Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಏನಿದು ದಡಾರ ರೋಗ..? ಇದರ ಲಕ್ಷಣಗಳೇನು?
ರೋಗಗಳು ಹೇಳಿ ಕೇಳಿ ಬರುವುದಿಲ್ಲಾ ಎಂಬ ಮಾತಿನಂತೆ ನಮ್ಮ ದೇಹಕ್ಕೆ ದಾಳಿ ಮಾಡುವ ಕಾಯಿಲೆಗಳು ಹಠಾತ್ತನೇ ತಮ್ಮ ಇರುವಿಕೆಯನ್ನು ಘೋಷಿಸಿಬಿಡುತ್ತವೆ. ಅದರಲ್ಲೂ ದೇಹವು ಸಾಕಷ್ಟು ರೋಗನಿರೋಧಕ ಶಕ್ತಿಯನ್ನು ಹೊಂದಿಲ್ಲ ಎಂದಾದಲ್ಲಿ ಈ ರೋಗಗಳು ಉಲ್ಬಣಗೊಂಡು ಚೇತರಿಕೆಯನ್ನು ಕಾಣದೇ ದೇಹಕ್ಕೆ ಮಾರಕವಾಗಬಲ್ಲುದು. ಆದ್ದರಿಂದ ರೋಗ ಯಾವುದೇ ಬರಲಿ ಅದನ್ನು ಪ್ರತಿರೋಧಿಸುವ ಚೈತನ್ಯ ನಮ್ಮಲ್ಲಿರಬೇಕು. ರೋಗ ನಿರೋಧಕ ಶಕ್ತಿಯು ನಾವು ಸೇವಿಸುವ ಆಹಾರವನ್ನು ಅವಲಂಬಿಸಿಕೊಂಡು ಇರುತ್ತವೆ. ನಮ್ಮ ದೇಹಕ್ಕೆ ಸಾಕಷ್ಟು ಪ್ರೋಟೀನ್ ನ್ಯೂಟ್ರೀನ್‌ಗಳನ್ನು ನಾವು ನೀಡುತ್ತಿಲ್ಲ ಎಂದಾದಲ್ಲಿ ಕಾಯಿಲೆಗಳನ್ನು ಸಹಿಸುವ ಶಕ್ತಿಯನ್ನು ದೇಹ ಕಳೆದುಕೊಳ್ಳುತ್ತದೆ.
ಸಾಮಾನ್ಯವಾಗಿ, ಬರಿಯ ಶೀತ, ನೆಗಡಿ, ಕೆಮ್ಮು ಮುಂತಾದವುಗಳಾದರೆ ಅದಕ್ಕೆ ಸೂಕ್ತ ಔಷಧಿಯನ್ನು ತೆಗೆದುಕೊಂಡು ಪರಿಹಾರವನ್ನು ಕಂಡುಕೊಳ್ಳಹುದು. ಆದರೆ ಕೆಲವೊಂದು ರೋಗಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮನ್ನು ಇನ್ನಷ್ಟು ಜರ್ಝರಿತಗೊಳಿಸುತ್ತವೆ. ಅಂತಹ ರೋಗಗಳ ಪಟ್ಟಿಯಲ್ಲಿ ದಡಾರ ಎಂಬ ಸಾಂಕ್ರಾಮಿಕ ರೋಗ ಕೂಡ ಒಂದು. ಹೌದು ಈ ರೋಗವು ಹೆಚ್ಚು ಕಾಣಿಸಿಕೊಳ್ಳುವುದೇ ಮಕ್ಕಳಲ್ಲಿ. ಮಕ್ಕಳಲ್ಲಿ ಈ ಶಕ್ತಿ ಒಮ್ಮೊಮ್ಮೆ ಅತಿಕಡಿಮೆ ಇರುವುದು ಅಂತೆಯೇ ಬೇಗನೇ ಹರಡುವ ಸ್ವಭಾವವನ್ನು ಈ ರೋಗವು ಪಡೆದುಕೊಂಡಿರುವುದರಿಂದ ಮಕ್ಕಳು ಈ ರೋಗಕ್ಕೆ ಶೀಘ್ರವೇ ತುತ್ತಾಗುತ್ತಾರೆ.
ದಡಾರ ಒಂದು ಸಾಂಕ್ರಾಮಿಕ ರೋಗವಾಗಿದ್ದು ಪ್ಯಾರೊಮಿಕ್ಸ್ ಎಂಬ ವೈರಸ್ ಈ ರೋಗಕ್ಕೆ ಕಾರಣವಾಗಿದೆ. ಈ ಕಾಯಿಲೆ ಹೆಚ್ಚಾಗಿ ಮಕ್ಕಳನ್ನು ಕಾಡುತ್ತದೆ. ರೋಗವಿರುವ ಬೇರೊಂದು ಮಗುವಿನ ಜೊತೆಗೆ ಇತರ ಮಕ್ಕಳೂ ಬೆರೆಯುವುದರಿಂದ ಈ ರೋಗ ಕೂಡಲೇ ಹರಡುತ್ತದೆ. ವ್ಯಾಕ್ಸಿನೇಷನ್ (ಚುಚ್ಚುಮದ್ದು) ಒಂದೇ ಈ ರೋಗಕ್ಕೆ ಪರಿಹಾರವಾಗಿದ್ದು ಪ್ರಥಮ ವರ್ಷದಲ್ಲಿ ಮಗುವಿಗೆ ಚುಚ್ಚುಮದ್ದನ್ನು ನೀಡಲೇಬೇಕು. ರುಬೆಲ್ಲಾ ಹಾಗೂ ಮಂಪ್ಸ್ ಹೆಸರಿನ ಎರಡು ಲಸಿಕೆಗಳ ಮಿಶ್ರಣವಾಗಿ ಈ ಚುಚ್ಚುಮದ್ದನ್ನು ಮಕ್ಕಳಿಗೆ ನೀಡಲಾಗುತ್ತದೆ. ಒಬ್ಬ ವ್ಯಕ್ತಿ ಈ ರೋಗಕ್ಕೆ ಗುರಿಯಾದರು ಎಂದಾದಲ್ಲಿ ಆಕೆ/ಆತ ಜೀವನ ಪರ್ಯಂತ ಈ ರೋಗಕ್ಕಾಗಿ ಪ್ರತಿರಕ್ಷಣೆಯನ್ನು ಪಡೆದುಕೊಳ್ಳಲೇಬೇಕು.

ದಡಾರ ರೋಗಲಕ್ಷಣಗಳು
ವೈರಸ್ ದಾಳಿ ಮಾಡಿದ ಏಳರಿಂದ ಹದಿನಾಲ್ಕು ದಿನಗಳಲ್ಲಿ ದಡಾರ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ತ್ವಚೆಯಲ್ಲಿ ಸಣ್ಣ ವೃತ್ತಾಕಾರದ ಮಾದರಿಯಲ್ಲಿ ಕೆಂಪು ಗುಳ್ಳೆಗಳು ಉಂಟಾಗುತ್ತವೆ. ಇದು ಮೊದಲಿಗೆ ಗುಲಾಬಿ ಬಣ್ಣದಲ್ಲಿದ್ದು ನಂತರ ಸಮಯ ಕಳೆದಂತೆ ಗಾಢ ಕೆಂಪು ಬಣ್ಣಕ್ಕೆ ಇದು ತಿರುಗುತ್ತದೆ. ಈ ಕೆಂಪು ಗುಳ್ಳೆಗಳು ಮೊದಲು ಮುಖದ ಎರಡೂ ಬದಿಗಳಲ್ಲಿ ಕಾಣಿಸಿಕೊಳ್ಳುತ್ತವೆ ನಂತರ ಕುತ್ತಿಗೆಯ ಭಾಗ ಹಾಗೂ ನಿಧಾನಕ್ಕೆ ದೇಹವನ್ನು ವ್ಯಾಪಿಸಿಕೊಳ್ಳುತ್ತದೆ. ದಡಾರದ ಇನ್ನೊಂದು ರೋಗ ಲಕ್ಷಣವೆಂದರೆ ತೀವ್ರ ಜ್ವರ ಕಾಣಿಸಿಕೊಳ್ಳುವುದು ಇದು 104 ಡಿಗ್ರಿಯನ್ನು ತಲುಪುವ ಸಾಧ್ಯತೆ ಕೂಡ ಇರುತ್ತದೆ. ಸುರಿಯುತ್ತಿರುವ ಮೂಗು, ನೋಯುತ್ತಿರುವ ಗಂಟಲು, ನಿರಂತರ ಒಣ ಕೆಮ್ಮು, ಕಣ್ಣುಗಳ ಕೆಂಪು ಹಾಗೂ ನೀರು ಸುರಿಯುವುದು, ಹಸಿವು ಇಲ್ಲದಿರುವುದು ಭೇದಿ, ವಾಂತಿ ಮತ್ತು ಡಿಲೀರಿಯಂ ತೀವ್ರ ಸಂದರ್ಭಗಳಲ್ಲಿ ಉಂಟಾಗುತ್ತದೆ.
ದಡಾರಕ್ಕೆ ಪರಿಹಾರಗಳು
ಹುಣಸೇ ಹಣ್ಣಿನ ಬೀಜಗಳು ಮತ್ತು ಅರಿಶಿನ
ದಡಾರವನ್ನು ಹೋಗಲಾಡಿಸಲು ಹುಣಸೇ ಹಣ್ಣಿನ ಬೀಜಗಳು ಮತ್ತು ಅರಶಿನ ಅತ್ಯುತ್ತಮವಾಗಿದೆ. ಹುಣಸೇ ಹಣ್ಣಿನ ಬೀಜಗಳನ್ನು ಕುಟ್ಟಿ ಹುಡಿಮಾಡಿಟ್ಟುಕೊಳ್ಳಿ ನಂತರ ಸಮಪ್ರಮಾಣದಲ್ಲಿ ಹುಡಿ ಮಾಡಿದ ಬೀಜಗಳು ಮತ್ತು ಅರಿಶಿನವನ್ನು ತೆಗೆದುಕೊಳ್ಳಿ ಈ ಮಿಶ್ರಣವನ್ನು 350 ಗ್ರಾಮ್‌ನಿಂದ 425 ಗ್ರಾಮ್‌ವರೆಗೆ ನಿತ್ಯವೂ ಮೂರು ಹೊತ್ತು ರೋಗಿಗೆ ನೀಡಬೇಕು.
ಮಾರ್ಗೋಸಾ ಎಲೆಗಳು
ವೈರಸ್ ನಿರೋಧಕ ಮತ್ತು ನಂಜು ನಿರೋಧಕ ಗುಣವನ್ನು ಹೊಂದಿರುವ ಮಾರ್ಗೋಸಾ ಎಲೆಗಳು ದಡಾರದ ಉಪಶಮನಕ್ಕೆ ಹೇಳಿಮಾಡಿಸಿದ್ದಾಗಿದೆ. ರೋಗಿಗೆ ಕೆಂಪು ಗುಳ್ಳೆಗಳಿಂದ ಉಂಟಾಗುವ ತುರಿಕೆಯನ್ನು ನಿವಾರಿಸಲು ಸ್ನಾನದ ಬಿಸಿ ನೀರಿಗೆ ಮಾರ್ಗೋಸಾ ಎಲೆಗಳನ್ನು ಹಾಕಬೇಕು. ಉತ್ತಮ ಫಲಿತಾಂಶಕ್ಕಾಗಿ ರೋಗಿಯು ಕನಿಷ್ಟ ಪಕ್ಷ 20 ನಿಮಿಷಗಳ ಕಾಲ ನೀರಿನಲ್ಲಿ ಮುಳುಗಿರಬೇಕಾಗುತ್ತದೆ.
ಬೆಳ್ಳುಳ್ಳಿ
ದಡಾರದ ಶಮನಕ್ಕಾಗಿ ಬೆಳ್ಳುಳ್ಳಿ ಕೂಡ ಅತ್ಯುತ್ತಮವಾದುದಾಗಿದೆ. ಬೆಳ್ಳುಳ್ಳಿಯ ಹುಡಿ ಸಿದ್ಧಮಾಡಿ ಇದನ್ನು ಜೇನಿನೊಂದಿಗೆ ಸೇರಿಸಿ ನಂತರ ರೋಗಿಗೆ ಇದನ್ನು ನಿತ್ಯವೂ ನೀಡಿ.
ಲಿಂಬೆ ರಸ
ದಡಾರಕ್ಕೆ ನೈಸರ್ಗಿಕ ಪರಿಹಾರವನ್ನು ಒದಗಿಸಲು ಲಿಂಬೆ ರಸ ಸೂಕ್ತವಾದುದಾಗಿದೆ. 15-25 ಎಮ್‌ಎಲ್‌ನಷ್ಟು ಲಿಂಬೆ ರಸವನ್ನು ತೆಗೆದುಕೊಂಡು ನೀರಿನೊಂದಿಗೆ ಬೆರೆಸಿ ತೆಗೆದುಕೊಳ್ಳಬೇಕು. ಇದೂ ಕೂಡ ದಡಾರಕ್ಕೆ ಶೀಘ್ರ ಪರಿಹಾರವನ್ನು ಒದಗಿಸುತ್ತದೆ.
ಹಾಗಲಕಾಯಿ ಎಲೆಗಳು ಮತ್ತು ಅರಿಶಿನದ ಬೇರು
ಎಳನೀರು ಮತ್ತು ಗಂಜಿ
ಬಾರ್ಲಿ
ದಡಾರವು ಉಂಟುಮಾಡುವ ಒಣಕೆಮ್ಮನ್ನು ನಿವಾರಿಸಲು ಬಾರ್ಲಿ ನೀರು ಸೂಕ್ತವಾದುದಾಗಿದೆ. ಸಿಹಿಯಾದ ಬಾದಾಮಿ ಎಣ್ಣೆ ಸೇರಿಸಿದ ಬಾರ್ಲಿ ನೀರನ್ನು ರೋಗಿಯು ಆಗಾಗ್ಗೆ ಸೇವಿಸುವುದರಿಂದ ದಡಾರದಿಂದ ಉಪಶಮವನ್ನು ಪಡೆಯಲು ಸಾಧ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


