Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಲ್ಲಿ! ಈ ಲಘುಪಾನೀಯಗಳನ್ನು ಸರ್ವಥಾ ಕೊಳ್ಳದಿರಿ
ಮಾರುಕಟ್ಟೆಯಲ್ಲಿ ಇಂದು ನೂರಾರು ವಿಧದ ಲಘು ಪಾನೀಯಗಳಿವೆ. ಬರೆಯ ನೀರಿನದ್ದೇ ಹತ್ತಿಪ್ಪತ್ತು ಸಂಸ್ಥೆಯ ಬಾಟಲಿಗಳನ್ನು ಆಯ್ಕೆ ಮಾಡಬಹುದು. ಆದರೆ ಲಾಭವೇ ಮುಖ್ಯವಾಗಿರುವ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಲಘು ಪಾನೀಯಗಳು, ಹಣ್ಣಿನ ರಸಗಳು ಅಪ್ಪಟ, ಆರೋಗ್ಯಕರ ಎಂದು ಹೇಳಲು ಸಾಧ್ಯವಿಲ್ಲ.
ಏಕೆಂದರೆ ಇವುಗಳಲ್ಲಿ ಸೇರಿಸಿರುವ ಸಂರಕ್ಷಕಗಳು, ರುಚಿ ಹೆಚ್ಚಿಸಲು ಸೇರಿಸಿರುವ ಫ್ಲೇವರ್ ಅಥವಾ ರುಚಿಕಾರಕಗಳು, ಸಕ್ಕರೆ ಮತ್ತಿತರ ಸಾಮಾಗ್ರಿಗಳು ಈ ಪೇಯಗಳನ್ನು ಅನಾರೋಗ್ಯಕರವಾಗಿಸುತ್ತವೆ. ಆದರೆ ಯಾವುದೇ ಲಘು ಪಾನೀಯವನ್ನು ಒಂದೆರಡು ಬಾರಿ ಕುಡಿದ ತಕ್ಷಣ ಇದರ ದುಷ್ಪರಿಣಾಮಗಳ ಅರಿವಾಗುವುದಿಲ್ಲ. ತಂಪು ಪಾನೀಯಗಳ ಹಿಂದಿದೆ, ಬೆಚ್ಚಿ ಬೀಳಿಸುವ ಸತ್ಯ
ಆದರೆ ಸತತವಾಗಿ ಕುಡಿಯುವ ಮೂಲಕ ನಿಧಾನವಾಗಿ ಇದರ ದುಷ್ಪರಿಣಾಮಗಳು ಕಾಣತೊಡಗುತ್ತವೆ. ಬನ್ನಿ, ಈ ಪೇಯಗಳು ಯಾವುವು? ಏಕಾಗಿ ಕುಡಿಯಬಾರದು ಎಂಬುದನ್ನು ಮುಂದೆ ಓದಿ....

ಎನರ್ಜಿ ಡ್ರಿಂಕ್
ಅಲ್ಪಕಾಲದಲ್ಲಿಯೇ ಜನಪ್ರಿಯತೆ ಗಳಿಸಿಕೊಂಡ ಈ ಪೇಯದ ಜಾಹೀರಾತಿನಲ್ಲಿ ಇದನ್ನು ಕುಡಿಯುವ ಮೂಲಕ ತಕ್ಷಣವೇ ಅಪಾರ ಶಕ್ತಿ ಬರುತ್ತದೆ ಎಂದು ಪ್ರಚಾರ ಮಾಡಲಾಗುತ್ತದೆ. ಇದರಲ್ಲಿರುವ ಅಂಶಗಳು ತಕ್ಷಣ ರಕ್ತಕ್ಕೆ ಸೇರಿ ಶೀಘ್ರಕಾಲದಲ್ಲಿ ಸ್ನಾಯುಗಳಿಗೆ ಒದಗಿಸುವ ಮೂಲಕ ಹೆಚ್ಚಿನ ಶಕ್ತಿ ನೀಡುವ ಕುಡಿದವರಿಗೆ ಚೈತನ್ಯ ನೀಡಿದ ಭಾವನೆ ಮೂಡಿಸುತ್ತದೆ. ಆದರೆ ಇದರ ಒಳ್ಳೆಯ ಗುಣಗಳೊಂದಿಗೆ ಕೆಟ್ಟ ಗುಣಗಳು ನಿಧಾನವಾಗಿ ಕಾಣತೊಡಗುತ್ತವೆ.
ಪ್ರಾರಂಭದಲ್ಲಿ ಹೆಚ್ಚಿನ ಶಕ್ತಿ ಮೂಡಿಸಿದಂತೆ ಅನ್ನಿಸಿದರೂ ಕ್ರಮೇಣ ಇದರ ಸತತ ಸೇವನೆಯಿಂದ ನಿದ್ರೆ ಇಲ್ಲದಿರುವುದು, ಹೊಟ್ಟೆಯಲ್ಲಿ ನೋವು, ನಡುಕ, ರಕ್ತದಲ್ಲಿ ಸಕ್ಕರೆಯ ಅಂಶ ಥಟ್ಟನೇ ಏರುವುದು, ಇಳಿಯುವುದು ಕಾಣತೊಡಗುತ್ತದೆ. ಇನ್ನೂ ಹೆಚ್ಚಿದರೆ ದೇಹದ ಶಕ್ತಿ ಉಡುಗಲು ಪ್ರಾರಂಭವಾಗುತ್ತದೆ. ಉಸಿರಾಟ ತೀವ್ರವಾಗತೊಡಗುತ್ತದೆ ಮತ್ತು ಹೃದಯ ಬಡಿತದ ವೇಗ ನಿಯಂತ್ರಣಕ್ಕೆ ಸಿಗದಂತೆ ಏರತೊಡಗುತ್ತದೆ. ಗರ್ಭಿಣಿಯರೇ ತಂಪು ಪಾನೀಯ ಕಡೆ ಕಣ್ಣೆತ್ತಿಯೂ ನೋಡಬೇಡಿ!
ಸಕ್ಕರೆ ರಹಿತ ಪಾನೀಯಗಳು
ಪೆಪ್ಸಿ, ಕೋಕಾ ಕೋಲಾ ಮೊದಲಾದ ಖ್ಯಾತ ಸಂಸ್ಥೆಗಳೂ ಡಯೆಟ್ ಎಂಬ ಹೆಸರಿನೊಂದಿಗೆ ತಮ್ಮ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿವೆ. ಇಲ್ಲಿ ಸಕ್ಕರೆಯ ಬದಲಿಗೆ ಆಸ್ಪರ್ಟೇಮ್ (aspertame) ಎಂಬ ಸಿಹಿವಸ್ತುವನ್ನು ಬಳಸಲಾಗುತ್ತದೆ. ಆದರೆ ಇದರ ಸೇವನೆಯಿಂದ ತಲೆನೋವು, ತಲೆ ಸುತ್ತುವುದು, ಅಜೀರ್ಣತೆ, ಮನೋಭಾವದಲ್ಲಿ ತೀವ್ರವಾದ ಬದಲಾವಣೆ, ಆಲ್ಜೀಮರ್ಸ್ ಕಾಯಿಲೆ, ಗರ್ಭಿಣಿಯರು ಸೇವಿಸಿದರೆ ವಿಕಲಾಂಗ ಮಕ್ಕಳು ಹುಟ್ಟುವುದು, ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. 'ಲಘು ಪಾನೀಯ' ಎಂಬ ಸೈಲೆಂಟ್ ಕಿಲ್ಲರ್‌ನ ಬಗ್ಗೆ ಕಟ್ಟೆಚ್ಚರ!
ಇನ್ನೊಂದು ಸಕ್ಕರೆಯ ಬದಲಿಗೆ ಉಪಯೋಗಿಸಲಾಗುವ ಸಿಹಿವಸ್ತುವೆಂದರೆ ಸುಕ್ರಲೋಸ್. ಆದರೆ ಇದೊಂದು ವಿಷವಸ್ತುವಾಗಿದ್ದು ಇದರ ಸೇವನೆಯಿಂದ ಮೆದುಳಿನ ಜೀವಕೋಶಗಳು ಸತತವಾಗಿ ಸಾಯುತ್ತಾ ಮೆದುಳಿನ ಕ್ಷಮತೆ ಅಪರಿಮಿತ ವೇಗದಲ್ಲಿ ಕ್ಷೀಣಿಸುತ್ತಾ ಹೋಗುತ್ತದೆ. ಆದ್ದರಿಂದ ಡಯೆಟ್, ಸುಗರ್ ಫ್ರೀ ಎಂಬ ಹೆಸರು ಇರುವ ಯಾವುದೇ ಪಾನೀಯಗಳನ್ನು ಕುಡಿಯದಿರುವುದೇ ಆರೋಗ್ಯಕರ.
ಸಕ್ಕರೆ ಸೇರಿಸಿದ ಡೈರಿ ಉತ್ಪನ್ನಗಳು
ಮಾರುಕಟ್ಟೆಯಲ್ಲಿ ಹಾಲನ್ನು ಆಧರಿಸಿದ ಹಲವು ಪೇಯಗಳು ಲಭ್ಯವಿದ್ದು ಇವುಗಳಲ್ಲಿ ಸಕ್ಕರೆಯ ಅಂಶ ವಿಪರೀತವಾಗಿರುತ್ತದೆ. ನಮಗೆ ಪ್ರತಿದಿನ 32.5 ಗ್ರಾಂ ಸಕ್ಕರೆ ಸಾಕು. ಆದರೆ ಒಂದು ಇನ್ನೂರು ಗ್ರಾಂ ಪೇಯದಲ್ಲಿ 28.2 ಗ್ರಾಂ ಸಕ್ಕರೆ ಇರುತ್ತದೆ.
ಅಂದರೆ ಇಡಿಯ ದಿನದ ಅಗತ್ಯವನ್ನು ಒಂದು ಪೇಯದ ಮೂಲಕ ಪಡೆಯಬಹುದು. ದಿನವಿಡೀ ಕುಡಿಯುವ ಇತರ ಪೇಯ ಅಥವಾ ಸಿಹಿಗಳ ಮೂಲಕ ಲಭ್ಯವಾಗುವ ಸಕ್ಕರೆ ಅಗತ್ಯಕ್ಕೂ ಮೀರಿ ಸಂಗ್ರಹವಾಗುತ್ತದೆ. ಇದು ಕೊಬ್ಬಾಗಿ ಸ್ಥೂಲಕಾಯ ಹೆಚ್ಚಿಸುತ್ತದೆ. ತಂಪು ಪಾನೀಯ ಸೇವನೆ: ಅಪಾಯ ಕಟ್ಟಿಟ್ಟ ಬುತ್ತಿ!
ಫ್ರುಟ್ ಫ್ಲೇವರ್ಡ್ ಡ್ರಿಂಕ್
ಮಾರುಕಟ್ಟೆಯಲ್ಲಿ ಲಭ್ಯವಿರುವ ಹಣ್ಣಿನ ರಸಗಳಲ್ಲಿ ತೊಂಭತ್ತು ಶೇಖಡಾಕ್ಕೂ ಹೆಚ್ಚಿನ ಹಣ್ಣಿನ ಸ್ವಾದದ ಪೇಯಗಳು ಕೃತಕ ಸ್ವಾದ ಸೇರಿಸಿದ ಪೇಯಗಳೇ ಹೊರತು ಹಣ್ಣಿನ ರಸವೇ ಅಲ್ಲ.
ಇದಕ್ಕೆ ಈ ಸಂಸ್ಥೆಗಳು ಎಂದೂ ಫ್ರೂಟ್ ಜ್ಯೂಸ್ ಎಂದು ಬರೆಯುವುದೇ ಇಲ್ಲ, ಬದಲಿಗೆ ಫ್ರುಟ್ ಫ್ಲೇವರ್ಡ್ ಡ್ರಿಂಕ್ ಎಂದೇ ಬರೆಯುತ್ತಾರೆ. ಇದರಲ್ಲಿ ಬಳಸಲಾಗಿರುವ ಕೃತದ ಸ್ವಾದಕಾರಕ (artificial fruit flavours)ಗಳು ಅನಾರೋಗ್ಯಕರವಾಗಿವೆ. ಕೊಂಚ ದುಬಾರಿಯಾದರೂ ಪರವಾಗಿಲ್ಲ, ತಾಜಾ ಹಣ್ಣಿನ ರಸವನ್ನೇ ಸೇವಿಸುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications













