Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲಿಯೇ ಅಡಗಿದೆ, ಸೈಲೆಂಟ್ ಕಿಲ್ಲರ್! ಇರಲಿ ಕಟ್ಟೆಚ್ಚರ
ನಿಮ್ಮ ಸುತ್ತಲಿರುವ ಪರಿಸರವನ್ನು ದಿಟ್ಟಿಸಿ ನೋಡಿದಾಗ ಎಲ್ಲವೂ ಸಾಮಾನ್ಯವಾಗಿರುವಂತೆಯೇ ನಿಮಗೆ ಕಾಣಬಹುದು. ಆದರೆ ಈ ಸಮಾನ್ಯವಾಗಿರುವ ಅಂಶಗಳೇ ನಿಮ್ಮನ್ನು ಅಪಾಯಕ್ಕೆ ತಳ್ಳಬಹುದು ಎಂಬ ಅಂಶವನ್ನು ನೀವು ಗಮನಿಸಿದ್ದೀರಾ? ನೀವು ಬಳಸುವ ನಿತ್ಯದ ವಸ್ತುಗಳೇ ನಿಮಗೆ ಗೊತ್ತಿಲ್ಲದಂತೆ ವಿಷಕಾರಿ ಅಂಶಗಳಾಗಿ ಮಾರ್ಪಡಬಹುದು. ನಿಮ್ಮ ಸಹಾಯಕ್ಕೆಂದೇ ನೀವು ತರುವ ಈ ದಿನಬಳಕೆಯ ವಸ್ತುಗಳು ಒಂದು ರೀತಿಯಲ್ಲಿ ಸ್ಲೋ ಪಾಯಿಸನ್‌ನಂತೆ ಕೆಲಸ ಮಾಡುತ್ತದೆ ಎಂಬ ಅಂಶವನ್ನು ನೀವು ಮನಗಾಣಲೇಬೇಕು.
ನೀವು ಬಳಸುವ ಸೋಪ್ ಆಗಿರಬಹುದು, ಇಲೆಕ್ಟ್ರಿಕ್ ಕುಕ್‌ವೇರ್, ಶಾಂಪೂ ಹೀಗೆ ದೈನಂದಿನ ವಸ್ತುಗಳೇ ನಿಮ್ಮ ಪ್ರಾಣಕ್ಕೆ ಸಂಚಕಾರ ತರುವ ಸಂಚಕಗಳಾಗಿವೆ. ನೀವು ಬಳಸದೇ ಇರುವ ಅನೇಕ ನಿರುಪಯುಕ್ತ ವಸ್ತುಗಳನ್ನು ಮನೆಯಲ್ಲಿ ಹಾಗೆಯೇ ಇಟ್ಟಿದ್ದೀರಿ ಎಂದಾದಲ್ಲಿ ಅದನ್ನು ಈಗಲೇ ಮನೆಯಿಂದ ಹೊರಹಾಕಿ. ನಿರುಪಯೋಗಿ ಪ್ಲಾಸ್ಟಿಕ್ ಬಾಟಲಿ ಕೂಡ ವಿಷವನ್ನು ಹೊರಹಾಕುವ ವಸ್ತುವಾಗಿರಬಹುದು. ಆದ್ದರಿಂದ ಅಂತಹವುಗಳು ನಿಮ್ಮ ಮನೆಯಲ್ಲಿ ಇದೆಯೇ ಎಂಬುದನ್ನು ಪತ್ತೆಹಚ್ಚಿ ಅವುಗಳನ್ನು ಹೊರಹಾಕಿ. ಇಂದಿನ ಲೇಖನದಲ್ಲಿ ಆ ವಸ್ತುಗಳು ಯಾವುವು ಎಂಬುದನ್ನು ನೋಡೋಣ....

ಕೃತಕ ಸಿಹಿಕಾರಕಗಳು
ಶೂನ್ಯ ಕ್ಯಾಲೋರಿ ಸಿಹಿಕಾರಕಗಳು ಈಗ ಪ್ರತಿ ಮನೆಯಲ್ಲಿ ಲಭ್ಯವಿರುತ್ತವೆ. ಇವುಗಳು ಅಪಾಯಕಾರಿ ವಸ್ತುಗಳಾಗಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ. ಇವುಗಳಲ್ಲಿ ಅಸ್ಪರ್ಟಮೆ ಎಂಬ ರಾಸಾಯನಿಕ ಇರುತ್ತದೆ. ಇದು ಮಧುಮೇಹ ಮತ್ತು ತೂಕ ಅಧಿಕಗೊಳ್ಳಲು ಕಾರಣವಾಗುತ್ತದೆ. ಹಾಗಾಗಿ ಮನೆಯಿಂದ ಇದನ್ನು ಮೊದಲು ಮನೆಯಿಂದ ಹೊರ ಹಾಕಿ.

ನಾನ್-ಸ್ಟಿಕ್ ಕುಕ್‌ವೇರ್
ನಾನ್-ಸ್ಟಿಕ್ ಕುಕ್‌ವೇರ್‌ನಲ್ಲಿ ಪರ್ಫ್ಲುರೂಕ್ಟಾನೊಯಿಕ್ ಆಮ್ಲ (PFOA) ಎಂಬ ಅಂಶಗಳು ಇರುತ್ತವೆ. ಇವುಗಳು ಕ್ಯಾನ್ಸರ್‌ಕಾರಕ ಅಂಶಗಳಾಗಿರುತ್ತವೆ. ನಾನ್-ಸ್ಟಿಕ್ ಪ್ಯಾನ್‌ಗಳಲ್ಲಿ ತಯಾರಿಸಿದ ಅಡುಗೆಯನ್ನು ಅಧಿಕವಾಗಿ ಸೇವಿಸುವುದರಿಂದ ಮತ್ತು ಅಧಿಕ ಉಷ್ಣಾಂಶದಲ್ಲಿ ಈ ಪ್ಯಾನ್‌ಗಳಲ್ಲಿ ಅಡುಗೆಯನ್ನು ತಯಾರಿಸುವುದರಿಂದ ಆಹಾರದ ಮೂಲಕ ನಮ್ಮ ದೇಹಕ್ಕೆ ವಿಷ ಅಂಶಗಳು ಸೇರುತ್ತವೆ. ಅದಕ್ಕಾಗಿ ಗಾಜಿನ ಮತ್ತು ಸೆರಾಮಿಕ್ ಪಾತ್ರೆಗಳನ್ನು ನಿಮ್ಮ ಆಹಾರ ತಯಾರಿಸಲು ಮತ್ತು ತಿನ್ನಲು ಬಳಸಿ.

ಪ್ಲಾಸ್ಟಿಕ್ ಬಾಟಲಿಗಳು ಮತ್ತು ಕಂಟೇನರ್‌ಗಳು
ಪ್ಲಾಸ್ಟಿಕ್‌ನಲ್ಲಿ ವಿಷದ ಅಂಶವಾದ ಬೈಸ್ಫೆನಾಲ್ ಎ (bisphenol A) ಅಥವಾ BPA ಎಂದು ಕರೆಯಲಾಗುವ ರಾಸಾಯನಿಕವಾಗಿದೆ. ಆರೋಗ್ಯಕ್ಕೆ ಮಾರಕವಾದ ಈ ರಾಸಾಯನಿಕ ಅಲ್ಪ ಪ್ರಮಾಣದಲ್ಲಿ ನಮ್ಮ ಆಹಾರ ಮತ್ತು ಚರ್ಮದ ಮೂಲಕ ದೇಹವನ್ನು ಸೇರುತ್ತದೆ, The U.S. Food and Drug Administration (FDA)ಪ್ರಕಾರ ಈ ರಾಸಾಯನಿಕದ ಪ್ರಮಾಣ ದೇಹದಲ್ಲಿ ಹೆಚ್ಚಾದರೆ ಮೆದುಳಿನ ಕ್ಷಮತೆಯನ್ನು ಕ್ಷೀಣಿಸುವುದು, ವರ್ತನೆಯಲ್ಲಿ ಬದಲಾವಣೆ, ಗರ್ಭದಲ್ಲಿರುವ ಶಿಶುವಿನ, ಚಿಕ್ಕ ಮತ್ತು ದೊಡ್ಡ ಮಕ್ಕಳ ಪ್ರೋಸ್ಟ್ರೇಟ್ ಗ್ರಂಥಿಯ ಮೇಲೆ ಅಪಾಯಕರ ಪರಿಣಾಮ ಆಗಬಹುದು ಎಂದು ಎಚ್ಚರಿಸಿದೆ. ಆದ್ದರಿಂದ ಪ್ಲಾಸ್ಟಿಕ್ ಕಂಟೇನರ್‌ಗಳನ್ನು ಬಿಸಿ ಮಾಡುವುದು ಮತ್ತು ಅದರಲ್ಲಿ ಆಹಾರ ಸಂಗ್ರಹಿಸುವುದನ್ನು ತಡೆಯಿರಿ.

ರೂಮ್ ಫ್ರೆಶ್‌ನರ್
ಈ ರೂಮ್ ಫ್ರೆಶ್‌ನರ್ ಸ್ಪ್ರೇ ಬಾಟಲ್‌ಗಳು ನಿಮ್ಮ ಕೊಠಡಿಯನ್ನು ಸುಗಂಧಭರಿತವಾಗಿ ಇರಿಸಬಹುದು. ಆದರೆ ಅವು ನಿಮ್ಮ ಮನೆಗೆ ಅಪಾಯಕಾರಿ ಕಾಯಿಲೆಗಳನ್ನು ಸ್ವಾಗತಿಸಲು ನೆರವಾಗುತ್ತವೆ. ಇದರಲ್ಲಿ ಡೈಕ್ಲೋರೊಬೆಂಜೀನ್ ಎಂಬ ಅಂಶವಿರುತ್ತದೆ. ಇದರ ವಾಸನೆಯನ್ನು ನೋಡುವುದರಿಂದಾಗಿಯೇ ಹಲವಾರು ವಿಷ ಪದಾರ್ಥಗಳು ನಮ್ಮ ದೇಹಕ್ಕೆ ಹೋಗುತ್ತವೆ. ಇದರಿಂದಾಗಿ ಕ್ಯಾನ್ಸರ್ ಸೇರಿದಂತೆ ಹಲವಾರು ಕಾಯಿಲೆಗಳು ಬರುತ್ತವೆ. ಆದ್ದರಿಂದ ಯಾವುದೇ ರಾಜಿಗೆ ಒಳಗಾಗದೆ ಈ ವಸ್ತುಗಳನ್ನು ಮನೆಯಿಂದ ಹೊರ ಹಾಕಿ.

ಕುಡಿಯುವ ನೀರು
ನಮಗೆ ಬಾಟಲಿಗಳಲ್ಲಿ ಅಥವಾ ಫಿಲ್ಟರುಗಳ ಮೂಲಕ ಸಿಗುತ್ತಿರಬಹುದು. ಆದರೆ ಬಾಟಲಿಗಳಲ್ಲಿ ತುಂಬಿಸುವ ಮೊದಲು ಹಾದು ಬರುವ ಪೈಪುಗಳ ಒಳಭಾಗ ತುಕ್ಕು ಹಿಡಿದಿದ್ದರೆ ಅದರಲ್ಲಿ ಕರಗುವ ಸೀಸವೂ ನೀರಿನಲ್ಲಿ ಕರಗಿ ನಮ್ಮ ದೇಹ ಸೇರಬಹುದು. ಎಷ್ಟೇ ಉತ್ತಮ ಗುಣಮಟ್ಟದ ನೀರು ಶುದ್ಧೀಕರಣ ಯಂತ್ರಕ್ಕೂ ಸೀಸದ ಅಣುಗಳು ಸಿಕ್ಕಿಕೊಳ್ಳದಿರುವುದೇ ದೊಡ್ಡ ತೊಂದರೆ. ನೀರಿನ ತಪಾಸಣೆಯೇ ಅತ್ಯುತ್ತಮ ವಿಧಾನ.

ಗೋಡೆಯ ಬಣ್ಣಗಳು
ಗೋಡೆಗೆ ಹೊಡೆಯುವ ಡಿಸ್ಟೆಂಪರ್ ಮತ್ತು ವಿಶೇಷವಾಗಿ ಆಯಿಲ್ ಪೇಂಟುಗಳಲ್ಲಿ ಸೀಸ ಅಧಿಕ ಪ್ರಮಾಣದಲ್ಲಿದೆ. ಬಣ್ಣ ಒಣಗಿದ ಬಳಿಕ ಸೀಸ ಪುಡಿಪುಡಿಯಾಗಿ ಬಣ್ಣದಲ್ಲಿ ಅಂಟಿಕೊಂಡಿರುತ್ತದೆ. ಈ ಬಣ್ಣ ಹಳೆಯದಾದಾಗ ಸ್ವಲ್ಪ ಉಜ್ಜಿದರೇ ಪುಡಿಪುಡಿಯಾಗಿ ಉದುರುತ್ತದೆ. (ಹೊಸ ಪೇಂಟ್ ಹೊಡೆಸಲು ಹಳೆಯ ಬಣ್ಣವನ್ನು ಹೆರೆದು ತೆಗೆಯುವಾಗ ಈ ಪ್ರಮಾಣ ಅತ್ಯಧಿಕ). ಈ ಧೂಳಿನಲ್ಲಿ ಸೀಸದ ಪ್ರಮಾಣ ಅತ್ಯಧಿಕವಾಗಿದ್ದು ಪ್ರತಿ ಉಸಿರಿನ ಮೂಲಕವೂ ನಮ್ಮ ದೇಹ ಸೇರುತ್ತದೆ. ಆದ್ದರಿಂದ ಈ ಕೆಲಸವನ್ನು ಮಾಡುವಾಗ ಮಾಸ್ಕ್ ಉಪಯೋಗಿಸಬೇಕು ಹಾಗೂ ನೀರು ಚಿಮುಕಿಸಿ ಬಣ್ಣವನ್ನು ಹೆರೆಯಬೇಕು.

ಸಿರಾಮಿಕ್ ಪಾತ್ರೆಗಳು
ಬಣ್ಣಗಳು ನಿಮ್ಮ ಮನೆಯಲ್ಲಿರುವ ಸಿರಾಮಿಕ್ ತಟ್ಟೆಗಳಲ್ಲಿ ವಿಭಿನ್ನ ಬಣ್ಣದ ಚಿತ್ತಾರವಿದೆಯೇ? ಹೌದಾದರೆ ಈ ಚಿತ್ತಾರದಲ್ಲಿರುವ ಸೀಸದ ಅಂಶ ಆಹಾರದ ಮೂಲಕ ನಿಮ್ಮ ಹೊಟ್ಟೆ ಸೇರುವ ಸಾಧ್ಯತೆ ತುಂಬಾ ಹೆಚ್ಚು. ಏಕೆಂದರೆ ಸಿರಾಮಿಕ್ ತಟ್ಟೆಗಳಿಗೆ ಹೊಳಪು ನೀಡಲು ಉಪಯೋಗಿಸುವ ಪದರದಲ್ಲಿ ಸೀಸ ಅತ್ಯಧಿಕ ಪ್ರಮಾಣದಲ್ಲಿದೆ. ಕೈಕೆಲಸದ ಮೂಲಕ ಹಚ್ಚಿದ ಚಿತ್ತಾರಕ್ಕೆ ಉಪಯೋಗಿಸಿದ ಬಣ್ಣದಲ್ಲಿಯೂ ಸೀಸವಿದೆ. ಪ್ರತಿಬಾರಿ ಊಟ ಮಾಡುವಾಗ, ಅದರಲ್ಲಿಯೂ ಆಹಾರದಲ್ಲಿ ಲಿಂಬೆ, ಹುಣಸೆಹುಳಿ ಮೊದಲಾದ ಆಮ್ಲೀಯ ಪದಾರ್ಥಗಳಿದ್ದರೆ ಅವುಗಳ ಮೂಲಕ ಸೀಸ ಅಲ್ಪ ಪ್ರಮಾಣದಲ್ಲಿ ಕರಗಿ ನಿಮ್ಮ ದೇಹ ಸೇರುತ್ತದೆ.



Click it and Unblock the Notifications


