Latest Updates
-
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ -
ಮಳೆಗಾಲದಲ್ಲೂ ಬಾಡದ ಹೂವುಗಳು: ಶ್ರಾವಣ ಸೋಮವಾರದ ಪೂಜೆಗೆ ಸುಲಭ ಮತ್ತು ಪರಿಸರ ಸ್ನೇಹಿ ಅಲಂಕಾರ ಐಡಿಯಾಗಳು -
ಕಾಮಿಕಾ ಏಕಾದಶಿ 2026: ಉಪವಾಸದ ವೇಳೆ ಆರೋಗ್ಯವಾಗಿರಲು ಈ ಟಿಪ್ಸ್ ಪಾಲಿಸಿ, ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ -
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ! -
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು!
ಒತ್ತಡರಹಿತ ಆರಾಮ ಜೀವನಕ್ಕಾಗಿ ಕೆಲವೊಂದು ಟಿಪ್ಸ್
ಆರೋಗ್ಯಕರ ಜೀವನ ನಡೆಸಬೇಕೆಂಬ ಇಚ್ಛೆ ಯಾರಿಗಿರುವುದಿಲ್ಲ ಹೇಳಿ. ಯಾವುದೇ ರೋಗಗಳಿಲ್ಲದ ಒತ್ತಡವಿಲ್ಲದ ಸುಖ ಜೀವನವನ್ನೇ ಎಲ್ಲರೂ ಬಯಸುತ್ತಾರೆ. ಎಷ್ಟೇ ದುಡ್ಡಿದರೂ ನಮ್ಮ ಬಳಿ ಆರೋಗ್ಯವಿಲ್ಲ ಎಂದಾದರೆ, ಆ ದುಡ್ಡು ನಮ್ಮ ಬಳಿ ಇದ್ದು ಕೂಡ ಅದು ವ್ಯರ್ಥ. ಹಾಗಿದ್ದರೆ ಈ ಸುಖಕರ ಜೀವನವನ್ನು ಪಡೆಯಲು ಎಲ್ಲಿಗೆ ಹೋಗಬೇಕು? ಯಾರನ್ನು ಸಂಪರ್ಕಿಸಬೇಕು?ಎಂಬುದು ನಿಮ್ಮ ಚಿಂತೆಯಾಗಿದ್ದರೆ ಇದಕ್ಕಿರುವ ಪರಿಹಾರ ನಿಮ್ಮೊಳಗೆಯೇ ಇದೆ. ಹೌದು ನಿಮ್ಮ ಜೀವನದಲ್ಲಿ ಕೆಲವೊಂದು ನಿಯಮಗಳನ್ನಿಟ್ಟುಕೊಂಡು ಅದರ ಅನುಸಾರವಾಗಿ ನೀವು ನಡೆದುಕೊಂಡಲ್ಲಿ ಆರಾಮ ಜೀವನದ ಅಧಿಪತಿ ನೀವಾಗಬಹುದಾಗಿದೆ.
ಜೀವನದಲ್ಲಿ ಅಸೌಖ್ಯವನ್ನು ಉಂಟುಮಾಡುತ್ತಿರುವ ಅಂಶಗಳಿಗೆ ನೀವೇ ಕಾರಣರಾಗಿರುತ್ತೀರಿ. ಹೊತ್ತಿಗೆ ತಪ್ಪಿ ಊಟ ತಿಂಡಿ ಮಾಡುವುದು, ಜಿಡ್ಡಿನ ಪದಾರ್ಥಗಳನ್ನು ಸೇವಿಸುವುದು, ಜಂಕ್ ಆಹಾರಗಳಿಗೆ ಅಡಿಯಾಳಾಗಿರುವುದು, ನಿದ್ದೆ ತಪ್ಪಿಸಿ ಇತರ ಚಟುವಟಿಕೆಗಳಾದ ಟಿವಿ ವೀಕ್ಷಣೆ, ಸ್ಮಾರ್ಟ್‌ಫೋನ್‌ನಲ್ಲಿ ಆಟ ಮೊದಲಾದವನ್ನು ನಡೆಸುವುದರಿಂದ ರೋಗ ನಿಮ್ಮನ್ನು ಸುಲಭವಾಗಿ ಬೇಟೆಯಾಡಿಬಿಡುತ್ತದೆ. ಹಾಗಿದ್ದರೆ ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದಾದಲ್ಲಿ ಆರೋಗ್ಯಕರ ಚಟುವಿಟಿಕೆಗಳತ್ತ ನೀವು ಹೆಜ್ಜೆಯಿಡಲೇಬೇಕು. ಬನ್ನಿ ಅದೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ, ಮುಂದೆ ಓದಿ...

ನೀರು ಸೇವನೆಯಲ್ಲಿ ರಾಜಿ ಬೇಡ
ಪ್ರತೀ ದಿನ ಎಂಟು ಲೋಟ ನೀರು ಕುಡಿಯಲು ಮರೆಯಬೇಡಿ, ನಿಮ್ಮ ದೇಹದ ಒಳಾಂಗಣ ವ್ಯವಸ್ಥೆಯನ್ನು ಇದು ಸ್ವಚ್ಛಮಾಡಲಿದ್ದು ದೇಹದ ವಿಷಕಾರಿ ಅಂಶಗಳನ್ನು ತೊಳೆದುಹಾಕುತ್ತದೆ.

ವಿಟಮಿನ್ ಡಿ ಪಡೆದುಕೊಳ್ಳಿ
ಬೆಳಗ್ಗಿನ ಜಾವದಲ್ಲಿ ಸೂರ್ಯನ ವಿಟಮಿನ್ ಡಿಯನ್ನು ಪಡೆದುಕೊಳ್ಳಲು ನಿಮಗೆ ಸಹಕಾಯನಾಗಿದ್ದಾನೆ. ಕ್ಯಾಲ್ಸಿಯಮ್ ಮತ್ತು ಫಾಸ್ಫರಸ್ ಮರುಹೀರಿಕೆಗೆ ಇದು ಉಪಯುಕ್ತ ಎಂದೆನಿಸಿದ್ದು ಈ ಎರಡೂ ಮುಖ್ಯ ನ್ಯೂಟ್ರಿನ್‌ಗಳು ಮೂಳೆ ಮತ್ತು ಹಲ್ಲಿನ ಸಾಂದ್ರತೆಯನ್ನು ಸುಧಾರಿಸಲು ಸಹಾಯಕವಾಗಿದೆ.

ಹೊರಗಡೆ ಅತಿಯಾಗಿ ಸೇವಿಸುವುದನ್ನು ಬಿಡಿ
ಹೊರಗಡೆ ದೊರೆಯುವ ಹೆಚ್ಚಿನ ಆಹಾರ ಪದಾರ್ಥಗಳು ಸಂಸ್ಕರಿಸಲ್ಪಟ್ಟಿರುತ್ತವೆ. ಇದು ದೇಹಕ್ಕೆ ಕೆಟ್ಟದ್ದಾಗಿದೆ. ಹೊರಗಡೆ ಅತಿಯಾಗಿ ತಿನ್ನುವುದು ಜಂಕ್ ಫುಡ್ ಸೇವನೆಯನ್ನು ತ್ಯಜಿಸಿ ಇದು ಋಣಾತ್ಮಕ ಪರಿಣಾಮವನ್ನು ದೇಹದಲ್ಲಿ ಉಂಟುಮಾಡುತ್ತವೆ. ಆದಷ್ಟು ಮನೆಯಲ್ಲೇ ತಯಾರಿಸಿದ ಹೈಜೀನಿಕ್ ಆಹಾರವನ್ನು ಸೇವಿಸಿ ಮತ್ತು ನಿಮ್ಮ ಕಚೇರಿಗೂ ಇದನ್ನೇ ತೆಗೆದುಕೊಂಡು ಹೋಗಿ.

ಮೆಟ್ಟಿಲುಗಳ ಬಳಕೆ
ಕಚೇರಿಗಳಲ್ಲಿ ಇಲೆಕ್ಟ್ರಾನಿಕ್ ಮೆಟ್ಟಿಲುಗಳು (ಇಲಾವೇಟರ್ ಮತ್ತು ಎಸ್ಕಲೇಟರ್) ಇದ್ದಲ್ಲಿ ಅವುಗಳನ್ನು ಬಳಸದೇ ಮೆಟ್ಟಿಲುಗಳನ್ನು ಉಪಯೋಗಿಸಿ. ಹೃದಯ ಸಂಬಂಧಿ ರೋಗಗಳನ್ನು ಮೂಲದಲ್ಲೇ ಕಿತ್ತೆಸೆಯಲು ಸಹಕಾರಿಯಾಗಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ಕಚೇರಿಯಲ್ಲಿ ಮಾತ್ರವಲ್ಲದೆ ಮನೆಯಲ್ಲಿ ರೈಲು ಸ್ಟೇಶನ್‌ಗಳಲ್ಲಿ ಹೀಗೆ ಯಾವುದೇ ಸ್ಥಳದಲ್ಲಿ ಕೂಡ ಮೆಟ್ಟಿಲನ್ನೇ ಬಳಸಿಕೊಳ್ಳಿ.

ಪರ್ಯಾಯ ವ್ಯಾಯಮಗಳು
ವಾರಾಂತ್ಯದ ಟ್ರಕ್ಕಿಂಗ್, ಸ್ವಿಮ್ಮಿಂಗ್ ತರಗತಿಗಳನ್ನು ಸೇರಿಕೊಳ್ಳಿ. ಸೈಕ್ಲಿಂಗ್ ಇಲ್ಲವೇ ನಡಿಗೆಯಂತಹ ದೇಹದ ವ್ಯಾಯಾಮಕ್ಕೂ ಆದ್ಯತೆ ನೀಡಿ. ಕಿಕ್ ಬಾಕ್ಸಿಂಗ್ ಇಲ್ಲವೇ ಕರಾಟೆ ತರಗತಿಗಳಿಗೆ ಇಂದೇ ಸೇರ್ಪಡೆಗೊಳ್ಳಿ ಜೊತೆಗೆ ಹೆಚ್ಚುವರಿ ಕ್ಯಾಲೋರಿಯನ್ನು ತೊಡೆದುಹಾಕಿ.

ಸಮತೋಲಿತ ಡಯೆಟ್
ದೇಹಕ್ಕೆ ಕಾರ್ಬೋಹೈಡ್ರೇಟ್ಸ್, ಪ್ರೋಟೀನ್, ಕೊಬ್ಬು, ನೀರಿನಂಶ ಮತ್ತು ಫೈಬರ್ ಸಮಪ್ರಮಾಣದಲ್ಲಿ ದೊರೆಯುವಂತಿರಬೇಕು. ಅದಕ್ಕಾಗಿ ನಿಯಂತ್ರಿತ ಡಯೆಟ್‌ನ ಅನುಸರಣೆಯನ್ನು ನೀವು ಮಾಡಬೇಕಾಗುತ್ತದೆ. ಹಾಗಾಗಿ ದಿನನಿತ್ಯ ಆದಷ್ಟು ತರಕಾರಿ ಹಣ್ಣುಗಳನ್ನು ನಿತ್ಯವೂ ಸೇವಿಸುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ.



Click it and Unblock the Notifications