Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಿಣಿಯರೇ ತಂಪು ಪಾನೀಯ ಕಡೆ ಕಣ್ಣೆತ್ತಿಯೂ ನೋಡಬೇಡಿ!
ಸ್ತ್ರೀಯ ಬಾಳಿನಲ್ಲಿ ಗರ್ಭಾವಸ್ಥೆ ಎಂಬುದು ನಿತ್ಯ ಹಬ್ಬವನ್ನು ಸಂತಸವನ್ನು ನೀಡುವ ಸಮಯವಾಗಿದೆ. ಕುಟುಂಬಕ್ಕೆ ಹೊಸ ಸದಸ್ಯರ ಆಗಮನ ಯಾರಿಗೆ ತಾನೇ ಖುಷಿ ತರದು ಹೇಳಿ? ಇದಕ್ಕಾಗಿ ಆಕೆ ತನ್ನನ್ನು ಸಂಪೂರ್ಣವಾಗಿ ಸಿದ್ಧಪಡಿಸಿಕೊಂಡಿರುತ್ತಾಳೆ. ತನ್ನನ್ನು ತಾನೇ ಆ ಪುಟ್ಟ ಕಂದಮ್ಮನಿಗಾಗಿ ಬದಲಾಯಿಸಿಕೊಂಡಿರುತ್ತಾಳೆ. ಮನೆಯ ಸದಸ್ಯರಂತೂ ಆಕೆಯನ್ನು ಹೂವಿನಂತೆ ಜೋಪಾನವಾಗಿ ನೋಡಿಕೊಳ್ಳತ್ತಾರೆ.

ಪಥ್ಯಾಹಾರಗಳ ಒಂದು ಪಟ್ಟಿಯೇ ಆಕೆಯ ಎದುರು ಬಂದು ನಿಂತು ಆಕೆಯನ್ನು ನವ ಮಾಸಕ್ಕಾಗಿ ಅಣಿಗೊಳಿಸಿ ಹೆರಿಗೆಯ ಸಮಯಕ್ಕಾಗಿ ಪಕ್ವಗೊಳಿಸುತ್ತದೆ. ಗರ್ಭಿಣಿಯು ಸ್ತ್ರೀಯು ತಮ್ಮ ಆಹಾರದ ಕಡೆಗೆ ಈ ಸಮಯದಲ್ಲಿ ಹೆಚ್ಚು ಗಮನ ನೀಡಬೇಕಾಗಿರುತ್ತದೆ. ಯದ್ವಾ ತದ್ವಾ ಸಿಕ್ಕಿದ್ದನ್ನೆಲ್ಲಾ ತಿನ್ನಬೇಕೆಂಬ ಬಾಯಿ ಚಪಲ ಈ ಸಂದರ್ಭದಲ್ಲಿ ಉಂಟಾದರೂ ನಾಲಗೆಗೆ ಕೊಂಚ ಕಡಿವಾಣವನ್ನು ಹಾಕಲೇಬೇಕಾಗುತ್ತದೆ. ಏಕೆಂದರೆ ನಿಮ್ಮ ಪ್ರಸವ ಸುಸೂತ್ರವಾಗಿ ನಡೆಯಬೇಕು ಎಂದಾದಲ್ಲಿ ಕೊಂಚ ತ್ಯಾಗವನ್ನು ನೀವು ಮಾಡಲೇಬೇಕು.
ಅತಿಯಾಗಿ ತಿನ್ನುವುದು ಗರ್ಭಿಣಿಯರಲ್ಲಿ, ಸ್ಥೂಲಕಾಯತೆ, ಜೀರ್ಣಕ್ರಿಯೆ ಸಮಸ್ಯೆಗಳು, ಹೆಚ್ಚಿನ ರಕ್ತದೊತ್ತಡ ಮೊದಲಾದ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಈ ಆರೋಗ್ಯ ಸಮಸ್ಯೆಗಳು ಗರ್ಭಿಣಿ ಸ್ತ್ರೀಯ ದೇಹದಲ್ಲಿ ಏರುಪೇರನ್ನು ಮಾಡುವುದು ಖಂಡಿತ. ಅಂತೆಯೇ ಹುಟ್ಟಲಿರುವ ಮಗುವಿನ ಮೇಲೂ ದುಷ್ಪರಿಣಾಮವನ್ನು ಬೀರುವುದು ಖಂಡಿತ. ತಂಪು ಪಾನೀಯಗಳ ಹಿಂದಿದೆ, ಬೆಚ್ಚಿ ಬೀಳಿಸುವ ಸತ್ಯ
ವೈದ್ಯರು ಮತ್ತು ಮನೆಯ ಸದಸ್ಯರು ಸೂಚಿಸಿರುವ ಆರೋಗ್ಯಕರ ಆಹಾರ ಪದ್ಧತಿಯನ್ನು ಆಕೆ ಅನುಭವಿಸಬೇಕು. ಇದರಿಂದ ತಾಯಿ ಮತ್ತು ಮಗುವಿಗೆ ಬೇಕಾಗಿರುವ ನ್ಯೂಟ್ರೀನ್ ಅಂಶಗಳು ದೊರೆಯುತ್ತದೆ. ಅಂತೆಯೇ ಕೆಲವೊಂದು ಆಹಾರ ಪದ್ಧತಿಗಳನ್ನು ಆಕೆ ಈ ಸಂದರ್ಭದಲ್ಲಿ ತ್ಯಾಗ ಮಾಡಲೇಬೇಕಾಗಿರುವುದರಿಂದ ಇದು ಆಕೆಯ ಮತ್ತು ಜನಿಸಲಿರುವ ಮಗುವಿನ ಸುರಕ್ಷತೆಗೆ ಎಂಬುದು ಆಕೆ ನೆನಪಿನಲ್ಲಿಟ್ಟು ಕೊಳ್ಳಲೇಬೇಕು. ತಮ್ಮ ಮೆಚ್ಚಿನ ಆಹಾರ ಮತ್ತು ಪಾನೀಯಗಳನ್ನು ಸೇವನೆ ಮಾಡದರಿವುದು ಆಕೆಗೆ ಕೊಂಚ ಕಷ್ಟವಾದರೂ ಹೆರಿಗೆಯ ನಂತರ ಇವುಗಳ ಸೇವನೆಯನ್ನು ನಿರ್ಭೀತಿಯಿಂದ ಮಾಡಬಹುದಾಗಿದೆ.
ಕೃತಕ ಸಿಹಿಯಿಂದ ಕೂಡಿರುವ ಮತ್ತು ತಂಪು ಪಾನೀಯಗಳು ನಿಮ್ಮ ಮಗುವಿಗೆ ಸಂಚಕಾರವನ್ನು ತರುತ್ತದೆ ಎಂಬುದು ನಿಮಗೆ ಗೊತ್ತೇ? ಅದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ. ಇತ್ತೀಚಿನ ಒಂದು ಅಧ್ಯಯನ ತಿಳಿಸಿರುವಂತೆ ತಂಪು ಪಾನೀಯಗಳನ್ನು ಸೇವನೆ ಮಾಡುವ ಮಹಿಳೆಯರು ಸ್ಥೂಲಕಾಯರಾದ ಮಕ್ಕಳಿಗೆ ಜನ್ಮನೀಡುತ್ತಾರೆ ಎಂದಾಗಿದೆ.
ನಿತ್ಯವೂ ತಂಪು ಪಾನೀಯಗಳನ್ನು ಸೇವನೆ ಮಾಡುವ ಗರ್ಭಿಣಿ ಸ್ತ್ರೀಯರು ಹೆಚ್ಚು ಸ್ಥೂಲಕಾಯರಾದ ಮಕ್ಕಳಿಗೆ ಜನ್ಮನೀಡಿರುವುದು ತಿಳಿದು ಬಂದಿದೆ. ಬಾಡಿ ಮಾಸ್ ಇಂಡೆಕ್ಸ್ (ಬಿಎಮ್ಐ) ಇಂತಹ ಮಕ್ಕಳಲ್ಲಿ ಅಧಿಕವಾಗಿದ್ದು ಅವರದೇ ವಯಸ್ಸಿನ ಮಕ್ಕಳಿಗೆ ಹೋಲಿಸಿದಾಗ ಇವರು ಹೆಚ್ಚು ಅನಾರೋಗ್ಯ ಪೀಡಿತರಾಗಿದ್ದಾರೆ. ತಂಪು ಪಾನೀಯ ಸೇವನೆ: ಅಪಾಯ ಕಟ್ಟಿಟ್ಟ ಬುತ್ತಿ!
ಮಕ್ಕಳ ಪ್ರಥಮ ವರ್ಷದಲ್ಲಿ, ನಿತ್ಯವೂ ತಂಪು ಪಾನೀಯಗಳನ್ನು ಸೇವನೆ ಮಾಡಿದ ತಾಯಂದಿರ ಮಕ್ಕಳು ಚಯಾಪಚಯ ಅಸಮಾನತೆ ಮತ್ತು ತೂಕ ಸಮಸ್ಯೆಗಳಿಗೆ ಕಾರಣರಾಗಿದ್ದಾರೆ. ಎಳೆಯ ಪ್ರಾಯದಲ್ಲಿಯೇ ಚಯಾಪಚಯ ಸಮಸ್ಯೆಗಳು ಮತ್ತು ತೂಕ ಸಮಸ್ಯೆಗಳನ್ನು ಮಕ್ಕಳು ಹೊಂದಿರುವುದು ಹೆಚ್ಚು ಅಪಾಯಕಾರಿಯಾದ ಸ್ಥಿತಿಯಾಗಿದೆ.
ಆದ್ದರಿಂದ ಗರ್ಭಾವಸ್ಥೆ ಸಮಯದಲ್ಲಿ ಆದಷ್ಟು ಕೃತಕ ತಂಪು ಪಾನೀಯಗಳನ್ನು ಗರ್ಭಿಣಿಯರು ಅವಗಣನೆ ಮಾಡುವುದು ಸೂಕ್ತವಾದುದಾಗಿದೆ. ಈ ಪಾನೀಯಗಳು ಹೆಚ್ಚು ಸಕ್ಕರೆ ಮತ್ತು ಕ್ಯಾಲೋರಿಗಳನ್ನು ಹೊಂದಿರುವುದರಿಂದ ಆಕೆಗೆ ಮತ್ತು ಮಗುವಿಗೆ ಇದು ಖಂಡಿತ ಅಪಾಯಕಾರಿಯಾಗಿದೆ.



Click it and Unblock the Notifications



