For Quick Alerts
ALLOW NOTIFICATIONS  
For Daily Alerts

ಪನ್ನೀರ್ ದರ ದುಬಾರಿಯಾದರೂ ಆರೋಗ್ಯಕ್ಕೆ ಒಳ್ಳೆಯದು...

ರುಚಿಯ ವಿಷಯಕ್ಕೆ ಬಂದಾಗ ಪನ್ನೀರ್, ಚೀಸ್ ಬಳಸಿಯೇ ಖಾದ್ಯಗಳನ್ನು ತಯಾರಿಸುವುದು ರೂಢಿ. ಅದರಲ್ಲಂತೂ ಪನ್ನೀರ್ ಅನ್ನು ಹೆಚ್ಚಾಗಿ ಎಲ್ಲಾ ಖಾದ್ಯಗಳಲ್ಲಿ ಬಳಸುತ್ತೇವೆ.ರುಚಿಯನ್ನು ಕೊಡುವ ಪನ್ನೀರ್ ಆರೋಗ್ಯದ ವಿಷಯದಲ್ಲೂ ಸೈ ಎನಿಸಿದೆ...

By Jaya Subramanya
|

ನಾವು ಭಾರತೀಯರು ಆಹಾರವೆಂದರೆ ಕೊಂಚ ಜಾಸ್ತಿಯೇ ಇಷ್ಟಪಡುತ್ತೇವೆ. ಒಂದೇ ಬಗೆಯ ಖಾದ್ಯವನ್ನು ಸೇವಿಸುವುದರ ಬದಲಿಗೆ ಅದರಲ್ಲೇ ಹೊಸ ಹೊಸದನ್ನು ಪ್ರಯತ್ನಿಸುವ ಆಸೆ ನಮ್ಮದಾಗಿದೆ. ನಮ್ಮ ಆಹಾರ ಪದ್ಧತಿಯಲ್ಲಿ ಹೆಚ್ಚು ರುಚಿಯುಳ್ಳದಕ್ಕೆ ಆದ್ಯತೆಯನ್ನು ನಾವು ನೀಡುತ್ತೇವೆ. ರುಚಿಯ ವಿಷಯಕ್ಕೆ ಬಂದಾಗ ಪನ್ನೀರ್, ಚೀಸ್ ಬಳಸಿಯೇ ಖಾದ್ಯಗಳನ್ನು ತಯಾರಿಸುವುದು ರೂಢಿ. ಅದರಲ್ಲಂತೂ ಪನ್ನೀರ್ ಅನ್ನು ಹೆಚ್ಚಾಗಿ ಎಲ್ಲಾ ಖಾದ್ಯಗಳಲ್ಲಿ ಬಳಸುತ್ತೇವೆ. ಮಣ್ಣಿನ ಮಡಕೆಯಲ್ಲೇ ಮಾಡಿ ಈ ಪನ್ನೀರ್ ಗ್ರೇವಿ

ರುಚಿಯನ್ನು ಕೊಡುವ ಪನ್ನೀರ್ ಆರೋಗ್ಯದ ವಿಷಯದಲ್ಲೂ ಎತ್ತಿದ ಕೈ ಎಂದೆನಿಸಿದೆ. ಇಲ್ಲಿದೆ ಪನ್ನೀರ್‎ನ 15 ಆರೋಗ್ಯ ಗುಣಗಳು ನಿಮ್ಮನ್ನು ಬೆರಗಾಗಿಸುವುದು ಖಂಡಿತ, ಮುಂದೆ ಓದಿ....


ಹೃದಯ ರೋಗದಿಂದ ಸಂರಕ್ಷಣೆ

ಹೃದಯ ರೋಗದಿಂದ ಸಂರಕ್ಷಣೆ

ಪನ್ನೀರ್ ಅನ್ನು ನಿಯಮಿತವಾಗಿ ಸೇವಿಸುವುದು ಹೃದಯ ರೋಗ ಮತ್ತು ಪಾರ್ಶ್ವವಾಯುವಿನಂತಹ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಲಿದೆ. ಪನ್ನೀರ್ ಪೊಟಾಶಿಯಂ ಅಂಶವನ್ನು ಒಳಗೊಂಡಿದ್ದು ಹೆಚ್ಚುವರಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

ಚಯಾಪಚಯ ಕ್ರಿಯೆ ವೃದ್ಧಿ

ಚಯಾಪಚಯ ಕ್ರಿಯೆ ವೃದ್ಧಿ

ಪನ್ನೀರ್‎ನಲ್ಲಿರುವ ಫೈಬರ್ ಅಂಶವು ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ ಮತ್ತು ತೂಕ ಇಳಿಸುವಲ್ಲಿ ನೆರವಾಗಲಿದೆ.

ಮೂಳೆಗಳು ಮತ್ತು ಹಲ್ಲುಗಳನ್ನು ಗಟ್ಟಿಗೊಳಿಸುತ್ತದೆ

ಮೂಳೆಗಳು ಮತ್ತು ಹಲ್ಲುಗಳನ್ನು ಗಟ್ಟಿಗೊಳಿಸುತ್ತದೆ

ಪನ್ನೀರ್‎ನಲ್ಲಿರುವ ಕ್ಯಾಲ್ಶಿಯಂ ಮತ್ತು ಫಾಸ್‎ಫರಸ್ ಮೂಳೆ ರೋಗಗಳನ್ನು ತಡೆಹಿಡಿಯಲಿದ್ದು ಹಲ್ಲಿನ ಸಮಸ್ಯೆಗಳನ್ನು ದೂರ ಮಾಡಲಿದೆ. ಇನ್ನಷ್ಟು ಬಲಯುತವಾಗಿಸಲಿದೆ. ಪನ್ನೀರ್ ವಿಟಮಿನ್ ಡಿಯನ್ನು ಒಳಗೊಂಡಿದ್ದು ಕ್ಯಾವಿಟಿಗಳಿಂದ ರಕ್ಷಿಸುತ್ತದೆ.

ಮಕ್ಕಳಿಗೆ ಅತ್ಯುತ್ತಮ

ಮಕ್ಕಳಿಗೆ ಅತ್ಯುತ್ತಮ

ಪನ್ನೀರ್ ಹೆಚ್ಚಿನ ಪ್ರೋಟೀನ್ ಮತ್ತು ಆರೋಗ್ಯವಂತ ಕೊಬ್ಬನ್ನು ಹೊಂದಿದ್ದು ಬೆಳೆಯುವ ಮಕ್ಕಳಿಗೆ ಪೋಷಣೆಯನ್ನು ನೀಡಲಿದೆ ಮತ್ತು ಅವರ ರೋಗನಿರೋಧಕ ಶಕ್ತಿಯನ್ನು ವರ್ಧಿಸಲಿದೆ. ಮಕ್ಕಳಲ್ಲಿ ಮೃಧ್ವಸ್ಥಿ ಹಾಗೂ ಅಂಗಾಂಶಗಳನ್ನು ಸುಧಾರಿಸಲಿದೆ.

ಕೂದಲಿನ ಮತ್ತು ತ್ವಚೆಯ ಸೌಂದರ್ಯಕ್ಕಾಗಿ

ಕೂದಲಿನ ಮತ್ತು ತ್ವಚೆಯ ಸೌಂದರ್ಯಕ್ಕಾಗಿ

ಪನ್ನೀರ್ ವಿಟಮಿನ್ ಬಿಯನ್ನು ಹೊಂದಿದ್ದು ಪ್ರೊಟೀನ್, ಒಮೆಗಾ 3 6 ಕೊಬ್ಬಿನ ಆಸಿಡ್‎ಗಳು ಅಲ್ಲದೆ ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿವೆ. ಇದು ಕೂದಲು ಮತ್ತು ತ್ವಚೆಯ ಸೌಂದರ್ಯವನ್ನು ವೃದ್ಧಿಗೊಳಿಸಲಿದೆ. ತ್ವಚೆಯ ನೆರಿಗೆಗಳನ್ನು ನಿವಾರಿಸಿ ಚರ್ಮದ ಉರಿಯೂತವನ್ನು ತಡೆಯುತ್ತದೆ.

ಶಕ್ತಿಯನ್ನು ನೀಡುತ್ತದೆ

ಶಕ್ತಿಯನ್ನು ನೀಡುತ್ತದೆ

ಹೆಚ್ಚಿನ ವ್ಯಾಯಾಮವನ್ನು ಮಾಡಿದ ನಂತರ ಪನ್ನೀರ್ ಸೇವಿಸುವುದು ನಿಮ್ಮಲ್ಲಿ ಶಕ್ತಿಯನ್ನು ಉಂಟುಮಾಡುತ್ತದೆ

ಸಂಧಿವಾತದ ನಿವಾರಣೆ‎

ಸಂಧಿವಾತದ ನಿವಾರಣೆ‎

ಒಮೆಗಾ - 3 ಮತ್ತು ಒಮೆಗಾ - 6 ಕೊಬ್ಬಿನ ಆಸಿಡ್ ಇದರಲ್ಲಿದ್ದು ಕೀಲುರೋಗ ಸಂಧಿವಾತದಿಂದ ಸಂರಕ್ಷಿಸುತ್ತದೆ.

ಕ್ಯಾನ್ಸರ್ ನಿವಾರಕ

ಕ್ಯಾನ್ಸರ್ ನಿವಾರಕ

ಪನ್ನೀರ್ ಹೆಚ್ಚು ಪ್ರಮಾಣದ ಪ್ರೊಟೀನ್ ಅಂಶಗಳನ್ನು ಒಳಗೊಂಡಿದ್ದು ಹೊಟ್ಟೆಯ, ಸ್ತನ, ಪುರುಷರ ಜನನೇಂದ್ರೀಯ ಕ್ಯಾನ್ಸರ್ ಅನ್ನು ನಿವಾರಿಸುತ್ತದೆ.

ಮಧುಮೇಹಿಗಳಿಗೆ ಉತ್ತಮ

ಮಧುಮೇಹಿಗಳಿಗೆ ಉತ್ತಮ

ಪನ್ನೀರ್‎ನಲ್ಲಿ ಒಮೆಗಾ - 3 ಫ್ಯಾಟಿ ಆಸಿಡ್ ಇದ್ದು ಮಧುಮೇಹಿಗಳಲ್ಲಿ ಹೋಮೋಸಿಸ್ಟಿನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇನ್ಸುಲಿನ್ ಪ್ರತಿರೋಧ ಅಂಶಗಳನ್ನು ದೇಹದಲ್ಲಿ ಉತ್ಪಾದನೆಯಾಗುವುದನ್ನು ತಡೆಗಟ್ಟಿ, ಗ್ಲುಕೋಸ್ ಅಸಹಿಷ್ಣುತೆಯ ನಿವಾರಣೆ ಮಾಡುತ್ತದೆ.

ಗರ್ಭಿಣಿ ಸ್ತ್ರೀಯರಿಗೆ ಸಹಕಾರಿ

ಗರ್ಭಿಣಿ ಸ್ತ್ರೀಯರಿಗೆ ಸಹಕಾರಿ

ಬೆಳಗ್ಗಿನ ವಾಕರಿಕೆ, ವಾಕರಿಕೆ, ರಕ್ತಹೀನತೆಯನ್ನು ಗರ್ಭಿಣಿಯರಲ್ಲಿ ತಡೆಗಟ್ಟುತ್ತದೆ. ಹುಟ್ಟುವ ಮಗುವಿನಲ್ಲಿ ಜನನ ಸಮಸ್ಯೆಗಳಿಗೆ ತಡೆಯೊಡುತ್ತದೆ.

ವಯಸ್ಸಾಗುವಿಕೆಗೆ ತಡೆ

ವಯಸ್ಸಾಗುವಿಕೆಗೆ ತಡೆ

ಜೀವಕೋಶಗಳನ್ನು ಮರುಸೃಷ್ಟಿಮಾಡಲಿದ್ದು ದೇಹವನ್ನು ಪುನರ್ಯವ್ವನಗೊಳಿಸಿ ಕಿರಿಯ ವಯಸ್ಸಿನಲ್ಲಿಯೇ ವಯಸ್ಸಗಿಂತ ಮುಂಚೆಯೇ ವಯಸ್ಸಾದವಂತೆ ಕಾಣುವುದನ್ನು ನಿವಾರಿಸುತ್ತದೆ.

ಮೂತ್ರ ಸಮಸ್ಯೆಗಳನ್ನು ನಿವಾರಿಸುತ್ತದೆ

ಮೂತ್ರ ಸಮಸ್ಯೆಗಳನ್ನು ನಿವಾರಿಸುತ್ತದೆ

ಮೂತ್ರದ ಸಮಸ್ಯೆಗಳಿದ್ದಲ್ಲಿ ಅದನ್ನು ಹೋಗಲಾಡಿಸಲು ಪನ್ನೀರ್ ಸಹಕಾರಿಯಾಗಿದೆ. ಚಯಾಪಚಯ ಕ್ರಿಯೆಯನ್ನು ಸರಿಯಾದ ವಿಧಾನದಲ್ಲಿ ಇರಿಸಿಕೊಳ್ಳುವುದೂ ಮುಖ್ಯವಾಗಿದೆ.

ಕಿಡ್ನಿಕಲ್ಲುಗಳ ಉತ್ಪಾದನೆಗೆ ತಡೆ

ಕಿಡ್ನಿಕಲ್ಲುಗಳ ಉತ್ಪಾದನೆಗೆ ತಡೆ

ಗಾಳಿಗುಳ್ಳೆಯ ಮೂತ್ರಕೋಶ ಕಲ್ಲುಗಳನ್ನು ಪನ್ನೀರ್ ತಡೆಗಟ್ಟುತ್ತದೆ

ಅಕ್ಷಿಪಟಲದ ಅವನತಿಯನ್ನು ತಡೆಯುತ್ತದೆ

ಅಕ್ಷಿಪಟಲದ ಅವನತಿಯನ್ನು ತಡೆಯುತ್ತದೆ

ವಯಸ್ಸಾದಂತೆ ಅಕ್ಷಿಪಟಲದ ಅವನತಿಯನ್ನು ಪನ್ನೀರ್ ಉಂಟಾಗಂತೆ ತಡೆಯುತ್ತದೆ

ಋತುಚಕ್ರದ ಸಮಯದಲ್ಲಿ ಒತ್ತಡ ನಿವಾರಣೆ

ಋತುಚಕ್ರದ ಸಮಯದಲ್ಲಿ ಒತ್ತಡ ನಿವಾರಣೆ

ಪನ್ನೀರ್‎ನಲ್ಲಿರುವ ನ್ಯೂಟ್ರೀಶಿಯನ್ ಮಟ್ಟವು ಮಹಿಳೆಯಲ್ಲಿ ಋತುಚಕ್ರದ ಸಮಯದಲ್ಲಿ ಉಂಟಾಗುವ ಒತ್ತಡವನ್ನು ನಿವಾರಣೆ ಮಾಡುತ್ತದೆ.

English summary

fifteen-health-benefits-of-paneer

Paneer is a popular food item in India. It is preferred by all - vegetarians and non-vegetarians. Made from milk, paneer is a high source of nutrients that have a lot of benefits for our health. Some even prefer to take paneer in its raw form. Whether taken raw or in its cooked form, we can never say no to "Paneer" and there are good reasons why. Here are 15 benefits of paneer for our health, take a look:
X
Desktop Bottom Promotion