Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ಆಹಾರ ಮತ್ತು ಶಕ್ತಿಯ ಲೆಕ್ಕಾಚಾರ
ಪ್ರತಿಯೊಬ್ಬ ಮನುಷ್ಯನೂ ಕೂಡ ತಾನು ಆರೋಗ್ಯವಾಗಿರಬೇಕು ಅಂತ ಬಯಸ್ತಾನೆ. ಆದ್ರೆ ಆರೋಗ್ಯ ಅನ್ನೋದು ಅಷ್ಟು ಸುಲಭವಾಗಿ ಒಲಿಯೋದಿಲ್ಲ. ಉತ್ತಮ ಆರೋಗ್ಯಕ್ಕಾಗಿ ನಾವು ಕೂಡ ಸ್ವಲ್ಪ ಕಷ್ಟಪಡಬೇಕಾಗುತ್ತೆ. ಬಾಯಿಗೆ ಬಂದದ್ದನ್ನು ಬೇಕಾಬಿಟ್ಟಿಯಾಗಿ ತಿಂದು ಅರಗಿಸಿಕೊಳ್ಳದೇ ಇದ್ದರೆ ಹೇಳದೆ ಕೇಳದೆ ಕಾಯಿಲೆ ಅನ್ನುವ ಶತ್ರು ನಮ್ಮನ್ನು ಆವರಿಸಿಕೊಂಡು ನಮ್ಮನ್ನು ಹಿಂಸೆ ಮಾಡಲು ಶುರು ಮಾಡ್ತಾನೆ..ನಮ್ಮ ದೇಹದ ಸಾಮರ್ಥ್ಯ ಏನು.. ನಮ್ಮ ದೇಹಕ್ಕೆ ಶಕ್ತಿಯ ಅಗತ್ಯತೆ ಎಷ್ಟಿದೆ.. ನಾನು ಪ್ರತಿ ದಿನ ಬಳಸುತ್ತಿರುವ ಶಕ್ತಿ ಎಷ್ಟು ಇಂತಹ ಕೆಲವು ಸೂಕ್ಷ್ಮ ವಿಚಾರಗಳನ್ನು ಯಾರೂ ಯೋಚಿಸೋಕು ಹೋಗೋದಿಲ್ಲ. ನಾವು ಸೇವಿಸುವ ಆಹಾರ ನಮಗೆ ಎಷ್ಟು ಕ್ಯಾಲೋರಿ ಶಕ್ತಿಯನ್ನು ನೀಡುತ್ತೆ ಅನ್ನುವ ಸತ್ಯ ಹೆಚ್ಚಿನವರಿಗೆ ಗೊತ್ತೇ ಇಲ್ಲ.
ಬದುಕಬೇಕು ಅಂದ್ರೆ ತಿನ್ನಬೇಕು ಅನ್ನೋ ಲೆಕ್ಕಾಚಾರದಲ್ಲಿ ತಿನ್ನುವವರೇ ಹೆಚ್ಚು. ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ ಮತ್ತು ಬ್ಯಾಲೆನ್ಸ್ ಆಗಿರುವ ಆಹಾರ ಪದ್ದತಿ ಅಳವಡಿಸಿಕೊಳ್ಳಬೇಕು ಅಂತ ಯೋಚಿಸುವ ಮಂದಿ ಇತ್ತೀಚೆಗೆ ತೀರಾ ವಿರಳ.. ಆಹಾರದ ವಿಚಾರದಲ್ಲಿ ಇಷ್ಟೊಂದು ಸಂಶೋಧನೆಗಳು ನಡೆದಿದ್ರೂ ಕೂಡ ಮನುಷ್ಯ ಮಾತ್ರ ತನ್ನ ಆಹಾರದ ವಿಚಾರದಲ್ಲಿ ನಿಷ್ಕಾಳಜಿ ವಹಿಸುತ್ತಲೇ ಇದ್ದಾನೆ. ಕಲಬೆರಿಕೆ ಆಹಾರ ಸೇವನೆ ಒಂದು ಕಡೆಯಾದ್ರೆ, ಆಹಾರದ ಪ್ರಮಾಣ ಮತ್ತು ಅವುಗಳಿಂದ ನಮಗೆ ಲಭ್ಯವಾಗುವ ಕ್ಯಾಲೋರಿ, ಮತ್ತು ಇತರೆ ಪ್ರೋಟೀನ್, ವಿಟಮಿನ್ ಇತ್ಯಾದಿಗಳ ಅರಿವೇ ಇಲ್ಲದೆ ತಿನ್ನುವುದು ಸರ್ವೇಸಾಮಾನ್ಯ.

ನಮ್ಮ ದೇಹಕ್ಕೆ ಎಷ್ಟು ಶಕ್ತಿ ಬೇಕು? ನಾವು ಎಷ್ಟು ಆಹಾರ ತಿನ್ನಬೇಕು. ಕಂಡಿದ್ದೆಲ್ಲ ತಿಂದ್ರೆ ಬರಬಾರದ್ದೆಲ್ಲ ಬಂದು ವಕ್ಕರಿಸಿಬಿಡುತ್ತೆ. ಹಾಗಾಗಿ ಒಂದು ಲಿಮಿಟೇಷನ್ ಇರಬೇಕು.. ಲಿಮಿಟೇಷನ್‌ಗಿಂತ ಹೆಚ್ಚಾಗಿ ಲೆಕ್ಕಾಚಾರ ಇರಬೇಕು. ಹಾಗಾದ್ರೆ ನೀವು ದಿನಾ ತಿನ್ನುವ ಆಹಾರದಲ್ಲಿ ಎಷ್ಟು ಕ್ಯಾಲೋರಿ ಇರುತ್ತೆ ಅನ್ನೋ ಸಣ್ಣ ಲೆಕ್ಕಾಚಾರವನ್ನು ಇಲ್ಲಿ ನಾವು ನಿಮಗೆ ಪಟ್ಟಿ ಮಾಡಿ ಹೇಳುತ್ತಾ ಇದ್ದೇವೆ. ಮುಂದೆ ಓದಿ.
ಒಂದು ಬಟ್ಟಲು ಅಕ್ಕಿಯಿಂದ 150 ಕ್ಯಾಲೋರಿ ಎನರ್ಜಿಯನ್ನು ಪಡೆಯಬಹುದು. ಒಂದು ಬಟ್ಟಲು ಗೋಧಿಹಿಟ್ಟು ಅಂದ್ರೆ 90 ಗ್ರಾಂನಷ್ಟು ಗೋಧಿಹಿಟ್ಟಿನ ಸೇವನೆಯಿಂದ 310 ಕ್ಯಾಲೋರಿ ಎನರ್ಜಿ ಸಿಗುತ್ತೆ. ಹಾಗೆಯೇ 130 ಗ್ರಾಮ್‌ನಷ್ಟು ಕಡಲೆಬೇಳೆಯಿಂದ 485 ಕ್ಯಾಲೋರಿಯಷ್ಟು ಎನರ್ಜಿ ಲಭ್ಯವಾಗುತ್ತೆ. ಇತರೆ ಬೇಳೆಕಾಳುಗಳು ಒಂದು ಬಟ್ಟಲು ಅಂದ್ರೆ 135 ಗ್ರಾಮ್‌ನಷ್ಟು ಸೇವನೆಯಿಂದ 460 ಕ್ಯಾಲೋರಿ ಎನರ್ಜಿ ದೊರಕುತ್ತೆ. 140 ಗ್ರಾಂನಷ್ಟು ಹೆಸರುಕಾಳು ಸೇವಿಸೋದ್ರಿಂದ ಸುಮಾರು 470 ಕ್ಯಾಲೋರಿ ಶಕ್ತಿ ಲಭ್ಯವಾಗುತ್ತೆ.
ರಾಜ್‌ಮಾ 120 ಗ್ರಾಂನಷ್ಟು ಸೇವಿಸೋದ್ರಿಂದ ನಿಮ್ಗೆ ಲಭ್ಯವಾಗುವ ಶಕ್ತಿಯ ಪ್ರಮಾಣ 145ಕ್ಯಾಲೋರಿ.. 530 ಕ್ಯಾಲೋರಿಯಷ್ಟು ಶಕ್ತಿ ಬೇಕು ಅಂದ್ರೆ 130 ಗ್ರಾಮ್‌ನಷ್ಟು ಸೋಯಾಬೀನ್ ಸೇವಿಸ್ಬೇಕು. ಹಸಿರು ತರಕಾರಿಯನ್ನು 100 ಗ್ರಾಮ್‌ನಷ್ಟು ಸೇವಿಸೋದ್ರಿಂದ 60 ಕ್ಯಾಲೋರಿಯಷ್ಟು ಶಕ್ತಿ ಲಭ್ಯವಾಗುತ್ತೆ.ಸುಮಾರು 15 ಗ್ರಾಂ ಅಂದ್ರೆ ಒಂದತ್ತು ಬಾದಾಮಿಯನ್ನು ಸೇವಿಸೋದ್ರಿಂದ 85 ಕ್ಯಾಲೋರಿಯಷ್ಟು ಶಕ್ತಿ ಲಭ್ಯ. 15 ಗ್ರಾಂ ಅಥ್ವಾ 8 ರಿಂದ 10 ಗೋಡಂಬಿಯನ್ನು ತಿನ್ನೋದ್ರಿಂದ 95 ಕ್ಯಾಲೋರಿಯಷ್ಟು ಶಕ್ತಿ ಸಿಗುತ್ತೆ.
ಸಾಧಾರಣ ಗಾತ್ರದ 115ಗ್ರಾಂನಷ್ಟು ತೆಂಗಿನಕಾಯಿ ಸೇವಿಸೋದ್ರಿಂದ 510 ಕ್ಯಾಲೋರಿ ಶಕ್ತಿ ದೊರಕುತ್ತೆ. 290 ಗ್ರಾಂನಷ್ಟು ಒಣಕೊಬ್ಬರಿಯನ್ನು ಸೇವಿಸಿದ್ರೆ 290 ಕ್ಯಾಲೋರಿ ಶಕ್ತಿ ಸಿಗುತ್ತೆ. ಕಡ್ಲೆಕಾಳು 15 ಗ್ರಾಂನಷ್ಟು ತಿಂದ್ರೆ ಸಾಕು, 85 ಕ್ಯಾಲೋರಿ ಶಕ್ತಿ ನಿಮಗೆ ಲಭ್ಯವಾಗುತ್ತೆ. ಇನ್ನು ಎಳ್ಳಿನಲ್ಲೂ ಅತ್ಯಧಿಕ ಶಕ್ತಿ ಲಭ್ಯ. 3ಗ್ರಾಂನಷ್ಟು ಸೇವಿಸೋದ್ರಿಂದ 15 ಕ್ಯಾಲೋರಿ ಶಕ್ತಿ ಸಿಗುತ್ತೆ.
ಮಸಾಲೆ ಪದಾರ್ಥಗಳು, ಎಣ್ಣೆ ಅಂಶದಿಂದ ಎಷ್ಟು ಶಕ್ತಿ ಸಿಗುತ್ತೆ ಗೊತ್ತಾ? 10 ಮಿಲಿ ಲೀಟರ್‌ನಷ್ಟು ತುಪ್ಪ ಸೇವನೆಯಿಂದ 100 ಕ್ಯಾಲೋರಿ ಲಭ್ಯ. ಒಂದು ಚಮಚ ಖಾರದಪುಡಿಯಿಂದ ನಿಮ್ಗೆ ಸಿಗುವ ಶಕ್ತಿಯ ಪ್ರಮಾಣ 17 ಕ್ಯಾಲೋರಿ. ಇನ್ನು 7 ಗ್ರಾಂ ಕೊತ್ತಂಬರಿ ಬೀಜವನ್ನು ಸೇವಿಸೋದ್ರಿಂದ 20 ಕ್ಯಾಲೋರಿ ಶಕ್ತಿ ಸಿಗುತ್ತೆ. ಜೀರಿಗೆ 5 ಗ್ರಾಂ ಸೇವಿಸೋದ್ರಿಂದ 18 ಕ್ಯಾಲೋರಿ ಶಕ್ತಿ ದೊರಕುತ್ತೆ. ಇನ್ನು ಮೆಂತ್ಯೆಕಾಳನ್ನು 6 ಗ್ರಾಂನಷ್ಟು ಸೇವಿಸಿದ್ರೆ 20 ಕ್ಯಾಲೋರಿ ಶಕ್ತಿ ಸಿಗುತ್ತೆ. 5 ಕ್ಯಾಲೋರಿ ಶಕ್ತಿ ಪಡೆಯಲು 10 ಗ್ರಾಂನಷ್ಟು ಸಾಸಿವೆಕಾಳು ಸೇವಿಸಿದ್ರೆ ಸಾಕು.. ಸುಮಾರು 3 ಗ್ರಾಂ ಅಂದ್ರೆ ಆರರಿಂದ ಏಳು ಬೆಳ್ಳುಳ್ಳಿ ತಿಂದ್ರೆ 4 ಕ್ಯಾಲೋರಿ ಲಭ್ಯವಾಗುತ್ತೆ. 50 ಗ್ರಾಂನಷ್ಟು ಈರುಳ್ಳಿ ಸೇವಿಸೋದ್ರಿಂದ 30 ಕ್ಯಾಲೋರಿ ಶಕ್ತಿ ಸಿಗುತ್ತೆ..
ಒಟ್ಟಿನಲ್ಲಿ ನಮ್ಮ ದೇಹಕ್ಕೆ ಸೇರುವ ಕ್ಯಾಲೋರಿ ಪ್ರಮಾಣ ಒಂದೊಂದು ಆಹಾರದಲ್ಲಿ ಒಂದೊಂದು ರೀತಿ ಇರುತ್ತೆ.ಹಾಗಂತ ನಾಳೆ ಅಡುಗೆ ಮಾಡುವಾಗ ಇದೆನ್ನೆಲ್ಲ ಲೆಕ್ಕಾಚಾರ ಹಾಕಿ ಅಡುಗೆ ಮಾಡೋಕೆ ಆಗೋದಿಲ್ಲ. ಅಳತೆ ಮಾಡಿ ತಿನ್ನೊಕೂ ಆಗೋದಿಲ್ಲ. ಎಲ್ಲವೂ ನಮ್ಮ ದೇಹಕ್ಕೆ ಅಗತ್ಯವಿರುವಷ್ಟೇ ಸೇವಿಸ್ಬೇಕು. ಅತಿಯಾದ್ರೆ ಅಮೃತ ಕೂಡ ವಿಷವಾಗುತ್ತೆ. ಸೋ ಯಾವುದೂ ಅತಿಯಾಗಬಾರದು, ಯಾವುದೂ ಮಿತವೂ ಆಗಬಾರದು.. ಎಲ್ಲವೂ ಸರಿಪ್ರಮಾಣದಲ್ಲಿ ಸರಿಯಾದ ಸಮಯದಲ್ಲಿ ದೊರಕಿದ್ರೆ ಮಾತ್ರ ದೇಹ ಆರೋಗ್ಯಯುತವಾಗಿ ಇರಲು ಸಾಧ್ಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

