For Quick Alerts
ALLOW NOTIFICATIONS  
For Daily Alerts

ಸೊಳ್ಳೆಗಳಿಂದ ದೂರವಿರಿ, ಝಿಕಾ ಹರಡುತ್ತಿದೆ, ಎಚ್ಚರ!

By Manu
|

ಸೊಳ್ಳೆಗಳಿಂದ ಆರೋಗ್ಯ ಸಮಸ್ಯೆ ಉಂಟಾಗುವ ಬಗ್ಗೆ ಈ ತಾಣದಲ್ಲಿ ಅನೇಕ ಸಂಗತಿಗಳನ್ನು ಈ ಹಿಂದೆ ನೀಡಲಾಗಿದೆ. ಸೊಳ್ಳೆಗಳನ್ನು ನಿಯಂತ್ರಿಸಲು ಕೆಲ ವಿಧಾನಗಳನ್ನು ಸಹ ನೀಡಲಾಗಿದೆ. ಇಂದು ನಾವು ನಿಮಗೆ ತಿಳಿಸಲು ಇಚ್ಛಿಸುವ ವಿಚಾರವೇನೆಂದರೆ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸುವಂತಹ ಅಪರೂಪದ ಕಾಯಿಲೆಯೊಂದು ಇತ್ತೀಚೆಗೆ ಕಾಣಿಸಿಕೊಂಡಿದೆ. ಅದರ ಹೆಸರೇ ಝಿಕಾ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ದೇಶದಿಂದ ದೇಶಕ್ಕೆ ಹರಡಲು ಪ್ರಾರಂಭಿಸಿರುವ ಭಯಾನಕ ಮತ್ತು ಮಾರಣಾಂತಿಕ ಕಾಯಿಲೆ. ಎಬೋಲಾ, ಡೆಂಗ್ಯೂ ಆಯಿತು, ಇನ್ನೂ 'ಝಿಕಾ ವೈರಸ್' ಸರದಿ!

ಇದು ಪ್ರಪ್ರಥಮವಾಗಿ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದು, ಇತರೆ ದೇಶಗಳಿಗೆ ಹರಡುವ ಅಪಾಯ ಇತ್ತೀಚಿನ ದಿನಗಳಲ್ಲಿ. ಆದ್ದರಿಂದಲೇ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಈ ಸಂಬಂಧ ಸೂಕ್ಷ್ಮ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರವೂ ಸಹ ಈ ನಿಟ್ಟಿನಲ್ಲಿ ಜನರಲ್ಲಿ ಹೆಚ್ಚು ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಕೈಗೊಂಡಿದ್ದು, ಝಿಕಾ ಸಮಸ್ಯೆಯನ್ನು ನಿವಾರಿಸಲು ಸರ್ವರೀತಿಯಲ್ಲಿ ಸಜ್ಜಾಗಿದೆ. ಇದಕ್ಕೆ ಸೂಕ್ತ ಔಷಧ ಲಭ್ಯವಿಲ್ಲದಿರುವುದರಿಂದ ಅಮೆರಿಕಾದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಹೆರಿಗೆಯ ಪ್ರಕ್ರಿಯೆಯನ್ನು ಮುಂದೂಡಲಾಗುತ್ತಿದೆ. ಮನೆಯಲ್ಲಿಯೇ ಬೆಳೆಸಬಹುದಾದ ಸೊಳ್ಳೆ ನಿವಾರಕ ಸಸ್ಯಗಳು!

ಇನ್ನು ಇದಕ್ಕೆ ಈಗ ಉಳಿದಿರುವ ಒಂದೇ ಮಾರ್ಗವೆಂದರೆ ಈ ರೋಗ ಬರದ ಹಾಗೆ ಜಾಗರೂಕತೆ ವಹಿಸುವುದು. ಇದೊಂದು ವೆಕ್ಟರ್ ಸಂಬಂಧಿತ ಕಾಯಿಲೆಯಾಗಿದ್ದು, ಏಡೆಸ್ ಎಜಿಪ್ಟಿ ಎಂಬ ಸೊಳ್ಳೆಯಿಂದ ಬರುತ್ತದೆ. ಒಟ್ಟಾರೆಯಾಗಿ ಸೊಳ್ಳೆಗಳ ಕಚ್ಚುವಿಕೆಯಿಂದ ದೂರವಿರಲು ಕೆಲವು ಪರಿಣಾಮಕಾರಿ ವಿಧಾನಗಳನ್ನು ನಿಮಗಾಗಿ ಈ ಲೇಖನದಲ್ಲಿ ನೀಡಲಾಗಿದೆ. ಇದರ ಉಪಯೋಗ ಪಡೆದು ಸೊಳ್ಳೆಗಳ ಸಮಸ್ಯೆಯಿಂದ ಪಾರಾಗಿ. ವಿವರಗಳಿಗೆ ಮುಂದೆ ಓದಿ..

ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಬೇಕು

ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಬೇಕು

ನಿಮ್ಮ ಸುತ್ತಮುತ್ತ ನೀರು ಶೇಖರಣೆಯಾಗುವುದನ್ನು ಅಥವಾ ನೀರು ನಿಂತಿರುವುದನ್ನು ಮೊದಲು ತಡೆಯಿರಿ. ಶೇಖರಣೆಯಾದ ನೀರು ತುಂಬಾ ಕಾಲ ಹಾಗೆಯೇ ಉಳಿದರೆ ಅಪಾಯ ಖಂಡಿತಾ, ಹಾಗಾಗಿ ಅದನ್ನು ಮೊದಲು ಖಾಲಿ ಮಾಡಿ. ಹಳೆಯ ಟೈರ್ ಗಳಲ್ಲಿ, ಹೂವಿನ ಕುಂಡಗಳಲ್ಲಿ ಮತ್ತು ಬಕೆಟ್‌ಗಳಲ್ಲಿ ಇರುವ ನೀರನ್ನು ಮೊದಲು ಹೊರಹಾಕಿ. ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಲು ಮೊದಲು ನೀರು ಶೇಖರಣೆಯಾಗುವುದನ್ನು ತಡೆಯಿರಿ. ನೀರು ಶೇಖರಿಸಲೇಬೇಕಾದ ಸಂದರ್ಭಗಳಲ್ಲಿ ನೀರು ತುಂಬಿಸಿದ ಕಂಟೇನರ್‌ಗಳ ಮೇಲ್ಭಾಗವನ್ನು ಮುಚ್ಚಿ. ಉಪಯೋಗಿಸದಿದ್ದಾಗ ಕಸದ ಬುಟ್ಟಿಗಳನ್ನು ಮುಚ್ಚಿಡಿ.

ದೇಹವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುವ ವಸ್ತುಗಳನ್ನು ಧರಿಸಿ

ದೇಹವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುವ ವಸ್ತುಗಳನ್ನು ಧರಿಸಿ

ಕೈಗಳು ಪೂರ್ಣವಾಗಿ ಮುಚ್ಚಿಕೊಳ್ಳುವ ಶರ್ಟ್ ಅಥವಾ ಟೀಶರ್ಟ್, ಪಾದಗಳವರೆಗೆ ಮುಚ್ಚಿಕೊಳ್ಳುವ ಟ್ರೌಸರ್‌ಗಳನ್ನು ಉಪಯೋಗಿಸಿ. ಇದರಿಂದ ಸೊಳ್ಳೆಗಳು ನಿಮ್ಮ ದೇಹದ ಭಾಗಕ್ಕೆ ಕಚ್ಚಲು ಸಾಧ್ಯವಿಲ್ಲ.

ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸಿ

ಮಲಗುವಾಗ ಸೊಳ್ಳೆ ಪರದೆಗಳನ್ನು ಉಪಯೋಗಿಸಿ

ನಿಮ್ಮ ಹಾಸಿಗೆಗೆ ಸೊಳ್ಳೆ ಪರದೆಯನ್ನು ಉಪಯೋಗಿಸಿ ಅದರಡಿಯಲ್ಲಿ ಹಾಯಾಗಿ ಮಲಗಿಕೊಳ್ಳಿ. ಸೊಳ್ಳೆ ಪರದೆಗಳನ್ನು ಮಕ್ಕಳಿಗೂ ಬಳಸಿ. ಮಕ್ಕಳು ದಿನದ ಮಧ್ಯೆ ಮಲಗಿದರೆ ಸೊಳ್ಳೆ ಪರದೆ ಬಳಸಿ. ಝಿಕಾ ಸೋಂಕಿತ ಸೊಳ್ಳೆಗಳು ನಿಮಗೆ ದಿನದ ಸಮಯದಲ್ಲೂ ಕಚ್ಚುವ ಅಪಾಯವಿರುತ್ತದೆ, ನೆನಪಿಡಿ.

ಮನೆಯ ದ್ವಾರ ಮತ್ತು ಕಿಟಕಿಗಳನ್ನು ಮುಚ್ಚಿಕೊಳ್ಳಿ

ಮನೆಯ ದ್ವಾರ ಮತ್ತು ಕಿಟಕಿಗಳನ್ನು ಮುಚ್ಚಿಕೊಳ್ಳಿ

ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಲು ಪರದೆಗಳನ್ನು ಉಪಯೋಗಿಸಿ. ಇದರಿಂದ ಸೊಳ್ಳೆಗಳು ನಿಮ್ಮ ಮನೆಯ ಒಳಗೆ ಪ್ರವೇಶಿಸುವುದಿಲ್ಲ. ಅಲ್ಲದೇ ನೀವು ಬಳಸುವ ಪರದೆಯಲ್ಲಿ ರಂಧ್ರಗಳು ಇಲ್ಲದಂತೆ ನೋಡಿಕೊಳ್ಳಿ. ಹೆಚ್ಚಿನ ಹೊತ್ತು ನಿಮ್ಮ ಮನೆಯ ಬಾಗಿಲುಗಳು ಮತ್ತು ಕಿಟಕಿಗಳನ್ನು ಮುಚ್ಚಿರುವಂತೆ ನೋಡಿಕೊಳ್ಳಿ.

ಹೆರಿಗೆಯನ್ನು ವಿಳಂಬ ಮಾಡಿ

ಹೆರಿಗೆಯನ್ನು ವಿಳಂಬ ಮಾಡಿ

ಝಿಕಾ ಕಾಯಿಲೆಯು ತಾಯಿಯಿಂದ ಮಗುವಿಗೆ ಪ್ಲಾಸೆಂಟಾ ಮುಖಾಂತರ ಹರಡುವ ಸಾಧ್ಯತೆಯಿದೆ. ಝಿಕಾ ಕಾಯಿಲೆಯಿಂದ ಬಳಲುತ್ತಿರುವ ತಾಯಂದಿರ ಶಿಶುವು ಮೈಕ್ರೊಸೆಫಾಲಿ ಅಥವಾ ಕಿರಿದಾದ ಮೆದುಳು ಸಮಸ್ಯೆಯಿಂದ ಬಳಲಲಿದ್ದು, ಇದು ಮಾರಣಾಂತಿಕ ಸಮಸ್ಯೆಯೆಂದೇ ನಂಬಲಾಗಿದೆ. ವರದಿಯ ಪ್ರಕಾರ ಬ್ರೆಜಿಲ್ ನಲ್ಲಿ ಸುಮಾರು 4000 ಮಕ್ಕಳು ಅಕ್ಟೋಬರ್ 2015 ರಿಂದ ಈಚೆಗೆ ಮೈಕ್ರೊಸೆಫಾಲಿ ಸಮಸ್ಯೆಯಿಂದ ಬಳಲುತ್ತಿವೆ. ನೆರೆರಾಷ್ಟ್ರಗಳಾದ ಕೊಲಂಬಿಯಾ, ಈಕ್ವೆಡಾರ್, ಈ ಸೆಲ್ವೆಡಾರ್ ಮತ್ತು ಜಮೈಕಾ ದಲ್ಲಿ ತಾಯಂದಿರಿಗೆ ಹೆರೆಗೆ ಪ್ರಕ್ರಿಯೆಯನ್ನು ಮುಂದೂಡಲಾಗುತ್ತಿದೆ.

English summary

Essential tips to prevent zika

The WHO has just declared Zika as a public health concern on an international level. Affected states in the US have also urged women to delay pregnancy as currently there is no vaccine or treatment for the disease. The only option left is to prevent the spread of the disease. Zika is a vector-borne disease which spreads through an infected Aedes aegypti mosquito. So one of the major ways to prevent the spread of the disease is to prevent mosquito bites.
Story first published: Thursday, February 4, 2016, 19:58 [IST]
X
Desktop Bottom Promotion