Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೈ ಒರೆಸೋ ಟವಲ್‌ನಿಂದಲೇ ಕಾಯಿಲೆ ಹರಡಬಹುದು ಎಚ್ಚರ..
ಪ್ರಪಂಚದಲ್ಲಿ ಅತ್ಯಂತ ಕೊಳಕು ಪ್ರಾಣಿಗಳು ಅಂದ್ರೆ ಮನುಷ್ಯನಂತೆ. ಮನುಷ್ಯನನ್ನ ಪ್ರಾಣಿ ಅಂತಿದ್ದೀವಿ ಅಂದುಕೊಂಡ್ರಾ. ನಿಜವೇ ಹೇಳ್ತಾ ಇದ್ದೀವಿ ಮಂಗನಿಂದ ಮಾನವ ಅನ್ನೋ ಮಾತು ಕೇಳಿಲ್ವಾ.. ಹಾಗೆ ನಾವು ಪ್ರಾಣಿಗಳೇ. ಆದರೆ ಇತರೆ ಪ್ರಾಣಿಗಳು ಸ್ನಾನ ಮಾಡದೇ ಇದ್ದರೂ ಶುದ್ಧವಾಗಿರುತ್ತೆ. ಆದ್ರೆ ಮನುಷ್ಯ ಪ್ರತಿ ದಿನವೂ ಸ್ನಾನ ಮಾಡಲೇಬೇಕು, ಮನುಷ್ಯ ಒಂದು ವೇಳೆ ಇತರೆ ಪ್ರಾಣಿಗಳಂತೆ ಜೀವಿಸಿದ್ರೆ ಖಂಡಿತ ಮೂಗು ಇಟ್ಕೊಂಡು ಇರೋದಕ್ಕೆ ಆಗೋದಿಲ್ಲ. ಅಷ್ಟು ಗಬ್ಬುನಾತ ಹೊಡಿತಾನೆ.
ಹಾಗಾಗಿ ಎಲ್ಲರೂ ಪ್ರತಿ ದಿನ ಸ್ನಾನ ಮಾಡಲೇಬೇಕು. ಇತರೆ ಪ್ರಾಣಿಗಳಿಗೆ ಒಂದು ವಾರ ಸ್ನಾನ ಮಾಡದೇ ಇದ್ರೂ ಕಾಯಿಲೆ ಬರೋದಿಲ್ಲ. ಆದ್ರೆ ಮನುಷ್ಯ ಒಂದು ದಿನ ಸ್ನಾನ ಮಾಡಿಲ್ಲ ಅಂದರೂ ಕಾಯಿಲೆ ಕಟ್ಟಿಟ್ಟ ಬುತ್ತಿ. ಕೇವಲ ಸ್ನಾನ ಅಷ್ಟೇ ಅಲ್ಲ ಸ್ನಾನದ ಟವಲ್ ಅನ್ನು ಶುದ್ಧವಾಗಿ ಇಟ್ಟುಕೊಂಡಿಲ್ಲ ಅಂದರೂ ಕಾಯಿಲೆ ಮನುಷ್ಯನಿಗೆ ವಕ್ಕರಿಸಿಕೊಂಡು ಬಿಡುತ್ತೆ. ಟವಲ್ ಗೂ ಕೂಡ ಸ್ಪೆಷಲ್ ಕೇರ್ ಬೇಕು
ಹೌದು ಅದೆಷ್ಟೋ ಜನರಿಗೆ ತಾವು ಸ್ನಾನಕ್ಕೆ ಅಥವಾ ಬಾತ್ ರೂಮ್ ನಲ್ಲಿ ಬಳಸುವ ಟವೆಲ್ ಬಗ್ಗೆ ಒಂದು ರೀತಿಯ ಅಸಡ್ಡೆಯ ಮನೋಭಾವನೆ ಇರುತ್ತೆ. ಬಳಸಿದ ನಂತರ ಅದನ್ನು ಶುದ್ಧವಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನವರ ಮನೆಗಳಲ್ಲಿ ಕಾಳಜಿ ಕಡಿಮೆಯೇ. ಕೆಲವರಂತೂ ಬಳಸಿದ ಟವೆಲ್ ಅನ್ನೇ ಹದಿನೈದು ದಿನಗಳವರೆಗೂ ಬಳಸುತ್ತಲೇ ಇರುವವರೂ ಇದ್ದಾರೆ, ಟವಲ್ ಬಗ್ಗೆ ನೀವು ವಹಿಸುವ ಕೆಟ್ಟ ಕಾಳಜಿ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತೆ ಅಂದ್ರೆ ನೀವು ನಂಬಲೇಬೇಕು....

ಮೈ ಒರೆಸಿದ ಟವೆಲ್ ನಲ್ಲಿ ಏನೇನಿರುತ್ತೆ ಗೊತ್ತಾ..?
ಯಾವಾಗ ನೀವು ಟವೆಲ್ ಬಳಕೆ ಮಾಡ್ತೀರೋ ಆಗ ಬ್ಯಾಕ್ಟೀರಿಯಾ, ಫಂಗಸ್, ಡೆಡ್ ಸ್ಕಿನ್ ಸೆಲ್ಸ್, ಮೂತ್ರದ ಕೀಟಾಣುಗಳು, ಹೀಗೆ ಹತ್ತುಹಲವು ಕಣ್ಣಿಗೆ ಕಾಣಿಸದ ಸೂಕ್ಷ್ಣಾಣು ಜೀವಿಗಳು ಟವೆಲ್ ಗೆ ಸೇರಿರುತ್ತೆ. ಹಾಗಂತ ಈ ಮೈಕ್ರೋ ಬ್ಯಾಕ್ಟೀರಿಯಾಗಳು ಒಂದೇ ದಿನದಲ್ಲಿ ನಿಮಗೆ ಯಾವುದೇ ದುಷ್ಪರಿಣಾಮಗಳನ್ನು ಮಾಡೋದಿಲ್ಲ ನಿಜ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸ್ನಾನದ ನಂತರ ಟವೆಲ್ ನ್ನು ಬಿಸಿಲಿನಲ್ಲಿ ಒಣಗಿಸುತ್ತೀರಾ
ಹೆಚ್ಚಿನವ್ರಿಗೆ ಖಂಡಿತ ಈ ಅಭ್ಯಾಸ ಇರೋದಿಲ್ಲ. ಮೈ ಒರೆಸಿಕೊಂಡ ಟವೆಲ್ ನ್ನು ಬಾತ್ ರೂಮ್ ನಲ್ಲೇ ಬಿಟ್ಟುಬರುವ ಅಭ್ಯಾಸವನ್ನು ಹೊಂದಿರುತ್ತಾರೆ. ನಂತ್ರ ಮನೆಯ ಮಹಿಳೆಯರು ಯಾರಾದ್ರೂ ಅದನ್ನು ಪೂರ್ತಿ ಒದ್ದೆಯಾಗಿದೆ ಅಂದಾಗ ಬಿಸಿಲಿನಲ್ಲಿ ಒಣಗಿಸೋದು ಇಲ್ಲವೇ ತೊಳೆಯಲು ಹಾಕುವ ಪರಿಪಾಠ ಹೆಚ್ಚಿನವರ ಮನೆಯಲ್ಲಿ ಕಾಮನ್. ಆದರೆ ಹೀಗೆ ಮಾಡೋದು ಖಂಡಿತ ತಪ್ಪು.

ಸ್ನಾನದ ನಂತರ ಟವೆಲ್ ನ್ನು ಬಿಸಿಲಿನಲ್ಲಿ ಒಣಗಿಸುತ್ತೀರಾ
ಪ್ರತಿಯೊಬ್ಬರು ತಾವು ಮೈ ಒರೆಸಿಕೊಂಡ ಟವೆಲ್ ನ್ನು ಕೂಡಲೇ ಬಿಸಿಲಿನಲ್ಲಿ ಒಣಗಿಸುವ ಅಭ್ಯಾಸ ರೂಢಿಸಿಕೊಳ್ಳಿ,. ಆಗ ಸೂಕ್ಷ್ಮಾಣು ಜೀವಿಗಳು ಅಭಿವೃದ್ಧಿ ಹೊಂದುವುದು ಅಲ್ಪ ಪ್ರಮಾಣದಲ್ಲಾದ್ರೂ ಕಡಿಮೆ ಇರುತ್ತೆ. ಬಾತ್ ರೂಮ್ ಹ್ಯಾಂಗಿಂಗ್ ನಲ್ಲೇ ಬಿಟ್ಟು ಬಂದ್ರೆ ಇನ್ನೊಬ್ಬರು ಸ್ನಾನಕ್ಕೆ ಹೋದಾಗ ಅವರ ಮೈಯಲ್ಲಿನ ಕ್ರಿಮಿಗಳೂ ಕೂಡ ಟವೆಲ್ ಗೆ ಸೇರಿಕೊಳ್ಳಬಹುದು.

ಮನೆಮಂದಿಗೆಲ್ಲ ಒಂದೇ ಟವೆಲ್ ಬೇಡ
ಒಬ್ಬರು ಸ್ನಾನಕ್ಕೆ ಬಳಸಿದ ಟವೆಲ್ ನ್ನು ಇನ್ನೊಬ್ಬರು ಬಳಸುವುದು ಸರಿಯಲ್ಲ.. ಮನೆಯ ಪ್ರತಿ ಸದಸ್ಯರಿಗೂ ಪ್ರತ್ಯೇಕ ಟವೆಲ್ ಇಟ್ಟುಕೊಳ್ಳೋದು ಆರೋಗ್ಯದ ಹಿತದೃಷ್ಟಿಯಿಂದ ತುಂಬಾ ಒಳ್ಳೇಯದು. ಒಬ್ಬರು ಬಳಸಿದ ಟವೆಲ್ ನ್ನು ಇನ್ನೊಬ್ಬರು ಬಳಸುವುದರಿಂದ ಮೊಡವೆಗಳು, ಸಣ್ಣಸಣ್ಣ ಗುಳ್ಳೆಗಳಾಗುವ ಸಾಧ್ಯತೆ ಇರುತ್ತೆ. ಚರ್ಮದ ಸಮಸ್ಯೆ ಇರುವವರಿಗಂತೂ ಮತ್ತಷ್ಟು ಸಮಸ್ಯೆಗೆ ಕಾರಣವಾಗಬಹುದು.

ಎಷ್ಟು ದಿನಗಳಿಗೊಮ್ಮೆ ಟವೆಲ್ ವಾಷ್ ಮಾಡುತ್ತೀರಿ
ಸ್ನಾನದ ನಂತರ ಟವೆಲ್ ನ್ನು ಬಿಸಿಲಿಗೆ ಹಾಕ್ತೀವಿ ..ಒಣಗಿರುತ್ತೆ. ಇನ್ನೇನು ಬ್ಯಾಕ್ಟೀರಿಯಾಗಳೆಲ್ಲ ಸತ್ತಿರುತ್ತೆ ಅಂತ ಭಾವಿಸಬೇಡಿ. ಒಂದೇ ಟವೆಲ್ ನ್ನು ಹಲವು ದಿನಗಳವರೆಗೆ ಹೀಗೆ ಮಾಡುತ್ತಲೇ ಪುನಃ ಪುನಃ ಬಳಸೋದು ಸರಿಯಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಎಷ್ಟು ದಿನಗಳಿಗೊಮ್ಮೆ ಟವೆಲ್ ವಾಷ್ ಮಾಡುತ್ತೀರಿ
ಪ್ರತಿ ಮೂರು ದಿನಗಳಿಗೊಮ್ಮೆಯಾದರೂ ನಿಮ್ಮ ಮೈ ಒರೆಸುವ ಟವೆಲ್ ನ್ನು ವಾಷ್ ಮಾಡಲೇಬೇಕು. ಉತ್ತಮ ಕ್ವಾಲಿಟಿ ಡಿಟರ್ಜೆಂಟ್, ವಿನೆಗರ್ ಗಳನ್ನು ಬಳಸಿ ವಾಷ್ ಮಾಡಿ. ಎಷ್ಟು ಸಾಧ್ಯವೋ ಅಷ್ಟು ಶುದ್ಧವಾಗಿರುವಂತೆ ನಿಮ್ಮ ಟವೆಲ್ ನ್ನು ಜೋಪಾನ ಮಾಡಬೇಕು.

ಬ್ಯಾಕ್ಟೀರಿಯಾಗಳು ಬೆಳೆಯುವ ಉತ್ತಮ ಜಾಗ ಟವೆಲ್
ಸ್ನಾನದ ನಂತರ ಟವೆಲ್ ಬಳಕೆ ಮಾಡೋದೆ ಆಗಿದ್ರೂ ಕೂಡ ಟವೆಲ್ ನಲ್ಲಿ ನಿಮ್ಮ ದೇಹದಿಂದ ಉತ್ಪತ್ತಿಯಾಗಿರುವ ಸಣ್ಣಸಣ್ಣ ಬ್ಯಾಕ್ಟೀರಿಯಾಗಳು ಟ್ರಾನ್ಸ್ ಫರ್ ಆಗಿರುತ್ತೆ ಮತ್ತು ಟವೆಲ್ ನಲ್ಲಿ ಅವುಗಳ ಬೆಳವಣಿಗೆಗೆ ಬೇಕಾಗುವ ಎಲ್ಲಾ ರೀತಿಯ ವಾತಾವರಣವೂ ಇರುತ್ತೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬ್ಯಾಕ್ಟೀರಿಯಾಗಳು ಬೆಳೆಯುವ ಉತ್ತಮ ಜಾಗ ಟವೆಲ್
ಅದರಲ್ಲೂಟವೆಲ್ ನಲ್ಲಿರುವ ನೀರು, ವಾತಾವರಣದ ಗಾಳಿ ಎಲ್ಲವೂ ಕೂಡ ಅವುಗಳ ಬೆಳವಣಿಗೆಗೆ ಪೂರಕವಾಗಿರುತ್ತೆ. ಹಾಗಾಗಿ ಕೆಲವೇ ದಿನಗಳಲ್ಲಿ ನಿಮ್ಮ ಟವೆಲ್ ವಾಸನೆಯಾಗುತ್ತೆ. ಆದ್ರೆ ಹೀಗೆ ಆಗುವ ತನಕವೂ ನೀವು ಅದೇ ಟವಲ್ ಬಳಸುತ್ತಾ ಇದ್ದಲ್ಲಿ ಚರ್ಮದ ಕಾಯಿಲೆ ಕಟ್ಟಿಟ್ಟ ಬುತ್ತಿ. ಹಾಗಾಗಿ ಆದಷ್ಟು ಹೊಸ ಟವೆಲ್ ಮತ್ತು ಶುದ್ಧವಾದ ಟವೆಲ್ ಬಳಕೆ ಮಾಡಿ.



Click it and Unblock the Notifications
