Latest Updates
-
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ
ಮಳೆಗಾಲದಲ್ಲಿ ಶೀತ-ಕೆಮ್ಮಿನ ಸಮಸ್ಯೆಗೆ ಆಯುರ್ವೇದಿಕ್ ಚಿಕಿತ್ಸೆ
ಬೇಸಿಗೆ ಬಂತೆಂದರೆ ಸೆಖೆ ಕಡಿಮೆ ಮಾಡಿಕೊಳ್ಳಲು ವಿವಿಧ ಜನರು ವಿವಿಧ ಕ್ರಮಗಳನ್ನು ಅನುಸರಿಸುತ್ತಾರೆ. ಕೆಲವರು ತಂಪು ಪಾನೀಯಗಳ ಮೊರೆ ಹೋದರೆ ಕೆಲವರು ಈಜುಕೊಳದಲ್ಲಿ ಈಜಲು ಹೋಗುತ್ತಾರೆ. ಇನ್ನೂ ಕೆಲವರು ತಂಪಾದ ಏಸಿ ಇರುವ ಮಾಲ್ ಗಳಿಗೆ ನುಗ್ಗುತ್ತಾರೆ. ಕ್ರಮ ಯಾವುದೇ ಇರಲಿ, ಇಲ್ಲಿಂದ ಹಿಂದಿರುಗಿದಾಗ ಹೆಚ್ಚಿನವರು ಕೆಮ್ಮು ಶೀತವನ್ನು ತಮ್ಮೊಂದಿಗೆ ತಂದಿರುತ್ತಾರೆ. ಈ ಅವಸ್ಥೆಗೆ ಒಳಗಾದವರು ಪರಸ್ಪರ ಒಬ್ಬರನೊಬ್ಬೊರು ನೋಡಿ ಹೀಗೆ ಮಾಡುವ ಬದಲು ಹಾಗೆ ಮಾಡಬಹುದಿತ್ತು ಎಂದು ಕೈ ಕೈ ಹಿಸುಕಿಕೊಳ್ಳುತ್ತಾರೆ.
ಬೇಸಿಗೆಯಲ್ಲಿಯೂ ಮೂಗು ಸುರಿಯುವುದಕ್ಕೆ ಪ್ರಮುಖ ಕಾರಣವಿದೆ. ಅದೆಂದರೆ ಏಸಿಗಳ ಹೆಚ್ಚಿದ ಬಳಕೆ. ಇದರಿಂದ ಹೊರಬರುವ ಗಾಳಿಯಲ್ಲಿ ಆರ್ದ್ರತೆ ಕಡಿಮೆಯಾಗಿರುತ್ತದೆ ಹಾಗೂ ಹಲವು ಜನರ ನಿಃಶ್ವಾಸದ ಗಾಳಿ ಮತ್ತೊಮ್ಮೆ ಮಗದೊಮ್ಮೆ ಮರುಬಳಕೆಯಾಗುತ್ತದೆ. ಇದರಿಂದ ಗಾಳಿಯಲ್ಲಿನ ವೈರಸ್ಸು ಮತ್ತು ಬ್ಯಾಕ್ಟೀರಿಯಾಗಳು ಮೂಗಿಗೆ ತಲುಪಲು ಸುಲಭವಾಗುತ್ತದೆ.
ಏಸಿಯಲ್ಲಿ ಇರುವ ಎಲ್ಲರಿಗೂ ಏಕಸಮಾನವಾಗಿ ತೊಂದರೆ ಎದುರಾಗುತ್ತದೆ ಎಂದು ಹೇಳಲಾಗುವುದಿಲ್ಲ.
ಏಕೆಂದರೆ ಪ್ರತಿಯೊಬ್ಬರ ರೋಗ ನಿರೋಧಕ ವ್ಯವಸ್ಥೆಯಲ್ಲಿ ವಿವಿಧ ವೈರಸ್ಸುಗಳಿಗೆ ನಿರೋಧಕ ಶಕ್ತಿ ಈಗಾಗಲೇ ಮೂಡಿದ್ದರೆ ಈ ಧಾಳಿಯನ್ನು ಎದುರಿಸಲು ಅವರ ದೇಹ ಸನ್ನದ್ಧವಾಗಿರುತ್ತದೆ. ಆದರೂ ಪ್ರತಿಬಾರಿ ನಗರಕ್ಕೆ ಬೇರೆ ಬೇರೆ ಪ್ರದೇಶಗಳಿಂದ ಆಗಮಿಸುವ ಜನರ ಮೂಲಕ ಹೊಸ ಹೊಸ ವೈರಸ್ಸುಗಳೂ ಧಾಳಿ ಇಡುವ ಕಾರಣ ಶೀತ ಜ್ವರದ ಬಾಧೆಯಿಂದ ನರಳುವುದೇ ಇಲ್ಲ ಎನ್ನುವ ಜನರ ಸಂಖ್ಯೆ ಬಹಳ ಕಡಿಮೆ. ಆದರೆ ಕೆಲವು ವಿಧಾನಗಳ ಮೂಲಕ ಈ ಹೊಸ ವೈರಸ್ಸುಗಳನ್ನು ನಮ್ಮ ದೇಹಕ್ಕೆ ಬಾರದಂತೆ ನೋಡಿಕೊಳ್ಳಬಹುದು. ಇವುಗಳಲ್ಲಿ ಪ್ರಮುಖವಾದುದನ್ನು ಕೆಳಗಿನ ಸ್ಲೈಡ್ ಷೋ ಮೂಲಕ ನೀಡಲಾಗಿದೆ:

ಶುಂಠಿ, ಮೆಣಸು ಮತ್ತು ಉಪ್ಪಿನ ದ್ರಾವಣ
ಶುಂಠಿ ಮತ್ತು ಮೆಣಸು ದೇಹವನ್ನು ಬಿಸಿ ಮಾಡುವ ಗುಣಗಳನ್ನು ಹೊಂದಿರುತ್ತವೆ. ಒಂದು ವೇಳೆ ನೀವು ಮಳೆಯಲ್ಲಿ ನೆಂದು ಕೆಮ್ಮು ಮತ್ತು ಶೀತಕ್ಕೆ ಗುರಿಯಾದರೆ, ಈ ಆಯುರ್ವೇದದ ದ್ರಾವಣವನ್ನು ಸೇವಿಸಿ. ಒಂದು ಚಿಟಿಕೆ ಉಪ್ಪು, ಮೆಣಸು ಮತ್ತು ಶುಂಠಿಯನ್ನು ನೀರಿಗೆ ಹಾಕಿ ಬೇಯಿಸಿಕೊಳ್ಳಿ. ಈ ರಸವು ನಿಮ್ಮ ದೇಹಕ್ಕೆ ಶಾಖವನ್ನಷ್ಟೇ ಅಲ್ಲದೆ, ಜೀರ್ಣ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

ಶುಂಠಿ
ಆಯುರ್ವೇದದಲ್ಲಿ ಶುಂಠಿಗೆ ಪ್ರತ್ಯೇಕ ಸ್ಥಾನವಿರುತ್ತದೆ. ನಿರಂತರವಾಗಿ ಕೆಮ್ಮು ಕಾಣಿಸಿಕೊಂಡರೆ, ಶುಂಠಿ ನಿಮಗೆ ಉತ್ತಮ ಪರಿಹಾರ ನೀಡುತ್ತದೆ. ಇದನ್ನು ನೀರಿನಲ್ಲಿ ಬೇಯಿಸಿ ಸೇವಿಸಬಹುದು ಅಥವಾ ಉರಿದುಕೊಂಡು ಸೇವಿಸಬಹುದು. ನಂತರ ಇದನ್ನು ಅಗಿದು ತಿನ್ನಬಹುದು. ಚಹಾ ಕಾಯಿಸುವಾಗ ಸಹ ಇದನ್ನು ಬೆರೆಸಿಕೊಳ್ಳಬಹುದು.

ಅರಿಶಿನ
ಇದರ ಆಂಟಿಸೆಪ್ಟಿಕ್ ಗುಣದ ಜೊತೆಗೆ ಉರಿಯೂತ ನಿವಾರಕ ಗುಣಗಳು ಸಹ ನಿಮಗೆ ಈ ಕಾಲದಲ್ಲಿ ಒಳ್ಳೆಯ ಪ್ರಯೋಜನ ನೀಡುತ್ತದೆ. ಈ ಅಂಶವು ಕೆಮ್ಮು ಮತ್ತು ಶ್ವಾಸಕೋಶದ ಕಟ್ಟಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಕೆಮ್ಮು ಮತ್ತು ಶೀತವನ್ನು ನಿವಾರಿಸಿಕೊಳ್ಳಲು ಬೆಚ್ಚಗಿನ ನೀರಿನಲ್ಲಿ ಅರಿಶಿನವನ್ನು ಬೆರೆಸಿಕೊಂಡು ಸೇವಿಸಿ.

ತುಳಸಿ
ಇದು ಪವಿತ್ರ ಸಸ್ಯವಷ್ಟೇ ಅಲ್ಲ, ಔಷಧೀಯ ಸಸ್ಯವು ಸಹ ಹೌದು. ಇದರಲಿರುವ ಆಂಟಿ ಬ್ಯಾಕ್ಟೀರಿಯಲ್, ಆಂಟಿಫಂಗಲ್ ಮತ್ತು ಉರಿಯೂತ ನಿವಾರಕ ಗುಣಗಳು ಇದನ್ನು ಶೀತ ಮತ್ತು ಕೆಮ್ಮಿನ ವಿರುದ್ಧ ಉತ್ತಮ ಮನೆಮದ್ದನ್ನಾಗಿ ಮಾಡಿವೆ. ತುಳಸಿ ಗಂಟಲು ನೋವನ್ನು ಸಹ ನಿವಾರಿಸುತ್ತದೆ. ಅದಕ್ಕಾಗಿ 10-12 ತುಳಸಿ ಎಲೆಗಳನ್ನು ತೆಗೆದುಕೊಂಡು, ತೊಳೆದು ನೀರಿನಲ್ಲಿ ಬೇಯಿಸಿಕೊಂಡು ಸೇವಿಸಿ.

ಜೇನು ತುಪ್ಪ ಮತ್ತು ಮೊಟ್ಟೆಯ ಹಳದಿ ಭಾಗ
ಆಯುರ್ವೇದದಲ್ಲಿ ಜೇನಿಗೆ ತನ್ನದೆ ಆದ ಪ್ರತ್ಯೇಕ ಸ್ಥಾನವಿದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಮತ್ತು ಆಂಟಿ-ಮೈಕ್ರೋಬೈಯಲ್ ಅಂಶಗಳು ಕೆಮ್ಮನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ಕೆಮ್ಮನ್ನು ನಿವಾರಿಸಲು ಒಂದು ಚಮಚ ಜೇನುತುಪ್ಪವನ್ನು ಬೆಚ್ಚಗಿನ ನೀರಿನ ಜೊತೆಗೆ ಸೇವಿಸಿ ಸಾಕು



Click it and Unblock the Notifications
