Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಸ್ತಮಾವನ್ನು ಹದ್ದುಬಸ್ತಿನಲ್ಲಿಡಲು ಅನುಸರಿಸಿ 'ಪರಿಗಾಸನ'
ಶ್ವಾಸಕೋಶಕ್ಕೆ ಸರಿಯಾಗಿ ಗಾಳಿ ತಲುಪದೇ ಕಫದಿಂದ ಅಡ್ಡಗಟ್ಟಿದ್ದರೆ, ನಿಮ್ಮ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಇದು ಅಸ್ತಮದ ಮುಖ್ಯ ಲಕ್ಷಣವಾಗಿದೆ. ಅಸ್ತಮಾ ತೊಂದರೆಯಿಂದ ಬಳಲುವವರ ಇತರ ಲಕ್ಷಣಗಳೇನೆಂದರೆ, ಕೆಮ್ಮು, ಗೂರುಬ್ಬುಸ, ಎದೆ ನೋವು, ಆಯಾಸ ಹಾಗು ಇತರ ಉಸಿರಾಟದ ತೊಂದರೆಗಳು. ಎಲ್ಲಾ ವಯಸ್ಸಿನವರಿಗೂ ಈ ಅಸ್ತಮಾ ತೊಂದರೆ ಬರಬಹುದು.
ಸಣ್ಣ ಮಕ್ಕಳು, ಮಧ್ಯೆ ವಯಸ್ಕರು ಹಾಗು ಹಿರಿಯ ವಯಸ್ಕರು ಯಾರಿಗೇ ಆಗಲಿ ಈ ತೊಂದರೆ ಕಾಣಿಸಿಕೊಳ್ಳಬಹುದು. ಕಡಿಮೆ ರೋಗನಿರೋಧಕ ಶಕ್ತಿ ಇರುವವರಿಗೆ ಈ ಸಮಸ್ಯೆ ಎದುರಿಸುವ ಭೀತಿ ಹೆಚ್ಚಿರುತ್ತದೆ. ಹೆಚ್ಚುತ್ತಿರುವ ವಾಯು ಮಾಲಿನ್ಯ ಅಸ್ತಮ ರೋಗಿಗಳ ಸಂಖ್ಯೆ ಏರುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದೆ.

ಈ ಸಮಸ್ಯೆಯಿಂದ ಬಳಲುತ್ತಿರುವವರು ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯವಿಲ್ಲ ಎಂಬುದು ಬೇಸರದ ಸಂಗತಿ. ಇದು ಬರದೇ ಇರುವ ಹಾಗೆ ತಡೆಗಟ್ಟಲು ಕ್ರಮ ಕೈಗೊಳ್ಳುವುದೇ ಒಳಿತು. ಔಷಧಿಯ ಸೌಲಭ್ಯಗಳಿದ್ದರೂ ತಾತ್ಕಾಲಿಕ ಪರಿಹಾರವನ್ನು ಕೊಡುತ್ತದೆ. ಅಸ್ತಮಾ ವಂಶಪಾರಂಪರ್ಯವಾದ ಕಾಯಿಲೆಯೇ?
ದೀರ್ಘಕಾಲದ ಪರಿಹಾರವನ್ನು ನೀವು ಹುಡುಕುತ್ತಿದ್ದರೆ, ಯೋಗಾಭ್ಯಾಸವು ಅಳವಡಿಸಿಕೊಳ್ಳುವುದು ಉತ್ತಮ. ಪರಿಗಾಸನವನ್ನು ಅಭ್ಯಾಸ ಮಾಡಿದರೆ, ತಕ್ಕ ಮಟ್ಟಿಗೆ ಸಮಸ್ಯೆಯಿಂದ ಹೊರಬರಲು ನೆರವಾಗುತ್ತದೆ. ಕೆಲವು ದಿನಗಳು ನಿರಂತರ ಅಭ್ಯಾಸ ಮಾಡಿದರೆ ಈ ಆಸನವನ್ನು ಸುಲಭವಾಗಿ ಹಾಕಲು ಸಾಧ್ಯವಾಗುತ್ತದೆ. ಈ ಆಸನವನ್ನು ಹಾಕುವ ಬಗೆ ಹೇಗೆ ಎಂದು ತಿಳಿದುಕೊಳ್ಳೋಣ.
ಪರಿಗಾಸನವನ್ನು ಹಾಕಲು ಕ್ರಮಬದ್ಧವಾದ ವಿವರಣೆ
1. ನಿಧಾನವಾಗಿ, ನಿಂತಿರುವ ಭಂಗಿಯಿಂದ ನೆಲದ ಮೇಲೆ ಮಂಡಿಕಾಲನ್ನು ಊರಿ ನಿಂತುಕೊಳ್ಳಬೇಕು
2. ನಿಮ್ಮ ಮಂಡಿ ಮತ್ತು ಸೊಂಟ ದೂರವಿದ್ದು ತೊಡೆಗಳು ಸಮತೋಲನವಾಗಿರಬೇಕು ಒಂದೇ ತಿಂಗಳಿನಲ್ಲಿ ಅಸ್ತಮಾವನ್ನು ನಿವಾರಿಸುವ ಮನೆಮದ್ದುಗಳು
3. ನಿಮ್ಮ ಬಲಭಾಗದ ಕಾಲ್ಬೆರಳನ್ನು ಮುಂದಕ್ಕೆ ಚಾಚಿ
4. ನಿಧಾನವಾಗಿ ನಿಮ್ಮ ಎಡಗೈಯನ್ನು ತಲೆಯ ಮೇಲೇ ತಗೆದುಕೊಂಡು ಮೇಲೇ ಚಾಚಬೇಕು
5. ಬಲಭಾಗಕ್ಕೆ ಸ್ವಲ್ಪವೇ ಬಾಗಿಸಿ ಚಾಚಬೇಕು
6. ಈ ಭಂಗಿಯಲ್ಲಿದ್ದಾಗ ಬಲಗೈಯನ್ನು ಬಲತೊಡೆಯ ಮೇಲೇ ನೇರವಾಗಿರಿಸಬೇಕು
7. ದೀರ್ಘವಾಗಿ ಉಸಿರಾಡಿಸಿ ಇದೇ ಭಂಗಿಯಲ್ಲಿ ಕೆಲ ಕ್ಷಣಗಳ ಕಾಲ ಇರಬೇಕು
8. ನಿಧಾನವಾಗಿ ಭಂಗಿಯಿಂದ ಹೊರಗೆ ಬನ್ನಿ. ಇದೇ ಕ್ರಮವನ್ನು ಇನ್ನಂದು ಬದಿಗೂ ಅಭ್ಯಾಸ ಮಾಡಿ
ಪರಿಗಾಸನದಿಂದಾಗುವ ಇತರ ಲಾಭಗಳು
*ಬೆನ್ನೆಲಬನ್ನು ಹಿಗ್ಗಿಸಲು ಹಾಗು ಅದರ ನಮ್ಯತೆಯನ್ನು ಕಾಪಾಡಲು ನೆರವಾಗುತ್ತದೆ
*ಪಾದಗಳ ಬಲವನ್ನು ಹೆಚ್ಚಿಸುತ್ತದೆ
*ಭುಜಗಳ ಬಲವನ್ನು ಹೆಚ್ಚಿಸುತ್ತದೆ
*ಕಿಬ್ಬೊಟ್ಟೆಯನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ
*ಸ್ನಾಯುಗಳ ನಮ್ಯತೆಯನ್ನು ಹೆಚ್ಚಿಸುತ್ತದೆ
*ಸರಾಗವಾಗಿ ಉಸಿರಾಡಲು ನೆರವಾಗುತ್ತದೆ ಅಸ್ತಮಾ ರೋಗಕ್ಕೆ ಪ್ರಥಮ ಚಿಕಿತ್ಸೆ ಹೇಗೆ?
ಎಚ್ಚರಿಕೆ
ಯಾರಿಗೆ ಮಂಡಿಯಲ್ಲಿ, ತೋಳುಗಳಲ್ಲಿ ಅಥವಾ ಸೊಂಟದಲ್ಲಿ ನೋವು ಅಥವಾ ಗಾಯಗಳಾಗಿದೆಯೋ ಅಂತವರು ಈ ಪರಿಗಾಸನವನ್ನು ಅಭ್ಯಾಸ ಮಾಡತಕ್ಕದ್ದಲ್ಲ. ನುರಿತ ಯೋಗಾ ತರಬೇತಿದಾರರಿಂದ ಸಲಹೆಯನ್ನು ತೆಗೆದು ಕೊಳ್ಳುವುದು ಹೆಚ್ಚು ಸೂಕ್ತ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

