Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಎದೆಯಲ್ಲಿ ಉಂಟಾಗುವ ದಟ್ಟಣೆಯನ್ನು ಹೀಗೆ ತಿಳಿಗೊಳಿಸಿ
ದೇಹದ ಪ್ರತಿಯೊಂದು ಅಂಗದ ಆರೈಕೆಯು ತುಂಬಾ ಮುಖ್ಯ. ನಾವು ಒಂದು ಅಂಗವನ್ನು ಕಡೆಗಣಿಸಿದರೂ ಅದರಿಂದ ಸಮಸ್ಯೆಗಳು ಆರಂಭವಾಗುತ್ತದೆ. ಇದಕ್ಕಾಗಿಯೇ ಯೋಗ ಮತ್ತು ವ್ಯಾಯಾಮ ಮಾಡಿದರೆ ಪ್ರತಿಯೊಂದು ಅಂಗಗಳು ಸರಿಯಾಗಿ ಇರುತ್ತದೆ.
ಶ್ವಾಸಕೋಶದಲ್ಲಿ ಕಫ ತುಂಬಿಕೊಳ್ಳುವ ಕಾರಣದಿಂದಾಗಿ ಎದೆಯಲ್ಲಿ ದಟ್ಟನೆ ಉಂಟಾಗಬಹುದು. ಇದರಿಂದ ಎದೆಯ ಭಾಗ ಭಾರವಾಗಿರುವ ಅನುಭವವಾಗಬಹುದು. ಸಣ್ಣ ಮಟ್ಟದ ಎದೆ ನೋವು, ಕಫ, ಉಸಿರಾಟದ ಸಮಸ್ಯೆ, ಕಿರಿಕಿರಿ ಮತ್ತು ಆಯಾಸ ಎದೆ ದಟ್ಟನೆಯ ಅಥವಾ ಎದೆ ಕಂಜೆಷನ್‌ನ ಕೆಲವೊಂದು ಲಕ್ಷಣಗಳಾಗಿವೆ. ಎಚ್ಚರ: ಎದೆ ನೋವು ಎನ್ನುವುದು ಸಾಮಾನ್ಯ ಕಾಯಿಲೆ ಅಲ್ಲ..!
ಸಾಮಾನ್ಯವಾಗಿ ಕಾಡುವಂತಹ ಶೀತದಿಂದಾಗಿಯೂ ಈ ಸಮಸ್ಯೆಯಾಗಬಹುದು. ಜ್ವರ, ಕ್ಷಯರೋಗ, ಅಸ್ತಮಾ, ಗಂಟಲ ಊತ, ನಿಮ್ಯೋನಿಯಾದಂತಹ ಕೆಲವೊಂದು ಸೋಂಕುಗಳು ಇದಕ್ಕೆ ಕಾರಣವಾಗಿರಬಹುದು. ಕೆಲವೊಮ್ಮೆ ಈ ಲೇಖನದಲ್ಲಿ ನೀಡಿರುವಂತಹ ಮನೆಮದ್ದುಗಳು ಕೆಲಸ ಮಾಡಬಹುದು.
ಆದರೆ ವೈದ್ಯರನ್ನು ಭೇಟಿಯಾಗುವುದು ಅತ್ಯಗತ್ಯ. ಸರಿಯಾಗಿ ನಿದ್ರೆ ಮಾಡಿದರೆ ಪ್ರತಿರೋಧಕ ಶಕ್ತಿಯು ಹೆಚ್ಚಾಗುವುದು. ಬೆಡ್ ರೂಮ್ ನಲ್ಲಿ ಧೂಳು ಇಲ್ಲದಂತೆ ನೋಡಿಕೊಳ್ಳಿ. ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಕಡಿಮೆ ಮಾಡಿಕೊಳ್ಳಿ. ಹಣ್ಣುಗಳು ಹಾಗೂ ತರಕಾರಿ ಸೇವನೆ ಮಾಡಿ....

ಉಪ್ಪು + ಬಿಸಿ ನೀರು
ಒಂದು ಚಿಟಿಕೆ ಉಪ್ಪನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಕುಡಿಯಿರಿ. ದಿನದಲ್ಲಿ ಮೂರು ಸಲ ಹೀಗೆ ಮಾಡಿ. ಇದು ಲೋಳೆ ನಿವಾರಣೆ ಮಾಡಿ ಕಿರಿಕಿರಿ ಕಡಿಮೆ ಮಾಡುತ್ತದೆ. ಉಪ್ಪು ಬೆರೆಸಿದ ಬೆಚ್ಚನೆಯ ನೀರು, ಆಯಸ್ಸು ನೂರು!

ಬಿಸಿ ನೀರಿಗೆ ಅರಿಶಿನ ಹಾಕಿ ಕುಡಿಯಿರಿ
ಅರಿಶಿನದಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ. ಒಂದು ಲೋಟ ಬಿಸಿ ನೀರಿಗೆ ಅರಿಶಿನ ಹಾಕಿ ಕುಡಿಯಿರಿ. ಆದರೆ ಆಸಿಡಿಟಿ, ಪಿತ್ತಗಲ್ಲು ಮತ್ತು ಅಲ್ಸರ್ ಇರುವವರು ಇದನ್ನು ಸೇವಿಸಬೇಡಿ. ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಈರುಳ್ಳಿ ರಸ

ಆವಿಗೆ ಮುಖವೊಡ್ಡಿ
ಎದೆ ದಟ್ಟನೆ ನಿವಾರಣೆ ಮಾಡಲು ಬಿಸಿನೀರಿಗೆ ಆವಿಗೆ ಮುಖವೊಡ್ಡಿ ಸ್ವಲ್ಪ ಮಟ್ಟಿನ ಪರಿಹಾರ ಪಡೆಯಬಹುದು. ಕೆಲವು ಹನಿ ನೀಲಗಿರಿ ತೈಲವನ್ನು ಬಿಸಿ ನೀರಿಗೆ ಹಾಗಿ ಅದರ ಆವಿಯನ್ನು ಮೂಗಿನ ಮೂಲಕ ಮೇಲೆ ಎಳೆದುಕೊಳ್ಳಿ. ಮಕ್ಕಳು, ಗರ್ಭಿಣಿ ಮಹಿಳೆಯರು ಮತ್ತು ರಕ್ತದೊತ್ತಡ ಇರುವವರು ಇದನ್ನು ಪ್ರಯತ್ನಿಸಲೇಬಾರದು.

ಜೇನಿನೊಂದಿಗೆ ನಿಂಬೆರಸ.....
ಜೇನಿನೊಂದಿಗೆ ನಿಂಬೆರಸವನ್ನು ಹಾಕಿ ಕುಡಿದರೆ ಪರಿಹಾರ ಸಿಗುವುದು. ವಿಟಮಿನ್ ಸಿ ಲೋಳೆಯನ್ನು ತೆಗೆಯುವುದು ಮತ್ತು ಜೇನು ಕಫವನ್ನು ನಿಯಂತ್ರಿಸುವುದು.

ಬಿಸಿ ನೀರಿನಲ್ಲಿ ಅದ್ದಿಕೊಂಡ ಬಟ್ಟೆ
ಬಿಸಿ ನೀರಿನಲ್ಲಿ ಅದ್ದಿಕೊಂಡ ಬಟ್ಟೆಯನ್ನು ಎದೆಯ ಮೇಲಿಟ್ಟರೆ ಅದರಲ್ಲಿನ ಬಿಸಿ ಎದೆ ದಟ್ಟನೆಯನ್ನು ಕಡಿಮೆ ಮಾಡುವುದು.

ಶುಂಠಿ ಚಹಾ...
ಶುಂಠಿಯಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ ಮತ್ತು ಇದು ಎದೆ ದಟ್ಟನೆ ನಿವಾರಣೆ ಮಾಡುತ್ತದೆ. ಶುಂಠಿಯಲ್ಲಿರುವ ಕೆಲವೊಂದು ಅಂಶಗಳು ಲೋಳೆ ಸ್ರವಿಸದಂತೆ ನೋಡಿಕೊಳ್ಳುತ್ತದೆ. ಹಾಲು ಹಾಕದೆ ಶುಂಠಿ ಹಾಕಿದ ಚಹಾ ಕುಡಿದು ನೋಡಿ. ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!



Click it and Unblock the Notifications
