Latest Updates
-
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ -
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ!
ಹಣ್ಣುಗಳಲ್ಲಿ ಅಡಗಿರುವ ಆರೋಗ್ಯಕರ ಸಂಗತಿಗಳು
ಪ್ರಕೃತಿ ಒಂದೊಂದು ಕಾಲದಲ್ಲಿ ಒಂದೊಂದು ರೀತಿಯ ಹಣ್ಣುಗಳು, ತರಕಾರಿ ಮತ್ತು ಆಹಾರಗಳನ್ನು ನಮಗೆ ನೀಡಿದೆ. ಇದನ್ನು ಹಿಂದಿನ ಕಾಲದಿಂದಲೂ ಬಳಸಿಕೊಂಡು ಜನರು ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಅದರಲ್ಲೂ ಆಯಾಯ ಋತುಗಳಲ್ಲಿ ಸಿಗುವಂತಹ ಹಣ್ಣುಗಳು ನಮ್ಮ ದೇಹಕ್ಕೆ ಹೆಚ್ಚಿನ ಪೌಷ್ಠಿಕಾಂಶಗಳನ್ನು ನೀಡುತ್ತದೆ. ಹೆಚ್ಚಿನ ಜನರಿಗೆ ಹಣ್ಣುಗಳೆಂದರೆ ಅಲರ್ಜಿ. ಅದನ್ನು ತಿನ್ನುವ ಬದಲು ಜ್ಯೂಸ್ ಮಾಡಿಕೊಂಡು ಕುಡಿಯುತ್ತಾರೆ. ತಾಜಾ ಹಣ್ಣು: ಇದುವೇ ನಮ್ಮ ಆರೋಗ್ಯದ ಕಣ್ಣು
ಹಣ್ಣುಗಳನ್ನು ಹಾಗೆ ತಿಂದರೆ ಒಳ್ಳೆಯದು. ಜ್ಯೂಸ್ನಲ್ಲಿ ಇರುವ ಸಕ್ಕರೆ ಅಂಶ ಮತ್ತು ನಾರಿನಾಂಶ ಇಲ್ಲದೆ ಇರುವುದು ದೇಹಕ್ಕೆ ಒಳ್ಳೆಯದಲ್ಲ. ಹಣ್ಣುಗಳನ್ನೇ ತಿಂದರೆ ಅದರಿಂದ ದೇಹಕ್ಕೆ ಹಲವಾರು ರೀತಿಯ ಲಾಭಗಳಿವೆ. ವಿವಿಧ ರೀತಿಯ ಹಣ್ಣುಗಳನ್ನು ಸಲಾಡ್ ರೂಪದಲ್ಲಿ ತಿನ್ನಬಹುದು. ಇದು ನೈಸರ್ಗಿಕ ರೀತಿಯ ತಿಂಡಿಗಳು ಅಥವಾ ಫಾಸ್ಟ್ ಫುಡ್ ಎನ್ನಬಹುದು. ಹಣ್ಣುಗಳನ್ನು ಹಾಗೆಯೇ ತಿನ್ನುವುದರಿಂದ ಆಗುವಂತಹ ಲಾಭಗಳು ಏನು ಎಂದು ತಿಳಿದುಕೊಳ್ಳಿ.

ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣು ರಕ್ತ ಪರಿಚಲನೆಗೆ ತುಂಬಾ ಒಳ್ಳೆಯದು. ಇದು ರಕ್ತದ ಕೋಶಗಳನ್ನು ಆರಾಮವಾಗಿರಿಸಿ ದೇಹದಲ್ಲಿ ದಿನವಿಡಿ ರಕ್ತ ಪರಿಚಲನೆಯಾಗುವಂತೆ ನೋಡಿಕೊಳ್ಳುವುದು.ಬಿಸಿಲಿನ ಝಳಕ್ಕೆ, ತಂಪುಣಿಸುವ ಕಲ್ಲಂಗಡಿ ಹಣ್ಣು

ಕಿತ್ತಳೆ ಹಣ್ಣು
ಕಿತ್ತಳೆ ಹಣ್ಣುಗಳನ್ನು ತಿಂದರೆ ಹೃದಯದ ಕಾಯಿಲೆ, ಬೊಜ್ಜು ಮತ್ತು ಕ್ಯಾನ್ಸರ್ ಅನ್ನು ಅದು ತಡೆಯುವುದು. ಹುಳಿ ಸಿಹಿ ರುಚಿಯ ಕಿತ್ತಳೆ ಹಣ್ಣಿನ ಚಿನ್ನದಂತಹ ಗುಣಗಳು

ನೇರಳೆ ಹಣ್ಣು
ನೇರಳೆ ಹಣ್ಣು ಮೆದುಳನ್ನು ಚುರುಕುಗೊಳಿಸುವುದು. ನೇರಳೆ ಹಣ್ಣನ್ನು ತಿನ್ನುವುದರಿಂದ ಜ್ಞಾಪಕಶಕ್ತಿಯು ಹೆಚ್ಚಾಗುವುದು.

ಸ್ಟ್ರಾಬೆರಿ
ಸ್ಟ್ರಾಬೆರಿಯು ನೋಡಲು ಚಿಕ್ಕದಾಗಿದ್ದರೂ ಅದರಲ್ಲಿ ಸ್ತನದ ಕ್ಯಾನ್ಸರ್ ಅನ್ನು ತಡೆಗಟ್ಟುವಂತಹ ಶಕ್ತಿಯಿದೆ. ಸ್ಟ್ರಾಬೆರಿಯಲ್ಲಿದೆ ಟಾಪ್ 10 ಆರೋಗ್ಯಕರ ಗುಣಗಳು

ಚೆರ್ರಿಗಳು
ಚೆರ್ರಿಗಳು ಕೂಡ ಹಲವಾರು ಗುಣಗಳನ್ನು ಹೊಂದಿದೆ. ಇದು ನರಗಳನ್ನು ಸರಾಗವಾಗಿಸಿ ಮೆದುಳಿನ ನರಗಳು ಮತ್ತು ನರದ ವ್ಯವಸ್ಥೆ ಆರಾಮವಾಗಿರುವಂತೆ ನೋಡಿಕೊಳ್ಳುವುದು.

ಬಾಳೆಹಣ್ಣು
ಯಾವಾಗಲೂ ಸ್ನಾಯು ಸೆಳೆತಕ್ಕೆ ಒಳಗಾಗುತ್ತಾ ಇದ್ದರೆ ಬಾಳೆಹಣ್ಣನ್ನು ಸೇವಿಸಿ. ಬಾಳೆಹಣ್ಣಿನಲ್ಲಿ ಸ್ನಾಯು ಸೆಳೆತ ತಡೆಗಟ್ಟುವ ಶಕ್ತಿಯಿದೆ.ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

ದಾಳಿಂಬೆ ಹಣ್ಣು
ದಾಳಿಂಬೆಯು ರಕ್ತದ ಒತ್ತಡವನ್ನು ಪರಿಣಾಮಕಾರಿಯಾಗಿ ತಗ್ಗಿಸಿ ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. ದಾಳಿಂಬೆ ಹಣ್ಣಿನಲ್ಲಿರುವ 10 ಅದ್ಭುತ ಪ್ರಯೋಜನಗಳು



Click it and Unblock the Notifications