ಹಲ್ಲುಜ್ಜುವಾಗ ಒಸಡಿನಿಂದ ರಕ್ತ ಬರುತ್ತಿದೆಯೇ? ಕಂಗಾಲಾಗದಿರಿ!

By Manu

ದೇಹದ ಒಳಗಿನ ಆರೋಗ್ಯ ಚೆನ್ನಾಗಿರಬೇಕೆಂದರೆ ಬಾಯಿಯ ಆರೋಗ್ಯವೂ ತುಂಬಾ ಮುಖ್ಯ. ಬಾಯಿಯಲ್ಲಿ ಜಗಿಯುವಂತಹ ಆಹಾರವು ದೇಹದೊಳಗೆ ಸೇರಿ ಅದರಲ್ಲಿನ ಪೋಷಕಾಂಶಗಳು ದೇಹಕ್ಕೆ ಶಕ್ತಿಯನ್ನು ನೀಡುವುದು. ಬಾಯಿಯಲ್ಲಿರುವ ಹಲ್ಲು, ಒಸಡು ಆರೋಗ್ಯವಾಗಿದ್ದರೆ ಈ ಕೆಲಸವು ಸರಾಗವಾಗಿ ನಡೆಯುತ್ತದೆ. ಆದರೆ ಕೆಲವೊಮ್ಮೆ ಒಸಡಿನಲ್ಲಿ ನೋವು, ರಕ್ತ ಬರುತ್ತಾ ಇರುತ್ತದೆ. ಒಸಡಿನ ಸಮಸ್ಯೆಯೇ? ಇಲ್ಲಿದೆ ನೋಡಿ ಸೂಪರ್ ಮನೆಮದ್ದು

ಹಲ್ಲುಜ್ಜುವಾಗ ಕೂಡ ಒಸಡಿನಿಂದ ರಕ್ತ ಬರುವ ಸಮಸ್ಯೆಯಿರುತ್ತದೆ. ಇಂತಹ ಸಮಯದಲ್ಲಿ ಕೆಲವೊಂದು ಸರಳ ಮನೆಮದ್ದನ್ನು ಪ್ರಯತ್ನಿಸಿದರೆ ಒಳ್ಳೆಯದು. ಆದರೆ ಈ ಸಮಸ್ಯೆಯನ್ನು ನಿವಾರಿಸಲು ವೈದ್ಯರನ್ನು ಭೇಟಿಯಾಗುವುದು ಅಗತ್ಯ (ಗಮನಿಸಿ: ಇದು ಕೇವಲ ಮನೆಯ ಔಷಧಿಯಾಗಿದೆ ಮತ್ತು ಇದನ್ನು ವೈದ್ಯರು ಸೂಚಿಸಿದ ಔಷಧಿಗೆ ಬದಲಿಯಾಗಿ ಬಳಸಬಾರದು)

ಅಲೋವೆರಾ (ಲೋಳೆ ಸರ)

ಅಲೋವೆರಾ (ಲೋಳೆ ಸರ)

ಅಲೋವೆರಾವು ತ್ವಚೆಯ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಅದೇ ಅಲೋವೆರಾವನ್ನು ಹಲ್ಲಿನ ಸಮಸ್ಯೆಗಳಿಗೂ ಬಳಸಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಲೋವೆರಾ (ಲೋಳೆ ಸರ)

ಅಲೋವೆರಾ (ಲೋಳೆ ಸರ)

ಬ್ಯಾಕ್ಟೀರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣ ಹೊಂದಿರುವ ಅಲೋವೆರಾ ಒಸಡಿನ ರಕ್ತ ಸ್ರಾವ, ಉರಿಯೂತ ಮತ್ತು ಊತವನ್ನು ಕಡಿಮೆ ಮಾಡುತ್ತದೆ. ರಕ್ತ ಸ್ರಾವವಾಗುತ್ತಿರುವ ಒಸಡಿಗೆ ಅಲೋವೆರಾ ಜೆಲ್ ಅನ್ನು ಹಚ್ಚಿದರೆ ಹೆಚ್ಚು ಪರಿಣಾಮಕಾರಿಯಾಗಬಲ್ಲದು.

ಸೀಬೆ ಹಣ್ಣಿನ ಎಲೆಗಳು

ಸೀಬೆ ಹಣ್ಣಿನ ಎಲೆಗಳು

ಹಲ್ಲಿನ ರೋಗಗಳಿಗೆ ಅತ್ಯುತ್ತಮ ಮನೆಮದ್ದಾಗಿರುವ ಪೇರಳೆ ಹಣ್ಣಿನ ಎಲೆಗಳನ್ನು ಒಸಡಿನ ರಕ್ತ ಸ್ರಾವ ಮತ್ತು ಊತಕ್ಕೆ ಬಳಸಬಹುದಾಗಿದೆ. ಸೀಬೆ ಹಣ್ಣುಗಳನ್ನು ಚೆನ್ನಾಗಿ ತೊಳೆದು ಜಗಿಯಿರಿ ಅಥವಾ ಸೀಬೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಉಪ್ಪು ಹಾಕಿ. ಅದರಿಂದ ಬಾಯಿ ತೊಳೆಯಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೀಬೆ ಹಣ್ಣಿನ ಎಲೆಗಳು

ಸೀಬೆ ಹಣ್ಣಿನ ಎಲೆಗಳು

ಇದು ನೈಸರ್ಗಿಕವಾಗಿ ಒಸಡಿನ ರಕ್ತಸ್ರಾವವನ್ನು ತಡೆಯುತ್ತದೆ. ಒಸಡಿನ ರೋಗಗಳಿಗೆ ಕಾರಣವಾಗುವಂತಹ ಹಲವಾರು ರೀತಿಯ ಬ್ಯಾಕ್ಟೀರಿಯಾವನ್ನು ಸೀಬೆ ಹಣ್ಣಿನಲ್ಲಿರುವ ಕ್ಯುರ್ಸಿಟಿನ್ ಮತ್ತು ಗಯುಜಾರ್ವಿನ್ ನಿವಾರಣೆ ಮಾಡುತ್ತದೆ.

ಅರಿಶಿನ

ಅರಿಶಿನ

ಅರಿಶಿನದಲ್ಲಿರುವ ಕರ್ಕ್ಯೂಮಿನ್ ನಂತಹ ನಂಜುನಿರೋಧಕ ಮತ್ತು ಉರಿಯೂತ ಶಮನಕಾರಿ ಗುಣಗಳು ಒಸಡಿನ ರಕ್ತಸ್ರಾವ ಮತ್ತು ಊತವನ್ನು ನಿವಾರಣೆ ಮಾಡುವಲ್ಲಿ ಅದ್ಭುತವನ್ನೇ ಉಂಟು ಮಾಡಲಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅರಿಶಿನ

ಅರಿಶಿನ

ಒಂದು ಚಮಚ ಅರಶಿನಕ್ಕೆ ಅರ್ಧ ಚಮಚ ಉಪ್ಪು, ಅರ್ಧ ಚಮಚ ಸಾಸಿವೆ ಎಣ್ಣೆಯನ್ನು ಮಿಶ್ರ ಮಾಡಿಕೊಂಡು ಅದನ್ನು ದಿನದಲ್ಲಿ ಎರಡು ಸಲ ಒಸಡಿಗೆ ಹಚ್ಚಿಕೊಳ್ಳಬೇಕು.

ಎಳ್ಳೆಣ್ಣೆ

ಎಳ್ಳೆಣ್ಣೆ

ರಕ್ತಸ್ರಾವವಾಗುವ ಒಸಡಿಗೆ ಎಳ್ಳೆಣ್ಣೆಯಿಂದ ಬಾಯಿ ಮುಕ್ಕಲಿಸಿಕೊಂಡರೆ ಅದು ತುಂಬಾ ಪರಿಣಾಮಕಾರಿ. ಒಂದು ಚಮಚ ಎಳ್ಳೆಣ್ಣೆಯನ್ನು ಬಾಯಿಗೆ ಹಾಕಿಕೊಂಡು ಅದನ್ನು ಹಲ್ಲುಗಳ ಮಧ್ಯೆ ಸುಮಾರು 10-15 ನಿಮಿಷ ಕಾಲ ಬಾಯಿ ಮುಕ್ಕಲಿಸುತ್ತಾ ಇರಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಎಳ್ಳೆಣ್ಣೆ

ಎಳ್ಳೆಣ್ಣೆ

ಇದು ಒಸಡನ್ನು ಗಟ್ಟಿಗೊಳಿಸುವುದು ಮಾತ್ರವಲ್ಲದೆ ಒಸಡಿನ ರೋಗಗಳಿಗೆ ಕಾರಣವಾಗುವಂತಹ ವಿಷ ಹಾಗೂ ಬ್ಯಾಕ್ಟೀರಿಯಾಗಳನ್ನು ಹೊರಹಾಕುತ್ತದೆ. ತಲೆ ಕೂದಲಿನ ಆರೈಕೆಗೆ ಎಳ್ಳೆಣ್ಣೆಯ ಪೋಷಣೆ

ತ್ರಿಫಲ

ತ್ರಿಫಲ

ಒಸಡಿನಲ್ಲಿ ರಕ್ತಸ್ತಾವ ಇದ್ದರೆ ಆಗ ತ್ರಿಫಲ ಚೂರ್ಣವನ್ನು ಬಳಸಬಹುದಾಗಿದೆ. ಹಲ್ಲಿನ ಸ್ವಚ್ಛತೆ ಮತ್ತು ಬಾಯಿಯ ಇತರ ಸಮಸ್ಯೆಗಳನ್ನು ನಿವಾರಿಸಲು ಇದನ್ನು ಮೌಥ್ ವಾಶ್ ಆಗಿಯೂ ಬಳಸಬಹುದು. ತ್ರಿಫಲದಲ್ಲಿ ಕೇವಲ ವಿಟಮಿನ್ ಸಮೃದ್ಧವಾಗಿರುವುದು ಮಾತ್ರವಲ್ಲದೆ ಆ್ಯಂಟಿಆಕ್ಸಿಡೆಂಟ್ ಮತ್ತು ನೋವು ನಿವಾರಕ ಗುಣಗಳಿವೆ. ಇದು ಒಸಡಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.


English summary

Simple home remedies to deal with bleeding gums

Injured your gums while brushing teeth or are you suffering from bleeding gums? If yes, try some simple home remedies for quick relief while you wait to visit a doctor and get diagnosed/ treated....
Story first published: Thursday, August 11, 2016, 13:46 [IST]
X
Desktop Bottom Promotion