Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಜುಗರ ತರಿಸುವ ಹೊಟ್ಟೆಯ ಬೊಜ್ಜಿನ ಸಮಸ್ಯೆಗೆ ಸಿಂಪಲ್ ಜ್ಯೂಸ್
ಒಂದು ಕಾಲದಲ್ಲಿ ಸ್ಥೂಲಕಾಯ ಎಂದರೆ ಆರೋಗ್ಯದ ಲಕ್ಷಣ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಇದು ಮಿಥ್ಯೆ, ಇದು ಅನಾರೋಗ್ಯದ ಲಕ್ಷಣ ಎಂದು ಎಲ್ಲರಿಗೂ ತಿಳಿದಿದೆ. ತಜ್ಞರ ಪ್ರಕಾರ ಸೊಂಟದ ಭಾಗದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸದೇ ಇದ್ದರೆ ಇದರ ಪರಿಣಾಮ ವಯಸ್ಸಾದ ಬಳಿಕ ವಿಪರೀತವಾಗಬಹುದು. ಚುಟುಕಾಗಿ ಹೇಳುವುದಾದರೆ ಸೊಂಟದ ಕೊಬ್ಬು ಕೆಟ್ಟದ್ದು. ಬರೆಯ ನಿಮ್ಮ ಉಡುಗೆಗಳಿಗೆ ಮಾತ್ರವಲ್ಲ, ನಿಮ್ಮ ಆರೋಗ್ಯಕ್ಕೂ ಸಹಾ.

ಆದರೆ ಈ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ನಮ್ಮ ಕೊಬ್ಬು ಕರಗಿಸುವ ಪ್ರಯತ್ನಗಳಿಗೆ ಸೊಂಟದ ಕೊಬ್ಬು ಕಟ್ಟ ಕಡೆಯದಾಗಿ ಕರಗುವ ಕಾರಣ ಮೊದಲ ಪ್ರಯತ್ನಗಳಲ್ಲೇ ತಾಳ್ಮೆ ಕಳೆದುಕೊಳ್ಳುವ ಮೂಲಕ ಕರಗದೇ ಇರುವ ಸಾಧ್ಯತೆಯೇ ಹೆಚ್ಚು. ಆದರೆ ಇದನ್ನು ಕರಗಿಸಲು ಕೆಲವು ಟ್ರಿಕ್‌ಗಳಿವೆ. ಅದೆಂದರೆ ದೇಹಕ್ಕೆ ಈ ಕೊಬ್ಬನ್ನು ತಕ್ಷಣ ಬಳಸು ಎಂದು ಆದೇಶ ನೀಡುವುದು. ಇದು ಹೇಗೆ ಸಾಧ್ಯ? ಈ ಕೆಲಸ ಒಂದು ವಿಶಿಷ್ಟ ಜ್ಯಾಸ್‌ಗೆ ಮಾತ್ರ ಸಾಧ್ಯ.
ಇದರಲ್ಲಿ ಬಳಸಲಾಗಿರುವ ಸಾಮಾಗ್ರಿಗಳಲ್ಲಿ ಕ್ಯಾಲೋರಿಗಳು ಅತಿ ಕಡಿಮೆ ಇದ್ದು ಹಠಮಾರಿ ನಾರುಗಳು ಹೆಚ್ಚಿರುವುದೇ ಇದರ ಗುಟ್ಟು. ಅಂದರೆ ಈ ಆಹಾರವನ್ನು ಸೇವಿಸಿದಾಗ ಇದರ ನಾರನ್ನು ಒಡೆದು ಜೀರ್ಣಿಸಿಕೊಳ್ಳಲು ನಡೆಸುವ ಯತ್ನದಲ್ಲಿ ನಮ್ಮ ಜೀರ್ಣಾಂಗಗಳು ಕೊಬ್ಬನ್ನು ಅನಿವಾರ್ಯವಾಗಿ ಬಳಸಲೇಬೇಕಾಗುತ್ತದೆ. ಇದೇ ಕೊಬ್ಬು ಕರಗುವ ಗುಟ್ಟು. ಬನ್ನಿ, ಕರಗಲು ಒಪ್ಪದ ನಿಮ್ಮ ಸೊಂಟಕ್ಕೆ ಒಂದು ಸವಾಲು ಹಾಕಿ. ಕೆಲವೇ ದಿನಗಳಲ್ಲಿ ನಿನ್ನ ಕೊಬ್ಬು ಅಡಗಿಸುತ್ತೇನೆ ಎಂದು ಶಪಥ ತೊಟ್ಟು ಕೆಳಗಿನ ಜ್ಯೂಸ್ ಅನ್ನು ನಿತ್ಯವೂ ಕುಡಿಯಲು ಪ್ರಾರಂಭಿಸಿ: ಹೊಟ್ಟೆಯ ಬೊಜ್ಜನ್ನು ಕರಗಿಸಲು ಪರಿಣಾಮಕಾರಿ ಟಿಪ್ಸ್
ಅಗತ್ಯವಿರುವ ಸಾಮಾಗ್ರಿಗಳು:
*ಒಂದು ಸೌತೆ (ಮಧ್ಯಮ ಗಾತ್ರ)
*ಹಸಿಶುಂಠಿ: ಸುಮಾರು ಒಂದಿಂಚಿನ ಗಾತ್ರ
*ಲಿಂಬೆ ರಸ: ಸುಮಾರು ಮೂರರಿಂದ ನಾಲ್ಕು ಚಿಕ್ಕ ಚಮಚ
*ಪುದೀನಾ ಎಲೆಗಳು: ನಾಲ್ಕರಿಂದ ಐದು
*ಉಪ್ಪು: ಒಂದು ಚಿಕ್ಕ ಚಮಚ
*ತುಳಸಿ ಎಲೆಗಳು: ಮೂರರಿಂದ ನಾಲ್ಕು (ಬಲಿತದ್ದು) ಈ ವಿಧಾನ ಪಾಲಿಸಿದರೆ ಕರಗುತ್ತೆ ಹೊಟ್ಟೆಯ ಬೊಜ್ಜು
ತಯಾರಿಕಾ ವಿಧಾನ:
* ಮೊದಲು ಸೌತೆ, ಹಸಿಶುಂಠಿಯನ್ನು ಮಿಕ್ಸಿಯಲ್ಲಿ ಚೆನ್ನಾಗಿ ಅರೆದು ಒಂದೆರಡು ಲೋಟ ತಣ್ಣೀರು ಹಾಕಿ
* ಈ ನೀರಿಗೆ ಇತರ ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಮತ್ತೊಮ್ಮೆ ನಿಧಾನವಾಗಿ ಗೊಟಾಯಿಸಿ.
* ಇನ್ನು ಈ ನೀರನ್ನು ಇಡಿಯ ದಿನ ನಿಧಾನವಾಗಿ ಕುಡಿಯುತ್ತಾ ಬನ್ನಿ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಅರ್ಧಲೋಟ ಕುಡಿಯುವುದರಿಂದ ಪ್ರಾರಂಭಿಸಿ.
* ಕೆಲವಾರು ದಿನಗಳಾದರೂ ಎಡೆಬಿಡದೇ ಈ ವಿಧಾನ ಅನುಸರಿಸಿ. ಇದರಿಂದ ಕೆಲವೇ ದಿನಗಳಲ್ಲಿ ಹೊಟ್ಟೆಯ ಕೊಬ್ಬು ಕರಗುತ್ತಿರುವುದು ಕಂಡುಬರುತ್ತದೆ. ಬರೀ ಏಳು ದಿನಗಳಲ್ಲಿ, ಹೊಟ್ಟೆಯ ಬೊಜ್ಜು ಕರಗಿಸಿಕೊಳ್ಳಿ!
ಎಚ್ಚರಿಕೆ:
ಒಂದು ವೇಳೆ ನೀವು ಬೇರೆ ಕಾಯಿಲೆಗೆ ಔಷಧಿ ಸೇವಿಸುತ್ತಿದ್ದರೆ ಈ ವಿಧಾನ ಅನುಸರಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆದೇ ಮುಂದುವರೆಯಿರಿ.
ನಿಮ್ಮ ದೇಹ ಈ ಪೇಯಕ್ಕೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಮೊದಲಿಗೆ ಅರ್ಧ ಲೋಟ ಮಾತ್ರ ಕುಡಿದು ನೋಡಿ, ಆ ಪ್ರಕಾರವೇ ಮುಂದುವರೆಯಿರಿ. ಯಾವುದೇ ಅಲರ್ಜಿಯ ಸೂಚನೆ ಕಂಡುಬಂದರೆ ತಕ್ಷಣ ನಿಲ್ಲಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


