Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ತಲೆ ನೋವಿಗೆ ಮಾತ್ರೆ ಬಿಡಿ-ಒಮ್ಮೆ ಮನೆಮದ್ದು ಪ್ರಯತ್ನಿಸಿ
ತಲೆನೋವು ಕಾಡಿದರೆ ನಮಗೆ ತಕ್ಷಣ ನೆನಪಾಗುವುದು ಮೆಡಿಕಲ್. ಮೆಡಿಕಲ್‌ಗೆ ಹೋಗಿ ತಲೆನೋವಿಗೆ ಮಾತ್ರೆ ಕೊಡಿ ಎಂದು ಕೇಳಿ ಅದನ್ನು ತೆಗೆದುಕೊಳ್ಳುತ್ತೇವೆ. ಯಾವಾಗಲೂ ತಲೆನೋವು ಕಾಡಿದಾಗ ಮಾತ್ರೆ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಉಂಟಾಗಬಹುದು. ಜೀವ ಹಿಂಡುವ ಮೈಗ್ರೇನ್ ತಲೆ ನೋವಿಗೆ ತ್ವರಿತ ಮನೆಮದ್ದು
ಪದೇ ಪದೇ ತಲೆನೋವು ನಿಮ್ಮನ್ನು ಕಾಡುತ್ತಾ ಇದೆ ಎಂದಾದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ಚಿಕಿತ್ಸೆ ಪಡೆಯುವುದು ಸೂಕ್ತ. ಆದರೆ ಕೆಲವೊಂದು ಮನೆಮದ್ದುಗಳು ತಲೆನೋವನ್ನು ನಿವಾರಣೆ ಮಾಡುವಂತಹ ಸಾಮರ್ಥ್ಯ ಹೊಂದಿದೆ. ಒಂದೇ ಗಂಟೆಯಲ್ಲಿ ಮಾತ್ರೆಯಿಲ್ಲದೆ ತಲೆನೋವು ಮಾಯ!
ಇದನ್ನು ಪ್ರಯತ್ನಿಸಿದರೆ ತಲೆನೋವು ನಿವಾರಣೆ ಸಾಧ್ಯವಿದೆ. ಒತ್ತಡದಿಂದಾಗಿ ತಲೆನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಅದನ್ನು ಹೋಗಲಾಡಿಸಲು ಇಲ್ಲಿ ಕೆಲವೊಂದು ಮನೆಮದ್ದನ್ನು ಬಳಸಬಹುದಾಗಿದೆ...

ಆಲೂಗಡ್ಡೆ
ಒಂದು ಆಲೂಗಡ್ಡೆ ತೆಗೆದುಕೊಂಡು ಅದನ್ನು ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಆ ತುಂಡನ್ನು ಹಣೆಗೆ ಉಜ್ಜಿಕೊಳ್ಳಿ. ಕೆಲವು ಹೊತ್ತಿನ ಬಳಿಕ ತಲೆನೋವು ನೈಸರ್ಗಿಕವಾಗಿ ಕಡಿಮೆಯಾಗುವುದು.

ಶುಂಠಿ
ಕುದಿಯುತ್ತಿರುವ ಒಂದು ಕಪ್ ನೀರಿಗೆ ಜಜ್ಜಿದ ಶುಂಠಿ ಹಾಕಿಕೊಳ್ಳಿ. 15 ನಿಮಿಷಗಳ ಕಾಲ ಇದನ್ನು ಕುದಿಯಲು ಬಿಡಿ ಮತ್ತು ಕೆಲವು ಹನಿ ನಿಂಬೆನೀರನ್ನು ಇದಕ್ಕೆ ಹಾಕಿಕೊಂಡು ಕುಡಿಯಿರಿ.

ಬೆಳ್ಳುಳ್ಳಿ
ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಅದನ್ನು ಹಣೆಗೆ ಹಚ್ಚಿಕೊಳ್ಳಿ. ಅದರ ಮೇಲೆ ಬಟ್ಟೆ ಹಾಕಿಕೊಳ್ಳಿ. ಸ್ವಲ್ಪ ಸಮಯದ ಬಳಿಕ ನಿಮಗೆ ಆರಾಮವೆನಿಸುವುದು.

ನೀರು
ನಿರ್ಜಲೀಕರಣದಿಂದಾಗಿ ನಿಮಗೆ ತಲೆನೋವು ಕಾಣಿಸಿಕೊಳ್ಳುತ್ತಾ ಇದೆ ಎಂದಾದರೆ ಮೂರು ಲೋಟ ನೀರು ಕುಡಿದು ನೋಡಿ. ನಿಮಗೆ ತುಂಬಾ ಆರಾಮವೆನಿಸುವುದು.

ತಲೆಗೆ ಮಸಾಜ್
10 ನಿಮಿಷಗಳ ಕಾಲ ಬಿಸಿ ತೆಂಗಿನ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿಕೊಳ್ಳಿ. ಇದು ತಲೆಬುರುಡೆಗೆ ರಕ್ತಸಂಚಾರವನ್ನು ಸುಗುಮಗೊಳಿಸುವ ಕಾರಣ ತಲೆನೋವು ಕಡಿಮೆಯಾಗುವುದು.

ಎಲೆಕೋಸಿನ ಎಲೆ
ಎಲೆಕೋಸಿನ ಒಂದು ಎಲೆಯನ್ನು ಸರಿಯಾಗಿ ಜಜ್ಜಿಕೊಳ್ಳಿ. ಅದನ್ನು ಹಣೆಗೆ ಇಟ್ಟುಕೊಳ್ಳಿ. ಅದರ ನೀರು ನಿಮ್ಮ ಹಣೆಗೆ ಸರಿಯಾಗಿ ಹರಡಲಿ.

ಹಾಲು ಹಾಕದ ಕಾಫಿ
ಹಾಲು ಹಾಕದ ಕಾಫಿಗೆ ಕೆಲವು ಹನಿ ನಿಂಬೆರಸವನ್ನು ಹಾಕಿಕೊಳ್ಳಿ. ಇದನ್ನು ಕುಡಿದರೆ ನಿಮಗೆ ತಕ್ಷಣ ಪರಿಹಾರ ಸಿಗುವುದು.



Click it and Unblock the Notifications
