For Quick Alerts
ALLOW NOTIFICATIONS  
For Daily Alerts

ಹಳದಿ ಹಲ್ಲಿಗೆ ಮಂಗಳ ಹಾಡುವ ಮನೆಮದ್ದುಗಳು

By manjula balaraj
|

ಸೌಂದರ್ಯವೆಂಬುದು ವರದಾನವಿದ್ದಂತೆ. ಅದು ಬಾಹ್ಯ ಮತ್ತು ಆಂತರಿಕ ಎಂಬ ಭಿನ್ನತೆಯನ್ನು ಹೊಂದಿರುವುದಿಲ್ಲ. ನಾವು ಆಂತರಿಕವಾಗಿ ಸ್ವಚ್ಛವಾಗಿದ್ದಷ್ಟೂ ಬಾಹ್ಯ ರೀತಿಯಲ್ಲೂ ಹಾಗೆಯೇ ಇರುತ್ತೇವೆ. ಸೌಂದರ್ಯದ ವಿಷಯದಲ್ಲಿ ಸ್ವಚ್ಛತೆಗೆ ಅದರದ್ದೇ ಆದ ಮಹತ್ವವಿದೆ. ಎಷ್ಟೇ ಅಲಂಕಾರಗಳನ್ನು ಮಾಡಿಕೊಂಡಿದ್ದರೂ ದೇಹದಿಂದ ಬರುವ ಬೆವರಿನ ವಾಸನೆ, ಬಾಯಿಯ ದುರ್ಗಂಧ ಒಂದು ರೀತಿಯ ಕೊಳಕನ್ನು ನಮ್ಮ ಮೇಲೆ ಉಂಟುಮಾಡಿಬಿಡುತ್ತದೆ. ಒಳಗೆ ಟೊಳ್ಳು ಹೊರಗೆ ಡಂಬಾಚಾರ ಎಂಬಂತೆ ನಮ್ಮ ಪರಿಸ್ಥಿತಿಯಾಗುತ್ತದೆ.

ದೇಹದ ಸ್ವಚ್ಛತೆ ಎಂಬುದು ಆರೋಗ್ಯದ ಮೇಲೂ ಪರಿಣಾಮವನ್ನು ಬೀರುವುದರಿಂದ ಇದಕ್ಕೆ ಹೆಚ್ಚಿನ ಪ್ರಧಾನ್ಯತೆಯನ್ನು ನೀಡಬೇಕು. ಸೌಂದರ್ಯಕ್ಕಾಗಿ ನಮ್ಮ ದೇಹದಲ್ಲಿ ನಾವು ಅನೇಕ ಬದಲಾವಣೆಗಳನ್ನು ತಂದುಕೊಳ್ಳುತ್ತೇವೆ ಅಂದರೆ ಉಗುರು ಬಿಡುವುದು, ಟ್ಯಾಟೂ ಹಾಕಿಸಿಕೊಳ್ಳುವುದು ಮೊದಲಾದವು. ಆದರೆ ಇವುಗಳ ಸರಿಯಾದ ಆರೈಕೆಯನ್ನು ನಾವು ಆಗಾಗ್ಗೆ ಮಾಡಬೇಕಾಗುತ್ತದೆ.

ಉರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಟ್ಯಾಟೂ ಹಾಕಿಸಿಕೊಂಡಿರುವ ತ್ವಚೆಯ ಕಾಳಜಿ ಹೀಗೆ ಕೆಲವೊಂದು ನಿಯಮಗಳನ್ನು ನಾವು ಅನುಸರಿಸಬೇಕಾಗುತ್ತದೆ. ಆದರೆ ಇವೆಲ್ಲದರ ಜೊತೆಗೆ ಹಲ್ಲುಗಳ ಆರೈಕೆಗೂ ಅಷ್ಟೇ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ, ಅದರಲ್ಲೂ ಹೊಳೆಯುವ ಹಲ್ಲುಗಳು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದರಿಂದ ಆದಷ್ಟು ಇವುಗಳನ್ನು ಸಮರ್ಪಕವಾಗಿ ನಾವು ನೋಡಿಕೊಳ್ಳಬೇಕು.

ನಿಮ್ಮ ಹಳದಿ ಹಲ್ಲುಗಳು ನಿಮ್ಮ ಸೌಂದರ್ಯಕ್ಕೆ ಮಾರಕವಿದ್ದಂತೆ ಎಂಬುದು ನೆನಪಿಡಿ. ಜನರಿಂದ ನಿಮ್ಮನ್ನು ದೂರವಿಡುವಂತೆ ಈ ಹಲ್ಲುಗಳು ಮಾಡುವುದರಿಂದ ಕೆಲವೊಂದು ಸೂಕ್ತ ಮನೆಮದ್ದುಗಳ ಸಹಾಯವನ್ನು ತೆಗೆದುಕೊಳ್ಳಲೇಬೇಕು. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ಹಲ್ಲಿನ ಆರೋಗ್ಯವನ್ನು ಪಾಲನೆ ಮಾಡುವುದು ಹಲ್ಲಿಗೆ ಉತ್ತಮವಾಗಿದೆ. ಹಾಗಿದ್ದರೆ ಹಲ್ಲಿನ ಹಳದಿಗಟ್ಟುವಿಕೆಯನ್ನು ನಿವಾರಿಸುವ ಸಲಹೆಗಳನ್ನು ಅರಿತುಕೊಳ್ಳೋಣ....

ಫ್ಲೂರಿಡೇಟೆಡ್ ಟೂತ್‎ಪೇಸ್ಟ್ ಬಳಸಿ

ಫ್ಲೂರಿಡೇಟೆಡ್ ಟೂತ್‎ಪೇಸ್ಟ್ ಬಳಸಿ

ಹಲ್ಲಿನಿಂದ ಹಳದಿಯ ನಿವಾರಣಗೆ ಈ ಪೇಸ್ಟ್ ಸಹಕಾರಿ. ಫ್ಲುರೈಡ್ ನಿಮ್ಮ ಹಲ್ಲುಗಳನ್ನು ಬಲಶಾಲಿಯಾಗಿಸುವುದರಿಂದ ಹಲ್ಲಿನ ಹುಳುಕನ್ನು ನಿವಾರಿಸುತ್ತದೆ. ನೀವು ಸರಿಯಾದ ಟೂತ್‎ಪೇಸ್ಟ್ ಬಳಸುತ್ತಿದ್ದೀರಿ ಎಂಬುದನ್ನು ಖಾತ್ರಪಡಿಸಿಕೊಳ್ಳಿ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

ಒಂದು ಚಮಚದಷ್ಟು ಬೇಕಿಂಗ್ ಸೋಡಾಗೆ ಸ್ವಲ್ಪ ಉಪ್ಪು ಸೇರಿಸಿ. ಪೇಸ್ಟ್ ಬದಲಿಗೆ ಇದನ್ನು ಹಲ್ಲುಜ್ಜಲು ಬಳಸಿ. ಹಲ್ಲಿನ ಹಳದಿಗಟ್ಟುವಿಕೆ ಮತ್ತು ಕರೆಯನ್ನು ನಿವಾರಿಸಿ ವಾರದಲ್ಲಿ ಫಲಿತಾಂಶವನ್ನು ನೀಡುತ್ತದೆ.

ಕಿತ್ತಳೆ ಸಿಪ್ಪೆಯ ಮ್ಯಾಜಿಕ್

ಕಿತ್ತಳೆ ಸಿಪ್ಪೆಯ ಮ್ಯಾಜಿಕ್

ಈ ತಂತ್ರ ನಿಮ್ಮ ಬಾಯಿಯಲ್ಲಿ ಸುವಾಸನೆಯನ್ನು ಹೊಮ್ಮಿಸುವುದು ಖಂಡಿತ. ಹಲ್ಲಿನ ಕರೆಯ ನಿವಾರಣಗೆ ಈ ಟ್ರಿಕ್ಸ್ ಅತ್ಯದ್ಭುತವಾದುದು. ಹಲ್ಲಿನ ಮೇಲೆ ನೇರವಾಗಿ ಕಿತ್ತಳೆ ಸಿಪ್ಪೆಯನ್ನು ಉಜ್ಜಿ ನಂತರ ಬಾಯಿ ಮುಕ್ಕಳಿಸಿ. ಆಗಾಗ್ಗೆ ಇದನ್ನು ಬಳಸುವುದರಿಂದ ಹಲ್ಲಿನ ಕರೆಯನ್ನು ನಿವಾರಿಸಿಕೊಳ್ಳಬಹುದು.

ಹಸಿತರಕಾರಿಗಳು ಮತ್ತು ಹಣ್ಣುಗಳು

ಹಸಿತರಕಾರಿಗಳು ಮತ್ತು ಹಣ್ಣುಗಳು

ಫೈಬರ್ ಅಂಶವನ್ನು ಒಳಗೊಂಡಿರುವ ಹಸಿತರಕಾರಿಗಳು ಮತ್ತು ಹಣ್ಣುಗಳ ಸೇವನೆಯನ್ನು ಮಾಡಿ. ಇವುಗಳನ್ನು ಸೇವಿಸುವುದೂ ಕೂಡ ಹಲ್ಲಿನ ಹಳದಿ ಕರೆಯನ್ನು ದೂರಮಾಡಲು ಸಹಕಾರಿಯಾಗಿದೆ.

ಎಳ್ಳಿನ ಬೀಜಗಳು

ಎಳ್ಳಿನ ಬೀಜಗಳು

ಹಲ್ಲಿನ ಹಳದಿ ಕಲೆ ನಿವಾರಣೆಗೆ ಎಳ್ಳಿನ ಬೀಜ ಅತ್ಯುತ್ತಮವಾದುದು. ಎಳ್ಳನ್ನು ಕೊಂಚ ಬಿರುಸಾಗಿ ಹುಡಿಮಾಡಿಟ್ಟುಕೊಳ್ಳಿ. ನಂತರ ಈ ಹುಡಿಯನ್ನು ಬಳಸಿ ಹಲ್ಲುಜ್ಜಿ. ನಿಮ್ಮ ಹಲ್ಲಿನಿಂದ ಕರೆ ಮಾಯವಾಗಿ ಫಳಫಳನೆ ಹೊಳೆಯುತ್ತದೆ.

ಖಾರವಾದ ಆಹಾರಗಳನ್ನು ಸೇವಿಸಿ

ಖಾರವಾದ ಆಹಾರಗಳನ್ನು ಸೇವಿಸಿ

ಇದು ಕೊಂಚ ಅಚ್ಚರಿಯನ್ನುಂಟು ಮಾಡಿದರೂ ನಿಜವಾದ ವಿಷಯವಾಗಿದೆ. ಆದಷ್ಟು ಹೆಚ್ಚು ಖಾರದ ಆಹಾರ ಪದಾರ್ಥಗಳನ್ನು ಸೇವಿಸಿ. ಜೊಲ್ಲು ಗ್ರಂಥಿಗಳಲ್ಲಿ ಲಾಲಾರಸ ಸ್ರವಿಸುವಿಕೆಯನ್ನು ಹೆಚ್ಚಿಸಿ ನಿಮ್ಮ ಹಲ್ಲುಗಳನ್ನು ಸ್ವಚ್ಛವಾಗಿರಿಸಲು ಖಾರದ ಆಹಾರ ಸಹಾಯ ಮಾಡುತ್ತದೆ.

English summary

How To Remove Yellow Stains From Teeth

Having sparkling teeth increases your confidence than flashing yellow dirty teeth. We're sure you'd certainly agree to that statement! It makes the opposite person to maintain distance from you when they see a yellow flash! Now imagine if that person happens to be your crush. Uggh, ugly situation! So, here we are to share some of the home remedies to remove tartar (hardened plaque) from the teeth.
X
Desktop Bottom Promotion