ಅನಾರೋಗ್ಯದ ಕೂಪಕ್ಕೆ ತಳ್ಳುವ-ನಿತ್ಯ ಬಳಕೆಯ ವಸ್ತುಗಳು!

By Super

ಮನೆಯನ್ನು ಗುಡಿಸುವ ಪೊರಕೆಯ ಕಸವನ್ನು ಗುಡಿಸುವವರು ಯಾರು ಎಂಬ ಕುಹಕ ಪ್ರಚಲಿತದಲ್ಲಿದೆ. ಅಂದರೆ ಪೊರಕೆಯ ಕಡ್ಡಿಗಳಿಗೆ ಅಂಟಿರುವ ಕೊಳೆಯನ್ನು ಯಾರೂ ತೆಗೆಯಲೇ ಹೋಗುವುದಿಲ್ಲ. ಅಂತೆಯೇ ನಮ್ಮ ನಿತ್ಯದ ಹಲವಾರು ವಸ್ತುಗಳಲ್ಲಿ ಕೊಳೆ, ಬ್ಯಾಕ್ಟೀರಿಯಾಗಳು ತುಂಬಿರುತ್ತವೆ. ಪೊರಕೆಯ ಹಿಡಿಯನ್ನು ಹಿಡಿಯುವ ಮೂಲಕ ಕೊಳೆ ಕೈಗೆ ತಗಲದಿದ್ದರೂ ಇತರ ವಸ್ತುಗಳಲ್ಲಿರುವ ಕೊಳೆಯಂತೂ ತಗಲಿಯೇ

ತಗಲುತ್ತದೆ. ಉದಾಹರಣೆಗೆ ಪಾತ್ರೆ ತೊಳೆಯುವ ಸ್ಪಂಜು. ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಇಂತಹ ಹಲವಾರು ವಸ್ತುಗಳ ಬಳಕೆ ಅನಿವಾರ್ಯ. ಇಲ್ಲದಿದ್ದರೆ ಮನೆಯಿಡೀ ಬ್ಯಾಕ್ಟೀರಿಯಾಗಳ ತಂಗುದಾಣವೇ ಆಗಿ ಹೋಗಬಹುದು. ಅದರಲ್ಲೂ ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ ನಿತ್ಯವೂ ಸ್ವಚ್ಛಗೊಳಿಸುವುದು ಅನಿವಾರ್ಯ. ಪ್ರಾಣಿಗಳು, ಅದರಲ್ಲೂ ಬೆಕ್ಕು ಮತ್ತು ನಾಯಿಗಳ ಕೂದಲು ಅತ್ಯಂತ ಅಲರ್ಜಿಕಾರಕವಾಗಿದೆ. ಬೆಕ್ಕಿನ ಕೂದಲು ಹೊಟ್ಟೆಗೆ ಹೋದರೆ ಹೆಚ್ಚಿನ ತೊಂದರೆ ಕಾದಿದೆ. ಬಹುವರ್ಷಗಳವರೆಗೆ ಕಾಪಾಡಿಟ್ಟುಕೊಳ್ಳಬಹುದಾದ ಜೇನು ಮೊದಲಾದ ಆಹಾರವಸ್ತುಗಳನ್ನು ಹೊರತುಪಡಿಸಿ ಶೀಘ್ರವಾಗಿ ಕೊಳೆಯುವ ವಸ್ತುಗಳನ್ನು ತಕ್ಷಣವೇ ಉಪಯೋಗಿಸಿ ಅಥವಾ ಸ್ವಚ್ಛಗೊಳಿಸಿ ಇಟ್ಟುಕೊಳ್ಳುವುದು ಅಗತ್ಯ ಮಾತ್ರವಲ್ಲ ಅನಿವಾರ್ಯವೂ ಆಗಿವೆ. ಮನೆಯಲ್ಲಿಯೇ ಅಡಗಿದೆ, ಸೈಲೆಂಟ್ ಕಿಲ್ಲರ್! ಇರಲಿ ಕಟ್ಟೆಚ್ಚರ

ಆದರೆ ಎಷ್ಟೋ ಸಲ ನಮ್ಮ ಅತಿ ಕ್ಷುಲ್ಲುಕವೆನಿಸುವ ನಿರ್ಲಕ್ಷ್ಯ ಮನೆಗೆ ಜಂತು, ಕ್ರಿಮಿಗಳನ್ನು ಆಹ್ವಾನಿಸಬಹುದು. ಉದಾಹರಣೆಗೆ ಊಟಮಾಡಿದ ತಟ್ಟೆಗಳನ್ನು ತೊಳೆಯಲು ಬಳಸಿದ ಸ್ಪಂಜನ್ನು ತೊಳೆದ ಬಳಿಕ ಹಾಗೇ ಬಿಡುವುದು. ಪಾತ್ರೆಯಲ್ಲಿದ್ದ ಆಹಾರಕಣಗಳು ಈಗ ಸ್ಪಂಜಿನ ಮೇಲೆ ಕುಳಿತಿವೆ. ಈ ಸ್ಪಂಜನ್ನು ಸ್ವಚ್ಛಗೊಳಿಸದೇ ಹಾಗೇ ಬಿಟ್ಟು ಮನೆಯಿಂದ ಹೊರಹೋಗಿ ಸಂಜೆ ಬಂದಾಗ ಈ ಆಹಾರಕಣಗಳ ವಾಸನೆ ಹಿಡಿದು ಬ್ಯಾಕ್ಟೀರಿಯಾ, ಜಿರಲೆ, ಇರುವೆ, ಇಲಿ ಮೊದಲಾದವು ನಿಮ್ಮ ಅಡುಗೆಮನೆಗೆ ಈಗಾಗಲೇ ಬಂದುಬಿಟ್ಟಿರುತ್ತವೆ.

ನಾವು ಹೆಚ್ಚಿನ ಆದ್ಯತೆ ಕೊಡದೇ ಇರುವ ಎಷ್ಟೋ ವಿಷಯಗಳು ತಜ್ಞರ ಪ್ರಕಾರ ಅನಾರೋಗ್ಯಕರ ಅಭ್ಯಾಸಗಳಾಗಿವೆ. ಉದಾಹರಣೆಗೆ ಹಲ್ಲುಜ್ಜುವ ಬ್ರಶ್. ಸಾಮಾನ್ಯವಾಗಿ ಭಾರತದಲ್ಲಿ ಬ್ರಶ್ ನ ಕೂದಲುಗಳು ಬಾಗಿ ಸೂರ್ಯಕಾಂತಿ ಹೂವಿನಂತೆ ಅರಳುವವರೆಗೂ ಬದಲಿಸುವುದೇ ಇಲ್ಲ. ಆದರೆ ಪ್ರತಿ ತಿಂಗಳೂ ಒಂದು ಹೊಸ ಬ್ರಶ್ ಬಳಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಇದರಿಂದ ಒಸಡು ಅಮ್ತ್ತು ಹಲ್ಲುಗಳನ್ನು gingivitis ಮೊದಲಾದ ಕಾಯಿಲೆಗಳಿಂದ ರಕ್ಷಿಸಲು ಸಾಧ್ಯವಾಗುತ್ತದೆ. ಇಂತಹ ನಿತ್ಯಬಳಕೆಯ ಹಲವಾರು ವಸ್ತುಗಳ ಬಗ್ಗೆ ಅರಿವು ಮೂಡಿಸಿಕೊಂಡು ಅರೋಗ್ಯ ಮತ್ತು ನೈರ್ಮಲ್ಯ ಹೆಚ್ಚಿಸಿಕೊಳ್ಳಲು ಅಮೂಲ್ಯ ಮಾಹಿತಿಯನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ಪ್ರಸ್ತುತಪಡಿಸಲು ಹರ್ಷಿಸುತ್ತದೆ. ಇದರಿಂದ ನಿಮ್ಮ ಮನೆ ಮತ್ತು ಪರಿಸರವನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿರಿಸಲು ಸಾಧ್ಯವಾಗುತ್ತದೆ.

ಒಳ ಉಡುಪುಗಳು

ಒಳ ಉಡುಪುಗಳು

ನಮ್ಮ ಒಳ ಉಡುಪುಗಳು ಬ್ಯಾಕ್ಟೀರಿಯಾಗಳ ವಂಶಾಭಿವೃದ್ದಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಒಮ್ಮೆ ತೊಟ್ಟ ಒಳ ಉಡುಪುಗಳನ್ನು ಮರುದಿನ ಖಂಡಿತಾ ತೊಡಕೂಡದು. ಏಕೆಂದರೆ ಒಂದೇ ದಿನದಲ್ಲಿ ಒಳ ಉಡುಪುಗಳ ಒಳಭಾಗದಲ್ಲಿ ನಮ್ಮ ಶರೀರದ ಬೆವರು ಮತ್ತಿತರ ಸ್ರಾವಗಳ ಕಾರಣ ಬ್ಯಾಕ್ಟೀರಿಯಾಗಳು ಈಗಾಗಲೇ ಬೀಡು ಬಿಟ್ಟಿದ್ದು ಮರುದಿನ ಇನ್ನಷ್ಟು ಹೆಚ್ಚಿರುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಒಳ ಉಡುಪುಗಳು

ಒಳ ಉಡುಪುಗಳು

ಒಂದು ವೇಳೆ ಈ ಉಡುಪುಗಳನ್ನು ಮರುದಿನವೂ ತೊಟ್ಟರೆ ಈ ಬ್ಯಾಕ್ಟೀರಿಯಾಗಳಿಗೆ ನಮ್ಮ ಶರೀರದ ಸೂಕ್ಷ್ಮ ಭಾಗಗಳಿಗೆ ದಾಟಿಕೊಳ್ಳಲು ನಾವೇ ಕೈಯಾರ ಸೇತುವೆ ಒದಗಿಸಿದಂತಾಗುತ್ತದೆ. ಇವು ಹಲವು ರೀತಿಯ ಸೋಂಕು ಉಂಟುಮಾಡಬಹುದು. ಆದ್ದರಿಂದ ಯಾವುದೇ ಒಳ ಉಡುಪುಗಳನ್ನು ಒಂದು ದಿನಕ್ಕಿಂತ ಹೆಚ್ಚು ಕಾಲ ತೊಡಬಾರದು. ಸಾಕ್ಸ್ ಸಹಾ!

ಪಾತ್ರೆ ತೊಳೆಯುವ ಸ್ಪಂಜು

ಪಾತ್ರೆ ತೊಳೆಯುವ ಸ್ಪಂಜು

ಪಾತ್ರೆ ತೊಳೆದಾದ ಬಳಿಕ ಹಾಗೇ ಬಿಟ್ಟ ಸ್ಪಂಜಿನಲ್ಲಿ ನಮ್ಮ ಶೌಚಾಲಯದ ಮುಚ್ಚಳದಲ್ಲಿರುವುದಕ್ಕಿಂತ ಹೆಚ್ಚು ಕ್ರಿಮಿಗಳಿರುತ್ತವೆ. ಏಕೆಂದರೆ ಪಾತ್ರೆಗಳನ್ನು ಸ್ವಚ್ಛಗೊಳಿಸಿದ ಬಳಿಕ ಹೆಚ್ಚಿನವರು ಸುಮ್ಮನೇ ನೀರು ಹಿಂಡಿ ಹಾಗೇ ಬಿಡುತ್ತಾರೆ. ಆದರೆ ಸ್ಪಂಜಿನ ಚಿಕ್ಕ ತೂತುಗಳ ಒಳಗೆ ಆಹಾರಕಣ ತೂರಿಕೊಂಡು ಅಲ್ಲಿಯೇ ಕೊಳೆಯಲು ಪ್ರಾರಂಭಿಸುತ್ತದೆ. ಇದು ಬ್ಯಾಕ್ಟೀರಿಯಾಗಳಿಗೆ ಸೂಕ್ತವಾದ ತಾಣವಾಗಿದೆ. ಇದೇ ಸ್ಪಂಜಿನಿಂದ ಮುಂದಿನ ಊಟಕ್ಕೆ ಬಳಸುವ ತಟ್ಟೆಯನ್ನು ತೊಳೆದು ಆಹಾರ ಬಡಿಸಿ ಊಟ ಮಾಡಿದರೆ ಊಟ ಮಾಡಿದವರ ಹೊಟ್ಟೆಯಲ್ಲಿ ಬ್ಯಾಕ್ಟೀರಿಯಾ ಸೇರುವ ಸಾಧ್ಯತೆ ಹೆಚ್ಚು. ತಜ್ಞರ ಪ್ರಕಾರ ಒಂದು ಸ್ಪಂಜನ್ನು ಒಟ್ಟು ಇಪ್ಪತ್ತು ಬಾರಿ ಬಳಸಿದ ಬಳಿಕ ಇದರಲ್ಲಿರುವ ಬ್ಯಾಕ್ಟೀರಿಯಾಗಳು ಹೊಟ್ಟೆಯಲ್ಲಿ ನಂಜು ಹರಡುವ ಸಾಧ್ಯತೆ ಶೇ ನೂರರಷ್ಟು ಹೆಚ್ಚುತ್ತದೆ. ಆದ್ದರಿಂದ ಒಂದು ಸ್ಪಂಜನ್ನು ಇಪ್ಪತ್ತು ದಿನಕ್ಕಿಂತ ಹೆಚ್ಚು ಉಪಯೋಗಿಸಬಾರದು. ಅಲ್ಲದೇ ಪ್ರತಿಬಾರಿ ಸ್ಪಂಜನ್ನು ಉಪಯೋಗಿಸಿದ ಬಳಿಕ ಚೆನ್ನಾಗಿ ಹಿಂಡಿ ಬಡಿದು ಆಹಾರಕಣಗಳನ್ನು ಹೊರಹಾಕಲು ಯತ್ನಿಸಬೇಕು. ಎಲ್ಲಾ ಕೆಲಸ ಮುಗಿದ ಬಳಿಕ ಸ್ಪಂಜನ್ನು ಕೊಂಚ ಡೆಟಾಲ್ ಸೇರಿಸಿನ ನೀರಿನಲ್ಲಿ ಅದ್ದಿ ಹಿಂಡಿ ಒಣಗಲು ಬಿಟ್ಟರೆ ಸುರಕ್ಷತೆ ಹೆಚ್ಚುತ್ತದೆ.

ನೀರಿನ ಬಾಟಲಿಗಳು

ನೀರಿನ ಬಾಟಲಿಗಳು

ನೀರಿನ ಬಾಟಲಿಯನ್ನು ಮರುತುಂಬಿಸುವ ಮೊದಲು ತೊಳೆದುಕೊಳ್ಳಬೇಕೆಂದು ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಕೇವಲ ಗೃಹಿಣಿಯರು ಮಾತ್ರ ಬಾಟಲಿಯನ್ನು ಮರುತುಂಬಿಸುವ ಮೊದಲು ಕೊಂಚ ಬಿಸಿನೀರು ಮತ್ತು ಉಪ್ಪು ಹಾಕಿ ತೊಳೆದು ಮರುತುಂಬಿಸುತ್ತಾರೆ. ಆದರೆ ಬಾಟಲಿಯ ಮುಚ್ಚಳವಿರುವ ಭಾಗವನ್ನು ಈ ತರಹ ತೊಳೆಯಲು ಮರೆತುಬಿಡುತ್ತಾರೆ. ನೀರಿನ ಬಾಟಲಿನ ಮುಚ್ಚಳದ ಅಡಿ, ಬಾಟಲಿನ ಮುಚ್ಚಳದ ಭಾಗದಲ್ಲಿರುವ ಗೀರುಗಳ ಒಳಭಾಗದಲ್ಲೆಲ್ಲಾ ನವಿರಾಗಿ ಕೊಳೆ ಕುಳಿತಿರುತ್ತದೆ.

ನೀರಿನ ಬಾಟಲಿಗಳು

ನೀರಿನ ಬಾಟಲಿಗಳು

ಈ ಸ್ಥಾನವನ್ನು ಬ್ಯಾಕ್ಟೀರಿಯಾಗಳು ಆಕ್ರಮಿಸುತ್ತವೆ. ನೀರಿನ ಸಂಪರ್ಕಕ್ಕೆ ಬಂದ ಕೂಡಲೇ ನೀರಿಗೆ ದಾಟಿಕೊಂಡು ಕುಡಿಯುವವರ ಹೊಟ್ಟೆ ಸೇರುತ್ತವೆ. ಆದ್ದರಿಂದ ನೀರಿನ ಬಾಟಲಿಯನ್ನು ಪ್ರತಿಬಾರಿ ತೊಳೆಯುವಾಗಲೂ ಬಾಟಲಿಯ ಮುಚ್ಚಳದ ಅಡಿಭಾಗ ಮತ್ತು ಬಾಟಲಿಯ ಬಾಯಿಯ ಭಾಗವನ್ನು ಹೆಚ್ಚು ಕಾಳಜಿ ವಹಿಸಿ ಸ್ವಚ್ಛಗೊಳಿಸಬೇಕು.

ಮಕ್ಕಳ ಹಾಲು ಕುಡಿಯುವ ಬಾಟಲಿಗಳು ಮತ್ತು ನಿಪ್ಪಲ್‌ಗಳು

ಮಕ್ಕಳ ಹಾಲು ಕುಡಿಯುವ ಬಾಟಲಿಗಳು ಮತ್ತು ನಿಪ್ಪಲ್‌ಗಳು

ಮಕ್ಕಳಿಗೆ ಹಾಲು ಕುಡಿಸಲು ಉಪಯೋಗಿಸುವ ಬಾಟಲಿಯ ಮುಚ್ಚಳ, ನಿಪ್ಪಲ್ ಮೊದಲಾದವು ಸಹಾ ಅತಿ ಹೆಚ್ಚಿನ ಸ್ವಚ್ಛತೆ ಬೇಡುವ ವಸ್ತುಗಳಾಗಿವೆ. ಹಾಲಿನ ಅಂಶ ಕೊಂಚ ಉಳಿದರೂ ಅಲ್ಲಿ ಬ್ಯಾಕ್ಟೀರಿಯಾಗಳು ತಕ್ಷಣ ಮನೆ ಮಾಡಿ ಬಿಡುತ್ತವೆ. ಪ್ರತಿ ಬಾರಿ ಮಗುವಿನ ಬಾಟಲಿಯನ್ನು ತೊಳೆಯುವಾಗ ಪ್ರತಿ ಭಾಗವನ್ನು ಬಿಡಿಬಿಡಿಯಾಗಿ ಪ್ರತ್ಯೇಕಿಸಿ ತೊಳೆಯಬೇಕು.

ಮಕ್ಕಳ ಹಾಲು ಕುಡಿಯುವ ಬಾಟಲಿಗಳು ಮತ್ತು ನಿಪ್ಪಲ್‌ಗಳು

ಮಕ್ಕಳ ಹಾಲು ಕುಡಿಯುವ ಬಾಟಲಿಗಳು ಮತ್ತು ನಿಪ್ಪಲ್‌ಗಳು

ವಿಶೇಷವಾಗಿ ನಿಪ್ಪಲ್ ಮತ್ತು ಮುಚ್ಚಳದ ಅಂಚುಗಳು ಕೂಡುವಲ್ಲಿ ಬ್ರಶ್ ಬಳಸಿ ಉಜ್ಜಿ ತೊಳೆಯಬೇಕು. ತಜ್ಞರ ಪ್ರಕಾರ ಬಾಟಲಿ, ಮುಚ್ಚಳ, ನಿಪ್ಪಲುಗಳನ್ನು ಉಪ್ಪು ಸೇರಿಸಿದ ಬಿಸಿನೀರಿನಲ್ಲಿ ಮುಳುಗಿಸಿಟ್ಟು ಕೊಂಚ ಹೊತ್ತಿನ ಬಳಿಕ ತೊಳೆಯಬೇಕು. ಅಷ್ಟಾದ ಬಳಿಕವೂ ಒಂದು ತಿಂಗಳಿಗಿಂತ ಹೆಚ್ಚು ಕಾಲ ಇವನ್ನು ಉಪಯೋಗಿಸಬಾರದು.

ಮೈಯುಜ್ಜುವ ಬ್ರಶ್ ಅಥವಾ ಲೂಫಾ

ಮೈಯುಜ್ಜುವ ಬ್ರಶ್ ಅಥವಾ ಲೂಫಾ

ಇಂದು ಮೈಯುಜ್ಜಲು ಒರಟು ಬ್ರಶ್ ಮತ್ತು ಮೃದುವಾದ ಬ್ರಶ್ ಅಥವಾ ಲೂಫಾ (synthetic loofah) ಎಂಬ ಸ್ಪಂಜಿನಂತಹ ವಿವಿಧ ಬಗೆಯ ವಸ್ತುಗಳು ಲಭ್ಯವಿವೆ. ಹೆಚ್ಚಿನವರು ತಮ್ಮ ಮೈಗೆ ಒರಟು ಬ್ರಶ್ ಬದಲಿಗೆ ಮೃದು ಸ್ಪಂಜನ್ನೇ ಆಯ್ದುಕೊಳ್ಳುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೈಯುಜ್ಜುವ ಬ್ರಶ್ ಅಥವಾ ಲೂಫಾ

ಮೈಯುಜ್ಜುವ ಬ್ರಶ್ ಅಥವಾ ಲೂಫಾ

ಆದರೆ ಸ್ನಾನದ ಬಳಿಕ ಹಾಗೇ ಬಿಟ್ಟ ಈ ಸ್ಪಂಜಿನೊಳಗೂ ಬ್ಯಾಕ್ಟೀರಿಯಾಗಳು ತುಂಬಿಕೊಂಡು ಆರೋಗ್ಯ ಕೆಡಿಸಬಹುದು. ಆದ್ದರಿಂದ ಪ್ರತಿಬಾರಿ ಈ ವಸ್ತುಗಳನ್ನು ಬಳಸಿದ ಬಳಿಕ ಬಿಸಿನೀರಿನಲ್ಲಿ ಚೆನ್ನಾಗಿ ತೊಳೆದು ನೀರನ್ನು ಹಿಂಡಿ ತೆಗೆದು ಒಣಗಿಸಬೇಕು. ಪ್ರತಿ ತಿಂಗಳು ಅಥವಾ ಆರು ವಾರಕ್ಕಿಂತ ಹೆಚ್ಚು ಕಾಲ ಬಳಸಬಾರದು ಎಂದು ತಜ್ಞರು ತಿಳಿಸುತ್ತಾರೆ.

ಹಲ್ಲುಜ್ಜುವ ಬ್ರಶ್

ಹಲ್ಲುಜ್ಜುವ ಬ್ರಶ್

ನಿಮ್ಮ ಬ್ರಶ್ ಗಳನ್ನು ಎಷ್ಟು ದಿನಕ್ಕೊಮ್ಮೆ ಬದಲಿಸುತ್ತೀರಿ? ಪ್ರತಿಯೊಬ್ಬರೂ ಇದಕ್ಕೆ ಬೇರೆ ಬೇರೆ ಉತ್ತರ ನೀಡಬಹುದು. ಆದರೆ ತಜ್ಞರ ಪ್ರಕಾರ ಎಷ್ಟೇ ದುಬಾರಿಯಾಗಿದ್ದರೂ ಒಂದು ತಿಂಗಳಿಗಿಂತ ಹೆಚ್ಚು ಕಾಲ ಒಂದು ಬ್ರಶ್ ಬಳಸಬಾರದು. ಬ್ರಶ್‌ನ ಕೂದಲುಗಳ ಮೇಲೆ ಅಪಾರ ಸಂಖ್ಯೆಯಲ್ಲಿ ಬ್ಯಾಕ್ಟೀರಿಯಾಗಳು ಕುಳಿತಿರುವುದನ್ನು ಕಂಡುಕೊಳ್ಳಲಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಲ್ಲುಜ್ಜುವ ಬ್ರಶ್

ಹಲ್ಲುಜ್ಜುವ ಬ್ರಶ್

ಆದ್ದರಿಂದ ಪ್ರತಿಬಾರಿ ಇದರ ಮೇಲೆ ಪೇಸ್ಟ್ ಹಚ್ಚಿಕೊಳ್ಳುವ ಮೊದಲೂ ಕೊಂಚ ಬಿಸಿನೀರು ಹಾಕಿ ತೊಳೆದುಕೊಂಡ ಬಳಿಕವೇ ಪೇಸ್ಟ್ ಹಚ್ಚಬೇಕು. ಇಲ್ಲದಿದ್ದರೆ ಇಲ್ಲಿದ್ದ ಬ್ಯಾಕ್ಟೀರಿಯಾಗಳು ಬಾಯಿಗೆ ದಾಟಿಕೊಂಡು ಬಾಯಿಯ ಹುಣ್ಣು, ಒಸಡಿನ ತೊಂದರೆ, ಬಾವು ಮೊದಲಾದ ತೊಂದರೆಗಳನ್ನು ತಂದಿಡಬಹುದು. ಹಲ್ಲುಜ್ಜಿದ ಬಳಿಕವೂ ಕನಿಷ್ಟ ಐದು ಬಾರಿಯಾದರೂ ಮುಕ್ಕಳಿಸಿ ಪೇಸ್ಟ್ ನ ನೊರೆಯನ್ನು ನಿವಾರಿಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡುತ್ತಾರೆ.

ಬೆಡ್ ಶೀಟ್

ಬೆಡ್ ಶೀಟ್

ನಮ್ಮ ದೇಹದಿಂದ ಪ್ರತಿ ಕ್ಷಣವೂ ಚರ್ಮದ ಸತ್ತ ಜೀವಕೋಶಗಳು ಉದುರುತ್ತಾ ಇರುತ್ತವೆ. ಕೂದಲು ಸಹಾ ಉದುರುತ್ತವೆ. ಇವು ಅತಿ ಸೂಕ್ಷ್ಮವಾಗಿದ್ದು ಇವುಗಳನ್ನು ಬ್ಯಾಕ್ಟೀರಿಯಾಗಳು ತಿನ್ನಲು ಬಹಳ ಇಷ್ಟಪಡುತ್ತವೆ. ರಾತ್ರಿ ಮಲಗಿ ಎದ್ದ ಬಳಿಕ ನಮ್ಮ ಬೆಡ್ ಶೀಟ್ ಮೇಲೂ ಅಪಾರ ಪ್ರಮಾಣದಲ್ಲಿ ಈ ಸೂಕ್ಷ್ಮ ಧೂಳು ಬಿದ್ದಿರುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬೆಡ್ ಶೀಟ್

ಬೆಡ್ ಶೀಟ್

ಅದರಲ್ಲೂ ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ ಅವುಗಳ ಕೂದಲೂ ಬಿದ್ದಿರುತ್ತದೆ. ಇವೆಲ್ಲವೂ ಸೋಂಕುಕಾರಕಗಳಾಗಿವೆ. ಆದ್ದರಿಂದ ಒಂದು ವಾರಕ್ಕೂ ಹೆಚ್ಚು ಕಾಲ ಯಾವುದೇ ಬೆಡ್ ಶೀಟ್ ಉಪಯೋಗಿಸಬಾರದು. ಪ್ರತಿ ಬಾರಿ ಇದನ್ನು ಬಿಸಿನೀರಿನಲ್ಲಿಯೇ ತೊಳೆಯಬೇಕು. ಇದರಿಂದ

ಸೋಂಕುಗಳಿಂದ ರಕ್ಷಣೆ ಸಾಧ್ಯ.

ತಲೆದಿಂಬು

ತಲೆದಿಂಬು

ತಲೆದಿಂಬಿನಲ್ಲಿಯೂ ಕ್ರಿಮಿಗಳು ಅಪಾರವಾಗಿ ತುಂಬಿಕೊಳ್ಳುತ್ತವೆ. ವಿಶೇಷವಾಗಿ ತಲೆಯ ಚರ್ಮದ ಸತ್ತ ಜೀವಕೋಶಗಳು, ತಲೆಹೊಟ್ಟು, ಮೊದಲಾದವು ಬ್ಯಾಕ್ಟೀರಿಯಾಗಳನ್ನು ಆಹ್ವಾನಿಸುತ್ತವೆ. ಇವುಗಳು ನಿಮ್ಮ ಮುಖದ ಚರ್ಮಕ್ಕೆ ಅದರಲ್ಲೂ ಮೊಡವೆಗಳಿದ್ದವರಿಗೆ ಹೆಚ್ಚು ಅಪಾಯಕಾರಿಯಾಗಿವೆ. ಆದ್ದರಿಂದ ತಲೆದಿಂಬಿನ ಕವರ್ ಗಳನ್ನು ಪ್ರತಿವಾರ ಬದಲಿಸಿ ಬಿಸಿನೀರಿನಲ್ಲಿ ತೊಳೆದುಕೊಳ್ಳುವುದು ಉತ್ತಮ

ಕೆಲವು ಸಲಹೆಗಳು

ಕೆಲವು ಸಲಹೆಗಳು

* ತಲೆಹೊಟ್ಟಿದ್ದರೆ ತಲೆದಿಂಬಿನ ಮೇಲೆ ಬೇರೊಂದು ಬಟ್ಟೆಯನ್ನಿಟ್ಟು ಅದರ ಮೇಲೆ ತಲೆಯಿಟ್ಟು ಮಲಗಿ. ಬೆಳಿಗ್ಗೆದ್ದ ಬಳಿಕ ಆ ಬಟ್ಟೆಯನ್ನು ಒಗೆಯಲು ಹಾಕಿ.

* ತಲೆದಿಂಬಿನ ಕವರುಗಳನ್ನು ಪ್ರತಿವಾರ ಸ್ವಚ್ಛಗೊಳಿಸಿದಂತೆಯೇ ತಲೆದಿಂಬುಗಳನ್ನೂ ಆಗಾಗ ಸ್ವಚ್ಛಗೊಳಿಸುತ್ತಾ ಇರಬೇಕು. ಸಾಧ್ಯವಾದರೆ ತಿಂಗಳಿಗೊಂದು ಬಾರಿ ದಿಂಬು, ಹಾಸಿಗೆ, ಹೊದಿಗೆ, ರಗ್ಗುಗಳನ್ನು ಬಿಸಿಲಿಗೆ ಹರಡಿ

* ಮೈಯುಜ್ಜಲು ಮೃದು ಸ್ಪಂಜಿಗಿಂತಲೂ ಒರಟ್ ಬ್ರಶ್ ಹೆಚ್ಚು ಸೂಕ್ತ. ಏಕೆಂದರೆ ಚರ್ಮಕ್ಕೆ ಅಂಟಿಕೊಂಡಿರುವ ಸತ್ತ ಜೀವಕೋಶಗಳನ್ನು ನಿವಾರಿಸಲು (exfoliation) ಮೃದು ಬ್ರಶ್ ಗಳಿಗೆ ಸಾಧ್ಯವಿಲ್ಲ.

ಕೆಲವು ಸಲಹೆಗಳು

ಕೆಲವು ಸಲಹೆಗಳು

ಅಡುಗೆ ಮನೆಯಲ್ಲಿ ಕೆಲವು ಕಿಚನ್ ಟಿಶ್ಯೂ ಅಥವಾ ಬೇರಾವುದೋ ಕಾಗದಗಳನ್ನು ಕೈಗೆ ತಕ್ಷಣ ಎಟುಕುವಂತಿಡಿ. ಯಾವಾಗ ಅಡುಗೆ ಮನೆಯಲ್ಲಿ ಏನಾದರೂ ಬಿತ್ತೋ, ಉದಾಹರಣೆಗೆ ಟೀ ಸೋಸಿ ಲೋಟಕ್ಕೆ ತುಂಬುವಾಗ ಕೆಲವು ಹನಿ ಚೆಲ್ಲಿದರೆ, ತಕ್ಷಣವೇ ಇದನ್ನು ಈ ಪೇಪರಿನಿಂದ ಒರೆಸಿ ಎಸೆದುಬಿಡಿ. ಹೆಚ್ಚಿನ ಗೃಹಿಣಿಯರು ಈ ಕೆಲಸವನ್ನು ತಮ್ಮ ನಿತ್ಯದ ಗಲೀಜು ಬಟ್ಟೆ, ಅಥವಾ ಒರೆಸುವ ಬಟ್ಟೆಯಿಂದ ಮಾಡುತ್ತಾರೆ. ಆದರೆ ಈ ಬಟ್ಟೆಯಲ್ಲಿ ಟೀ ಕಾಫಿ ಒರೆಸಿದ ದ್ರವ ಒಣಗಿ ಬ್ಯಾಕ್ಟೀರಿಯಾಗಳನ್ನು ಆಹ್ವಾನಿಸುತ್ತದೆ. ಇದು ಅನಾರೋಗ್ಯಕರವಾಗಿದೆ.

ಕೆಲವು ಸಲಹೆಗಳು

ಕೆಲವು ಸಲಹೆಗಳು

ಕುಡಿಯುವ ನೀರಿನ ಸಂಗ್ರಹಕ್ಕಾಗಿ ಕೊಂಚ ದುಬಾರಿಯಾದರೂ ಚಿಂತೆಯಿಲ್ಲ ಉತ್ತಮ ಗುಣಮಟ್ಟದ ಬಾಟಲಿಗಳನ್ನೇ ಕೊಳ್ಳಿ. ಬಿಸ್ಲೇರಿ ಮೊದಲಾದ ಪ್ಲಾಸ್ಟಿಕ್ಕಿನ ನೀರಿನ ಬಾಟಲಿಗಳನ್ನು ಒಂದು ಬಾರಿಯ ಬಳಕೆಗಾಗಿ ನಿರ್ಮಿಸಿದ್ದು ಇದರ ಮುಚ್ಚಳಗಳು ಚಿಕ್ಕದಾಗಿಯೂ ತೊಳೆಯಲು ಕಷ್ಟಕರವೂ ಆಗಿರುತ್ತದೆ. ಅಲ್ಲದೇ ಈ ಪ್ಲಾಸ್ಟಿಕ್ಕಿನ ಮೇಲೆ ಬಿಸಿಲು ಬಿದ್ದರೆ ಒಳಗಿನ ನೀರಿನಲ್ಲಿ ಕ್ಯಾನ್ಸರ್ ಕಾರಕ ಕಣಗಳು ಬೆರೆಯುತ್ತವೆ. ಆದ್ದರಿಂದ ಈ ಬಾಟಲಿಯ ನೀರು ಕುಡಿದ ಬಳಿಕ ಎಸೆಯುವುದೇ ಮೇಲು. ಅಂತೆಯೇ ಲಘು ಪಾನೀಯಗಳ ಬಾಟಲಿಯ ಉಪಯೋಗವೂ ಒಳ್ಳೆಯದಲ್ಲ.

ಕೆಲವು ಸಲಹೆಗಳು

ಕೆಲವು ಸಲಹೆಗಳು

* ಒಳ ಉಡುಪುಗಳನ್ನು ಗರಿಷ್ಟ ಒಂದು ವರ್ಷಕ್ಕೂ ಹೆಚ್ಚು ಕಾಲ ಬಳಸಬಾರದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. (ಅಂದಾಜು ಒಟ್ಟು ನಲವತ್ತು ಬಳಕೆಗಳು)

* ದೈಹಿಕ ವ್ಯಾಯಾಮ, ಜಿಮ್, ಆಟ ಮೊದಲಾದ ಬೆವರು ಹರಿಯುವ ಚಟುವಟಿಕೆಯ ಬಳಿಕ ಕಡ್ಡಾಯವಾಗಿ ಒಳ ಉಡುಪುಗಳನ್ನೂ ಬದಲಿಸಬೇಕು.

X
Desktop Bottom Promotion