Latest Updates
-
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ!
ವೈದ್ಯರ ಪ್ರಕಾರ, ಇಂತಹ ಆಹಾರಗಳೆಲ್ಲಾ ವಿಷಕಾರಿಯಂತೆ!
ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯೇ ಇದೆ. ಅಂತೆಯೇ ಸೂಕ್ತಪ್ರಮಾಣದಲ್ಲಿ ತಾಜಾ ಮತ್ತು ಪೌಷ್ಠಿಕ ಆಹಾರವನ್ನು ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದು. ನಾವು, ಮನುಷ್ಯರು, ಮಿಶ್ರಾಹಾರಿಗಳು. ಅಂದರೆ ಅತ್ತ ಹಸಿ ಹುಲ್ಲನ್ನೂ ತಿನ್ನಲಾರೆವು, ಇತ್ತ ಪಕ್ಕಾ ಮಾಂಸಾಹಾರಿಗಳಂತೆ ಹಸಿಮಾಂಸವನ್ನೂ ಸೇವಿಸಲಾರೆವು.
ಅದಕ್ಕೇ ನಮಗೆ ಆಹಾರ ಬೇಯಿಸಿರಬೇಕು. ಇದು ವೈವಿಧ್ಯಕ್ಕೆ ದಾರಿ ತೆರೆಯಿತು. ಸಾವಿರಾರು ತರಹದ ರುಚಿಗಳನ್ನು ಕಂಡುಹಿಡಿಯಲಾಯಿತು. ನಮ್ಮ ಹಿರಿಯರು ನೈಸರ್ಗಿಕ ಮತ್ತು ಅಂದು ಲಭ್ಯವಿದ್ದ ಸವಲತ್ತುಗಳ ಮೂಲಕ ತಯಾರಿಸಬಹುದಾದ ಅಡುಗೆಗಳನ್ನು ತಯಾರಿಸಿ ಅದರಲ್ಲಿ ಲೋಪಗಳಿರುವುದನ್ನು ನಿವಾರಿಸಿ ಉತ್ತಮವೆಂದು ಕಂಡುಬಂದದ್ದನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಾ ಬಂದಿದ್ದಾರೆ. ಪ್ರಪಂಚದಲ್ಲೇ ಅತ್ಯಂತ ನ್ಯೂಟ್ರೀಷಿಯಸ್ ಆಹಾರ 'ಇಡ್ಲಿ'..
ಆದ್ದರಿಂದಲೇ ನಮಗೆ ಹಿರಿಯರಿಂದ ಲಭ್ಯವಾಗಿರುವ ಆಹಾರಕ್ರಮಗಳು ಆರೋಗ್ಯಕರವಾಗಿವೆ. ಆದರೆ ಇಂದು ಕಾಲ ಬದಲಾಗಿದೆ. ಹಿಂದೆ ಬೆಂಕಿ ಒಂದೇ ಆಹಾರವನ್ನು ಬೇಯಿಸಲು ಬಳಸಲ್ಪಟ್ಟ ಶಕ್ತಿಮೂಲವಾಗಿತ್ತು. ಇಂದು ಮೈಕ್ರೋವೇವ್‌ನಿಂದ ಹಿಡಿದು ಹತ್ತು ಹಲವು ಬಗೆಯ ಸವಲತ್ತುಗಳು ಲಭ್ಯವಿವೆ. ಅಂತೆಯೇ ಇದನ್ನು ಅವಲಂಬಿಸಿ ಹೊಸರುಚಿಗಳೂ ಸಾವಿರಾರು ಬಿಡಿ, ಲಕ್ಷಾಂತರ ಪಟ್ಟು ಹೆಚ್ಚಿವೆ. ಆದರೆ ಈ ಆಹಾರಗಳನ್ನು ಒರೆಹಚ್ಚಿ ಆರೋಗ್ಯಕರವೋ ಅಲ್ಲವೋ ಎಂದು ಯಾರಾದರೂ ಪರಾಮರ್ಶಿಸಿ ಕೆಟ್ಟದ್ದೆಂದು ತಿಳಿದುಬಂದು ಬಳಿಕ ಬೇಡವೆಂದು ಹೇಳಿದರೆ ಮಾತ್ರ ಅದರ ಬಳಕೆ ನಿಲ್ಲಬಹುದು. ಅಲ್ಲಿಯವರೆಗೆ ಆ ಬಗ್ಗೆ ಅರಿವಿರದವರು ಇದನ್ನು ಸೇವಿಸುತ್ತಲೇ ಹೋಗಿ ಹೊಟ್ಟೆ ಕೆಡಿಸಿಕೊಳ್ಳುವುದು, ಕೆಲವೊಮ್ಮೆ ಗಂಭೀರವಾದ ಅನಾರೋಗ್ಯಕ್ಕೂ ತುತ್ತಾಗುತ್ತಾರೆ. ಪೋಷಕಾಂಶ ಭರಿತ ಆಹಾರ- ಇದುವೇ ಆರೋಗ್ಯದ ಗುಟ್ಟು
ಹೌದು, ನಮ್ಮ ಆಹಾರ ಮತ್ತು ಅದನ್ನು ನಾವು ಸೇವಿಸುವ ಬಗೆಯಲ್ಲಿ ಕೂಡ ನಮ್ಮ ಬುದ್ಧಿಮತ್ತೆಯ ಬಳಕೆಯನ್ನು ಮಾಡಿಕೊಳ್ಳಬೇಕು. ಹಸಿವಾಗುತ್ತದೆ ಎಂದು ಕಂಡಕಂಡದ್ದನ್ನು ಸೇವಿಸಬಾರದು ಅಂತೆಯೇ ಜಂಕ್ಫುಡ್ಗಳ ತಿನ್ನುವಿಕೆಯನ್ನು ಆದಷ್ಟು ಕಡಿಮೆ ಮಾಡಬೇಕು. ಕೆಲವೊಂದು ಆಹಾರಗಳು ನಮ್ಮ ಹೊಟ್ಟೆಯನ್ನು ತುಂಬಿಸುತ್ತವೆಯಾದರೂ ದೇಹಕ್ಕೆ ಅನಾನುಕೂಲತೆಯನ್ನೇ ಮಾಡುತ್ತವೆ. ಇವುಗಳನ್ನು ಮೃತ ಆಹಾರಗಳೆಂದೇ ಕರೆಯಲಾಗಿದ್ದು ವೈದ್ಯರು ಇಂತಹ ಆಹಾರಗಳ ಸೇವನೆಯನ್ನು ಮಾಡಬಾರದೆಂದೇ ಕಟ್ಟುನಿಟ್ಟಾಗಿ ತಾಕಿತ್ತು ಮಾಡುತ್ತಾರೆ. ಇಂದಿನ ಲೇಖನದಲ್ಲಿ ಹೆಚ್ಚು ಸಂಶೋಧನೆ ಮಾಡಿದ ದೇಹಕ್ಕೆ ಅನಾರೋಗ್ಯವನ್ನುಂಟು ಮಾಡುವ ಆಹಾರಗಳ ಪಟ್ಟಿಯನ್ನು ನಿಮ್ಮ ಮುಂದೆ ಇರಿಸುತ್ತಿದ್ದೇವೆ, ಮುಂದೆ ಓದಿ...

ವೈದ್ಯರುಗಳೇ ನಿರ್ಬಂಧಿಸಿದ 10 ವಿಷಕಾರಿ ಆಹಾರಗಳು
ಸೋಡಾ ಒಂದು ಅತ್ಯುತ್ತಮ ಪಾನೀಯವೆಂದು ನೀವು ಭಾವಿಸುತ್ತಿದ್ದರೆ ಇನ್ನೊಮ್ಮೆ ನೀವು ಯೋಚಿಸಬೇಕಾಗುತ್ತದೆ. ಆರೋಗ್ಯ ತಜ್ಞರುಗಳ ಪ್ರಕಾರ, ಎಲ್ಲಾ ಸೋಡಾಗಳು ಹೃದಯಕ್ಕೆ ನೇರವಾಗಿ ಬಾಧಕವಾಗಿರುವ ಅಂಶಗಳನ್ನು ಒಳಗೊಂಡಿವೆಯಂತೆ ಇದು ಹೃದಯ ಸಂಬಂಧಿ ರೋಗಗಳನ್ನು ನಿಮಗೆ ಬೇಗನೇ ತಂದೊಡ್ಡುತ್ತವೆ. ದೇಹಕ್ಕೆ ಮಾರಕವಾಗಿರುವ ಸೋಡಾ ಕ್ಯಾನ್ಸರ್ ಕೋಶಗಳನ್ನು ಸಕ್ರಿಯಗೊಳಿಸುತ್ತವೆ ಮತ್ತು ತೂಕವನ್ನು ಹೆಚ್ಚಿಸುತ್ತದೆ ಇದರಿಂದ ಸ್ಥೂಲಕಾಯತೆ ನಿಮ್ಮನ್ನು ಎಡತಾಕುತ್ತದೆ.ತಂಪು ಪಾನೀಯಗಳ ಹಿಂದಿದೆ, ಬೆಚ್ಚಿ ಬೀಳಿಸುವ ಸತ್ಯ

ಚಿಪ್ಸ್
ಒಂದು ಪ್ಯಾಕೆಟ್ ಚಿಪ್ಸ್ ನಿಮ್ಮನ್ನು ಕೊಲ್ಲುತ್ತದೆ. ಹೆಚ್ಚು ಪ್ರಮಾಣದ ಸೋಡಿಯಂ ಮತ್ತು ಕೊಬ್ಬು ಚಿಪ್ಸ್ನಲ್ಲಿದ್ದು ಏಕ್ರಿಲ್ಮೇಡ್ ವಿಷಕಾರಿ ಅಂಶವನ್ನು ಇದು ಒಳಗೊಂಡಿದೆ ಎಂಬುದಾಗಿ ವರದಿ ತಿಳಿಸಿದೆ. ಬಂಜೆತನ ಮತ್ತು ಬೇರೆ ಬೇರೆ ಪ್ರಕಾರಗಳ ಕ್ಯಾನ್ಸರ್ಗೆ ಇದು ಕಾರಣವಾಗಿದೆ. ಆಲೂಗಡ್ಡೆ ಚಿಪ್ಸ್: ಹಣ ಕೊಟ್ಟು ಕಾಯಿಲೆ ಖರೀದಿಸಬೇಡಿ!

ಹಾಲು
ಶುದ್ಧಹಾಲನ್ನು ಸೇವಿಸುವಂತೆ ವೈದ್ಯರು ತಿಳಿಸುತ್ತಾರೆ. ಕೆನೆ ತೆಗೆದ ಮತ್ತು ಸಂಪೂರ್ಣವಾಗಿ ಸಂಸ್ಕರಿಸಲಾದ ಹಾಲು ಕೃತಕ ಹಾರ್ಮೋನುಗಳನ್ನು ಒಳಗೊಂಡಿದ್ದು, ಇದು ಇನ್ನೊಂದು ಹಾರ್ಮೋನು IGF-1 ದ್ವಿಗುಣಗೊಳ್ಳಲು ಕಾರಣವಾಗುತ್ತದೆ. ಇದು ಮಾನವನಲ್ಲಿ ಕ್ಯಾನ್ಸರ್ ಉಂಟುಮಾಡುತ್ತದೆ.

ಮಾರ್ಗರಿನ್
ಬೆಣ್ಣೆಗೆ ಪರ್ಯಾಯವಾಗಿ ಬಳಸಬಹುದಾದ ಆರೋಗ್ಯಕರ ಆಹಾರವಾಗಿದೆ ಮಾರ್ಗರಿನ್. ಆದರೆ ಇದು ಹೆಚ್ಚು ಕೆಟ್ಟ ಆಹಾರವಾಗಿದೆ ಎಂಬುದಾಗಿ ವೈದ್ಯರು ತಿಳಿಸುತ್ತಾರೆ. ಇದು ಟ್ರಾನ್ಸ್ ಫ್ಯಾಟ್ ಅನ್ನು ಒಳಗೊಂಡಿರುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಇದು ದ್ವಿಗುಣಗೊಳಿಸುತ್ತದೆ

ಸಕ್ಕರೆ
ನೀವು ಸಕ್ಕರೆಯನ್ನು ತಿಂದಂತೆಲ್ಲಾ ಪ್ರತೀ ಬಾರಿ 50 ಶೇಕಡಾದಷ್ಟು ನರಮಂಡಲವು ರಾಜಿಯಾಗುತ್ತದೆ ಎಂಬುದು ನಿಮಗೆ ಗೊತ್ತೇ? ಈ ಸಿಹಿ ಹರಳುಗಳು ನಿಮ್ಮ ಮೆದೋಜ್ಜೀರಕ ಗ್ರಂಥಿಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಅಂತೆಯೇ ಪಿತ್ತಜನಕಾಂಗ ಮತ್ತು ಜೀರ್ಣಕ್ರಿಯೆಗೆ ಹಾನಿಯನ್ನು ತಂದೊಡ್ಡುತ್ತವೆ. ಐದು ವರ್ಷಗಳಿಗಿಂತ ಕಡಿಮೆ ಸಮಯದಲ್ಲೇ ನಿಮ್ಮ ದೇಹವನ್ನು ಇದು ಸ್ಥಗಿತಗೊಳಿಸಬಹುದು. ಸಕ್ಕರೆ ಹಿಂದಿರುವ ಕರಾಳ ಸತ್ಯ: ಇಲ್ಲಿದೆ 10 ಪುರಾವೆಗಳು

ಹಿಟ್ಟು
ಗೋಧಿ ಹಿಟ್ಟಿಗಿಂತಲೂ ಮೈದಾ ಹಿಟ್ಟು ಕೂಡ ಸಕ್ಕರೆ ಸೇವಿಸದಂತೆಯೇ ದುಷ್ಪರಿಣಾಮಕಾರಿ. ಮೆದೋಜ್ಜೀರಕ ಗ್ರಂಥಿಗಳ ಮೇಲೆ ಹೆಚ್ಚು ಪ್ರಮಾಣದ ಒತ್ತಡವನ್ನು ಇದು ಹಾಕುವುದರಿಂದ ದೇಹದಲ್ಲಿರುವ ಇನ್ಸುಲಿನ್ ಮಟ್ಟಕ್ಕೂ ತೊಂದರೆಯನ್ನು ಉಂಟುಮಾಡುತ್ತದೆ. ಇದರಿಂದ ಸ್ಥೂಲಕಾಯತೆ ಮತ್ತು ಹೃದಯ ಸಂಬಂಧಿ ರೋಗಗಳು ನಿಮ್ಮನ್ನು ಕಾಡಬಹುದು.

ಫಾಸ್ಟ್ ಫುಡ್
ಮಾಂಸ, ಸೋಡಿಯಮ್ ಮತ್ತು ಸ್ಯಾಚುರೇಟೆಡ್ ಪ್ಯಾಟ್ ನಿಮ್ಮ ಆಯುಷ್ಯವನ್ನು ಅರ್ಧಕ್ಕೆ ನಿಲ್ಲಿಸಿಬಿಡುತ್ತವೆ. ಫಾಸ್ಟ್ ಫುಡ್ ಸೇವನೆ ಅನಾರೊಗ್ಯಕರವಾಗಿದ್ದು, ಇವುಗಳನ್ನು ನೀವು ತ್ಯಜಿಸಿದರೆ ಸಾಕಷ್ಟು ಕಾಯಿಲೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.

ಡೋನಟ್ಸ್
ಬಿಳಿ ಸಕ್ಕರೆ, ಮೈದಾ ಮತ್ತು ಟ್ರಾನ್ಸ್ ಫ್ಯಾಟ್ ಅನ್ನು ಒಳಗೊಂಡಿರುವ ಡೋನಟ್ಸ್ ದೇಹಕ್ಕೆ ಅನಾರೋಗ್ಯಕರವಾಗಿದೆ. ಇವುಗಳೆಲ್ಲವೂ ಒಂದಾಗಿ ಕಲೆತಿದೆ ಎಂದಾದಲ್ಲಿ ಸೊಂಟದ ಭಾಗದಲ್ಲಿ ಮಡಿಕೆಗಳು ಉಂಟಾಗುತ್ತದೆ ಮತ್ತು ಹೃದಯಕ್ಕೆ ಹಾನಿಯನ್ನು ಉಂಟುಮಾಡುತ್ತದೆ.

ಪಾಪ್ಕಾರ್ನ್
ಮೈಕ್ರೋವೇವ್ ಪಾಪ್ಕಾರ್ನ್ ಅನಾರೋಗ್ಯಕರ ಆಹಾರವಾಗಿದೆ. ಮೈಕ್ರೋವೇವ್ ಬ್ಯಾಗುಗಳ ಲೈನಿಂಗ್ ಪರ್ಫ್ಲ್ಯುರೋಕ್ಟಾನೋಯಿಕ್ ಆಸಿಡ್ ಅನ್ನು ಒಳಗೊಂಡಿರುತ್ತವೆ. ಕ್ಯಾನ್ಸರ್ ಮತ್ತು ಇತರ ರೋಗಗಳಿಗೆ ಈ ಆಸಿಡ್ ಸಂಪರ್ಕವನ್ನು ಪಡೆದುಕೊಂಡಿದೆ.

ಅಜೈವಿಕ ತರಕಾರಿ
ಸಾವಯವ ತರಕಾರಿಗಳೂ ನಮ್ಮ ದೇಹಕ್ಕೆ ರೋಗಗಳನ್ನು ತಂದೊಡ್ಡುತ್ತವೆ. ಸಾವಯವ ಆಪಲ್, ಸಾವಯವ ಸೊಪ್ಪು ಹೀಗೆ ಮುಂತಾದವುಗಳು ರಾಸಾಯನಿಕಗಳಿಂದ ಕೂಡಿದ್ದು ಕೀಟಗಳಿಗೆ ಸಿಂಪಡಿಸುವ ಮದ್ದು ನಮ್ಮ ಹೊಟ್ಟೆಯನ್ನು ಸೇರುತ್ತದೆ.



Click it and Unblock the Notifications











