Latest Updates
-
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ?
ವ್ಯಾಯಮದ ಹಂಗಿಲ್ಲದೆ ಒಂದೇ ತಿಂಗಳೊಳಗೆ ಬೊಜ್ಜು ಕರಗಿಸಿಕೊಳ್ಳಿ!
ಸೂಪರ್ ಫಾಸ್ಟ್ ಯುಗದಲ್ಲಿ ದೇಹದ ಆರೋಗ್ಯದ ಕಡೆ ಗಮನಹರಿಸುವುದೇ ಕಡಿಮೆ. ಯಾಕೆಂದರೆ ಅಂತಹ ಪುರುಸೊತ್ತು ನಮಗೆ ಇರುವುದಿಲ್ಲ. ಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸುವ ಹೊತ್ತಿಗೆ ಕೆಲಸಕ್ಕೆ ಹೋಗಲು ಸಮಯವಾಗಿರುತ್ತದೆ. ಸಂಜೆ ಮನಗೆ ಬರುವಾಗಲೇ ರಾತ್ರಿ ಊಟದ ಸಮಯವಾಗಿರುತ್ತದೆ. ಇನ್ನು ದೇಹದ ಕಡೆ ಗಮನಹರಿಸಲು ಸಮಯವೆಲ್ಲಿದೆ? ಕೆಲವರು ದೇಹವನ್ನು ದಂಡಿಸದೆ ಇರುವ ಕಾರಣ ಹೊಟ್ಟೆ ಬೆಳೆಸಿಕೊಂಡಿದ್ದಾರೆ. ಅದರಲ್ಲೂ ಕೆಲವರು ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿದ್ದರೂ ಅವರ ಹೊಟ್ಟೆ ಮಾತ್ರ ದೊಡ್ಡದಾಗಿಯೇ ಇರುತ್ತದೆ. ಇದಕ್ಕೆ ಹಲವಾರು ಕಾರಣಗಳಿರಬಹುದು. ತಿನ್ನುವ ಅಭ್ಯಾಸಕ್ಕೆ ಬ್ರೇಕ್ ಹಾಕಿ, ಹೊಟ್ಟೆಯ ಬೊಜ್ಜು ಕರಗುತ್ತೆ!
ಇನ್ನು ಕೆಲವರು ತೂಕದೊಂದಿಗೆ ಹೊಟ್ಟೆಯೂ ಮುಂದೆ ಬಂದಿರುತ್ತದೆ. ಹೊಟ್ಟೆಯಲ್ಲಿ ಬೊಜ್ಜು ಬೆಳೆಯಲು ಗರ್ಭಧಾರಣೆ ಬಳಿಕ ತೂಕ ಹೆಚ್ಚಾಗುವುದು, ಹಾರ್ಮೋನು ವೈಪರಿತ್ಯ, ಕುಳಿತುಕೊಂಡೇ ಕೆಲಸ ಮಾಡುವುದು, ಅಜೀರ್ಣ, ಅನಾರೋಗ್ಯಕರ ಆಹಾರಕ್ರಮ, ಅತಿಯಾಗಿ ಆಲ್ಕೋಹಾಲ್ ಸೇವನೆ ಇತ್ಯಾದಿ ಕಾರಣಗಳಾಗಿವೆ. ಮುಜುಗರ ತರಿಸುವ ಹೊಟ್ಟೆಯ ಬೊಜ್ಜಿನ ಸಮಸ್ಯೆಗೆ ಸಿಂಪಲ್ ಜ್ಯೂಸ್
ಬೊಜ್ಜು ಬೆಳೆಯಲು ಕಾರಣಗಳು ಏನೇ ಇದ್ದರೂ ಅದರಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಕೊಲೆಸ್ಟ್ರಾಲ್, ಅತಿಯಾದ ಒತ್ತಡ, ಬೆನ್ನುನೋವು, ಮಂಡಿನೋವು, ಹೃದಯಸಂಬಂಧಿ ಕಾಯಿಲೆ ಇತ್ಯಾದಿಗಳು ಕಾಣಿಸಿಕೊಳ್ಳುವುದು. ವ್ಯಾಯಾಮ ಮಾಡಲು ಸಮಯವಿಲ್ಲದೆ ಇರುವವರು ಇಲ್ಲಿ ಕೊಟ್ಟಿರುವ ಕೆಲವೊಂದು ಸಲಹೆಗಳನ್ನು ಪಾಲಿಸಿ ಹೊಟ್ಟೆಯ ಬೊಜ್ಜನ್ನು ಕರಗಿಸಬಹುದಾಗಿದೆ. ದೇಹದಲ್ಲಿರುವ ಕೊಬ್ಬನ್ನು ಕರಗಿಸಬೇಕೇ? ಪಪ್ಪಾಯಿ ಹಣ್ಣು ತಿನ್ನಿ!

ಉಪ್ಪು ಸೇವನೆ ಕಡಿಮೆ ಮಾಡಿ
ನಿಮ್ಮ ಆಹಾರದಲ್ಲಿ ಅತಿಯಾದ ಉಪ್ಪು ಸೇವನೆಯಿಂದಾಗಿ ಹೊಟ್ಟೆಯ ಭಾಗದಲ್ಲಿ ನೀರಿನಾಂಶ ಶೇಖರಣೆಯಾಗಬಹಹುದು. ಇದರಿಂದ ಹೊಟ್ಟೆಯು ದೊಡ್ಡದಾಗಿ ಕಾಣಿಸಿಕೊಳ್ಳಬಹುದು.

ಚೂಯಿಂಗ್ ಗಮ್ ತ್ಯಜಿಸಿ
ನಿಯಮಿತವಾಗಿ ಚೂಯಿಂಗ್ ಗಮ್ ಸೇವನೆ ಮಾಡುವವರು ಅತಿಯಾದ ಗಾಳಿಯನ್ನು ಸೇವಿಸುತ್ತಾರೆ ಮತ್ತು ಚೂಯಿಂಗ್ ಗಮ್ ನಲ್ಲಿರುವ ಸಿಹಿ ಅಂಶವು ಹೊಟ್ಟೆಯಲ್ಲಿ ಬೊಜ್ಜನ್ನು ಉಂಟು ಮಾಡುವುದು.

ಜೈವಿಕ ಆಹಾರ ಹೆಚ್ಚು ಸೇವಿಸಿ
ಮೊಸರು ಉತ್ತಮ ಜೈವಿಕ ಆಹಾರವಾಗಿದ್ದು, ಇದನ್ನು ಸಿಹಿ ಸೇರಿಸದೆ ತಿನ್ನಬೇಕು. ಇದರಿಂದ ಜೀರ್ಣಕ್ರಿಯೆಯು ಸುಗಮವಾಗಿ ಹೊಟ್ಟೆಯ ಬೊಜ್ಜು ಕರಗುವುದು.

ಬಿಯರ್ ತ್ಯಜಿಸಿ
ಯಾವುದೇ ಆಲ್ಕೋಹಾಲ್ ಉತ್ಪನ್ನವನ್ನು ಅತಿಯಾಗಿ ಸೇವನೆ ಮಾಡಿದಾಗ ಅದರಿಂದ ತೂಕ ಹೆಚ್ಚಾಗುವುದು. ಬಿಯರ್ ನಲ್ಲಿ ಅತಿಯಾದ ಕ್ಯಾಲರಿ ಇರುವುದರಿಂದ ಇದು ಹೊಟ್ಟೆಯ ಬೊಜ್ಜನ್ನು ಹೆಚ್ಚಿಸುವುದು.

ಕೆಲವು ತರಕಾರಿಗಳಿಂದ ದೂರವಿರಿ
ಬ್ರಾಕೋಲಿ, ಕೋಸು, ಆಲೂಗಡ್ಡೆ ಮತ್ತು ಹೂಕೋಸು ಹೊಟ್ಟೆಯಲ್ಲಿ ಹೆಚ್ಚಿನ ಗ್ಯಾಸ್ ನ್ನು ಉತ್ಪತ್ತಿ ಮಾಡುವುದು. ಇದರಿಂದ ಹೊಟ್ಟೆ ಉಬ್ಬರವಾಗಬಹುದು ಮತ್ತು ಹೊಟ್ಟೆಯಲ್ಲಿ ಬೊಜ್ಜು ಉಂಟಾಗಬಹುದು.

ಹಣ್ಣುಗಳನ್ನು ಸೇವಿಸಿ
ಹೆಚ್ಚಾಗಿ ಹಣ್ಣುಗಳನ್ನು ಸೇವಿಸಿ. ಅದರಲ್ಲೂ ದಿನದಲ್ಲಿ 1-2 ಪಿಂಗಾಣಿಯಷ್ಟು ಹಣ್ಣುಗಳನ್ನು ಸೇವಿಸಿ. ಹಣ್ಣುಗಳಲ್ಲಿ ಇರುವ ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಹೊಟ್ಟೆಯ ಬೊಜ್ಜನ್ನು ಕರಗಿಸುವುದು.

ಧೂಮಪಾನ ತ್ಯಜಿಸಿ
ಧೂಮಪಾನದಿಂದಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿ ಹೆಚ್ಚಾಗುವುದು. ಇದರಿಂದ ಹೊಟ್ಟೆಯಲ್ಲಿ ಬೊಜ್ಜು ಉಂಟಾಗಬಹುದು. ಇದರಿಂದ ಹೊಟ್ಟೆಯ ಬೊಜ್ಜನ್ನು ಕರಗಿಸಲು ಧೂಮಪಾನ ತ್ಯಜಿಸಿ.

ದಿನಕ್ಕೆ ಎರಡು ಲೋಟ ಗ್ರೀನ್ ಟೀ
ದಿನಕ್ಕೆ ಎರಡು ಲೋಟ ಹಾಲಿಲ್ಲದ ಹಸಿರು ಟೀ ಸೇವಿಸುವ ಮೂಲಕ ಹಸಿರು ಟೀಯಲ್ಲಿರುವ ಗುಣಪಡಿಸುವ ಗುಣಗಳ ಜೊತೆಗೇ ಕೊಬ್ಬನ್ನು ಕರಗಿಸಲೂ ಸಾಧ್ಯವಾಗುತ್ತದೆ.

ಬಾದಾಮಿ
ನಿತ್ಯವೂ ನಾಲ್ಕು ಅಥವಾ ಐದು ಬಾದಾಮಿಗಳನ್ನು (ಮಕ್ಕಳಿಗೆ ಮೂರು ಸಾಕು) ನಿತ್ಯವೂ ಸೇವಿಸುತ್ತಾ ಬರುವುದರಿಂದ ಇದರಲ್ಲಿರುವ ವಿಟಮಿನ್ ಇ ರಕ್ತದ ಕೊಲೆಸ್ಟ್ರಾಲ್ ಕರಗಿಸಿ ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುತ್ತದೆ, ತನ್ಮೂಲಕ ಹೊಟ್ಟೆಯ ಕೊಬ್ಬನ್ನು ಕರಗಿಸುತ್ತದೆ.

ದ್ರಾಕ್ಷಿಹಣ್ಣು
ದ್ರಾಕ್ಷಿಹಣ್ಣನ್ನು ತಿನ್ನುವ ಮೊದಲು ಚೆನ್ನಾಗಿ ತೊಳೆದುಕೊಳ್ಳೀ. ಹಸಿರು ದ್ರಾಕ್ಷಿಯ ರಸವನ್ನು ನಿತ್ಯವೂ ಕುಡಿಯುವ ಮೂಲಕ ಹತ್ತೇ ದಿನದಲ್ಲಿ ಹತ್ತು ಪೌಂಡ್ (ನಾಲ್ಕೂವರೆ ಕೇಜಿ) ತೂಕ ಇಳಿದಿರುವುದು ಪರೀಕ್ಷೆಗಳ ಮೂಲಕ ಸಾಬೀತಾಗಿದೆ. ಇದಕ್ಕಾಗಿ ಪ್ರತಿನಿತ್ಯ ಹಸಿರು ದ್ರಾಕ್ಷಿಗಳ ತಾಜಾ ಜ್ಯೂಸ್ ದಿನದ ಒಂದೇ ಹೊತ್ತಿನಲ್ಲಿ ಸೇವಿಸುತ್ತಾ ಬರಬೇಕು. ಹಸಿರು ದ್ರಾಕ್ಷಿಯಿಲ್ಲದಿದ್ದರೆ ಕಪ್ಪು ದ್ರಾಕ್ಷಿಯನ್ನೂ ಸೇವಿಸಬಹುದು, ಆದರೆ ಹಸಿರು ದ್ರಾಕ್ಷಿಯಷ್ಟು ಪರಿಣಾಮಕಾರಿಯಲ್ಲ.

ಆಹಾರ ಕ್ರಮ
ಅಕ್ಕಿಯಲ್ಲಿ ಸರಾಸರಿ 15% ಕಾರ್ಬೋಹೈಡ್ರೇಟುಗಳಿವೆ. ಉಳಿದಂತೆ ಎಲ್ಲವೂ ದೇಹಕ್ಕೆ ಉತ್ತಮವಾದರೆ ಕಾರ್ಬೋಹೈಡ್ರೇಟುಗಳ ಪ್ರಮಾಣ ಕೊಬ್ಬು ಹೆಚ್ಚಳಕ್ಕೆ ಕಾರಣವಾಗಿದೆ. ಆದ್ದರಿಂದ ಅಕ್ಕಿಯನ್ನು ಪೂರ್ಣವಾಗಿ ತ್ಯಜಿಸದೇ ದಿನದಲ್ಲಿ ಸೇವಿಸುವ ಪ್ರಮಾಣವನ್ನು ಮಾತ್ರ ಕಡಿಮೆ ಮಾಡಬೇಕು.

ಸಿಂಪಲ್ ಟಿಪ್ಸ್
ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ. ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ. ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ



Click it and Unblock the Notifications











