ಬರೀ ಒಂದೆರಡು ಚಮಚ ತುಪ್ಪದಲ್ಲಿದೆ ಹತ್ತಾರು ಲಾಭ....

By: Deepu
Subscribe to Boldsky

ದೇಹ ಆರೋಗ್ಯದಿಂದ ನಳನಳಿಸಬೇಕೇ, ಹುರಿಗಟ್ಟಿದ ಮಾಂಸಖಂಡಗಳಿಂದ ದಷ್ಟಪುಷ್ಟವಾಗಬೇಕೇ? ಚೆನ್ನಾಗಿ ತುಪ್ಪ ಸೇವಿಸಿ ಎಂದು ಹಿರಿಯರು ಹೇಳುತ್ತಲೇ ಬಂದಿದ್ದಾರೆ. ತುಪ್ಪ, ಮೊಸರು ಬೆಣ್ಣೆಗಳು ಭಾರತೀಯ ಆಹಾರದಲ್ಲಿ ಬಹಳ ಹಿಂದಿನಿಂದಲೇ ಬಳಕೆಯಲ್ಲಿವೆ. ಮಹಾಭಾರತದ ಕೃಷ್ಣನೂ ಬೆಣ್ಣೆ ಕದ್ದು ತಿಂದು ಪ್ರಖ್ಯಾತನಾಗಿದ್ದಾನೆ.   ಅಪ್ಪಟ ದೇಸಿ ತುಪ್ಪಕ್ಕೆ ಭೇಷ್ ಎನ್ನಲೇಬೇಕು 

ಮೊಸರನ್ನು ಕಡೆದು ಪಡೆದ ಬೆಣ್ಣೆಯನ್ನು ಕಾಯಿಸಿ ತಯಾರಿಸಿದ ಶುದ್ಧ ದೇಸೀ ತುಪ್ಪ ಒಂದು ಅತ್ಯುತ್ತಮವಾದ ಆಹಾರವಾಗಿದ್ದು ದೇಹಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಯಾವುದೇ ಸಸ್ಯಜನ್ಯ ಕೊಬ್ಬು ಅಥವಾ ಸಂರಕ್ಷಕಗಳನ್ನು ಸೇರಿಸದೇ ಇರುವ ಕಾರಣ ಅಡುಗೆಯ ವಿವಿಧ ಬಳಕೆಯಲ್ಲಿ ತುಪ್ಪವನ್ನು ಎಣ್ಣೆಯ ಬದಲಾಗಿ ಉಪಯೋಗಿಸಬಹುದು.... ಬನ್ನಿ ಇನ್ನಷ್ಟು ಮಾಹಿತಿಗಾಗಿ ಮುಂದೆ ಓದಿ....  

ರೋಗ ನಿರೋಧಕ ಶಕ್ತಿಗೆ....

ರೋಗ ನಿರೋಧಕ ಶಕ್ತಿಗೆ....

ಚಿಕ್ಕ ಪ್ರಮಾಣದಲ್ಲಿ ತುಪ್ಪವನ್ನು ಸೇವಿಸುತ್ತಾ ಬಂದರೆ ಹಸಿವು ಹೆಚ್ಚುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಇದಕ್ಕಾಗಿ ಚಿಕ್ಕ ಪ್ರಮಾಣದಲ್ಲಿ ತುಪ್ಪವನ್ನು ಚಪಾತಿ ಅಥವಾ ರೊಟ್ಟಿಗಳಿಗೆ ಸವರಿ ಅಥವಾ ಅನ್ನಕ್ಕೆ ಸೇರಿಸಿ ಸೇವಿಸಬಹುದು.

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಅಡುಗೆಗೆ ಬಳಸುವ ಎಣ್ಣೆ ಅಡುಗೆಯನ್ನು ಸುಲಭ ಮತ್ತು ರುಚಿಕರವಾಗಿಸಿದರೂ ಹೊಟ್ಟೆಗೆ ಇದನ್ನು ಅರಗಿಸಿಕೊಳ್ಳಲು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಇದಕ್ಕೆ ತದ್ವಿರುದ್ದ ಎಂದರೆ ಮೊಸರು. ಇದು ಅತ್ಯಂತ ಸುಲಭವಾಗಿ ಜೀರ್ಣವಾಗುತ್ತದೆ. ಅಂತೆಯೇ ಉಪ್ಪು ಸಹಾ. ಇದನ್ನು ಅರಗಿಸಿಕೊಂಡು ನಿವಾರಿಸಲು ಬಹಳ ಶ್ರಮಪಡಬೇಕಾಗುತ್ತದೆ.

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ

ಆದರೆ ತುಪ್ಪ ಸುಲಭವಾಗಿ ಜೀರ್ಣವಾಗುವ ಕಾರಣ ಇದರಲ್ಲಿರುವ ಪೋಷಕಾಂಶಗಳು ಹೆಚ್ಚಿನ ಶ್ರಮವಿಲ್ಲದೇ ಜೀರ್ಣಾಂಗಗಳ ಮೂಲಕ ರಕ್ತ ಸೇರಿ ಅಗತ್ಯವಾದ ಅಂಗಗಳಿಗೆ ದೊರಕುತ್ತವೆ. ಆದ್ದರಿಂದ ಇದರಲ್ಲಿರುವ ಕೊಬ್ಬು ಸಂಗ್ರಹಗೊಳ್ಳುವುದು ಅತಿ ನಿಧಾನ ಹಾಗೂ ತುಪ್ಪದ ಪ್ರಮಾಣ ಹೆಚ್ಚಿದ್ದಾಗ ಮಾತ್ರ.

ಕೂದಲ ತುದಿ ಸೀಳಿರುವುದನ್ನು ದುರಸ್ತಿಗೊಳಿಸುತ್ತದೆ

ಕೂದಲ ತುದಿ ಸೀಳಿರುವುದನ್ನು ದುರಸ್ತಿಗೊಳಿಸುತ್ತದೆ

ಸಾಮಾನ್ಯವಾಗಿ ಪೋಷಣೆಯ ಕೊರತೆ ಮತ್ತು ಒಣಚರ್ಮ ಕೂದಲ ತುದಿಗಳನ್ನು ಸೀಳುವಂತೆ ಮಾಡುತ್ತದೆ. ತುಪ್ಪದ ಬಳಕೆಯಿಂದ ಈ ತೊಂದರೆಯನ್ನು ನಿವಾರಿಸಬಹುದು. ಇದಕ್ಕಾಗಿ ಕೂದಲ ತುದಿಗಳಿಗೆ ಕೊಂಚ ತುಪ್ಪವನ್ನು ಹಚ್ಚಿ ಒಂದು ಗಂಟೆಯ ಬಳಿಕ ಸೌಮ್ಯ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಿ.

ತುಪ್ಪದಲ್ಲಿ ಕೊಲೆಸ್ಟ್ರಾಲ್ ತುಂಬಾನೇ ಕಡಿಮೆ

ತುಪ್ಪದಲ್ಲಿ ಕೊಲೆಸ್ಟ್ರಾಲ್ ತುಂಬಾನೇ ಕಡಿಮೆ

ಬೆಣ್ಣೆಗಿಂತಲೂ ತುಪ್ಪದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಪ್ರಮಾಣದಲ್ಲಿದೆ. ಅಲ್ಲದೇ ಇದು ಪರಿಪೂರ್ಣ ಕೊಬ್ಬು ಆದುದರಿಂದ ಇದು ಕಡಿಮೆ ಹಾನಿಕರವಾಗಿದೆ. ಅಂದರೆ ಸೂಕ್ತ ಪ್ರಮಾಣದಲ್ಲಿ ಸೇವಿಸುವ ತುಪ್ಪ ಆರೋಗ್ಯಕರ.

ಚರ್ಮದ ಸಹಜಕಾಂತಿಗೆ

ಚರ್ಮದ ಸಹಜಕಾಂತಿಗೆ

ದಿನಿನಿತ್ಯದ ಆಹಾರಕ್ರಮದಲ್ಲಿ (ಅನ್ನ, ಚಪಾತಿ, ಸಿಹಿ ಮೊದಲಾದ ಯಾವುದೇ ಆಹಾರದೊಂದಿಗೆ) ವೃದ್ಧಾಪ್ಯದ ಲಕ್ಷಣಗಳನ್ನು ತೀರಾ ನಿಧಾನಗೊಳಿಸಿ ತಾರುಣ್ಯವನ್ನು ಕಾಪಾಡುತ್ತದೆ. ಅದರಲ್ಲೂ ದೇಸೀ ತುಪ್ಪ ತಿಂದವರ ಚರ್ಮ ಬಹಳ ವರ್ಷಗಳ ವರೆಗೆ ತನ್ನ ಸಹಜಕಾಂತಿ ಮತ್ತು ಸೆಳೆತವನ್ನು ಉಳಿಸಿಕೊಳ್ಳುವುದಕ್ಕೆ ಇದೇ ಕಾರಣ.

ಬಿರಿದ ತುಟಿಗಳ ಆರೈಕೆಗಾಗಿ

ಬಿರಿದ ತುಟಿಗಳ ಆರೈಕೆಗಾಗಿ

ಒಂದು ಚಿಕ್ಕ ಚಮಚ ತುಪ್ಪ ಮತ್ತು ಸಮಪ್ರಮಾಣದ ಜೇನು ಬೆರೆಸಿ ತುಟಿಗಳಿಗೆ ತೆಳುವಾಗಿ ಹಚ್ಚಿಕೊಳ್ಳಿ. ರಾತ್ರಿ ಮಲಗುವ ಮುನ್ನ ಹಚ್ಚಿ ಇಡಿಯ ರಾತ್ರಿ ಹಾಗೇ ಬಿಡಿ. ಮರುದಿನ ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಈಗ ತುಟಿಗಳು ಮೃದು, ಬಿರುಕಿಲ್ಲದೇ ಮತ್ತು ತುಂಬಿಕೊಂಡಿರುತ್ತವೆ.

 
English summary

Nutritional Benefits Of Ghee

Ghee is one of the main ingredients for any festive feast in India. It is considered sacred and is been given the status of 'panchaamrutha' (five ingredients for eternity) for its unmatchable health benefits. Take a look to know the nutritional benefits of ghee.
Please Wait while comments are loading...
Subscribe Newsletter