For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಚಿಟಿಕೆಯಷ್ಟು 'ದಾಲ್ಚಿನ್ನಿ' ಪುಡಿಯ ಜಬರ್ದಸ್ತ್ ಪವರ್

ದಾಲ್ಚಿನ್ನಿ ಅಥವಾ ಚಕ್ಕೆ ಪುಡಿ ಮಸಾಲೆ ಅಡುಗೆಯಲ್ಲಿ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವುದು ಮಾತ್ರವಲ್ಲ, ಹಲವಾರು ಬಗೆಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ....

By Manu
|

ದಾಲ್ಚಿನ್ನಿ ಅಥವಾ ಚಕ್ಕೆ ಪುಡಿ ಎಂದಾಕ್ಷಣ ಇದೊಂದು ಮಸಾಲೆ ಪದಾರ್ಥ ಎಂದೇ ನಾವೆಲ್ಲಾ ತೀರ್ಮಾನಿಸಿ ಬಿಡುತ್ತೇವೆ. ಆದರೆ ನಮ್ಮ ಇದುವರೆಗಿನ ಅರಿವು ತಪ್ಪು ಎಂದು ಈ ಲೇಖನ ಓದಿದ ಬಳಿಕ ಮನದಟ್ಟಾಗುತ್ತದೆ. ಏಕೆಂದರೆ ಈ ಮಸಾಲೆ ಅಡುಗೆಯಲ್ಲಿ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುವುದು ಮಾತ್ರವಲ್ಲ, ಹಲವಾರು ಬಗೆಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ. ದಾಲ್ಚಿನ್ನಿ ಬೆರೆಸಿದ ಹಾಲು ಕುಡಿಯಿರಿ-ಆರೋಗ್ಯ ಪಡೆಯಿರಿ

ಇದಕ್ಕಾಗಿ ಬೇಕಾಗಿರುವುದು ದಿನಕ್ಕೆ ಕೇವಲ ಒಂದು ಚಿಕ್ಕ ಚಮಚದಷ್ಟು ಪ್ರಮಾಣ ಮಾತ್ರ. ಇದರ ಗರಿಷ್ಠ ಪರಿಣಾಮವನ್ನು ಪಡೆಯಬೇಕಾದರೆ ಈ ಪುಡಿಯನ್ನು ಬೆಳಗ್ಗಿನ ಪ್ರಥಮ ಆಹಾರವಾಗಿ ನೀರಿನಲ್ಲಿ ಬೆರೆಸಿ ಸೇವಿಸಬೇಕು. ಇದರ ಆರೋಗ್ಯಕರ ಗುಣಗಳನ್ನು ಬೋಲ್ಡ್ ಸ್ಕೈ ತಂಡ ಪಟ್ಟಿಮಾಡಿದ್ದು ಇದರ ಉಪಯೋಗಗಳು ನಿಮಗೂ ಆಗಲಿ ಎಂಬ ಉದ್ದೇಶದಿಂದ ಕೆಳಗೆ ನೀಡಲಾಗಿದೆ. ಇದರ ಪರಿಣಾಮವನ್ನು ಮನಗಂಡ ವೈದ್ಯರೂ ಬೆಕ್ಕಸ ಬೆರಗಾಗಿದ್ದಾರೆ. ಬನ್ನಿ, ಈ ಪ್ರಯೋಜನಗಳು ಯಾವುವು ಎಂಬುದನ್ನು ನೋಡೋಣ. ಜೇನು ದಾಲ್ಚಿನ್ನಿ ಜೋಡಿ ಮಾಡಲಿದೆ ಕಮಾಲಿನ ಮೋಡಿ

ಎಚ್ಚರಿಕೆ: ಯಕೃತ್‌ ಅಥವಾ ಲಿವರ್‌ನ ತೊಂದರೆ ಇರುವ ವ್ಯಕ್ತಿಗಳು ಈ ಮಸಾಲೆಯನ್ನು ಸೇವಿಸುವಾಗ ಅತಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಆದರೆ ಚಿಕ್ಕ ಪ್ರಮಾಣದಲ್ಲಿ ಸೇವಿಸುವುದರಲ್ಲಿ ತೊಂದರೆಯಿಲ್ಲ. ಯಾವುದಕ್ಕೂ ನಿಮ್ಮ ಕುಟುಂಬ ವೈದ್ಯರ ಸಲಹೆ ಪಡೆದೇ ಮುಂದುವರೆಯುವುದು ಉತ್ತಮ.....


ಸಂಧಿವಾತ

ಸಂಧಿವಾತ

ದಾಲ್ಚಿನ್ನಿಯಲ್ಲಿರುವ ಉರಿಯೂತ ನಿವಾರಕ ಗುಣ ಈ ಪುಡಿಯನ್ನು ಮಸಾಲೆಗಿಂತ ಹೆಚ್ಚಾಗಿ ಔಷಧೀಯ ಪುಡಿಯಾಗಿಸಿದೆ. ನಿತ್ಯವೂ ಒಂದು ಚಿಕ್ಕ ಚಮಚ ದಾಲ್ಚಿನ್ನಿ ಪುಡಿಯನ್ನು ಉಗುರುಬೆಚ್ಚನೆಯ ನೀರಿನಲ್ಲಿ ದಿನಕ್ಕೊಂದು ಬಾರಿ ಸೇವಿಸುವ ಮೂಲಕ ಸಂಧಿವಾತ ನಿವಾರಣೆಯಾಗುತ್ತದೆ.

ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ

ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ

ಗಾಢವಾಗಿರುವ ರಕ್ತವನ್ನು ತೆಳುವಾಗಿಸಿ ರಕ್ತಪರಿಚಲನೆಯನ್ನು ಸುಲಭವಾಗಿಸುವಲ್ಲಿ ದಾಲ್ಚಿನ್ನಿಯಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ದಾಲ್ಚಿನ್ನಿಯಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ವಿಶೇಷವಾಗಿ ಪ್ರತಿದಿನ ಬೆಳಿಗ್ಗೆ ಒಂದು ಚಿಕ್ಕ ಚಮಚದಷ್ಟು ದಾಲ್ಚಿನ್ನಿ ಪುಡಿಯನ್ನು ಉಗುರುಬೆಚ್ಚನೆಯ ನೀರಿನಲ್ಲಿ ಕಲಸಿ ಸೇವಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ

ದಿನಕ್ಕೊಂದು ಚಿಕ್ಕ ಚಮಚ ದಾಲ್ಚಿನ್ನಿ ಪುಡಿಯನ್ನು ಕುದಿಯುವ ನೀರಿನಲ್ಲಿ ಹಾಕಿ ಕುದಿಸಿ ಟೀ ರೂಪದಲ್ಲಿ ಹೀರುವ ಮೂಲಕ ದೇಹದಲ್ಲಿ ಆವರಿಸಿದ್ದ ಸುಸ್ತು ನಿವಾರಿಸಿ ಚೈತನ್ಯ ನೀಡುತ್ತದೆ.

ಹೃದಯವನ್ನು ರಕ್ಷಿಸುತ್ತದೆ

ಹೃದಯವನ್ನು ರಕ್ಷಿಸುತ್ತದೆ

ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುವುದನ್ನು ತಡೆದು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ಇದರಿಂದ ಹೃದಯದ ಮೇಲಿನ ಒತ್ತಡ ಕಡಿಮೆಯಾಗಿ ಹೃದಯವನ್ನು ಹಲವಾರು ತೊಂದರೆಗಳಿಂದ ರಕ್ಷಿಸುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸುವ ನಿಟ್ಟಿನಲ್ಲಿ ಹಲವಾರು ಸಂಶೋಧನೆಗಳನ್ನು ನಡೆಸಲಾಗಿದ್ದು ಈ ನಿಟ್ಟಿನಲ್ಲಿ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಕರಗಿಸಲು ದಿನಕ್ಕೊಂದು ಚಿಕ್ಕ ಚಮಚ ದಾಲ್ಚಿನ್ನಿ ಪುಡಿಯನ್ನು ಸೇವಿಸುವ ಮೂಲಕ ಸಾಧ್ಯವಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ. ಉತ್ತಮ ಪ್ರಯೋಜನ ಪಡೆಯಲು ಪ್ರತಿದಿನ ಬೆಳಿಗ್ಗೆ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

English summary

Benefits of one teaspoon of cinnamon that will shock you

For those of you who think that cinnamon is just a spice, then you are wrong. This wonder spice not just brings in that aroma in your cuisines but at the same time it is known for its innumerable health benefits. All that one needs is one teaspoon of cinnamon powder. Having it especially in the morning would bring in the best health benefits...
X
Desktop Bottom Promotion