Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಒಂದೇ ಗಂಟೆಯಲ್ಲಿ ಮಾತ್ರೆಯಿಲ್ಲದೆ ತಲೆನೋವು ಮಾಯ!
ಏನಾದರೂ ಬರಲಿ, ಆದರೆ ತಲೆನೋವು ಮಾತ್ರ ಬರುವುದು ಬೇಡ ಎಂದು ಅದನ್ನು ಅನುಭವಿಸಿದರೂ ಹೇಳುವುದುಂಟು. ದೇಹದಲ್ಲಿ ತೀವ್ರ ನೋವನ್ನು ಉಂಟುಮಾಡುವಂತಹ ನೋವೆಂದರೆ ಅದು ತಲೆನೋವು.
ತಲೆನೋವು ಆರಂಭವಾದ ಮೇಲೆ ಯಾವುದೇ ಕೆಲಸಕಾರ್ಯವನ್ನು ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಸರಿಯಾಗಿ ಆಹಾರ ಸೇವಿಸಲು ತಲೆನೋವು ಬಿಡಲ್ಲ. ತಲೆನೋವು ಕೆಲವೊಮ್ಮೆ ಹಾಸಿಗೆಯಿಂದ ಏಳದಂತೆ ಮಾಡಿಬಿಡುವುದುಂಟು.

ಸಾಮಾನ್ಯವಾಗಿ ತಲೆನೋವು ಕಾಣಿಸಿಕೊಳ್ಳಲು ಹಲವಾರು ಕಾರಣಗಳಿರಬಹುದು. ಜ್ವರ, ಸಾಮಾನ್ಯ ಶೀತ, ನಿಶ್ಯಕ್ತಿ, ಸರಿಯಾಗಿ ಪೋಷಕಾಂಶಗಳನ್ನು ತಿನ್ನದೆ ಇರುವುದು, ಒತ್ತಡ ಮತ್ತು ಕಂಪ್ಯೂಟರ್ ಮುಂದೆ ಹೆಚ್ಚಿನ ಸಮಯ ಕಳೆಯುವುದು ತಲೆನೋವಿಗೆ ಕಾರಣವಾಗಿರಬಹುದು. ಈ ಯಮಯಾತನೆಯಿಂದ ಮುಕ್ತಿ ಪಡೆಯಲು ನಾವು ನೋವುನಿವಾರಕ ಮಾತ್ರೆಗಳ ಮೊರೆ ಹೋಗುತ್ತೇವೆ.
ಆದರೆ ಇದು ಸ್ವಲ್ಪ ಸಮಯ ತಲೆನೋವನ್ನು ಶಮನ ಮಾಡಿದರೂ ಅದರಿಂದ ಆಗುವಂತಹ ಅಡ್ಡಪರಿಣಾಮವನ್ನು ಹೇಳಲು ಸಾಧ್ಯವಿಲ್ಲ. ಇದಕ್ಕಾಗಿಯೇ ಮನೆಯಲ್ಲೇ ಇರುವ ಸಾಮಗ್ರಿಯನ್ನು ಬಳಸಿ ಮದ್ದು ಮಾಡಿದರೆ ಅದು ಯಾವುದೇ ಅಡ್ಡ ಪರಿಣಾಮ ಬೀರಲ್ಲ. ಕೇವಲ ಒಂದು ಗಂಟೆಯಲ್ಲಿ ತಲೆನೋವನ್ನು ಓಡಿಸಬಲ್ಲ ಜ್ಯೂಸ್‌ನ ಬಗ್ಗೆ ನಾವಿಲ್ಲಿ ನಿಮಗೆ ಹೇಳಲಿದ್ದೇವೆ. ನೈಸರ್ಗಿಕವಾದ 10 ನೋವು ನಿವಾರಕ ಔಷಧಿಗಳು
ಜ್ಯೂಸ್ ತಯಾರಿಸಲು ಬೇಕಾಗುವ ಸಾಮಗ್ರಿಗಳು
*ಲಿಂಬೆಹಣ್ಣಿನ ರಸ -1/2 ಕಪ್
*ಜೇನುತುಪ್ಪ 1 ಚಮಚ
*ಲ್ಯಾವೆಂಡರ್ ಎಸೆನ್ಶಿಯಲ್ ಎಣ್ಣೆ- 1 ಚಮಚ ಜೀವ ಹಿಂಡುವ ಮೈಗ್ರೇನ್ ತಲೆ ನೋವಿಗೆ ತ್ವರಿತ ಮನೆಮದ್ದು
ಯಾವುದೇ ದೊಡ್ಡ ಆರೋಗ್ಯ ಸಮಸ್ಯೆ ಇಲ್ಲದಿದ್ದರೆ ಲಿಂಬೆರಸ, ಜೇನುತುಪ್ಪ ಮತ್ತು ಲ್ಯಾವೆಂಡರ್ ಎಸೆನ್ಶಿಯಲ್ ಎಣ್ಣೆಯು ಪರಿಣಾಮಕಾರಿಯಾಗಿ ತಲೆನೋವನ್ನು ಒಂದು ಗಂಟೆಯ ಒಳಗಡೆ ನಿವಾರಿಸುತ್ತದೆ.
ಈ ಜ್ಯೂಸ್ ನಲ್ಲಿರುವ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ರಕ್ತನಾಳದೊಳಗೆ ಪ್ರವೇಶಿಸಿ ತಲೆಯ ಭಾಗದಲ್ಲಿರುವ ಒತ್ತಡವನ್ನು ಕಡಿಮೆ ಮಾಡುವುದು. ಇದರಿಂದ ನೋವು ನಿಧಾನವಾಗಿ ತಗ್ಗುವುದು.
ಆಂಟಿಸ್ಪಾಸ್ಮೊಡಿಕ್ ಗುಣವನ್ನು ಹೊಂದಿರುವ ಮನೆಯಲ್ಲಿ ತಯಾರಿಸಿ ಈ ಜ್ಯೂಸ್ ಸಾಮಾನ್ಯ ಶೀತ ಮತ್ತು ಒತ್ತಡಕ್ಕೆ ಸಂಬಂಧಿಸಿದ ತಲೆನೋವನ್ನು ಬೇಗನೆ ನಿವಾರಿಸುವುದು.
ಜ್ಯೂಸ್ ತಯಾರಿಸುವ ಮತ್ತು ಕುಡಿಯುವ ವಿಧಾನ
*ಮೇಲೆ ತಿಳಿಸಿದಷ್ಟು ಪ್ರಮಾಣದ ಸಾಮಾಗ್ರಿಗಳನ್ನು ಒಂದು ಕಪ್‌ಗೆ ಹಾಕಿಕೊಳ್ಳಿ.
*ಇದನ್ನು ಸರಿಯಾಗಿ ಮಿಶ್ರಣ ಮಾಡಿ 1-2 ನಿಮಿಷ ಕಾಲ ಬಿಸಿ ಮಾಡಿ ಉಗುರು ಬೆಚ್ಚಗೆ ಆದ ಬಳಿಕ ತೆಗೆಯಿರಿ. ಬಳಿಕ ಜ್ಯೂಸ್ ಅನ್ನು ಕುಡಿಯಬಹುದಾಗಿದೆ.
ತಲೆನೋವು ಕಾಣಿಸಿಕೊಂಡಾಗ ಇದನ್ನು ಕುಡಿಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



