For Quick Alerts
ALLOW NOTIFICATIONS  
For Daily Alerts

ಜೀರ್ಣಕ್ರಿಯೆ ಸಮಸ್ಯೆಗೆ ಆಯುರ್ವೇದದ ಉಪಚಾರ...

|

ತಿನ್ನಲು ಕಷ್ಟಪಡುವವರು ಒಂದು ಕಡೆಯಾದರೆ, ತಿಂದಿದ್ದನ್ನು ಅರಗಿಸಲು ಕಷ್ಟ ಪಡುವವರು ಇನ್ನೊಂದು ಕಡೆ ಎಂಬ ಮಾತನ್ನು ನೀವು ಎಲ್ಲಿಯಾದರು ಕೇಳಿರುತ್ತೀರಿ. ಈ ಆಧುನಿಕ ಜೀವನವೇ ಹೀಗೆ. ಊಟಕ್ಕೆ ಇಲ್ಲದೆ ಪರದಾಡುವವರು ಸಹ ಇಲ್ಲಿ ಕಾಣುತ್ತಾರೆ. ತಿಂದ ಊಟವನ್ನು ಕರಗಿಸಲು ಸಾಧ್ಯವಾಗದೆ ಕಷ್ಟಪಡುವವರು ಒಂದು ಕಡೆ ಇದ್ದಾರೆ. ಜೀರ್ಣಕ್ರಿಯೆ ಸುಧಾರಿಸುವ ಉತ್ತಮ ಆಹಾರಗಳು

ಅದಕ್ಕೆ ನಾವು ನೀವು ಹೊಣೆಯಲ್ಲ ಬಿಡಿ, ನಮ್ಮ ಆಧುನಿಕ ಜೀವನ ನಮಗೆ ನೀಡಿರುವ ಉಡುಗೊರೆ ಅದು. ಒಂದು ವೇಳೆ ನಿಮಗೆ ಸಹ ಅಜೀರ್ಣದ ಸಮಸ್ಯೆ ಇದ್ದಲ್ಲಿ, ಚಿಂತೆ ಮಾಡಬೇಡಿ. ಅಜೀರ್ಣ, ವಾಯು, ತಲೆ ನೋವು, ಸಹಿಸಲಸಾಧ್ಯವಾದ ಎದೆ ಉರಿ, ಇವೆಲ್ಲವು ಜೀರ್ಣಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳು. ಆದರೆ ಇವೇನು ಗುಣಪಡಿಸಲಾಗದ ಸಮಸ್ಯೆಗಳು ಎಂದು ಭಾವಿಸಬೇಡಿ. ನೀವು ಕೆಲವೊಂದು ಆಯುರ್ವೇದದ ಸಲಹೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದಿರಿ ಎಂದರೆ ನಿಮಗೆ ಇದರಿಂದ ಮುಕ್ತಿ ಖಂಡಿತ ಸಿಕ್ಕುತ್ತದೆ. ಅರೆ ಅದು ಯಾವ ಸಲಹೆಗಳು ಎಂಬ ಕುತೂಹಲ ನಿಮ್ಮಲ್ಲಿ ಇದೆಯಲ್ಲವೇ? ಬನ್ನಿ ಅವು ಯಾವುವು ಎಂದು ತಿಳಿದುಕೊಳ್ಳೋಣ...

ಬೆಳಗ್ಗೆ ಬೇಗ ಏಳಿ

ಬೆಳಗ್ಗೆ ಬೇಗ ಏಳಿ

ನೀವು ಬೆಳಗ್ಗೆ ಹೊತ್ತು ಅಲಾರಂ ಅನ್ನು ಸ್ನೂಜ್ ಮಾಡಿ ಮತ್ತೆ ಮಲಗುವ ಅಭ್ಯಾಸವನ್ನು ಇರಿಸಿಕೊಂಡಿದ್ದೀರಾ? ಅದನ್ನು ಮೊದಲು ಬಿಡಿ. ಆಯುರ್ವೇದದ ಪ್ರಕಾರ ಬೆಳಗ್ಗೆ 4-6 ಗಂಟೆಯೊಳಗೆ ಏಳುವ ಅಭ್ಯಾಸ ತುಂಬಾ ಒಳ್ಳೆಯದಂತೆ. ಆಧ್ಯಾತ್ಮಿಕವಾಗಿ ಈ ಅವಧಿಯು ನಿಮ್ಮ ಮನಸ್ಸಿನ ಮೇಲೆ ಅತಿ ಹೆಚ್ಚಿನ ಪ್ರಭಾವ ಬೀರುತ್ತದೆ. ಇದು ನಿಮ್ಮ ಜೀರ್ಣಾಂಗದ ಸಮಸ್ಯೆಗಳನ್ನು ತೊಲಗಿಸುವ ಅತ್ಯುತ್ತಮ ಅಭ್ಯಾಸಗಳಲ್ಲಿ ಮೊದಲನೆಯದಾಗಿರುತ್ತದೆ. ಹಾಗಾಗಿ ದಿನ ಬೇಗ ಏಳಿ.

ಬೆಚ್ಚಗಿನ ನೀರು

ಬೆಚ್ಚಗಿನ ನೀರು

ಆಯುರ್ವೇದವು ಜೀರ್ಣಕ್ರಿಯೆಗೆ ಸಹಾಯ ಮಾಡುವ ಶಾಖವನ್ನು "ಅಗ್ನಿ" ಎಂದು ಪರಿಗಣಿಸಿದೆ. ನಾವು ಊಟ ಮಾಡುವಾಗ ತಣ್ಣೀರು ಕುಡಿದರೆ, ಅದರಿಂದ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಈ ಜೀರ್ಣಕ್ರಿಯೆಯ ಅಗ್ನಿಯು ಆರಿ ಹೋಗುತ್ತದೆ. ಅದು ನಮ್ಮ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಹೊರಹಾಕಲು ಅಡ್ಡಗಾಲಾಗಿ ನಿಂತು ಬಿಡುತ್ತದೆ. ಹಾಗಾಗಿ ಊಟ ಮಾಡಿದ ನಂತರ ಮೊದಲು ಬೆಚ್ಚಗಿನ ನೀರನ್ನು ಕುಡಿಯಿರಿ. ನಿಮಗೆ ಬೇಕಾದಲ್ಲಿ ಇದಕ್ಕೆ ಜೇನು ತುಪ್ಪ ಅಥವಾ ನಿಂಬೆರಸವನ್ನು ಬೆರೆಸಿಕೊಳ್ಳಬಹುದು.

ಸಲಾಡ್‌ಗಳನ್ನು ಸೇವಿಸಿ

ಸಲಾಡ್‌ಗಳನ್ನು ಸೇವಿಸಿ

ಒಂದು ವೇಳೆ ನೀವು ಅಧಿಕ ಪ್ರಮಾಣದಲ್ಲಿ ಸಲಾಡ್‌ಗಳನ್ನು ಸೇವಿಸುತ್ತಿದ್ದಲ್ಲಿ, ಒಮ್ಮೆ ಆಲೋಚಿಸಿ. ಸಲಾಡ್‌ಗಳು ನಿಮ್ಮ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಹೊರಗೆ ಹಾಕುತ್ತದೆ ಎಂಬ ಮೂಢನಂಬಿಕೆಯನ್ನು ಬಿಡಿ. ವಾಸ್ತವದಲ್ಲಿ ಇದನ್ನು ಜೀರ್ಣ ಮಾಡಿಕೊಳ್ಳಲು ನಿಮ್ಮ ದೇಹದಿಂದ ಸಾಧ್ಯವಾಗುವುದಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಲಾಡ್‌ಗಳನ್ನು ಸೇವಿಸಿ

ಸಲಾಡ್‌ಗಳನ್ನು ಸೇವಿಸಿ

ಆದ್ದರಿಂದ ನಿಮ್ಮ ದೇಹಕ್ಕೆ ಜೀರ್ಣ ಮಾಡಿಕೊಳ್ಳಲು ಸುಲಭವಾದ ಸಲಾಡ್ ಅನ್ನು ಸೇವಿಸಿ. ಒಂದು ವೇಳೆ ನಿಮಗೆ ಇಷ್ಟವಾದಲ್ಲಿ, ಸಲಾಡ್ ಅನ್ನು ಉಗಿಯಲ್ಲಿ ಬೇಯಿಸಿಕೊಂಡು ಅಥವಾ ಆರೋಗ್ಯಕರವಾದ ಎಣ್ಣೆಯಲ್ಲಿ ಬೇಯಿಸಿಕೊಂಡು ಸೇವಿಸಿ, ಇದು ನಿಮ್ಮ ದೇಹಕ್ಕೆ ಒಳ್ಳೆಯದು.

ಊಟವಾದ ನಂತರ ವಜ್ರಾಸನದಲ್ಲಿ ಕುಳಿತುಕೊಳ್ಳಿ

ಊಟವಾದ ನಂತರ ವಜ್ರಾಸನದಲ್ಲಿ ಕುಳಿತುಕೊಳ್ಳಿ

ಊಟವಾದ ನಂತರ ವಜ್ರಾಸನದಲ್ಲಿ ಕುಳಿತುಕೊಳ್ಳಿ ಎಂದು ಆಯುರ್ವೇದವು ಸೂಚಿಸುತ್ತದೆ. ಇದಕ್ಕಾಗಿ ಮೊದಲು ಮೊಣಕಾಲಿನ ಮೇಲೆ ಕುಳಿತುಕೊಳ್ಳಿ. ನಿಮ್ಮ ಪಾದಗಳು ನಿಮ್ಮ ಸೊಂಟಕ್ಕೆ ಬೆಂಬಲವಾಗಿ ಇರಲಿ. ಈ ಸ್ಥಿತಿಯಲ್ಲಿ ಕುಳಿತುಕೊಂಡು, ನಿಮಗೆ ಆರಾಮವೆನಿಸಿದಾಗ ನಿಮ್ಮ ಹಸ್ತಗಳನ್ನು ಮೊಣಕಾಲಿನ ಮೇಲೆ ಇರಿಸಿಕೊಳ್ಳಿ. ಈ ಸ್ಥಿತಿಯಲ್ಲಿ 5-6 ನಿಮಿಷಗಳ ಕಾಲ ಕುಳಿತುಕೊಳ್ಳಿ. ಇದು ನಿಮಗೆ ಬರುವ ಅಜೀರ್ಣ ಮತ್ತು ಮಲಬದ್ಧತೆಯನ್ನು ತಡೆಗಟ್ಟುತ್ತದೆ.

English summary

Simple to follow Ayurvedic tips to fix digestion

With the fast-paced lifestyle that we lead, indigestion is one problem we all encounter. Bloating, headache, unexplained chest pain, lethargy are all signs of a sluggish digestive system. But that doesn't mean it is an issue beyond repair. If you follow these four simple Ayurvedic rules, you can eliminate roadblocks to a near-to-perfect digestive system.
X
Desktop Bottom Promotion