆ ನೀರು ಸೇವಿಸಿ. ತಾಜಾ ಹಣ್ಣಿನ ರಸ, ನಿಂಬೆ ಪಾನಕ, ಎಳನೀರು ಮತ್ತು ನೈಸರ್ಗಿಕ ಪಾನೀಯಗಳ ಸೇವನೆಯನ್ನು ಹೆಚ್ಚು ಮಾಡಿ.

ವಿರಾಮದಲ್ಲಿ ಆಹಾರ ಸೇವಿಸಿ
ಹೆಚ್ಚು ಸಮಯಗಳ ಕಾಲ ಆಹಾರ ಸೇವಿಸದೇ ಇರುವುದು ಹೊಟ್ಟೆಯಲ್ಲಿ ಆಸಿಡಿಟಿಯನ್ನು ಉಂಟುಮಾಡಬಲ್ಲುದು. ಆದ್ದರಿಂದ ಆದಷ್ಟು ವಿರಾಮ ಸಮಯದಲ್ಲಿ ಸ್ವಲ್ಪ ಸ್ವಲ್ಪ ಆಹಾರ ಸೇವನೆ ಮಾಡಿ. ಇದರಿಂದ ನಿಮಗೆ ಶಕ್ತಿ ದೊರಕುತ್ತದೆ.

ಆಹಾರ ಸಣ್ಣಪ್ರಮಾಣದಲ್ಲಿರಲಿ
ನಾವು ತಿಳಿಸಿದಂತೆ ವಿರಾಮದ ನಡುವೆ ಆಹಾರ ಸೇವಿಸಿ ಎಂದರೆ ಹೊಟ್ಟೆ ತುಂಬಾ ತಿನ್ನುವುದಲ್ಲ. ಹಾಗಿದ್ದರೆ ನೀವು ಉಪವಾಸವಿದ್ದಂತೆ ಆಗುವುದಿಲ್ಲ. ಅರ್ಧ ಬಾಳೆಹಣ್ಣು ಅಥವಾ ಸೇಬನ್ನು ಸೇವಿಸಿ. ಇದರಿಂದ ದೇಹ ನಿಶ್ಶಕ್ತಿಯನ್ನು ಪಡೆದುಕೊಳ್ಳುವುದಿಲ್ಲ ಮತ್ತು ಕಿರಿಕಿರಿಯನ್ನು ನೀವು ಅನುಭವಿಸಲಾರಿರಿ.

ನಿಯಮಿತ ಔಷಧ ಸೇವನೆ ಮರೆಯದಿರಿ
ನೀವು ಹೃದ್ರೋಗಿಗಳಾಗಿದ್ದಲ್ಲಿ, ಬಿಪಿ ರೋಗಿಯಾಗಿದ್ದಲ್ಲಿ ಅಥವಾ ಯಾವುದೇ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದೀರಿ ಎಂದಾದಲ್ಲಿ ನಿಮಗೆ ತಿಳಿಸಿರುವ ಔಷಧ ಸೇವನೆಯನ್ನು ಮರೆಯದಿರಿ. ಔಷಧ ಬಿಟ್ಟು ನೀವು ಉಪವಾಸ ಕೈಗೊಳ್ಳುತ್ತೀರಿ ಎಂದಾದಲ್ಲಿ ಇದನ್ನು ಆ ದೇವರೂ ಕೂಡ ಮೆಚ್ಚುವುದಿಲ್ಲ.

ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳಿ
ವ್ರತದ ಸಂದರ್ಭದಲ್ಲಿ ನಿಮ್ಮ ದೇಹಕ್ಕೆ ಹೆಚ್ಚು ವಿಶ್ರಾಂತಿಯನ್ನು ನೀಡಬೇಕಾಗುತ್ತದೆ. ಟಿವಿ ವೀಕ್ಷಣೆ ಅಥವಾ ಹೆಚ್ಚು ಸಮಯ ನಿದ್ದೆ ಮಾಡುವುದು ನಿಮಗೆ ತಲೆನೋವನ್ನು ಉಂಟುಮಾಡಬಲ್ಲುದು. ನೀವು ಉದ್ಯೋಗಿಗಳು ಎಂದಾದಲ್ಲಿ ಉದ್ಯೋಗಕ್ಕೆ ಹೋಗಿ. ಹೆಚ್ಚು ಸೋಮಾರಿಗಳಾಗಿ ಕಾಲ ಕಳೆಯದಿರಿ. ನಿಮ್ಮ ಈ ದಿನವನ್ನು ಉಳಿದ ಎಲ್ಲಾ ದಿನಗಂತೆ ಕಳೆಯಿರಿ. ಒತ್ತಡವನ್ನು ಅನುಭವಿಸದಿರಿ. ಸಮಾಧಾನ ಚಿತ್ತರಾಗಿ ಕೆಲಸ ಕಾರ್ಯಗಳನ್ನು ನೆರವೇರಿಸಿಕೊಳ್ಳಿ.

ಉಪವಾಸಕ್ಕೆ ಭಾವುಕರಾಗಿ ಸಿದ್ಧರಾಗಿ
ನಿಮ್ಮ ಮನಸ್ಸನ್ನು ಉಪವಾಸಕ್ಕಾಗಿ ಸಿದ್ಧಗೊಳಿಸಬೇಕು. ಎಲ್ಲಾ ಸಮಯವೂ ಆಹಾರದ ಬಗ್ಗೆ ಯೋಚಿಸುತ್ತಲೇ ವೃತಾಚರಣೆಯನ್ನು ನಡೆಸುವುದರಿಂದ ಪ್ರಯೋಜನವಿಲ್ಲ. ದೇವರೊಂದಿಗಿನ ಆಧ್ಯಾತ್ಮಿಕ ಅನುಬಂಧವನ್ನು ಹಸಿವು ಆಹಾರ ಕೆಡಿಸದಿರಲಿ. ಆದ್ದರಿಂದ ನಿಮ್ಮ ಮನಸ್ಸನ್ನು ನಿಮ್ಮ ಹಿಡಿತದಲ್ಲಿಟ್ಟುಕೊಳ್ಳಿ.

ಒತ್ತಡ ಬೇಡ
ನಿಮ್ಮನ್ನು ನೀವೇ ಹೆಚ್ಚು ಒತ್ತಡಕ್ಕೆ ನೂಕಬೇಡಿ. ನೀವು ಹೆಚ್ಚು ಒತ್ತಡಕ್ಕೆ ಒಳಗಾಗುವುದೂ ಕೂಡ ದೇವರೊಂದಿಗಿನ ನಿಮ್ಮ ಸಂಪರ್ಕವನ್ನು ಹಾಳುಮಾಡಬಹುದು ಅಂತೆಯೇ ನಿಮ್ಮ ಶಕ್ತಿ ಹೆಚ್ಚು ವ್ಯಯವಾಗುವಂತೆ ಒತ್ತಡ ಮಾಡುತ್ತದೆ. ನಿಮ್ಮ ಮನಸ್ಸನ್ನು ಸಮಾಧಾನಚಿತ್ತರಾಗಿ ಇರಿಸಿಕೊಂಡು ಧ್ಯಾನಾಸಕ್ತರಾಗಿ.



Click it and Unblock the Notifications